ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಭಾರತದ ಶುದ್ಧ ಇಂಧನ ಪರಿವರ್ತನೆಯಲ್ಲಿ ಸಣ್ಣ ಜಲಶಕ್ತಿಯು ವಿಶಿಷ್ಟ ಪಾತ್ರ ವಹಿಸಿದೆ: ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್
ಭಾರತದ ಅಂದಾಜು ಮಾಡಲಾದ ಸಣ್ಣ ಜಲಶಕ್ತಿ ಸಾಮರ್ಥ್ಯವು 7,100ಕ್ಕೂ ಅಧಿಕ ಗುರುತಿಸಲಾದ ಸ್ಥಳಗಳಲ್ಲಿ ಸುಮಾರು 21 GW ನಷ್ಟಿದೆ
ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026ರಲ್ಲಿ ಭಾಗವಹಿಸಲಿರುವ ಸಣ್ಣ ಜಲವಿದ್ಯುತ್ ಗೋಷ್ಠಿ; ಪೂರ್ವಭಾವಿ ಕಾರ್ಯಕ್ರಮ ಆಯೋಜನೆ
ಪ್ರಕಟಣಾ ದಿನಾಂಕ:
10 SEP 2026 3:08PM by PIB Bengaluru
ಭಾರತದ ಶುದ್ಧ ಇಂಧನ ಪರಿವರ್ತನೆಯಲ್ಲಿ ಸಣ್ಣ ಜಲಶಕ್ತಿಯು ವಿಶಿಷ್ಟ ಪಾತ್ರವನ್ನು ವಹಿಸುತ್ತದೆ ಎಂದು ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಹೇಳಿದರು. ಅವರು ನವದೆಹಲಿಯಲ್ಲಿಂದು ನಡೆದ ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026ರಲ್ಲಿ ನಿರ್ದಿಷ್ಟ ಸಣ್ಣ ಜಲವಿದ್ಯುತ್ (ಎಸ್ ಎಚ್ ಪಿ) ಗೋಷ್ಠಿಗಾಗಿ ನಡೆಸಿದ ಪೂರ್ವಭಾವಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಸಣ್ಣ ಜಲಶಕ್ತಿಯು ದೂರದ ಪ್ರದೇಶಗಳಲ್ಲಿ ಇಂಧನ ಸುರಕ್ಷತೆ, ವಿಕೇಂದ್ರೀಕೃತ ಉತ್ಪಾದನೆ, ಉದ್ಯೋಗ ಮತ್ತು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದು ಹೇಳಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತದ ಶುದ್ಧ ಇಂಧನ ಪ್ರಯಾಣವು ಗಮನಾರ್ಹ ಪರಿವರ್ತನೆಗೆ ಒಳಗಾಗಿದ್ದು, ದೇಶವನ್ನು ಜಾಗತಿಕ ಇಂಧನ ಪರಿವರ್ತನೆಯ ಮುಂಚೂಣಿಗೆ ತಂದಿದೆ ಎಂದು ಶ್ರೀ ನಾಯಕ್ ಹೇಳಿದರು. ನವೀಕರಿಸಬಹುದಾದ ಇಂಧನವು ಇಂಧನ ಭದ್ರತೆ, ಆರ್ಥಿಕ ಬೆಳವಣಿಗೆ, ತಾಂತ್ರಿಕ ಪ್ರಗತಿ ಮತ್ತು ಉದ್ಯೋಗ ಉತ್ಪಾದನೆಗೆ ಪ್ರಬಲ ಸಾಧನವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದರು.
ಭಾರತವು 300 ಗಿಗಾವ್ಯಾಟ್ ಬಳಸಿದರೆ ಬರಿದಾಗದ ಇಂಧನ ಸಾಮರ್ಥ್ಯದ ಸ್ಥಾಪಿತ ಮೈಲಿಗಲ್ಲನ್ನು ದಾಟಿದೆ ಎಂದು ಸಚಿವರು ಪ್ರಸ್ತಾಪಿಸಿದರು. ಭಾರತದ ಇಂಧನ ಪರಿವರ್ತನೆಯ ಬಲವು ದೇಶದ ಭೌಗೋಳಿಕತೆ, ಸಂಪನ್ಮೂಲಗಳು ಮತ್ತು ಅಭಿವೃದ್ಧಿ ಅಗತ್ಯಗಳಿಗೆ ಸೂಕ್ತವಾದ ವೈವಿಧ್ಯಮಯ, ಸಮತೋಲಿತ ಮತ್ತು ಸ್ಥಿತಿಸ್ಥಾಪಕ ಇಂಧನ ವಿಭಾಗವನ್ನು ರೂಪಿಸುವಲ್ಲಿ ತೊಡಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಣ್ಣ ಜಲವಿದ್ಯುತ್‌ನ ಗಮನಾರ್ಹ ಸಾಮರ್ಥ್ಯವನ್ನು ಶ್ರೀ ನಾಯಕ್ ಒತ್ತಿ ಹೇಳಿದರು. ಭಾರತದ ಸದ್ಯ ಅಂದಾಜು ಮಾಡಿರುವಂತೆ ಸಣ್ಣ ಜಲವಿದ್ಯುತ್ ಸಾಮರ್ಥ್ಯವು 7,100ಕ್ಕೂ ಅಧಿಕ ಗುರುತಿಸಲಾದ ತಾಣಗಳಲ್ಲಿ ಸುಮಾರು 21 ಗಿಗಾವ್ಯಾಟ್ ರಷ್ಟಿದ್ದು, ಅದರಲ್ಲಿ ಕೇವಲ 5.2 GW ಅನ್ನು ಮಾತ್ರ ಬಳಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಇದು ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಮಹತ್ವದ ಅವಕಾಶವನ್ನು ಪ್ರತಿನಿಧಿಸುತ್ತದೆ ಎಂದು ಅವರು ಉಲ್ಲೇಖಿಸಿದರು.
