ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಗೇಮ್ಸ್‌ ನಲ್ಲಿ ಮಹಿಳೆಯರ ಟ್ರ್ಯಾಪ್ ಸ್ಪರ್ಧೆಯಲ್ಲಿ ಐತಿಹಾಸಿಕ ಚಿನ್ನದ ಪದಕ ಜಯಿಸಿರುವ ನೀರೂ ಧಂಡಾ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 29 SEP 2026 6:30PM by PIB Bengaluru

ಏಷ್ಯನ್ ಗೇಮ್ಸ್‌ ನ 'ಟ್ರ್ಯಾಪ್' ಸ್ಪರ್ಧೆಯಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದಿರುವ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನೀರೂ ಧಂಡಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ನೀರೂ ಅವರ ಅಪ್ರತಿಮ ನಿಖರತೆ ಮತ್ತು ಸಂಯಮವನ್ನು ಶ್ಲಾಘಿಸಿರುವ ಪ್ರಧಾನಮಂತ್ರಿಯವರು ಅವರ ಸಾಧನೆಯು ದೇಶಕ್ಕೆ ಅಪಾರ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

ಈ ಐತಿಹಾಸಿಕ ಸಾಧನೆಯು ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಅತ್ಯುನ್ನತ ಗೌರವಗಳನ್ನು ಪಡೆಯುವತ್ತ ಶ್ರಮಿಸಲು ಇನ್ನೂ ಅನೇಕ ಯುವ ಕ್ರೀಡಾಪಟುಗಳನ್ನು ಪ್ರೇರೇಪಿಸಲಿದೆ ಎಂದು ಶ್ರೀ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಬರೆದಿದೆ:

“ನೀರೂ ಧಂಡಾ ಅವರು ಭಾರತ ಐತಿಹಾಸಿಕ ಕ್ಷಣ ಆಚರಿಸುವ ಸಾಧನೆ ಮಾಡಿದ್ದಾರೆ!

ಏಷ್ಯನ್ ಗೇಮ್ಸ್‌ ನ 'ಟ್ರ್ಯಾಪ್' ಶೂಟಿಂಗ್‌ ನಲ್ಲಿ ವೈಯಕ್ತಿಕ ಚಿನ್ನದ ಪದಕ ಜಯಿಸಿರುವ ಮೊದಲ ಭಾರತೀಯ ಮಹಿಳೆ ಎನಿಸಿರುವ ನೀರೂ ಅವರಿಗೆ ಅಭಿನಂದನೆಗಳು.

"ಅವರ ಅನನ್ಯ ನಿಖರತೆ ಮತ್ತು ಸಂಯಮವು ದೇಶಕ್ಕೆ ಅಪಾರ ಹೆಮ್ಮೆ ತಂದಿದೆ. ಈ ಸಾಧನೆಯು ಇನ್ನೂ ಅನೇಕ ಯುವ ಕ್ರೀಡಾಪಟುಗಳು ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮತ್ತು ಅತ್ಯುನ್ನತ ಗೌರವಗಳನ್ನು ಪಡೆಯುವ ಗುರಿ ಹೊಂದಲು ಪ್ರೇರಣೆ ನೀಡುತ್ತದೆ: ಪ್ರಧಾನಮಂತ್ರಿ @narendramodi"

 

*****


(ಪ್ರಕಟಣೆ ಐ.ಡಿ.: 2316969) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Tamil , Telugu , Malayalam