ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಟ್ರ್ಯಾಪ್ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿರುವ ಮನೀಷಾ ಕೀರ್, ನೀರೂ ಮತ್ತು ಆಶಿಮಾ ಅಹ್ಲಾವತ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 29 SEP 2026 6:45PM by PIB Bengaluru

ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಟ್ರ್ಯಾಪ್ ತಂಡದ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದಿರುವ ಮನೀಷಾ ಕೀರ್, ನೀರೂ ಮತ್ತು ಆಶಿಮಾ ಅಹ್ಲಾವತ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ನಿಖರತೆ, ಏಕಾಗ್ರತೆ ಮತ್ತು ತಂಡವಾಗಿ ಸ್ಪರ್ಧಿಗಳು ನೀಡಿರುವ ಪ್ರದರ್ಶನ ಶ್ಲಾಘನೀಯ ಎಂದು ಪ್ರಧಾನಮಂತ್ರಿ ಬಣ್ಣಿಸಿದ್ದಾರೆ. 
ಶ್ರೀ ಮೋದಿ ಅವರು ಇಡೀ ತಂಡಕ್ಕೆ ನಿರಂತರ ಯಶಸ್ಸನ್ನು ಹಾರೈಸಿದ್ದಾರೆ ಮತ್ತು ಅವರು ಭಾರತಕ್ಕೆ ಇನ್ನಷ್ಟು ಕೀರ್ತಿ ತರಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ: 

“ಏಷ್ಯನ್ ಗೇಮ್ಸ್ ನ ಮಹಿಳೆಯರ ಟ್ರ್ಯಾಪ್ ತಂಡದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿರುವ ಮನೀಷಾ ಕೀರ್, ನೀರೂ ಮತ್ತು ಆಶಿಮಾ ಅಹ್ಲಾವತ್ ಅವರಿಗೆ ಅಭಿನಂದನೆಗಳು.

ಇದು ನಿಖರತೆ, ಏಕಾಗ್ರತೆ ಮತ್ತು ತಂಡದ ಒಗ್ಗಟ್ಟಿನ ಶ್ಲಾಘನೀಯ ಪ್ರದರ್ಶನವಾಗಿತ್ತು. ಇಡೀ ತಂಡವು ಹೀಗೆಯೇ ಅತ್ಯುತ್ತಮ ಸಾಧನೆ ಮುಂದುವರಿಸಲಿ ಮತ್ತು ಭಾರತಕ್ಕೆ ಇನ್ನಷ್ಟು ಕೀರ್ತಿ ತರಲಿ: ಪ್ರಧಾನಮಂತ್ರಿ @narendramodi”

 

*****


(ಪ್ರಕಟಣೆ ಐ.ಡಿ.: 2316959) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Bengali , Manipuri , Punjabi , Gujarati , Tamil , Telugu , Malayalam