ಸಣ್ಣ ಜಲವಿದ್ಯುತ್‌ನ ಮಹತ್ವವು ಉತ್ಪಾದನಾ ಸಾಮರ್ಥ್ಯವನ್ನು ಸೇರಿಸುವುದನ್ನು ಮೀರಿದೆ ಎಂದು ಶ್ರೀ ನಾಯಕ್ ಹೇಳಿದರು. ತಾಂತ್ರಿಕವಾಗಿ ಮತ್ತು ಪರಿಸರಕ್ಕೆ ಸಾಧ್ಯವಾದಲ್ಲೆಲ್ಲಾ, ಸೂಕ್ತವಾಗಿ ವಿನ್ಯಾಸಗೊಳಿಸಲಾದ ನದಿಯ ಹರಿವಿನ ಯೋಜನೆಗಳು ತುಲನಾತ್ಮಕವಾಗಿ ಕಡಿಮೆ ಭೂಮಿ ಅಗತ್ಯವಿರುವ ನವೀಕರಿಸಬಹುದಾದ ಇಂಧನ ಆಯ್ಕೆಯನ್ನು ಒದಗಿಸಬಹುದು ಮತ್ತು ಪ್ರಮುಖ ಜಲಾಶಯ ಆಧಾರಿತ ಯೋಜನೆಗಳಿಗೆ ಸಂಬಂಧಿಸಿದ ದೊಡ್ಡ ಪ್ರಮಾಣದ ಮುಳುಗುವಿಕೆ ಮತ್ತು ಸ್ಥಳಾಂತರವನ್ನು ತಪ್ಪಿಸಬಹುದು ಎಂದು ಅವರು ತಿಳಿಸಿದರು.
ಬಳಕೆಯ ಹಂತಕ್ಕೆ ಹತ್ತಿರದಲ್ಲಿ ವಿಶ್ವಾಸಾರ್ಹ ನವೀಕರಿಸಬಹುದಾದ ವಿದ್ಯುತ್ ಅನ್ನು ಒದಗಿಸಲು, ವಿಕೇಂದ್ರೀಕೃತ ಉತ್ಪಾದನೆಯನ್ನು ಬಲಪಡಿಸಲು ಮತ್ತು ವಿದ್ಯುತ್ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವಕ್ಕೆ ಕೊಡುಗೆ ನೀಡಲು ಸಣ್ಣ ಜಲವಿದ್ಯುತ್ ಶಕ್ತಿ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು, ವಿಶೇಷವಾಗಿ ಭೌಗೋಳಿಕವಾಗಿ ಸವಾಲಿನ ಪ್ರದೇಶಗಳಲ್ಲಿ. ಈ ವಲಯವು ಉದ್ಯೋಗವನ್ನು ಸೃಷ್ಟಿಸಬಹುದು, ಸ್ಥಳೀಯ ಉದ್ಯಮಗಳನ್ನು ಬೆಂಬಲಿಸಬಹುದು ಮತ್ತು ಪರಿಸರ ವಿಜ್ಞಾನ ಮತ್ತು ಸ್ಥಳೀಯ ಸಮುದಾಯಗಳ ಬಗ್ಗೆ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳುವಾಗ ದೂರದ ಪ್ರದೇಶಗಳಲ್ಲಿ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಬಹುದು.
