ಪ್ರಧಾನ ಮಂತ್ರಿಯವರ ಕಛೇರಿ
ಆಧುನಿಕ, ತಂತ್ರಜ್ಞಾನ ಚಾಲಿತ ಮತ್ತು ವೃತ್ತಿಪರವಾಗಿ ನಿರ್ವಹಿಸಲ್ಪಡುವ ಸಂಸ್ಥೆಯಾಗಿ ಇಂಡಿಯಾ ಪೋಸ್ಟ್ ರೂಪಾಂತರ ವಿವರಿಸುವ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
17 SEP 2026 5:38PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಇಂಡಿಯಾ ಪೋಸ್ಟ್' (ಭಾರತೀಯ ಅಂಚೆ ಇಲಾಖೆಯು) ಆಧುನಿಕ, ತಂತ್ರಜ್ಞಾನ-ಚಾಲಿತ ಮತ್ತು ವೃತ್ತಿಪರವಾಗಿ ನಿರ್ವಹಿಸಲ್ಪಡುವ ಸಂಸ್ಥೆಯಾಗಿ ರೂಪಾಂತರಗೊಂಡಿರುವ ಬಗ್ಗೆ ವಿವರಿಸುವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಲೇಖನವನ್ನು ಇಂದು ಹಂಚಿಕೊಂಡಿದ್ದಾರೆ. ಡಿಜಿಟಲ್ ಸಾಮರ್ಥ್ಯಗಳೊಂದಿಗೆ ಇಂಡಿಯಾ ಪೋಸ್ಟ್ ತನ್ನ ವ್ಯಾಪಕ ಜಾಲವನ್ನು ಸಾಗಣೆ, ಹಣಕಾಸು ಸೇವೆ ಮತ್ತು ನಾಗರಿಕ-ಕೇಂದ್ರಿತ ಸೇವಾ ವಲಯಗಳೊಂದಿಗೆ ಸಂಯೋಜಿಸುತ್ತಿದೆ ಎಂಬುದನ್ನು ಲೇಖನ ವಿವರಿಸಿದೆ.
ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
ಆಧುನಿಕ, ತಂತ್ರಜ್ಞಾನ-ಚಾಲಿತ ಮತ್ತು ವೃತ್ತಿಪರವಾಗಿ ನಿರ್ವಹಿಸಲ್ಪಡುವ ಸಂಸ್ಥೆಯಾಗಿ ಇಂಡಿಯಾ ಪೋಸ್ಟ್ ರೂಪಾಂತರವನ್ನು ಶ್ರೀ @JM_Scindia ಅವರು ಈ ಲೇಖನದಲ್ಲಿ ವಿವರಿಸಿದ್ದಾರೆ. ಸಾಗಣೆ, ಹಣಕಾಸು ಸೇವೆಗಳು ಮತ್ತು ನಾಗರಿಕ-ಕೇಂದ್ರಿತ ಸೇವಾ ಕ್ಷೇತ್ರಗಳಾದ್ಯಂತ ಡಿಜಿಟಲ್ ಸಾಮರ್ಥ್ಯಗಳೊಂದಿಗೆ ತನ್ನ ವ್ಯಾಪಕ ಜಾಲವನ್ನು ಇಂಡಿಯಾ ಪೋಸ್ಟ್ ಸಂಯೋಜಿಸುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಅದರ ಜೊತೆಜೊತೆಗೆ, ‘ಅಂಚೆ ಸೇವೆ, ಜನ ಸೇವೆ (ಡಾಕ್ ಸೇವಾ, ಜನ ಸೇವಾ)’ ಎಂಬ ಮನೋಭಾವದೊಂದಿಗೆ, ಸಾರ್ವಜನಿಕ ಸೇವೆಯ ವಿಶ್ವಾಸಾರ್ಹ ಪಾತ್ರವನ್ನೂ ಅದು ಮುಂದುವರಿಸಿಕೊಂಡು ಹೋಗುತ್ತಿದೆ.
*****
(ಪ್ರಕಟಣೆ ಐ.ಡಿ.: 2311734)
ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam