ಜಲ ಶಕ್ತಿ ಸಚಿವಾಲಯ
azadi ka amrit mahotsav

‘ಜಲ ಸಂಚಯ ಜನ ಭಾಗೀದಾರಿ – ಕ್ಯಾಚ್ ದಿ ರೇನ್’ ಗೀತೆ ಬಿಡುಗಡೆ

ಪ್ರಕಟಣಾ ದಿನಾಂಕ: 15 SEP 2026 8:57PM by PIB Bengaluru

ಜಲ ಶಕ್ತಿ ಸಚಿವಾಲಯವು ಇಂದು “ಜಲ ಸಂಚಯ ಜನ ಭಾಗೀದಾರಿ – ಕ್ಯಾಚ್ ದಿ ರೇನ್” ಗೀತೆಯನ್ನು ಬಿಡುಗಡೆ ಮಾಡಿದೆ. ಇದು ಜನರ ಭಾಗಿತ್ವದ ಮೂಲಕ ಜಲ ಸಂರಕ್ಷಣೆ ಮತ್ತು ಮಳೆನೀರು ಕೊಯ್ಲಿನ ದೇಶವ್ಯಾಪಿ ಚಳವಳಿಗೆ ಸಂಗೀತದ ಧ್ವನಿಯನ್ನು ನೀಡಿದೆ.

ಖ್ಯಾತ ಗಾಯಕ-ಸಂಗೀತ ಸಂಯೋಜಕ ಶಂಕರ್ ಮಹಾದೇವನ್ ಅವರು ಹಾಡಿರುವ ಈ ಗೀತೆಯನ್ನು, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕರೆ: ಮಳೆ ಎಲ್ಲಿಯೇ ಬೀಳಲಿ, ಯಾವಾಗಲೇ ಬೀಳಲಿ ಆ ನೀರನ್ನು ಹಿಡಿದಿಡೋಣ ಎಂಬುದನ್ನ ಕೇಂದ್ರಬಿಂದುವನ್ನಾಗಿಸಿ ರಚಿಸಲಾಗಿದೆ. ಅವಿಸ್ಮರಣೀಯ ಮತ್ತು ಪ್ರಬಲವಾದ ಸಂದೇಶದ ಮೂಲಕ, ಇದು ದೇಶಾದ್ಯಂತ ನಾಗರಿಕರಿಗೆ ಮಳೆನೀರನ್ನು ಸಂರಕ್ಷಿಸಲು ಮತ್ತು ಜಲ ಸಂಚಯವನ್ನು ದೈನಂದಿನ ಜೀವನದ ಭಾಗವಾಗಿಸಲು ಸ್ಫೂರ್ತಿ ನೀಡುವ ಉದ್ದೇಶವನ್ನು ಹೊಂದಿದೆ.

"ಹಿಡಿಯೋಣ ನಾವು, ಹಿಡಿಯೋಣ ನಾವು, ಮಳೆ ನೀರನ್ನು,

ಬರೆಯೋಣ ನಾವು, ಬರೆಯೋಣ ನಾವು, ಹೊಸತೊಂದು ಕಥೆಯನ್ನು"

ಈ ಗೀತೆಯು ಸರಳ ಆದರೆ ಪ್ರಬಲವಾದ ವಿಚಾರವನ್ನು ಪ್ರತಿಬಿಂಬಿಸುತ್ತದೆ: ನೀರು ಜೀವಜಲ ಮತ್ತು ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಳೆನೀರು ಕೊಯ್ಲು ಕೇವಲ ಸರ್ಕಾರದ ಜವಾಬ್ದಾರಿಯಾಗಲು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರಿಕ, ಕುಟುಂಬ, ಸಮುದಾಯ, ಸಂಸ್ಥೆ, ಸ್ಥಳೀಯ ಸಂಸ್ಥೆ ಮತ್ತು ಉದ್ಯಮವು ಈ ಶ್ರಮದಲ್ಲಿ ಸಕ್ರಿಯ ಭಾಗಿದಾರರಾದಾಗ ಮಾತ್ರ ನಿರಂತರ ಜಲ ಸಂರಕ್ಷಣೆಯನ್ನು ಸಾಧಿಸಲು ಸಾಧ್ಯ.