2026-27 ರಿಂದ 2030-31ರ ಅವಧಿಗೆ ಸರ್ಕಾರದ ಉದ್ದೇಶಿತ ಸಣ್ಣ ಜಲವಿದ್ಯುತ್ ಅಭಿವೃದ್ಧಿ ಯೋಜನೆಯನ್ನು ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿ, ಇದು 2,584.60 ಕೋಟಿ ರೂ. ವೆಚ್ಚ ಮತ್ತು ಸುಮಾರು 1,500 ಮೆಗಾವ್ಯಾಟ್ ಹೊಸ ಸಣ್ಣ ಜಲವಿದ್ಯುತ್ ಸಾಮರ್ಥ್ಯದ ಗುರಿಯನ್ನು ಹೊಂದಿದೆ. ಈ ಯೋಜನೆಯು ಸುಮಾರು 200 ಯೋಜನೆಗಳಿಗೆ ವಿವರವಾದ ಯೋಜನಾ ವರದಿಗಳನ್ನು ತಯಾರಿಸಲು ರಾಜ್ಯಗಳನ್ನು ಪ್ರೋತ್ಸಾಹಿಸುತ್ತದೆ, ಇದರಿಂದಾಗಿ ಭವಿಷ್ಯದ ಅಭಿವೃದ್ಧಿಗಾಗಿ ಸಣ್ಣ ಜಲವಿದ್ಯುತ್ ಯೋಜನೆಗಳ ಪೈಪ್‌ಲೈನ್ ಅನ್ನು ರಚಿಸುತ್ತದೆ ಎಂದರು.
ಸರ್ಕಾರದ ಬೆಂಬಲ ಮಾತ್ರ ಈ ಕ್ಷೇತ್ರದ ಸಂಪೂರ್ಣ ಸಾಮರ್ಥ್ಯವನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಒತ್ತಿ ಹೇಳಿದರು ಮತ್ತು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಡೆವಲಪ್ಪರ್ಸ್, ಹಣಕಾಸು ಸಂಸ್ಥೆಗಳು, ತಂತ್ರಜ್ಞಾನ ಪೂರೈಕೆದಾರರು ಮತ್ತು ಹೂಡಿಕೆದಾರರ ನಡುವೆ ಬಲವಾದ ಪಾಲುದಾರಿಕೆಗೆ ಕರೆ ನೀಡಿದರು. ನೀತಿ ಖಚಿತತೆ, ಸುವ್ಯವಸ್ಥಿತ ಅನುಮೋದನೆಗಳು, ಸುಧಾರಿತ ವ್ಯವಹಾರ ಮಾಡುವ ಸುಲಭತೆ, ಬಲವಾದ ಕೇಂದ್ರ-ರಾಜ್ಯ ಸಮನ್ವಯ ಮತ್ತು ಯೋಜನೆಗಳ ಉತ್ತಮ ಬ್ಯಾಂಕಿಂಗ್ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಭಾರತವು ತನ್ನ ಸಣ್ಣ ಜಲವಿದ್ಯುತ್ ಸಾಮರ್ಥ್ಯವನ್ನು ಹೇಗೆ ಪೂರ್ಣವಾಗಿ ಮತ್ತು ಚುರುಕಾಗಿ ಬಳಸಿಕೊಳ್ಳಬಹುದು ಎಂಬುದರ ಕುರಿತು ಪೂರ್ವಭಾವಿ ಕಾರ್ಯಕ್ರಮವು ಪ್ರಮುಖ ರಾಷ್ಟ್ರೀಯ ಸಮಾಲೋಚನೆಯ ಆರಂಭವನ್ನು ಗುರುತಿಸುತ್ತದೆ ಎಂದು ಶ್ರೀ ನಾಯಕ್ ಹೇಳಿದರು. 2026 ರ ನವೆಂಬರ್ 2 ರಿಂದ 5 ರವರೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026 ರಲ್ಲಿ ಸಣ್ಣ ಜಲವಿದ್ಯುತ್ ಗೋಷ್ಠಿಯು ನೀತಿ ಸುಧಾರಣೆಗಳು, ಹೂಡಿಕೆ, ಹಣಕಾಸು, ತಂತ್ರಜ್ಞಾನ ಮತ್ತು ಪಾಲುದಾರಿಕೆಗಳ ಕುರಿತು ಚರ್ಚಿಸಲು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ಈ ರಾಷ್ಟ್ರೀಯ ಪ್ರಯತ್ನದಲ್ಲಿ ಭಾಗವಹಿಸಲು ಮತ್ತು ಸ್ವಚ್ಛ, ಬಲವಾದ, ಹೆಚ್ಚು ಸ್ವಾವಲಂಬಿ ಮತ್ತು ಸುಸ್ಥಿರ ಭಾರತವನ್ನು ನಿರ್ಮಿಸಲು ಭಾರತದ ನದಿ ವ್ಯವಸ್ಥೆಗಳು, ಭೌಗೋಳಿಕ ವೈವಿಧ್ಯತೆ, ಸ್ಥಳೀಯ ತಾಂತ್ರಿಕ ಸಾಮರ್ಥ್ಯಗಳು ಮತ್ತು ಆಧುನಿಕ ನಾವೀನ್ಯತೆಗಳನ್ನು ಬಳಸಿಕೊಳ್ಳಲು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಅವರು ಎಲ್ಲಾ ಪಾಲುದಾರರನ್ನು ಆಹ್ವಾನಿಸಿದರು.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ (ಎಂ ಎನ್ ಆರ್ ಇ) ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿ, ಮುಂಬರುವ ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆತ್ಮೀಯ ಆಹ್ವಾನ ನೀಡಿದರು.
