ಹಣಕಾಸು ಸಚಿವಾಲಯ
ದೇಶಾದ್ಯಂತ ಅಕ್ರಮ ಗಾಂಜಾ ಸಾಗಣೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸುತ್ತಿರುವಂತೆಯೇ, ಡಿಆರ್‌ಐ ಕಾರ್ಯಾಚರಣೆಗಳಲ್ಲಿ ಸುಮಾರು 740 ಕೆಜಿ ಗಾಂಜಾ ಮತ್ತು ಚರಸ್ ವಶ; 13 ಜನರ ಬಂಧನ
ಪ್ರಕಟಣಾ ದಿನಾಂಕ:
09 SEP 2026 11:05AM by PIB Bengaluru
ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಗುಪ್ತಚರ ನೇತೃತ್ವದ ಕಾರ್ಯಾಚರಣೆ ಮುಂದುವರೆಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕಳೆದ ಹದಿನೈದು ದಿನಗಳಲ್ಲಿ ದೇಶಾದ್ಯಂತ ಎಂಟು ಮಹತ್ವದ ಕಾರ್ಯಾಚರಣೆಗಳನ್ನು ನಡೆಸಿದ್ದು, ಅದರ ಪರಿಣಾಮವಾಗಿ ಸುಮಾರು 740 ಕೆಜಿ ಗಾಂಜಾ (ಗಾಂಜಾ/ಹೈ-ಗ್ರೇಡ್ ಹೈಡ್ರೋಪೋನಿಕ್ ಗಾಂಜಾ) ಮತ್ತು ಚರಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಎನ್‌ಡಿಪಿಎಸ್ ಕಾಯ್ದೆ 1985ರ ನಿಬಂಧನೆಗಳ ಅಡಿಯಲ್ಲಿ 13 ವ್ಯಕ್ತಿಗಳನ್ನು ಬಂಧಿಸಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ 709.6 ಕೆಜಿ ಗಾಂಜಾ (ಗಾಂಜಾ), 24.5 ಕೆಜಿ ಹೈ-ಗ್ರೇಡ್ ಹೈಡ್ರೋಪೋನಿಕ್ ಗಾಂಜಾ ಮತ್ತು 5 ಕೆಜಿ ಚರಸ್ ಸೇರಿವೆ.
2026ರ ಸೆ. 8 ರಂದು ಗುಪ್ತಚರ ನೇತೃತ್ವದ ಕಾರ್ಯಾಚರಣೆಯಲ್ಲಿ ಡಿಆರ್‌ಐ ಅಧಿಕಾರಿಗಳು ರಾಯ್‌ಪುರ ಬಳಿಯ ಓಲ್ಡ್ ಧಮ್ತಾರಿ ರಸ್ತೆಯಲ್ಲಿ ವಿಶಾಖಪಟ್ಟಣದಿಂದ ಬರುತ್ತಿದ್ದ ಎರಡು ಟ್ರಕ್‌ಗಳನ್ನು ತಡೆದರು. ವಾಹನಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಟ್ರಕ್‌ಗಳ ಲೋಡಿಂಗ್ ಪ್ರದೇಶಗಳಲ್ಲಿ ಇರಿಸಲಾಗಿದ್ದ 10 ಚೀಲಗಳಲ್ಲಿ ಬಚ್ಚಿಟ್ಟಿದ್ದ 61 ಗಾಂಜಾ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಫೀಲ್ಡ್ ಪರೀಕ್ಷೆಯಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ಎರಡು ಟ್ರಕ್‌ಗಳ ಜೊತೆಗೆ ಒಟ್ಟು 375.95 ಕೆಜಿ ಗಾಂಜಾವನ್ನು 1985 ರ ಎನ್ ಡಿಪಿಎಸ್ ಕಾಯಿದೆಯಡಿಯಲ್ಲಿ ವಶಪಡಿಸಿಕೊಳ್ಳಲಾಯಿತು ಮತ್ತು ನಾಲ್ವರನ್ನು ಬಂಧಿಸಲಾಯಿತು.

