ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ಗಣೇಶ ಚತುರ್ಥಿಯಂದು ಸಂಸ್ಕೃತದ ಸುಭಾಷಿತವನ್ನು ಹಂಚಿಕೊಂಡು, ಭಗವಾನ್ ಗಣೇಶನ ಆಶೀರ್ವಾದ ಕೋರಿದ್ದಾರೆ
ಪ್ರಕಟಣಾ ದಿನಾಂಕ:
14 SEP 2026 8:41AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗಣೇಶ ಚತುರ್ಥಿಯ ಪವಿತ್ರ ಸಂದರ್ಭದಲ್ಲಿ ಎಲ್ಲಾ ನಾಗರಿಕರಿಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ವಿಘ್ನಹರ್ತ ಭಗವಾನ್ ಗಣೇಶನ ಪೂಜೆ ಮತ್ತು ಆಶೀರ್ವಾದ ಪಡೆಯುವ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ಅವರು ಆಶಿಸಿದರು. ಭಗವಾನ್ ಗಣೇಶನ ದಿವ್ಯ ಆಶೀರ್ವಾದದಿಂದ ಪ್ರತಿಯೊಬ್ಬರ ಪ್ರಯತ್ನಗಳು ಯಶಸ್ವಿಯಾಗಲಿ ಮತ್ತು ದೇಶವು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಲಿ ಎಂದು ಶ್ರೀ ಮೋದಿ ಪ್ರಾರ್ಥಿಸಿದರು.
ಪ್ರಧಾನಮಂತ್ರಿಯವರು ಸಂಸ್ಕೃತದ ಸುಭಾಷಿತವನ್ನು ಹಂಚಿಕೊಂಡಿದ್ದಾರೆ-
“मुदाकरात्तमोदकं सदा विमुक्तिसाधकं
कलाधरावतंसकं विलासिलोकरक्षकम्।
अनायकैकनायकं विनाशितेभदैत्यकं
नताशुभाशुनाशकं नमामि तं विनायकम्॥”
"ಯಾರ ಪವಿತ್ರ ಕೈಗಳಲ್ಲಿ ಮೋದಕಗಳು ಶೋಭಿಸುತ್ತಿವೆಯೋ; ಯಾರು ಮುಮುಕ್ಷುಗಳಿಗೆ ಸದಾ ಮುಕ್ತಿಯ ಹಾದಿಯನ್ನು ತೋರಿಸುತ್ತಾರೋ; ಯಾರು ತಮ್ಮ ಹಣೆಗಿಂತ ಮೇಲೆ ಚಂದ್ರನ ಕಲೆಯನ್ನು ಆಭರಣವಾಗಿ ಧರಿಸಿದ್ದಾರೋ; ಯಾರು ಇಡೀ ಬ್ರಹ್ಮಾಂಡದ ರಕ್ಷಕರು ಮತ್ತು ಜಗತ್ತಿನ ಏಕೈಕ ಪರಮಪ್ರಭುವಾಗಿದ್ದಾರೋ; ಯಾರು ಗಜಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡಿದರೋ ಮತ್ತು ತಮ್ಮ ಭಕ್ತರನ್ನು ಎಲ್ಲಾ ದುಃಖ-ಕ್ಲೇಶಗಳಿಂದ ಶೀಘ್ರವಾಗಿ ಮುಕ್ತಗೊಳಿಸುತ್ತಾರೋ ಅಂತಹ ಶ್ರೀ ವಿನಾಯಕನಿಗೆ ನಾನು ನಮಸ್ಕರಿಸುತ್ತೇನೆ" ಎಂಬುದು ಈ ಸುಭಾಷಿತದ ಅರ್ಥವಾಗಿದೆ.
ಪ್ರಧಾನಮಂತ್ರಿ ಅವರು X ನಲ್ಲಿ ಹೀಗೆ ಬರೆದಿದ್ದಾರೆ;
“देशवासियों को गणेश चतुर्थी की अनंत शुभकामनाएं। विघ्नहर्ता के दर्शन और पूजन का यह पावन पर्व सबके जीवन में नई ऊर्जा और नए उत्साह का संचार करे। उनके दिव्य आशीर्वाद से सभी के प्रयास सफल हों और राष्ट्र निरंतर प्रगति के पथ पर आगे बढ़ता रहे, यही कामना है। गणपति बाप्पा मोरया!
मुदाकरात्तमोदकं सदा विमुक्तिसाधकं
कलाधरावतंसकं विलासिलोकरक्षकम्।
अनायकैकनायकं विनाशितेभदैत्यकं
नताशुभाशुनाशकं नमामि तं विनायकम्॥”
*****
(ಪ್ರಕಟಣೆ ಐ.ಡಿ.: 2310327)
ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Bengali-TR
,
Punjabi
,
Gujarati
,
Tamil
,
Telugu
,
Malayalam