ಜಲ ಸಂಚಯ ಜನ ಭಾಗೀದಾರಿಯು, ಜಲ ಸಂರಕ್ಷಣೆಯನ್ನು ಒಂದು ಕಾರ್ಯಕ್ರಮದಿಂದ ಜನಪ್ರೇರಿತ ಚಳವಳಿಯನ್ನಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದೆ. ಭವಿಷ್ಯಕ್ಕಾಗಿ ನೀರನ್ನು ಕಾಯ್ದಿರಿಸುವ ದೇಶದ ಪ್ರಯತ್ನಗಳ ಕೇಂದ್ರಬಿಂದುವಾಗಿ 'ಜನ ಭಾಗೀದಾರಿ'ಯನ್ನು ಪರಿಚಯಿಸುವ ಜೊತೆಗೆ, ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ರಚನೆಗಳ ಸೃಷ್ಟಿ ಮತ್ತು ಪುನರುಜ್ಜೀವನವನ್ನು ಇದು ಉತ್ತೇಜಿಸುತ್ತದೆ.

ಈ ಗೀತೆಯು ಪ್ರಧಾನಮಂತ್ರಿಯವರ ಸಂದೇಶವನ್ನು ಪ್ರತಿಯೊಂದು ಹಳ್ಳಿ, ಪಟ್ಟಣ, ಶಾಲೆ, ಸಂಸ್ಥೆ ಮತ್ತು ಮನೆಮನೆಗೆ ತಲುಪಿಸುವ ಉದ್ದೇಶವನ್ನು ಹೊಂದಿದೆ, ವಿಶೇಷವಾಗಿ ಯುವಕರನ್ನು ಜಲ ಸಂರಕ್ಷಣೆಯ ರಾಯಭಾರಿಗಳಾಗಲು ಸ್ಫೂರ್ತಿ ನೀಡುತ್ತದೆ. ಇಂದು ಸಂರಕ್ಷಿಸುವ ಪ್ರತಿಯೊಂದು ಮಳೆಹನಿಯು ಬಲವಾದ ಅಂತರ್ಜಲ ಮೀಸಲು, ಹೆಚ್ಚು ಸ್ಥಿತಿಸ್ಥಾಪಕತ್ವ ಹೊಂದಿರುವ ಸಮುದಾಯಗಳು ಮತ್ತು ಜಲ-ಸುರಕ್ಷಿತ ಭವಿಷ್ಯಕ್ಕೆ ಕೊಡುಗೆ ನೀಡುತ್ತದೆ ಎಂಬುದನ್ನು ಇದು ನಾಗರಿಕರಿಗೆ ನೆನಪಿಸುತ್ತದೆ.

ದೇಶಾದ್ಯಂತದ ನಾಗರಿಕರು ಈ ಚಳವಳಿಗೆ ಸೇರ್ಪಡೆಗೊಳ್ಳುವಂತೆ ಮತ್ತು ಈ ಗೀತೆಯ ಸಂದೇಶವನ್ನು ಕಾರ್ಯರೂಪಕ್ಕೆ ತರುವಂತೆ ಜಲ ಶಕ್ತಿ ಸಚಿವಾಲಯವು ಕರೆ ನೀಡುತ್ತದೆ. ಮಳೆ ಎಲ್ಲಿಯೇ ಬೀಳಲಿ, ಯಾವಾಗಲೇ ಬೀಳಲಿ ಆ ನೀರನ್ನು ಹಿಡಿದಿಡೋಣ ಎಂಬ ಸಂದೇಶದ ಮೂಲಕ ಮತ್ತು ಜಲ ಸಂರಕ್ಷಣೆಯನ್ನು ಅಭ್ಯಾಸ ಹಾಗೂ ಜೀವನ ಶೈಲಿಯನ್ನಾಗಿ ಮಾಡಿಕೊಳ್ಳುವ ಮೂಲಕ, ಭಾರತವು ಜಲ ಸಂಚಯವನ್ನು ಜನ ಭಾಗೀದಾರಿಯಿಂದ ನಡೆಸಲ್ಪಡುವ ನಿಜವಾದ 'ಜನ ಆಂದೋಲನ'ವನ್ನಾಗಿ ಮಾಡಬಹುದು.

ಗೀತೆಯನ್ನು ಇಲ್ಲಿ ವೀಕ್ಷಿಸಿ: https://youtu.be/NBkodAkSKoE

ಕ್ಯಾಚ್ ದಿ ರೇನ್ ಎಲ್ಲಿಯೇ ಬೀಳಲಿ, ಯಾವಾಗಲೇ ಬೀಳಲಿ

ಜಲ ಸಂಚಯವನ್ನು ಜನ ಆಂದೋಲನವಾಗಿಸಿ ಪ್ರತಿಯೊಂದು ಹನಿಯನ್ನು ಉಳಿಸಿ, ಭವಿಷ್ಯವನ್ನು ಸುರಕ್ಷಿತಗೊಳಿಸಿ.

 

*****


(ಪ್ರಕಟಣೆ ಐ.ಡಿ.: 2310802) ವಿಸಿಟರ್ ಕೌಂಟರ್ : 27
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Urdu , Gujarati , Malayalam