ರಾಯ್‌ಪುರದಲ್ಲಿ ಟ್ರಕ್ ಮತ್ತು 375.95 ಕೆಜಿ ಗಾಂಜಾ ವಶ
ಇದಕ್ಕೂ ಮುನ್ನ 2026ರ ಆಗಸ್ಟ್ 26 ರಂದು, ಡಿಆರ್‌ಐ ಅಧಿಕಾರಿಗಳು ಟ್ರಕ್‌ನಲ್ಲಿ ಅಡಗಿಸಿಟ್ಟಿದ್ದ ಸುಮಾರು 124 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು, ಇದನ್ನು ರಾಯ್‌ಪುರ ಬಳಿಯೂ ತಡೆಹಿಡಿಯಲಾಯಿತು. 1985ರ ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಒಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು.

ರಾಯ್‌ಪುರ: ಟ್ರಕ್ ಸಹಿತ 124 ಕೆಜಿ ಗಾಂಜಾ ವಶ
2026ರ ಸೆಪ್ಟಂಬರ್ 5 ಮತ್ತು 6ರ ನಡುವೆ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ, ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಡಿಆರ್‌ಐ ಅಧಿಕಾರಿಗಳು, ಬೆನ್ನಟ್ಟಿದ ನಂತರ, ಪಾಟ್ನಾ ಬಳಿಯ ಔರಂಗಾಬಾದ್-ಪಾಟ್ನಾ ಹೆದ್ದಾರಿಯಲ್ಲಿ ಲಾರಿಯನ್ನು ತಡೆದರು. ಈ ವೇಳೆ, ಅಧಿಕಾರಿಗಳ ಮೇಲೆ ದಾಳಿ ನಡೆಸಲಾಯಿತು, ಇದರ ಪರಿಣಾಮವಾಗಿ ಒಬ್ಬ ಅಧಿಕಾರಿ ಗಾಯಗೊಂಡರು, ಆದರೆ ಟ್ರಕ್‌ನ ಚಾಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ವಾಹನದ ಶೋಧ ಕಾರ್ಯದಲ್ಲಿ ಚಾಲಕನ ಕ್ಯಾಬಿನ್‌ನ ಹಿಂದೆ ಒಂದು ರಹಸ್ಯ ಗುಳಿ ಪತ್ತೆಯಾಗಿದ್ದು, ಅದರಿಂದ ಗಾಂಜಾ ಹೊಂದಿರುವ 90 ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ – ಪೀಲ್ಡ್ ಪರೀಕ್ಷೆಯಿಂದ ಅದು ದೃಢಪಟ್ಟಿದೆ. ಒಟ್ಟು 140.5 ಕೆಜಿ ಗಾಂಜಾ ಮತ್ತು ಟ್ರಕ್ ಅನ್ನು ಎನ್‌ಡಿಪಿಎಸ್ ಕಾಯ್ದೆ, 1985 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ಸೆಪ್ಟಂಬರ್ 1 ಮತ್ತು 2 ರಂದು, ಡಿಆರ್‌ಐ ಅಧಿಕಾರಿಗಳು ಪಂಜಾಬ್‌ನ ಲುಧಿಯಾನ ಬಳಿ ಶಂಕಿತ ವಾಹನವನ್ನು ತಡೆಹಿಡಿದು, ಕಾರನ್ನು ಸುತ್ತುವರೆದಾಗ ಸುಮಾರು 69 ಕೆಜಿ ತೂಕದ ಗಾಂಜಾ ಹೊಂದಿರುವ 67 ಪ್ಯಾಕೆಟ್‌ಗಳು ಪತ್ತೆಯಾಗಿವೆ. ಪ್ಯಾಕೆಟ್‌ಗಳನ್ನು ವಾಹನದ ತಳಭಾಗದಲ್ಲಿ ವಿಶೇಷವಾಗಿ ಗುಳಿಗಳನ್ನು ಮಾಡಿ ಅದರಲ್ಲಿ ಬಚ್ಚಿಡಲಾಗಿತ್ತು. ಕಳ್ಳಸಾಗಣೆ ವಸ್ತು ಮತ್ತು ಅದರ ಸಾಗಣೆಗೆ ಬಳಸಲಾದ ವಾಹನವನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಇಬ್ಬರು ವ್ಯಕ್ತಿಗಳನ್ನು ಎನ್ ಡಿಪಿಎಸ್ ಕಾಯ್ದೆ, 1985 ರ ಅಡಿಯಲ್ಲಿ ಬಂಧಿಸಲಾಯಿತು.
