ಪ್ರಧಾನ ಮಂತ್ರಿಯವರ ಕಛೇರಿ
ಜನರ ವಾತ್ಸಲ್ಯ ಮತ್ತು ಆಶೀರ್ವಾದಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
17 SEP 2026 11:31AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ದೇಶಾದ್ಯಂತ ಜನರು ತೋರಿದ ಪ್ರೀತಿ, ವಾತ್ಸಲ್ಯ ಮತ್ತು ಆಶೀರ್ವಾದಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೆಲವು ಶುಭಾಶಯಗಳು ಬಹಳ ವಿಶೇಷವಾಗಿವೆ ಮತ್ತು ಹೃದಯವನ್ನು ಆಳವಾಗಿ ಸ್ಪರ್ಶಿಸುತ್ತವೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. 'ಆಶೀರ್ವಾದ ಕಾ ದಿಯಾ'- ಆಶೀರ್ವಾದದ ಜ್ಯೋತಿ ತಮ್ಮನ್ನು ಆಳವಾಗಿ ಸ್ಪರ್ಶಿಸಿದ ಪ್ರೀತಿಯ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿಯೊಂದು ಆಶೀರ್ವಾದವು ಭಾರತದ ಜನರಿಗೆ ಇನ್ನೂ ಹೆಚ್ಚಿನ ಭಕ್ತಿಯಿಂದ ಸೇವೆ ಸಲ್ಲಿಸುವ ತಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಶ್ರೀ ನರೇಂದ್ರ ಮೋದಿ ತಮ್ಮ X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:
ಕೆಲವು ಶುಭಾಶಯಗಳು ಬಹಳ ವಿಶೇಷವಾಗಿವೆ!
#AshirwadKaDiya 'ಆಶೀರ್ವಾದ ಕಾ ದಿಯಾ' ಎಂಬುದು ನನ್ನನ್ನು ಆಳವಾಗಿ ಸ್ಪರ್ಶಿಸಿದ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿದೆ.
ಪ್ರತಿಯೊಂದು ಆಶೀರ್ವಾದವು ನಮ್ಮ ಪ್ರೀತಿಯ ಭಾರತವನ್ನು ಇನ್ನೂ ಹೆಚ್ಚಿನ ಭಕ್ತಿಯಿಂದ ಸೇವೆ ಮಾಡುವ ನನ್ನ ಸಂಕಲ್ಪವನ್ನು ಬಲವರ್ಧನೆಗೊಳಿಸುತ್ತದೆ. ಪಡಿಸುತ್ತದೆ.
*****
(ಪ್ರಕಟಣೆ ಐ.ಡಿ.: 2311510)
ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam