ಕೃಷಿ ಸಚಿವಾಲಯ
azadi ka amrit mahotsav

ಒಣ ಭೂಮಿ ಕೃಷಿ ರೂಪಾಂತರಕ್ಕಾಗಿ ದೆಹಲಿ ಘೋಷಣೆಯೊಂದಿಗೆ ಮುಕ್ತಾಯಗೊಂಡ ಡ್ರೈಲ್ಯಾಂಡ್ ಕಾಂಗ್ರೆಸ್ 2026


ಒಣ ಭೂಮಿಯ ರೂಪಾಂತರಕ್ಕೆ ವಿಜ್ಞಾನ, ನಾವೀನ್ಯತೆ ಮತ್ತು ಪಾಲುದಾರಿಕೆಗೆ ಕರೆ ನೀಡುವ ಮೂಲಕ ಅಂತ್ಯಗೊಂಡ ಮೂರು ದಿನಗಳ ಡ್ರೈಲ್ಯಾಂಡ್ ಕಾಂಗ್ರೆಸ್

ಚೇತರಿಕೆಯುಳ್ಳ ಒಣ ಭೂಮಿ ಕೃಷಿ ಆಹಾರ ವ್ಯವಸ್ಥೆಗಳನ್ನು ನಿರ್ಮಿಸಲು ಬಲವಾದ ದತ್ತಾಂಶ ವ್ಯವಸ್ಥೆಗಳು ಮತ್ತು 'ಲಿವಿಂಗ್ ಲ್ಯಾಬೊರೇಟರಿಗಳು' ಅತ್ಯಗತ್ಯ: ಡಾ. ಎಂ.ಎಲ್. ಜಾಟ್, ಕಾರ್ಯದರ್ಶಿ, ಡಿ ಎ ಆರ್ ಇ

ಪ್ರಕಟಣಾ ದಿನಾಂಕ: 13 SEP 2026 9:07AM by PIB Bengaluru

ನವದೆಹಲಿಯಲ್ಲಿ ನಡೆದ ಮೂರು ದಿನಗಳ 'ಡ್ರೈಲ್ಯಾಂಡ್ ಕಾಂಗ್ರೆಸ್ 2026, ಒಣ ಭೂಮಿ ಕೃಷಿಗೆ ಸಂಬಂಧಿಸಿದ ಪರಿಹಾರಗಳನ್ನು ತ್ವರಿತಗೊಳಿಸಲು ದಕ್ಷಿಣ-ದಕ್ಷಿಣ   ಮತ್ತು ತ್ರಿಕೋನ ಸಹಕಾರವನ್ನು ಬಲಪಡಿಸುವ ಕರೆ ನೀಡುವ ಮೂಲಕ ಇಂದು ಮುಕ್ತಾಯಗೊಂಡಿತು. ಕೊನೆಯ ದಿನವು 'ವಿಶ್ವಸಂಸ್ಥೆಯ ದಕ್ಷಿಣ-ದಕ್ಷಿಣ ಸಹಕಾರ ದಿನ'ದೊಂದಿಗೆ  ಹೊಂದಿಕೆಯಾಯಿತು. ಕಾರ್ಯಕ್ರಮದಲ್ಲಿ 'ಒಣ ಭೂಮಿಯ ದೆಹಲಿ ಘೋಷಣೆ – 3ಡಿ'ಯನ್ನು ಅಂಗೀಕರಿಸಲಾಯಿತು. ಇದು ಜಾಗತಿಕ ದಕ್ಷಿಣದಾದ್ಯಂತ   ಸಹಕಾರ, ಜ್ಞಾನ ವಿನಿಮಯ, ನಾವೀನ್ಯತೆ ಮತ್ತು ಸಾಮೂಹಿಕ ಕಾರ್ಯಗಳ ಮೂಲಕ ಒಣ ಭೂಮಿ ಕೃಷಿಯನ್ನು ರೂಪಾಂತರಿಸುವ ಜಂಟಿ ಕಾರ್ಯಸೂಚಿಯನ್ನು ರೂಪಿಸುತ್ತದೆ. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಸರ್ಕಾರಗಳು, ಸಂಸ್ಥೆಗಳು, ಪಾಲುದಾರರು ಮತ್ತು ಪ್ರತಿನಿಧಿಗಳು ಇದನ್ನು ಅನುಮೋದಿಸಿದರು.

ಸಮಾರೋಪ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿಎಆರ್ ಇ  ಕಾರ್ಯದರ್ಶಿ ಹಾಗೂ ಐಸಿಎಆರ್ ನ ಮಹಾನಿರ್ದೇಶಕರಾದ ಡಾ. ಎಂ. ಎಲ್. ಜಾಟ್ ಅವರು, ಒಣ ಭೂಮಿ ಕೃಷಿಯ ಪ್ರಯತ್ನಗಳ ಕೇಂದ್ರಬಿಂದುವಾಗಿ ಪೂರ್ವಾಲೋಚನೆ ಮತ್ತು ದೂರದೃಷ್ಟಿಯ ತರುವ ಅಗತ್ಯವನ್ನು ಪ್ರತಿಪಾದಿಸಿದರು. ಬಲವಾದ ಸಾಂಸ್ಥಿಕ ವ್ಯವಸ್ಥೆಯ ಅಗತ್ಯವನ್ನು ಪ್ರತಿಪಾದಿಸಿದ ಅವರು, ಐಸಿಎಆರ್ -ರಾಷ್ಟ್ರೀಯ ಕೃಷಿ ಅರ್ಥಶಾಸ್ತ್ರ ಮತ್ತು ನೀತಿ ಸಂಶೋಧನಾ ಸಂಸ್ಥೆಗೆ (ಐಸಿಎಆರ್ – ಎನ್ ಐಎಪಿ ) ಒಣ ಭೂಮಿ ಕೃಷಿಯ ದೂರದೃಷ್ಟಿಯ ಕಾರ್ಯದ ನೇತೃತ್ವ ವಹಿಸಲು ನಿರ್ದೇಶನ ನೀಡಬೇಕು ಎಂದು ಹೇಳಿದರು. ಒಣ ಭೂಮಿ ಕೃಷಿ ಆಹಾರ ವ್ಯವಸ್ಥೆಗಳಿಗಾಗಿ ಬಲವಾದ ದತ್ತಾಂಶ ಮತ್ತು ಮಾಹಿತಿ ವ್ಯವಸ್ಥೆಗಳ ಹಾಗೂ ಸಂಶೋಧನೆಯನ್ನು ಪ್ರಾಯೋಗಿಕ ನೀತಿಗಳೊಂದಿಗೆ ಜೋಡಿಸುವ 'ಲಿವಿಂಗ್ ಲ್ಯಾಬೊರೇಟರಿ'ಗಳ (ವಾಸ್ತವ ಪ್ರಯೋಗಾಲಯ) ಅಗತ್ಯವನ್ನು ಅವರು ಒತ್ತಿ ಹೇಳಿದರು.

ಐ ಸಿ ಆರ್ ಐ ಎಸ್ ಎ ಟಿ ನ ಮಹಾನಿರ್ದೇಶಕರಾದ ಡಾ. ಹಿಮಾಂಶು ಪಾಠಕ್ ಅವರು, ಜಾಗತಿಕ ಆಹಾರ ಭದ್ರತೆಯಲ್ಲಿ ಒಣ ಭೂಮಿಯ ಕಾರ್ಯತಂತ್ರದ ಮಹತ್ವವನ್ನು ವಿವರಿಸಿದರು ಮತ್ತು ಕಳೆದ ಮೂರು ದಿನಗಳ ಚರ್ಚೆಗಳನ್ನು ಸಫಲ ಕಾರ್ಯಗಳಾಗಿ ಪರಿವರ್ತಿಸಲು ಕರೆ ನೀಡಿದರು. ಜ್ಞಾನ ಮತ್ತು ಸೌಹಾರ್ದತೆಯನ್ನು ಒಟ್ಟುಗೂಡಿಸುವ ಮೂಲಕ ವಿಚಾರಗಳನ್ನು ಪರಿಕಲ್ಪನೆಗಳಿಗೆ ಮತ್ತು ಪರಿಕಲ್ಪನೆಗಳನ್ನು ನಿರ್ದಿಷ್ಟ ಅನುಷ್ಠಾನವಾಗಿ ಬದಲಾಯಿಸಲು ಅಲ್ಪಾವಧಿ ಮತ್ತು ದೀರ್ಘಾವಧಿಯ ಆದ್ಯತೆಗಳನ್ನು ಗುರುತಿಸಬೇಕೆಂದು ಒತ್ತಿ ಹೇಳಿದರು.

ಸಮಾರೋಪ ಸಮಾರಂಭವು ಈ ಸಮ್ಮೇಳನನಿಂದ ಹೊರಹೊಮ್ಮಿದ ಹೊಸ ಪಾಲುದಾರಿಕೆಗಳು ಮತ್ತು ಸಹಯೋಗಗಳನ್ನು ಉಲ್ಲೇಖಿಸಿತು. ಗ್ಲೋಬಲ್ ಕ್ರಾಪ್ ಡೈವರ್ಸಿಟಿ ಟ್ರಸ್ಟ್ ನೊಂದಿಗೆ   ಹೊಸ ಒಪ್ಪಂದಗಳು ಮತ್ತು ತಿಳುವಳಿಕಾಪತ್ರಗಳನ್ನು ಘೋಷಿಸಲಾಯಿತು. ಐಸಿಆರ್ ಐಎಸ್ ಎ ಟಿ ಸಂಸ್ಥೆಯು ಏವಿಯರ್ ಲೈಫ್ ಸೈನ್ಸಸ್, ಎನ್ ಐ ಎಫ್ ಟಿ ಇ ಎಂ, ವಿಪ್ರೋ ಲಿಮಿಟೆಡ್, ಹಾಗೂ ಒಡಿಶಾದ ಅಂಗುಲ್ ಮತ್ತು ರಾಯಗಡ ಜಿಲ್ಲಾಡಳಿತಗಳೊಂದಿಗೆ ತಿಳುವಳಿಕಾಪತ್ರಗಳಿಗೆ ಸಹಿ ಹಾಕಲಾಯಿತು. ಡ್ರೈ ಕಾಂಗ್ರೆಸ್ ನ ಸಹ-ಅಧ್ಯಕ್ಷರಾದ ಐಸಿಎಆರ್ ನ ಬೆಳೆ ವಿಜ್ಞಾನ ವಿಭಾಗದ ಉಪ ಮಹಾನಿರ್ದೇಶಕ (ಡಿಡಿಜಿ) ಡಾ. ಡಿ.ಕೆ. ಯಾದವ್ ಮತ್ತು ಐಸಿಆರ್ ಐಎಸ್ ಎ ಟಿ,  ಸಂಶೋಧನೆ ಮತ್ತು ನಾವೀನ್ಯತೆ ವಿಭಾಗದ ಉಪ ಮಹಾನಿರ್ದೇಶಕ ಡಾ. ಸ್ಟ್ಯಾನ್ಫೋರ್ಡ್ ಬ್ಲೇಡ್ ಅವರು ಮೂರು ದಿನಗಳ ಚರ್ಚೆಗಳ ಸಂಕ್ಷಿಪ್ತ ವರದಿಯನ್ನು ಹಾಗೂ ಪ್ರಮುಖ ಶಿಫಾರಸುಗಳನ್ನು ಮಂಡಿಸಿದರು.