ಅಲ್ಲದೆ 2026ರ ಸೆಪ್ಟಂಬರ್ 03 ರಂದು, ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಡಿಆರ್ ಐ ಅಧಿಕಾರಿಗಳು, ಗೋರಖ್‌ಪುರ ರೈಲು ನಿಲ್ದಾಣದಲ್ಲಿ ಅಮರನಾಥ ಎಕ್ಸ್‌ಪ್ರೆಸ್ ರೈಲಿನ ಸಾಮಾನ್ಯ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಮೂವರು ವ್ಯಕ್ತಿಗಳನ್ನು ತಡೆದರು. ವೈಯಕ್ತಿಕ ಹುಡುಕಾಟದ ಪರಿಣಾಮವಾಗಿ ಸುಮಾರು 5 ಕೆಜಿ ಚರಸ್ (ಹ್ಯಾಶಿಶ್) ಪತ್ತೆಯಾಗಿದೆ, ಇದನ್ನು ಇಬ್ಬರು ಪ್ರಯಾಣಿಕರು ಮೊಣಕಾಲು ಟೋಪಿಯಂತಹ ಹೊದಿಕೆಗಳಲ್ಲಿ ತಮ್ಮ ತೊಡೆಯ ಸುತ್ತಲೂ ಸುತ್ತಿಕೊಂಡು ತಮ್ಮ ಸೀರೆಗಳೊಳಗೆ ಮರೆಮಾಡಿದ್ದಾರೆ. ಚರಸ್ ಅನ್ನು ನೇಪಾಳದಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ತನಿಖೆಗಳು ಸೂಚಿಸಿವೆ. ಚರಸ್/ಹ್ಯಾಶಿಶ್ ಅನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಮೂವರನ್ನು ಎನ್ ಡಿಪಿಸ್ ಕಾಯ್ದೆ, 1985 ರ ಅಡಿಯಲ್ಲಿ ಬಂಧಿಸಲಾಯಿತು.
ಅಲ್ಲದೆ, ಕಳೆದ 15 ದಿನಗಳಲ್ಲಿ, ಮೂರು ವಿಭಿನ್ನ ಕಾರ್ಯಾಚರಣೆಗಳ ಸರಣಿಯಲ್ಲಿ ಡಿಆರ್ ಐ ಅಧಿಕಾರಿಗಳು ಹನೋಯ್, ವಿಯೆಟ್ನಾಂ ಮತ್ತು ಬ್ಯಾಂಕಾಕ್, ಥೈಲ್ಯಾಂಡ್‌ನಿಂದ ಹೈದರಾಬಾದ್ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಆಗಮಿಸಿದ 3 ಪ್ರಯಾಣಿಕರನ್ನು ತಡೆಹಿಡಿದು, ಒಟ್ಟಾರೆಯಾಗಿ ಸುಮಾರು 24.6 ಕೆಜಿ ಹೆಚ್ಚಿನ ಸಾಮರ್ಥ್ಯದ ಗಾಂಜಾವನ್ನು ವಶಪಡಿಸಿಕೊಂಡರು. 1985 ರ ಎನ್ ಡಿಪಿಎಸ್ ಕಾಯ್ದೆಯಡಿ ಮೂವರನ್ನು ಬಂಧಿಸಲಾಗಿದೆ.
ಈ ಸರಣಿ ಕಾರ್ಯಾಚರಣೆಗಳು ರಸ್ತೆ, ರೈಲು ಮತ್ತು ವಾಯು ಮಾರ್ಗಗಳ ಮೂಲಕ ವಿಶೇಷವಾಗಿ ಸೃಷ್ಟಿಸಲಾದ ವಾಹನಗಳಲ್ಲಿನ ಗುಳಿಗಳು, ರಹಸ್ಯ ವಿಭಾಗಗಳು ಮತ್ತು ಪ್ರಯಾಣಿಕರ ಸಾಮಾನುಗಳಲ್ಲಿ ಮರೆಮಾಚುವ ಸರಕುಗಳು ಸೇರಿದಂತೆ ಮಾದಕ ದ್ರವ್ಯಗಳ ಸಾಗಣೆಯನ್ನು ತಡೆಯುವಲ್ಲಿ ಡಿಆರ್ ಐ ಅಧಿಕಾರಿಗಳು ಸತತ ಗಮನ ಹರಿಸುತ್ತಿರುವುದು ಕಂಡುಬಂದಿದೆ.
*****
(ಪ್ರಕಟಣೆ ಐ.ಡಿ.: 2308167)
ವಿಸಿಟರ್ ಕೌಂಟರ್ : 10