ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಪ್ಟೆಂಬರ್ 19 ರಂದು "ಪರಿಸರ ಮತ್ತು ಹವಾಮಾನ ಗತಿಶೀಲತೆಯ ಭವಿಷ್ಯ" ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ


ಪರಿಸರ ಮತ್ತು ಹವಾಮಾನ ಸವಾಲುಗಳ ಕುರಿತು ಚರ್ಚಿಸಲು ಹಾಗೂ ಪರಿಸರ ಆಡಳಿತವನ್ನು ಬಲಪಡಿಸುವ ಮಾರ್ಗಗಳನ್ನು ಅನ್ವೇಷಿಸಲು ಸಮ್ಮೇಳನ ಸಹಕಾರಿ

17 ದೇಶಗಳ ಗಣ್ಯ ನ್ಯಾಯಾಧೀಶರು, ನ್ಯಾಯಾಂಗ ಪ್ರತಿನಿಧಿಗಳು ಮತ್ತು ಭಾರತದ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ

ಪ್ರಕಟಣಾ ದಿನಾಂಕ: 18 SEP 2026 3:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 19 ಸೆಪ್ಟೆಂಬರ್ 2026 ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ "ಪರಿಸರ ಮತ್ತು ಹವಾಮಾನ ಗತಿಶೀಲತೆಯ ಭವಿಷ್ಯ" ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಈ ಎರಡು ದಿನಗಳ ಸಮ್ಮೇಳನವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಸೆಪ್ಟೆಂಬರ್ 19 ಮತ್ತು 20, 2026 ರಂದು ಆಯೋಜಿಸುತ್ತಿದೆ. ಈ ಸಮ್ಮೇಳನದಲ್ಲಿ ಪರಿಸರ ತಜ್ಞರು, ಭಾರತದ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು, ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು, ಹಿರಿಯ ಸರ್ಕಾರಿ ಅಧಿಕಾರಿಗಳು, ರಾಜ್ಯ ನ್ಯಾಯಾಂಗ ಅಕಾಡೆಮಿಗಳ ಪ್ರತಿನಿಧಿಗಳು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳು, ರಾಜ್ಯ ತಜ್ಞರ ಮೌಲ್ಯಮಾಪನ ಸಮಿತಿಗಳು (SEACs), ರಾಜ್ಯ ಪರಿಸರ ಪ್ರಭಾವ ಮೌಲ್ಯಮಾಪನ ಪ್ರಾಧಿಕಾರಗಳು (ಎಸ್ ಇ ಐ ಎ ಎ), ರಾಜ್ಯ ಜಲಾನಯನ (Wetland) ಪ್ರಾಧಿಕಾರಗಳು ಮತ್ತು ಇತರ ಪಾಲುದಾರರು ಭಾಗವಹಿಸಲಿದ್ದಾರೆ. ಇದು 17 ದೇಶಗಳ ಗಣ್ಯ ನ್ಯಾಯಾಧೀಶರು ಮತ್ತು ನ್ಯಾಯಾಂಗ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ತರಲಿದೆ.

ಈ ಸಮ್ಮೇಳನವು ವಿಭಿನ್ನ ನ್ಯಾಯಾಂಗವ್ಯಾಪ್ತಿಗಳಲ್ಲಿನ ನ್ಯಾಯಾಂಗದ ವಿಧಾನಗಳು, ವೈಜ್ಞಾನಿಕ ಜ್ಞಾನ, ಪರಿಸರ ಆಡಳಿತ ಪದ್ಧತಿಗಳು ಮತ್ತು ಸಾಂಸ್ಥಿಕ ಅನುಭವಗಳ ವಿನಿಮಯಕ್ಕೆ ವೇದಿಕೆಯನ್ನು ಒದಗಿಸುತ್ತದೆ. ಇದು ನೀತಿ ನಿರೂಪಣೆ, ಅನುಷ್ಠಾನ ಮತ್ತು ಜಾರಿಯಲ್ಲಿನ ನ್ಯೂನತೆಗಳು ಸೇರಿದಂತೆ ನಿರ್ಣಾಯಕ ಪರಿಸರ ಹಾಗೂ ಹವಾಮಾನ ಸವಾಲುಗಳ ಕುರಿತು ಚರ್ಚೆಯನ್ನು ಸುಗಮಗೊಳಿಸುತ್ತದೆ, ಜೊತೆಗೆ ಪರಿಸರ ಆಡಳಿತ ಮತ್ತು ಸಾಂಸ್ಥಿಕ ಸಹಕಾರವನ್ನು ಬಲಪಡಿಸುವ ಮಾರ್ಗಗಳನ್ನು ಅನ್ವೇಷಿಸುತ್ತದೆ.

 

*****

 


(ಪ್ರಕಟಣೆ ಐ.ಡಿ.: 2312126) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Assamese , Manipuri , Gujarati , Telugu , Malayalam