ಇದಕ್ಕೂ ಮುನ್ನ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಎಫ್ ಎ ಒ ಮಹಾನಿರ್ದೇಶಕರು ಮತ್ತು ಯುಎನ್ ಒ ಎಸ್ ಎಸ್ ಸಿ ನಿರ್ದೇಶಕಿ   ಶ್ರೀಮತಿ ದಿಮಾ ಅಲ್-ಖತೀಬ್ ಅವರ ಸಂದೇಶಗಳೊಂದಿಗೆ 'ದಕ್ಷಿಣ-ದಕ್ಷಿಣ ಸಹಕಾರಕ್ಕಾಗಿನ ವಿಶ್ವಸಂಸ್ಥೆಯ ದಿನ'ದ ಸ್ಮರಣಾರ್ಥ ಸಮಾರಂಭದೊಂದಿಗೆ ದಿನವು ಪ್ರಾರಂಭವಾಯಿತು. ಐ ಸಿ ಆರ್ ಐ ಎಸ್ ಎ ಟಿ ನ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ್ ಅವರು 'ಕೃಷಿಯಲ್ಲಿ ದಕ್ಷಿಣ-ದಕ್ಷಿಣ ಸಹಕಾರಕ್ಕಾಗಿ ಅಂತರರಾಷ್ಟ್ರೀಯ ಒಗ್ಗಟ್ಟು' (ಐಎಸ್ ಎಸ್ ಸಿ ಎ) ಕುರಿತ ದೃಷ್ಟಿಕೋನವನ್ನು ಹಂಚಿಕೊಂಡರು. ಐಸಿಆರ್ ಐಎಸ್ ಎ ಟಿ , ಐಸಿಎಆರ್, ಸಿಜಿಐಎಆರ್, ಆರ್ ಐ ಎಸ್, ನಬಾರ್ಡ್ಮತ್ತು ಸಿಜಿಐಎಆರ್  'ಕೆಪಾಸಿಟಿ ಶೇರಿಂಗ್ ಆಕ್ಸಿಲರೇಟರ್'ನ ಪ್ರತಿನಿಧಿಗಳು ದಕ್ಷಿಣ-ದಕ್ಷಿಣ ಸಹಕಾರವನ್ನು ಮುನ್ನಡೆಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ನಂತರ ಸಿಜಿಐಎಆರ್ ನೊಂದಿಗೆ "ಜ್ಞಾನಕ್ಕೆ ಗಡಿಗಳಿಲ್ಲ: ದಕ್ಷಿಣ-ದಕ್ಷಿಣ ಮತ್ತು ತ್ರಿಕೋನ ಸಹಕಾರವನ್ನು ಮುನ್ನಡೆಸುವುದು" ಎನ್ನುವ ವಿಷಯದ ಬಗ್ಗೆ ಗೋಷ್ಠಿ ನಡೆಯಿತು. ಇಥಿಯೋಪಿಯಾ, ಸೆನೆಗಲ್, ಬ್ರೆಜಿಲ್, ಚೀನಾ ಮತ್ತು ಭಾರತದ ಕೃಷಿ ಸಂಶೋಧನಾ ಸಂಸ್ಥೆಗಳ ಭಾಷಣಕಾರರು ಮತ್ತು ಸಿಜಿಐಎಆರ್, ಎಫ್ ಎ ಆರ್ ಎ ಹಾಗೂ ಎಪಿಎಎಆರ್ ಐ  ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಇದೇ ಸಂದರ್ಭದಲ್ಲಿ 'ಐಎಸ್ ಎಸ್ ಸಿ ಎ ಜಾಗತಿಕ ಪ್ರಶಸ್ತಿಗಳು 2026' ಅನ್ನು ಪ್ರಧಾನ ಮಾಡಲಾಯಿತು. ಜಾಗತಿಕ ದಕ್ಷಿಣದ ಸಂಸ್ಥೆಗಳಿಂದ ಕೃಷಿ ಕ್ಷೇತ್ರದಲ್ಲಿ ರುಜುವಾತಾದ ಅತ್ಯುತ್ತಮ ನಾವೀನ್ಯತೆಗಳನ್ನು ಗುರುತಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದರ ಉದ್ಘಾಟನಾ ಆವೃತ್ತಿಗೆ ಏಷ್ಯಾ, ಆಗ್ನೇಯ ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ ಹಾಗೂ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶಗಳ 34 ದೇಶಗಳಿಂದ 170 ನಾಮನಿರ್ದೇಶನಗಳು ಬಂದಿದ್ದವು. 'ISSCA ಗ್ಲೋಬಲ್ ಅವಾರ್ಡ್ ಫಾರ್ ಟ್ರಾನ್ಸ್ಫಾರ್ಮೇಟಿವ್ ಎಕ್ಸಲೆನ್ಸ್' (ಮೆಗಾ ಪ್ರಶಸ್ತಿ) ಅನ್ನು ಲೆಬನಾನ್ನ ICARDA ಸಂಸ್ಥೆಗೆ 'ಟಿಎಎಟಿ  ವೀಟ್ ಕಾಂಪ್ಯಾಕ್ಟ್ ಟೆಕ್ನೋಲೊಜಿಸ್ : ಶಾಖ-ಸಹಿಷ್ಣು ಗೋಧಿ ತಳಿಗಳಿʼ ಗಾಗಿ ಹಾಗೂ ಮೆಕ್ಸಿಕೋದ ಸಿಐಎಂಎಂವೈಟಿ  ಸಂಸ್ಥೆಗೆ 'ಇ-ಅಗ್ರೋಲೊಜಿ 360'ಗಾಗಿ ಪ್ರದಾನ ಮಾಡಲಾಯಿತು. ಹಾಗೆಯೇ, ಪೌಷ್ಟಿಕಾಂಶ ಮತ್ತು ಗ್ರಾಮೀಣ ಚೇತರಿಕೆಗಾಗಿ ಮಹಿಳೆಯರ ನೇತೃತ್ವದ ಸುಸ್ಥಿರ ಕೃಷಿ ಕಾರ್ಯಕ್ರಮಕ್ಕಾಗಿ ಭಾರತದ ಒಡಿಶಾ ಸರ್ಕಾರದ 'ಒಡಿಶಾ ಜೀವನೋಪಾಯ ಅಭಿಯಾನ'ಕ್ಕೆ  ಪ್ರಶಸ್ತಿ ನೀಡಲಾಯಿತು.

