ಭಾರೀ ಕೈಗಾರಿಕೆಗಳ ಸಚಿವಾಲಯ
ದೆಹಲಿಯ ನವಿಗಾನ್ 2026ರಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರು ಬೃಹತ್ ಕೈಗಾರಿಕೆಗಳ ಸಚಿವಾಲಯದ ಇಂಡಸ್ಟ್ರಿ ಆಕ್ಸಿಲರೇಟರ್ ಇಂಪ್ಯಾಕ್ಟ್ ವರದಿ ಅನಾವರಣಗೊಳಿಸುತ್ತಿದ್ದಂತೆಯೇ ಭಾರತದ ದೇಶೀಯ ತಂತ್ರಜ್ಞಾನಕ್ಕೆ ಮತ್ತಷ್ಟು ವೇಗ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ತಂತ್ರಜ್ಞಾನ ಅಭಿವೃದ್ಧಿಯಿಂದ ಜಾಗತಿಕ ಉತ್ಪಾದನೆಯತ್ತ ಸಾಗಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ
ಹೆಚ್ ಡಿ ಕುಮಾರಸ್ವಾಮಿ ಅವರಿಂದ ಎಂಎಚ್‌ಐ ಇಂಡಸ್ಟ್ರಿ ಆಕ್ಸಿಲರೇಟರ್‌ನ ಇಂಪ್ಯಾಕ್ಟ್ ವರದಿ ಬಿಡುಗಡೆ, ಯೋಜನಾ ಸದಸ್ಯರ ಸನ್ಮಾನ
ತಂತ್ರಜ್ಞಾನ ಸಿದ್ಧತೆ ಹಂತ (ಟಿ ಆರ್ ಎಲ್ )-3 ರಿಂದ ಟಿಆರ್ ಎಲ್-9 ಗೆ ಪ್ರಗತಿ ಸಾಧಿಸಲು 10 ತಂತ್ರಜ್ಞಾನಗಳಿಗೆ 35.72 ಕೋಟಿ ರೂ. ಬೆಂಬಲ: ಹೆಚ್ ಡಿ ಕುಮಾರಸ್ವಾಮಿ
ಪರಿಕಲ್ಪನೆಯಿಂದ ಮೂಲಮಾದರಿಗೆ, ಉತ್ಪನ್ನವು ಜಾಗತಿಕ ಮಾರುಕಟ್ಟೆಗೆ: ಬಲಿಷ್ಠ ದೇಶೀಯ ತಂತ್ರಜ್ಞಾನ ಪೂರಕ ವ್ಯವಸ್ಥೆಗೆ ಹೆಚ್ ಡಿ ಕುಮಾರಸ್ವಾಮಿ ಕರೆ
ಪ್ರಕಟಣಾ ದಿನಾಂಕ:
30 SEP 2026 12:21PM by PIB Bengaluru
ಕೇಂದ್ರ ಬೃಹತ್ ಕೈಗಾರಿಕೆಗಳು ಮತ್ತು ಉಕ್ಕು ಸಚಿವರಾದ ಹೆಚ್. ಡಿ. ಕುಮಾರಸ್ವಾಮಿ ಅವರು ಬುಧವಾರ ನವದೆಹಲಿಯ ನವಿಗ್ಯಾನ್ 2026 ರಲ್ಲಿ ಬೃಹತ್ ಕೈಗಾರಿಕೆಗಳ ಸಚಿವಾಲಯ (ಎಂ ಎಚ್ ಐ) ಉದ್ಯಮ ಆಕ್ಸಿಲರೇಟರ್ ಯೋಜನೆಯ ಇಂಪ್ಯಾಕ್ಟ್ ವರದಿಯನ್ನು ಅನಾವರಣಗೊಳಿಸಿದರು ಮತ್ತು ಡಿಜಿಟಲ್ ರೂಪದಲ್ಲಿಯೂ ಬಿಡುಗಡೆ ಮಾಡಿದರು. ಇದು ಭಾರತದ ಸಾಗಾಣೆ (ಮೊಬಿಲಿಟಿ) ಮತ್ತು ಉತ್ಪಾದನಾ ವಲಯಗಳಿಗೆ ದೇಶೀಯ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲು ಎಂದು ಗುರುತಿಸಲಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಹೆಚ್. ಡಿ. ಕುಮಾರಸ್ವಾಮಿ, ಈ ಕಾರ್ಯಕ್ರಮವು ಎಂ ಎಚ್ ಐ ಇಂಡಸ್ಟ್ರಿ ಆಕ್ಸಿಲರೇಟರ್ ಯೋಜನೆಯ ಮುಕ್ತಾಯವನ್ನು ಗುರುತಿಸಿದೆ ಮತ್ತು ದೇಶೀಯ ತಾಂತ್ರಿಕ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ನಿರ್ಮಿಸುವ ಮಹತ್ವವನ್ನು ಉಲ್ಲೇಖಿಸಿದರು.
“ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಸರ್ಕಾರವು ಸದೃಢ ದೇಶೀಯ ತಾಂತ್ರಿಕ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ನಿರ್ಮಿಸಲು ಹೆಚ್ಚಿನ ಒತ್ತು ನೀಡುತ್ತಿದೆ” ಎಂದು ಅವರು ಹೇಳಿದರು.
ಆತ್ಮನಿರ್ಭರ ಭಾರತದ ದೂರದೃಷ್ಟಿಯು ಭಾರತವು ಮುಂದುವರಿದ ತಂತ್ರಜ್ಞಾನಗಳಿಗೆ ದೊಡ್ಡ ಮಾರುಕಟ್ಟೆಯಾಗುವುದಲ್ಲದೆ, ಅದನ್ನೂ ಮೀರಿ ಅಂತಹ ಉತ್ಪನ್ನಗಳನ್ನು ತಯಾರಿಸುವ ಮತ್ತು ರಫ್ತು ಮಾಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು.
"ಆತ್ಮನಿರ್ಭರ ಭಾರತದ ದೂರದೃಷ್ಟಿಯು ಮುಂದುವರಿದ ತಂತ್ರಜ್ಞಾನಗಳಿಗೆ ದೊಡ್ಡ ಮಾರುಕಟ್ಟೆಯಾಗಿ ಮಾತ್ರವಲ್ಲದೆ, ಅವುಗಳನ್ನು ಅಭಿವೃದ್ಧಿಪಡಿಸುವ, ತಯಾರಿಸುವ ಮತ್ತು ರಫ್ತು ಮಾಡುವ ದೇಶವಾಗಿಯೂ ಭಾರತವನ್ನು ಕರೆಯಲ್ಪಡುತ್ತದೆ" ಎಂದು ಕುಮಾರಸ್ವಾಮಿ ಹೇಳಿದರು.

ಭಾರತೀಯ ಕ್ಯಾಪಿಟಲ್ ಸರಕುಗಳ ವಲಯದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಕೈಗೊಂಡಿರುವ ಎರಡನೇ ಹಂತದ ಯೋಜನೆಯಡಿಯಲ್ಲಿ ನೀಡಲಾದ ಬೆಂಬಲದ ಪ್ರಮಾಣವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ಈ ಯೋಜನೆಯು 1,207 ಕೋಟಿ ರೂಪಾಯಿಗಳ ಒಟ್ಟು ಆರ್ಥಿಕ ವೆಚ್ಚವನ್ನು ಹೊಂದಿದೆ ಮತ್ತು ಸಾಮಾನ್ಯ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸೇವೆಗಳ ಮೂಲಸೌಕರ್ಯ ಬೆಂಬಲಿಸುವ ಗುರಿ ಹೊಂದಿದೆ ಎಂದು ಹೇಳಿದರು. ಯೋಜನೆಯಡಿಯಲ್ಲಿಈವರೆಗೆ 33 ಯೋಜನೆಗಳನ್ನು ಅನುಮೋದಿಸಲಾಗಿದೆ.
