ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದರು
ನವದೆಹಲಿಯಲ್ಲಿ ನಡೆಯುತ್ತಿರುವ 39ನೇ ಪವಿತ್ರ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡದ್ದು ನನ್ನ ಪರಮ ಸೌಭಾಗ್ಯ ಎಂದು ಕೇಂದ್ರ ಗೃಹ ಸಚಿವರು ಹೇಳಿದರು
ನಮ್ಮ ಸಂಸ್ಕೃತಿಯಲ್ಲಿನ ಚಾತುರ್ಮಾಸ್ಯ ವ್ರತದ ಪವಿತ್ರ ಆಚರಣೆಯು ತ್ಯಾಗದ ಅತ್ಯುನ್ನತ ಗುಣವನ್ನು ನಮಗೆ ಪರಿಚಯಿಸುತ್ತದೆ; ಈ ಗುಣವನ್ನು ನಮ್ಮ ಪೂಜ್ಯ ಸನ್ಯಾಸಿಗಳು ಧ್ಯಾನ, ಸಂಯಮ ಮತ್ತು ಆಂತರಿಕ ಜಾಗೃತಿಯ ಮೂಲಕ ಆಚರಿಸುತ್ತಾರೆ
ಸ್ವಾಮೀಜಿಯವರ ಅಂತರಂಗದ ಬೆಳಕು ಮಾನವೀಯತೆಯೆಡೆಗಿನ ಮಾರ್ಗವನ್ನು ಬೆಳಗಿಸಲಿ
ಪ್ರಕಟಣಾ ದಿನಾಂಕ:
21 SEP 2026 7:38PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾದರು.

ಈ ಕುರಿತು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಗೃಹ ಸಚಿವರು, "ದೆಹಲಿಯಲ್ಲಿ ನಡೆಯುತ್ತಿರುವ ಉಡುಪಿಯ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ 39ನೇ ಪವಿತ್ರ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ, ಆಶೀರ್ವಾದವನ್ನು ಪಡೆದುಕೊಂಡಿದ್ದು ನನ್ನ ಸೌಭಾಗ್ಯ. ನಮ್ಮ ಸಂಸ್ಕೃತಿಯಲ್ಲಿ ಚಾತುರ್ಮಾಸ್ಯ ವ್ರತವು ಪವಿತ್ರ ಆಚರಣೆಯಾಗಿದ್ದು, ನಮ್ಮ ಪೂಜ್ಯ ಸನ್ಯಾಸಿಗಳು ಧ್ಯಾನ, ಸಂಯಮ ಮತ್ತು ಆಂತರಿಕ ಜಾಗೃತಿಯ ಮೂಲಕ ಅನುಸರಿಸುವ ಈ ಆಚರಣೆ ತ್ಯಾಗದ ಅತ್ಯುನ್ನತ ಸದ್ಗುಣವನ್ನು ನಮಗೆ ಪರಿಚಯಿಸುತ್ತದೆ. ಸ್ವಾಮೀಜಿಯವರ ಅಂತರಂಗದ ಬೆಳಕು ಮಾನವೀಯತೆಯೆಡೆಗಿನ ಮಾರ್ಗವನ್ನು ಬೆಳಗಿಸಲಿ."


*****
(ಪ್ರಕಟಣೆ ಐ.ಡಿ.: 2313271)
ವಿಸಿಟರ್ ಕೌಂಟರ್ : 13