'ಬೆಳೆ ಸುಧಾರಣೆ ಮತ್ತು ಉತ್ಪಾದನಾ ತಂತ್ರಜ್ಞಾನಗಳು' ವಿಭಾಗದ ಪ್ರಶಸ್ತಿಗಳು ಇವರಿಗೆ ಲಭಿಸಿದವು: 'ಬಾರಿ ಚಿನಬಾದಮ್-9' ತಳಿಗಾಗಿ ಬಾಂಗ್ಲಾದೇಶದ 'ಬಾಂಗ್ಲಾದೇಶ ಕೃಷಿ ಸಂಶೋಧನಾ ಸಂಸ್ಥೆ'; 'ಜಿಪಿಬಿಡಿ 4' ತಳಿಗಾಗಿ ಭಾರತದ ಧಾರವಾಡದ 'ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ'; ಹಾಗೂ ಹವಾಮಾನ-ಸ್ನೇಹಿ ಮತ್ತು ಶೀಘ್ರವಾಗಿ ಇಳುವರಿ ನೀಡುವ ಕಡಲೆ  ಕಡಲೆ, ತೊಗರಿ ಮತ್ತು ಶೇಂಗಾ ತಳಿಗಳಿಗಾಗಿ ಮ್ಯಾನ್ಮಾರ್ ನ 'ಕೃಷಿ ಸಂಶೋಧನಾ ಇಲಾಖೆ' (ಡಿಎಆರ್). ಪ್ರಭೇದಗಳು. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಹವಾಮಾನ ಚೇತರಿಕೆ ಪ್ರಶಸ್ತಿಗಳು ಕರ್ನಾಟಕ ರಾಜ್ಯ ಕೃಷಿ ಇಲಾಖೆ ಕೃಷಿ ಭಾಗ್ಯ; ಭಾರತದ ಎನ್ ಇ ಸಿಟಿಎ ಆರ್, ಸಮಗ್ರ ಬಾಳೆ ಡಿಂಡಿನ ಸಂಸ್ಕರಣೆ; ಬಿಹಾರ ಸರ್ಕಾರದ ಕೃಷಿ ಇಲಾಖೆ ಆಹಾರ್-ಪೈನ್ ಭೂಮಿಯ ಪುನರುಜ್ಜೀವನ; ಮತ್ತು ಡಿಜಿಟಲ್ ಭೂ-ಪುನಃಸ್ಥಾಪನೆ ಉಸ್ತುವಾರಿಗಾಗಿ, ಮಲಾವಿಯ ಸುಸ್ಥಿರ ಕೃಷಿ ಪರಿಹಾರಗಳು.

