ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜನ್ಮದಿನದ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಪ್ರಕಟಣಾ ದಿನಾಂಕ: 17 SEP 2026 10:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಜನ್ಮದಿನದ ಶುಭಾಶಯಗಳಿಗಾಗಿ ವಿಶ್ವ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿಯವರು ಬಗ್ಗೆ ‘ಎಕ್ಸ್‌ʼನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

ಪ್ರಧಾನಮಂತ್ರಿ ಸ್ಕೆರಿಟ್ ಅವರೇ ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಮತ್ತು ಡೊಮಿನಿಕಾ ಸರ್ಕಾರ ಹಾಗೂ ಜನರ ಸದ್ಭಾವನೆಗಾಗಿ ಧನ್ಯವಾದಗಳು. ಭಾರತವು ನಮ್ಮ ನಿಕಟ ಸ್ನೇಹವನ್ನು ಗೌರವಿಸುತ್ತದೆ.

@SkerritR

ಪ್ರಧಾನಮಂತ್ರಿ ಮೆಲೋನಿ, ನಿಮ್ಮ ಆತ್ಮೀಯ ಶುಭಾಶಯಗಳಿಗಾಗಿ ಧನ್ಯವಾದಗಳು. ಭಾರತ-ಇಟಲಿ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಮ್ಮ ನಿಕಟ ಸಹಕಾರವನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ.

@GiorgiaMeloni

ಪ್ರಧಾನಮಂತ್ರಿ ಟೋಬ್ಗೆ ಅವರೇ, ನಿಮ್ಮ ಆತ್ಮೀಯ ಶುಭಾಶಯಗಳು ಮತ್ತು ಹಿತವಚನಕ್ಕಾಗಿ ಧನ್ಯವಾದಗಳು. ನಿಮ್ಮ ಶುಭಾಶಯಗಳು ಮತ್ತು ಭಾವನೆಗಳನ್ನು ನಾನು ಆಳವಾಗಿ ಗೌರವಿಸುತ್ತೇನೆ.

@tsheringtobgay

 


ಡಾ. ಟೆಡ್ರೊಸ್ ಅವರೇ, ನಿಮ್ಮ ಆತ್ಮೀಯ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಹಿತವಚನಗಳಿಗಾಗಿ ಧನ್ಯವಾದಗಳು,

ಬ್ರಿಕ್ಸ್ ನಾಯಕರ ಶೃಂಗಸಭೆಯಲ್ಲಿ ನಿಮ್ಮನ್ನು ಭೇಟಿ ಮಾಡಲು ಮತ್ತು ಜಾಗತಿಕ ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಹಂಚಿಕೆಯ ಬದ್ಧತೆಯನ್ನು ಮುಂದುವರಿಸಲು ನನಗೆ ಸಂತೋಷವಾಗಿದೆ.

@DrTedros

 

*****


(ಪ್ರಕಟಣೆ ಐ.ಡಿ.: 2312765) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Bengali , Punjabi , Gujarati , Odia , Telugu , Malayalam