ಜಲವಿದ್ಯುತ್ ಯೋಜನೆಗಳನ್ನು ಆರಂಭಿಸುವಲ್ಲಿನ ದೀರ್ಘಾವಧಿಯ ಮುಂಗಡ ಸಮಯವನ್ನು ಪ್ರಮುಖ ಸವಾಲಾಗಿದೆ ಎಂದು ಪ್ರಮುಖವಾಗಿ ಉಲ್ಲೇಖಿಸಿದ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಮಾರ್ಗ-ಹಕ್ಕು ಅನುಮತಿಗಳನ್ನು ಪಡೆಯುವಲ್ಲಿನ ವಿಳಂಬವು ಸಕಾಲಿಕ ಯೋಜನೆಯ ಅನುಷ್ಠಾನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯಕ್ಕೆ (MNRE) ಸಕಾಲಿಕ ಅನುಮತಿಗಳ ಭರವಸೆ ನೀಡಿದ್ದರೂ, ವಿಶೇಷವಾಗಿ ಸಣ್ಣ ಜಲವಿದ್ಯುತ್ ಯೋಜನೆಗಳಿಗೆ, ಅನಗತ್ಯ ವಿಳಂಬಗಳನ್ನು ತಪ್ಪಿಸಲು ಒಂದು ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಹೇಳಿದರು.
ಸಣ್ಣ ಜಲವಿದ್ಯುತ್ ಯೋಜನೆಗಳ ಬ್ಯಾಂಕಿಂಗ್ ಸಾಮರ್ಥ್ಯವನ್ನು ಸುಧಾರಿಸುವ ಅಗತ್ಯವನ್ನು ಒತ್ತಿ ಹೇಳಿದ ಕಾರ್ಯದರ್ಶಿ, ಅವುಗಳ ವಿಶಿಷ್ಟ ನಗದು ಹರಿವಿನ ಪ್ರೊಫೈಲ್ ದೀರ್ಘಾವಧಿಯ ಬಂಡವಾಳಕ್ಕೆ ಲಭ್ಯತೆಯನ್ನು ಅಗತ್ಯಗೊಳಿಸುತ್ತದೆ ಎಂದು ಹೇಳಿದರು. ಯೋಜನೆಯ ಡೆವಲಪರ್ಸ್ ಬಂಡವಾಳದ ಹೆಚ್ಚಿನ ಲಭ್ಯತೆಯನ್ನು ಸುಗಮಗೊಳಿಸಲು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಮತ್ತು ವಿಶ್ವ ಬ್ಯಾಂಕ್ ಸೇರಿದಂತೆ ಬ್ಯಾಂಕುಗಳು ಮತ್ತು ಬಹುಪಕ್ಷೀಯ ಅಭಿವೃದ್ಧಿ ಸಂಸ್ಥೆಗಳೊಂದಿಗೆ ಕೆಲಸ ಮಾಡುವಲ್ಲಿ ಮುಂಚೂಣಿಯಲ್ಲಿರಲು ಅವರು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಐಆರ್ ಇಡಿಎ)ಗೆ ಕರೆ ನೀಡಿದರು.
ದೇಶದಲ್ಲಿ ಜಲವಿದ್ಯುತ್, ವಿಶೇಷವಾಗಿ ಸಣ್ಣ ಜಲವಿದ್ಯುತ್ ಉತ್ಪಾದನೆಯನ್ನು ಉತ್ತೇಜಿಸಲು ಬೇರೆ ಏನು ಮಾಡಬಹುದು ಎಂದು ಸೂಚಿಸಲು ಮತ್ತು ತಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಅವರು ಪಾಲುದಾರರಿಗೆ ಕರೆ ನೀಡಿದರು..
ಪೂರ್ವಭಾವಿ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು, ಸಂಶೋಧನೆ ಮತ್ತು ಕೈಗಾರಿಕಾ ವಲಯಗಳ ಪ್ರತಿನಿಧಿಗಳು ಸೇರಿದಂತೆ ಹಲವಾರು ಪಾಲುದಾರರು ಉಪಸ್ಥಿತರಿದ್ದರು.





*****
(ಪ್ರಕಟಣೆ ಐ.ಡಿ.: 2308743)
ವಿಸಿಟರ್ ಕೌಂಟರ್ : 13