ಕೃಷಿ ವ್ಯವಹಾರ ಮತ್ತು ಮಾರುಕಟ್ಟೆ ವ್ಯವಸ್ಥೆಗಳ ಪ್ರಶಸ್ತಿಗಳು: ಬಾಂಗ್ಲಾದೇಶದ ಬಿಐಐಡಿ  ಫೌಂಡೇಶನ್ - ಇ-ಕೃಷೋಕ್ ; ತಮಿಳುನಾಡು ಕೃಷಿ ವಿಶ್ವವಿದ್ಯಾಲಯ- ಟಿಎನ್ ಎ ಯು-ಎಫ್ ಪಿಒ ಜೋಡಣಾ ಕಾರ್ಯಕ್ರಮ; ಮತ್ತು ನೈಜೀರಿಯನ್ ಸ್ಟೋರ್ಡ್ ಪ್ರಾಡಕ್ಟ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್  - ಪ್ಯಾರಾಬೋಲಿಕ್ ಆಕಾರದ ಸೋಲಾರ್ ಡ್ರೈಯರ್. 

ಡಿಜಿಟಲ್ ಕೃಷಿ ಪ್ರಶಸ್ತಿಗಳು: ಆಂಧ್ರಪ್ರದೇಶ ಸರ್ಕಾರದ ತೋಟಗಾರಿಕೆ ಇಲಾಖೆ - ಎಪಿಎಂಐಪಿ  ಡಿಜಿಟಲ್ ಪರಿಸರ ವ್ಯವಸ್ಥೆ,  ಗುಜರಾತ್ ಸರ್ಕಾರದ ಕೃಷಿ, ರೈತರ ಕಲ್ಯಾಣ ಮತ್ತು ಸಹಕಾರ ಇಲಾಖೆ -  ಕೃಷಿ ಪ್ರಗತಿ.

ಪಶುಸಂಗೋಪನೆ ಸುಧಾರಣೆ ಮತ್ತು ಉತ್ಪಾದನಾ ತಂತ್ರಜ್ಞಾನ ಪ್ರಶಸ್ತಿಗಳು: ಬಾಂಗ್ಲಾದೇಶದ ವರ್ಲ್ಡ್ ಫಿಶ್ -  ಸುಧಾರಿತ ಕಾರ್ಪ್ ಬೀಜ ವ್ಯವಸ್ಥೆ ಅಂತರರಾಷ್ಟ್ರೀಯ ಜಾನುವಾರು ಸಂಶೋಧನಾ ಸಂಸ್ಥೆ (ಐಎಲ್ ಆರ್ ಐ), ಕೀನ್ಯಾ - ಸ್ಥಳೀಯ ಕೋಳಿ ತಳಿ ಸುಧಾರಣಾ ಕಾರ್ಯಕ್ರಮ ಇದರ ಜೊತೆಗೆ, ಒಣಭೂಮಿ ಕೃಷಿಯಲ್ಲಿ ಭರವಸೆಯ ಸಂಶೋಧನೆ ಮತ್ತು ಉದಯೋನ್ಮುಖ ವೈಜ್ಞಾನಿಕ ಪ್ರತಿಭೆಯನ್ನು ಗುರುತಿಸಿ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ವಾಂಸರಿಗೆ 16 ಅತ್ಯುತ್ತಮ ಪೋಸ್ಟರ್ ಪ್ರಶಸ್ತಿಗಳನ್ನು ನೀಡಲಾಯಿತು. 

"ದಕ್ಷಿಣ-ದಕ್ಷಿಣ ಸಹಕಾರದೊಂದಿಗೆ ಒಣ ಭೂಮಿ ಕೃಷಿಯ ರೂಪಾಂತರ" ಎಂಬ ವಿಷಯದಲ್ಲಿ  ನಡೆದ ಡ್ರೈ ಕಾಂಗ್ರೆಸ್, ವೈಜ್ಞಾನಿಕ ಜ್ಞಾನವನ್ನು ಕಾರ್ಯರೂಪಕ್ಕೆ ತರಲು ಮತ್ತು ಪಾಲುದಾರಿಕೆಯನ್ನು ಬಲಪಡಿಸಲು ಬದ್ಧತೆಯನ್ನು ಪುನರುಚ್ಚರಿಸುವ ಮೂಲಕ ಡ್ರೈಲ್ಯಾಂಡ್ ಕಾಂಗ್ರೆಸ್ 2026 ಮುಕ್ತಾಯಗೊಂಡಿತು.

 

*****


(ಪ್ರಕಟಣೆ ಐ.ಡಿ.: 2309706) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Gujarati