ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮುಂಬೈ ನಲ್ಲಿ ನಡೆದ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ (ಜಿ ಎಫ್ ಎಫ್) 2026 ಉದ್ಘಾಟನಾ ಸಮಾರಂಭದಲ್ಲಿನ ತಮ್ಮ ಭಾಷಣದ ಕೆಲವು ಭಾಗಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 08 SEP 2026 9:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ (ಜಿ ಎಫ್ ಎಫ್) 2026 ರ ಉದ್ಘಾಟನಾ ಸಮಾರಂಭದಲ್ಲಿನ ತಮ್ಮ ಭಾಷಣದ ಕೆಲವು ತುಣುಕುಗಳನ್ನು ಹಂಚಿಕೊಂಡಿದ್ದಾರೆ.

ಶ್ರೀ ಮೋದಿ ಅವರು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹೇಳಿದ್ದಾರೆ:

“ಮುಂಬೈನಲ್ಲಿ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ 2026 ಅನ್ನು ಉದ್ದೇಶಿಸಿ ಭಾಷಣ ಮಾಡಿದೆ.

ಭಾರತದ ಗಮನಾರ್ಹ ಫಿನ್ ಟೆಕ್ ಪಯಣ ಮತ್ತು ಯುಪಿಐ ಯಶಸ್ಸಿನ ಬಗ್ಗೆ ಮಾತನಾಡಿದೆ.

ಇವುಗಳಿಗೆ ಕರೆ ನೀಡಿದೆ:

“ಯುಪಿಐ ನ ಜಾಗತಿಕ ಹೆಜ್ಜೆಗುರುತನ್ನು ವಿಸ್ತರಿಸಲು.

ಸಾಲ ಮರುಪಾವತಿ, ವಿಮೆ ಪಾವತಿ, ಉಳಿತಾಯ, ಹೂಡಿಕೆಗಳು ಮತ್ತು ಪಿಂಚಣಿಗಳಿಗೆ ಮೀರಿ ಫಿನ್ ಟೆಕ್ ಅನ್ನು ಕೊಂಡೊಯ್ಯಲು.

ಏಜೆಂಟಿಕ್ ಎಐ, ಟೋಕನೈಸೇಶನ್ ಮತ್ತು ಕ್ವಾಂಟಮ್ ಗಳ ಸಮರ್ಥ ಬಳಕೆಗೆ.

ಉನ್ನತ ಮಟ್ಟದ ಸೈಬರ್ ಭದ್ರತೆ ಮತ್ತು ನೈತಿಕ ದತ್ತಾಂಶ ರಕ್ಷಣೆಗೆ.

ಸದೃಢ ಫಿನ್ ಟೆಕ್ ಗ್ರಾಹಕ ಸಂರಕ್ಷಣಾ ಸೂಚ್ಯಂಕ ಮತ್ತು ಹೆಚ್ಚಿನ ನಾವೀನ್ಯತೆಗೆ.”

"ಭಾರತದ ಸುಧಾರಣಾ ಎಕ್ಸ್ ಪ್ರೆಸ್ ಹೆಚ್ಚಿನ ವೇಗ ಪಡೆಯಲಿದೆ."

"ಭಾರತದ ಫಿನ್ ಟೆಕ್ ವಲಯಕ್ಕೆ ನಾಲ್ಕು ಆದ್ಯತೆಗಳನ್ನು ಹಂಚಿಕೊಂಡೆ."

 

*****


(ಪ್ರಕಟಣೆ ಐ.ಡಿ.: 2308098) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Marathi , हिन्दी , Telugu