ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಲ್ಲರನ್ನೂ ಒಳಗೊಂಡ ಆಡಳಿತ ಮತ್ತು ಪರಿಣಾಮಕಾರಿ ಅನುಷ್ಠಾನದ ಮಹತ್ವ ವಿವರಿಸುವ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 18 SEP 2026 1:20PM by PIB Bengaluru

ಭಾರತವು ಪ್ರಗತಿಯ ಹೊಸ ಪಥವನ್ನು ಕಂಡುಕೊಳ್ಳಲು ದೂರದೃಷ್ಟಿಯ ಚಿಂತನೆ, ಸರಿಯಾದ ಉದ್ದೇಶ ಮತ್ತು ಉತ್ತಮ ಆಡಳಿತವು ಹೇಗೆ ಪೂರಕ ಎಂಬುದನ್ನು ವಿವರಿಸಿರುವ ಮಾಜಿ ಹಣಕಾಸು ಮತ್ತು ಕಂದಾಯ ಕಾರ್ಯದರ್ಶಿ ಶ್ರೀ ಹಸ್ಮುಖ್ ಅಧಿಯಾ ಅವರ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ದೇಶವನ್ನು ಬಲಪಡಿಸುವಲ್ಲಿ ಜನಕೇಂದ್ರಿತ ನೀತಿಗಳು ಮತ್ತು ಪರಿಣಾಮಕಾರಿ ಆಡಳಿತವು ಬೀರುವ ಪರಿವರ್ತನಾಶೀಲ ಪ್ರಭಾವದ ಕುರಿತು ಈ ಲೇಖನವು ಮೌಲ್ಯಯುತ ಅಂಶಗಳನ್ನು ಒದಗಿಸಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: 

जब गरीबों एवं वंचितों को केंद्र में रखकर नीतियां बनाई जाती हैं और निर्णय जमीन पर लागू किए जाते हैं, तो समाज और राष्ट्र दोनों को मजबूती मिलती है। भारत के पूर्व वित्त एवं राजस्व सचिव @adhia03 जी ने अपने इस आलेख में बताया है कि दूरदर्शी सोच, सही नीयत और सुशासन के जरिए कैसे देश को प्रगति की नई राह मिल रही है।

https://www.amarujala.com/india-news/why-narendra-modi-is-successful-management-human-spiritual-qualities-2026-09-18

 

*****


(ಪ್ರಕಟಣೆ ಐ.ಡಿ.: 2312117) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Assamese , Punjabi , Gujarati , Telugu , Malayalam