ಈ ಉಪಕ್ರಮಗಳಲ್ಲಿ ಒಂದಾದ ಎಂ ಎಚ್ ಐ ಇಂಡಸ್ಟ್ರಿ ಆಕ್ಸಿಲರೇಟರ್ ಪ್ರೋಗ್ರಾಂ, ತಂತ್ರಜ್ಞಾನ ಸಿದ್ಧತೆ ಹಂತ 3ನೇ ಹಂತದಿಂದ 9ನೇ ಹಂತದವರೆಗೆ ಅವುಗಳ ಪ್ರಗತಿಯನ್ನು ಬೆಂಬಲಿಸುವ ಉದ್ದೇಶದಿಂದ 10 ತಂತ್ರಜ್ಞಾನಗಳಿಗೆ 35.72 ಕೋಟಿ ರೂ. ಅನುದಾನವನ್ನು ಒದಗಿಸಿದೆ ಎಂದರು.
ಕಾರ್ಯಕ್ರಮದ ಅಡಿಯಲ್ಲಿ ವಿದ್ಯುತ್ ಪವರ್‌ಟ್ರೇನ್‌ಗಳು, ಹೈ-ವೋಲ್ಟೇಜ್ ಮೋಟಾರ್ ನಿಯಂತ್ರಣ ಮತ್ತು ಇಂಧನ ದಾಸ್ತಾನು ಸೇರಿದಂತೆ ಭವಿಷ್ಯದ ಸಾಗಾಣೆಯ ಹಲವು ತಂತ್ರಜ್ಞಾನಗಳಿಗೆ ನೆರವು ನೀಡುವ ಹಲವಾರು ಕ್ಷೇತ್ರಗಳನ್ನು ಒಳಗೊಂಡಿವೆ ಎಂದು ಕುಮಾರಸ್ವಾಮಿ ಉಲ್ಲೇಖಿಸಿದರು. ಆರಂಭಿಕ ಹಂತದ ಮೂಲಮಾದರಿಗಳಿಂದ ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಉತ್ಪನ್ನಗಳ ಕಡೆಗೆ ತಂತ್ರಜ್ಞಾನಗಳ ವರ್ಗಾವಣೆಯು ಒಂದು ಪ್ರಮುಖ ಫಲಿತಾಂಶವಾಗಿದೆ ಎಂದು ಹೇಳಿದರು.

ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಸಹಯೋಗದ ಮಹತ್ವವನ್ನು ಬಲವಾಗಿ ಪ್ರತಿಪಾದಿಸಿದ ಸಚಿವರು, ಸರ್ಕಾರ, ಕೈಗಾರಿಕೆ, ಸಂಶೋಧನಾ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳು ಮತ್ತು ಎ ಆರ್ ಎ ಐ ನಂತಹ ಸಂಸ್ಥೆಗಳು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
“ಸರ್ಕಾರವು ನೀತಿ ಚೌಕಟ್ಟು ಮತ್ತು ಉದ್ದೇಶಿತ ಬೆಂಬಲವನ್ನು ಒದಗಿಸುತ್ತಿದೆ. ಉದ್ಯಮವು ಮಾರುಕಟ್ಟೆ ತಿಳಿವಳಿಕೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ತರುತ್ತದೆ. ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳು ಜ್ಞಾನ ಮತ್ತು ತಂತ್ರಜ್ಞಾನವನ್ನು ಕೊಡುಗೆ ನೀಡುತ್ತವೆ. ನವೋದ್ಯಮಗಳು ಹೊಸ ಆಲೋಚನೆಗಳು ಮತ್ತು ಚುರುಕುತನವನ್ನು ತರುತ್ತವೆ” ಎಂದು ಅವರು ಹೇಳಿದರು.
ತಂತ್ರಜ್ಞಾನ ಅಭಿವೃದ್ಧಿ, ಪ್ರಮಾಣೀಕರಣ ಮತ್ತು ಉದ್ಯಮದಲ್ಲಿ ಅಳವಡಿಕೆಯ ನಡುವಿನ ಕೊರೆತೆಯನ್ನು ನಿವಾರಿಸುವಲ್ಲಿ ಎ ಆರ್ ಎ ಐ ನಂತಹ ಸಂಸ್ಥೆಗಳ ಪಾತ್ರವನ್ನು ಅವರು ಬಲವಾಗಿ ಪ್ರತಿಪಾದಿಸಿದರು.
