ಜಲ ಶಕ್ತಿ ಸಚಿವಾಲಯ
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಗಾಗಿ ಸ್ವಚ್ಛ ಸೇವಾ ಮೌಲ್ಯಮಾಪನ (ಆಂಕಲನ್) ಆರಂಭ
ಗ್ರಾಮೀಣ ನೈರ್ಮಲ್ಯ ಸೇವಾ ವಿತರಣೆಯ ಮೌಲ್ಯಮಾಪನಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದ ವಾರ್ಷಿಕ ಡಿಜಿಟಲ್ ಸ್ವಯಂ-ಮೌಲ್ಯಮಾಪನ ಚೌಕಟ್ಟು
ಸಮುದಾಯದ ಪಾಲ್ಗೊಳ್ಳುವಿಕೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಬಲವರ್ಧನೆಗೊಳಿಸಲು ಗ್ರಾಮ ಸಭೆಯ ಪ್ರಮಾಣೀಕರಣ
ಪ್ರಕಟಣಾ ದಿನಾಂಕ:
16 SEP 2026 1:41PM by PIB Bengaluru
ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ ಆರ್ ಪಾಟೀಲ್ ಅವರು 2026ರ ಸೆಪ್ಟೆಂಬರ್ 15 ರಂದು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ವರ್ಚುವಲ್ ಸಭೆಯಲ್ಲಿ ಸ್ವಚ್ಛ ಸೇವಾ ಆಂಕಲನ್ (ಎಸ್‌ಎಸ್‌ಎ) ಗೆ ಚಾಲನೆ ನೀಡಿದರು. ಸಭೆಯಲ್ಲಿ ಜಲಶಕ್ತಿ ರಾಜ್ಯ ಸಚಿವರಾದ ಗೌರವಾನ್ವಿತ ಶ್ರೀ ವಿ. ಸೋಮಣ್ಣ ಭಾಗವಹಿಸಿದ್ದರು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಗ್ರಾಮೀಣ ನೈರ್ಮಲ್ಯದ ಉಸ್ತುವಾರಿ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ನ ಮಿಷನ್ ನಿರ್ದೇಶಕರು ವರ್ಚುವಲ್ ರೂಪದಲ್ಲಿ ಪಾಲ್ಗೊಂಡಿದ್ದರು.
ಗ್ರಾಮ ಪಂಚಾಯತ್ ಮಟ್ಟದ ಡಿಜಿಟಲ್ ಸ್ವಯಂ-ಮೌಲ್ಯಮಾಪನಕ್ಕಾಗಿ ಸ್ವಚ್ಛ ಸೇವಾ ಆಂಕಲನ್ (SSA) ಎಂಬುದು ಗ್ರಾಮೀಣ ಪ್ರದೇಶಗಳಲ್ಲಿ ನೈರ್ಮಲ್ಯ ಸೇವಾ ವಿತರಣೆಯ ಮೌಲ್ಯಮಾಪನ ಮತ್ತು ಮೇಲ್ವಿಚಾರಣೆಗಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) 2.0 ಅಡಿಯಲ್ಲಿ ಅಭಿವೃದ್ಧಿಪಡಿಸಿದ ವಾರ್ಷಿಕ ಚೌಕಟ್ಟಾಗಿದೆ. ಈ ಬಹು-ಹಂತದ ಮೌಲ್ಯಮಾಪನ ಚೌಕಟ್ಟು ಗ್ರಾಮ ಪಂಚಾಯತ್‌ಗಳು, ಗ್ರಾಮ ಸಭೆಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು (ವಿಡಬ್ಲೂಎಸ್ ಸಿ), ಜಿಲ್ಲಾ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶ ಮಟ್ಟದ ಅಧಿಕಾರಿಗಳ ಒಳಗೊಳ್ಳುವಿಕೆಯನ್ನು ಮೂಲ ಮಟ್ಟದಲ್ಲಿ ನೈರ್ಮಲ್ಯ ಸೇವಾ ವಿತರಣೆಯನ್ನು ಬಲಪಡಿಸಲು ಉದ್ದೇಶಿಸಿದೆ.
ಎಸ್ ಎಸ್ ಎ ಅಡಿಯಲ್ಲಿ, ಒಡಿಎಫ್ ಪ್ಲಸ್ (ಮಾದರಿ) ಘೋಷಿತ ಗ್ರಾಮ ಪಂಚಾಯತ್‌ಗಳು, ಅವುಗಳ ವಿಡಬ್ಲೂಎಸ್ ಸಿ ಗಳು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ, ಗ್ರಾಮ ಪಂಚಾಯತ್‌ನಲ್ಲಿ ಒಡಿಎಫ್ ಸುಸ್ಥಿರತೆ, ದೃಶ್ಯ ಸ್ವಚ್ಛತೆ ಮತ್ತು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್ಎ ಲ್ ಡಬ್ಲೂ ಎಂ) ಸ್ಥಿತಿಯನ್ನು ನಿರ್ಣಯಿಸುತ್ತವೆ. ನೈರ್ಮಲ್ಯ ಮತ್ತು ಸಮುದಾಯ SLWM ಸ್ವತ್ತುಗಳ ಕಾರ್ಯಕ್ಷಮತೆ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆ (O&M) ಸ್ಥಿತಿಯನ್ನು ಸಹ ಆಂಕಲನ್ ಮೂಲಕ ಸ್ವಯಂ-ಮೌಲ್ಯಮಾಪನ ಮಾಡಲಾಗುತ್ತದೆ. ಸಂಶೋಧನೆಗಳನ್ನು ಸಂಬಂಧಪಟ್ಟ ಗ್ರಾಮ ಸಭೆಯು ಚರ್ಚಿಸುತ್ತದೆ ಮತ್ತು ಪ್ರಮಾಣೀಕರಿಸುತ್ತದೆ ಮತ್ತು DWSM/SWSM ಸಭೆಗಳಲ್ಲಿ ಪರಿಶೀಲಿಸಲು ಜಿಲ್ಲಾ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಅಧಿಕಾರಿಗಳಿಗೆ ಲಭ್ಯವಿರುತ್ತದೆ. ಈ ಅಧಿಕಾರಿಗಳು ಸೇವಾ ವಿತರಣಾ ಅಂತರವನ್ನು ಗುರುತಿಸಲು ಮತ್ತು ತಳಮಟ್ಟದಲ್ಲಿನ ಸಮಸ್ಯೆಗಳನ್ನು ಸರಿಪಡಿಸುವ ಕ್ರಮಕ್ಕಾಗಿ ಆಯಾ ಸುಧಾರಣಾ ಯೋಜನೆಗಳನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ.
73ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆಯ ಸ್ಫೂರ್ತಿಯಲ್ಲಿ, ಇದು ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮ ಸಭೆಗಳು ತಮ್ಮ ಸಾಧನೆಗಳು ಮತ್ತು ಪ್ರಗತಿಯನ್ನು ಪರಿಶೀಲಿಸಲು ಮತ್ತು ಅವುಗಳಲ್ಲಿ ಸುಧಾರಣೆಗೆ ಕೇಂದ್ರೀಕೃತ ಪ್ರಯತ್ನಗಳನ್ನು ಮಾಡಲು ಮತ್ತಷ್ಟು ಅಧಿಕಾರ ನೀಡುತ್ತದೆ.
*****
(ಪ್ರಕಟಣೆ ಐ.ಡಿ.: 2310809)
ವಿಸಿಟರ್ ಕೌಂಟರ್ : 10