ಭಾರತವು ವಿಕಸಿತ ಭಾರತ @ 2047 ಕಡೆಗೆ ಸಾಗುತ್ತಿರುವಾಗ, ದೇಶದೊಳಗಿನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಭಾರತೀಯ ತಂತ್ರಜ್ಞಾನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಕೊಂಡೊಯ್ಯುವತ್ತ ನಾವು ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಈ ಪೂರಕ ವ್ಯವಸ್ಥೆಯನ್ನು ನಾವು ಮತ್ತಷ್ಟು ಬಲಪಡಿಸಬೇಕಾಗಿದೆ. ನಾವು ವಿಕಸಿತ ಭಾರತ @ 2047 ಕಡೆಗೆ ಸಾಗುತ್ತಿರುವ ಸಮಯದಲ್ಲಿ ನಮ್ಮ ಗಮನವು ಸ್ಪಷ್ಟವಾಗಿರಬೇಕು: ಭಾರತದಲ್ಲಿ ತಂತ್ರಜ್ಞಾನಗಳನ್ನು ಶಿಕ್ಷಣ ನೀಡಿ, ನಾವೀನ್ಯತೆ ನೀಡಿ, ತಯಾರಿಸಿ ಮತ್ತು ಸಂಯೋಜಿಸಿ ಮತ್ತು ಭಾರತೀಯ ತಂತ್ರಜ್ಞಾನಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯಿರಿ" ಎಂದು ಕರೆ ನೀಡಿದರು.
ಸ್ವಾವಲಂಬನೆಯು ಆಮದು ಪರ್ಯಾಯವನ್ನು ಮೀರಿ ವಿಸ್ತರಿಸಬೇಕು ಮತ್ತು ಭಾರತೀಯ ಬೌದ್ಧಿಕ ಆಸ್ತಿ, ಸ್ಥಿತಿಸ್ಥಾಪಕ ಪೂರೈಕೆ ಸರಣಿಗಳು ಮತ್ತು ಕೌಶಲ್ಯಹೊಂದಿದ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕು ಎಂದು ಸಚಿವರು ಒತ್ತಿ ಹೇಳಿದರು.
"ಸ್ವಾವಲಂಬನೆಯ ಉದ್ದೇಶ ಕೇವಲ ಆಮದುಗಳನ್ನು ಬದಲಾಯಿಸುವುದಲ್ಲ. ಇದು ಭಾರತೀಯ ಬೌದ್ಧಿಕ ಆಸ್ತಿ, ಪೂರೈಕೆ ಸರಣಿ ಮತ್ತು ಕೌಶಲ್ಯಹೊಂದಿದ ಮಾನವ ಸಂಪನ್ಮೂಲಗಳನ್ನು ನಿರ್ಮಿಸುವುದಾಗಿದೆ" ಎಂದು ಕುಮಾರಸ್ವಾಮಿ ಹೇಳಿದರು.

ಉದಯೋನ್ಮುಖ ತಂತ್ರಜ್ಞಾನದ ಅವಶ್ಯಕತೆಗಳನ್ನು ಗುರುತಿಸಲು, ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಬಲಪಡಿಸಲು ಮತ್ತು ಭವಿಷ್ಯದ ತಾಂತ್ರಿಕ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವಿರುವ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ಅವರು ನಿರಂತರ ಪ್ರಯತ್ನಗಳಿಗೆ ಕರೆ ನೀಡಿದರು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ ಕುಮಾರಸ್ವಾಮಿ, ಅಭಿವೃದ್ಧಿಯ ಪ್ರತಿಯೊಂದು ಹಂತದ ಮೂಲಕ ನಾವೀನ್ಯತೆಗಳು ಪರಿಣಾಮಕಾರಿಯಾಗಿ ವರ್ಗಾವಣೆಗೊಳ್ಳಲು ಅನುವು ಮಾಡಿಕೊಡುವ ಪೂರಕ ವ್ಯವಸ್ಥೆಯನ್ನು ಭಾರತವು ಸೃಷ್ಟಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.
"ಭಾರತೀಯ ನಾವೀನ್ಯತೆ ಪರಿಕಲ್ಪನೆಯಿಂದ ಮೂಲಮಾದರಿಗೆ, ಮೂಲಮಾದರಿಯಿಂದ ಉತ್ಪನ್ನಕ್ಕೆ ಮತ್ತು ಉತ್ಪನ್ನವು ಜಾಗತಿಕ ಮಾರುಕಟ್ಟೆಗೆ ಪರಿಣಾಮಕಾರಿಯಾಗಿ ವರ್ಗಾವಣೆಗೊಳ್ಳಲು ಅಗತ್ಯ ಪೂರಕ ವ್ಯವಸ್ಥೆಯನ್ನು ನಿರ್ಮಿಸುವುದನ್ನು ನಾವು ಮುಂದುವರಿಸೋಣ" ಎಂದು ಅವರು ಹೇಳಿದರು.
ಅಭಿವೃದ್ಧಿ ಮತ್ತು ಪ್ರಮಾಣೀಕರಣದಿಂದ ಕೈಗಾರಿಕಾ ಅನ್ವಯಿಕೆ ಮತ್ತು ವಾಣಿಜ್ಯೀಕರಣಕ್ಕೆ ತಂತ್ರಜ್ಞಾನಗಳನ್ನು ಕೊಂಡೊಯ್ಯುವಲ್ಲಿ ಕೊಡುಗೆ ನೀಡಿದ್ದಕ್ಕಾಗಿ ಸಚಿವರು ಎಂ ಎಚ್ ಐ ಇಂಡಸ್ಟ್ರಿ ಆಕ್ಸಿಲರೇಟರ್ ಯೋಜನೆಯ ಸದಸ್ಯರನ್ನು ಸನ್ಮಾನಿಸಿದರು. ಎಆರ್ ಎಐ-ಎಎಂಟಿಐಎಫ್ ಜಾರಿಗೆ ತಂದ ಎಂ ಎಚ್ ಐ ಇಂಡಸ್ಟ್ರಿ ಆಕ್ಸಿಲರೇಟರ್ ಯೋಜನೆಯ ಸಮಾಪನದ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮವು ಸರ್ಕಾರ, ಕೈಗಾರಿಕೆ, ಶೈಕ್ಷಣಿಕ ವಲಯ, ಸಂಶೋಧನೆ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಪಾಲುದಾರರನ್ನು ಒಗ್ಗೂಡಿಸಿತು.

ಕಾರ್ಯಕ್ರಮದ ವೇಳೆ, ಕುಮಾರಸ್ವಾಮಿ ಅವರು ಸ್ಟಾರ್ಟ್ಅಪ್ ಪ್ರದರ್ಶನಕ್ಕೆ ಭೇಟಿ ನೀಡಿದರು ಮತ್ತು ಆಕ್ಸಿಲರೇಟರ್ ಉಪಕ್ರಮದಡಿಯ ಬೆಂಬಲಿಸಲಾದ ನವೀನ ಮಾದರಿಗಳನ್ನು ಪರಿಶೀಲಿಸಿದರು. ಪ್ರದರ್ಶನದಲ್ಲಿ ಪ್ರದರ್ಶಿಸಲಾದ ತಂತ್ರಜ್ಞಾನಗಳು ವಿದ್ಯುತ್ ಚಲನಶೀಲತೆ, ವಿದ್ಯುತ್ ಎಲೆಕ್ಟ್ರಾನಿಕ್ಸ್, ಹೈ-ವೋಲ್ಟೇಜ್ ವ್ಯವಸ್ಥೆಗಳು, ಇಂಧನ ದಾಸ್ತಾನು, ಮುನ್ಸೂಚಕ ನಿರ್ವಹಣೆ, ಸಂವೇದಕಗಳು ಮತ್ತು ಸುಧಾರಿತ ಮೇಲ್ಮೈ ಎಂಜಿನಿಯರಿಂಗ್ ಸೇರಿ ಹಲವು ಕ್ಷೇತ್ರಗಳನ್ನು ಒಳಗೊಂಡಿವೆ.
*****
(ಪ್ರಕಟಣೆ ಐ.ಡಿ.: 2316977)
ವಿಸಿಟರ್ ಕೌಂಟರ್ : 7