ಪ್ರಧಾನ ಮಂತ್ರಿಯವರ ಕಛೇರಿ
ಪೋಷಣೆಯ ಉಪಕ್ರಮಗಳು ಮತ್ತು ಅಂಗನವಾಡಿ ವ್ಯವಸ್ಥೆಯನ್ನು ಬಲಪಡಿಸುವ ಕುರಿತಾದ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
08 SEP 2026 12:45PM by PIB Bengaluru
ಕೇಂದ್ರ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಹತ್ತು ವರ್ಷಗಳ ಮಾತೃ ವಂದನಾ ಯೋಜನೆ ಮತ್ತು ಪೋಷಣ ಮಾಸದ ಕುರಿತಾದ ಈ ಲೇಖನವು ಅಂಗನವಾಡಿ ವ್ಯವಸ್ಥೆಯನ್ನು ಜನಾಂದೋಲನವನ್ನಾಗಿಸುವ ಸಂದೇಶವನ್ನು ಸಾರುತ್ತದೆ. ಮಕ್ಕಳು, ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ನೇರ ನಗದು ವರ್ಗಾವಣೆ (ಡಿಬಿಟಿ), ಸಾಮಾಜಿಕ ಲೆಕ್ಕಪರಿಶೋಧನೆಗಳು ಮತ್ತು ಪೌಷ್ಟಿಕ ಆಹಾರವು ಹೇಗೆ ಪೂರಕ ಎಂಬುದನ್ನು ಲೇಖನ ವಿವರಿಸಿದೆ. "ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ (ಹಮಾರಿ ಅಂಗನವಾಡಿ, ಹಮಾರಿ ಜಿಮ್ಮೆದಾರಿ)" ಎಂಬ ಮುನ್ನೋಟದೊಂದಿಗೆ ಮಾರ್ಗದರ್ಶಿಸಲ್ಪಟ್ಟಿರುವ ಈ ಪ್ರಯತ್ನಗಳು ಅಪೌಷ್ಟಿಕತೆ ಮುಕ್ತ ಮತ್ತು ವಿಕಸಿತ ಭಾರತದತ್ತ ದಾರಿ ಮಾಡಿಕೊಡುತ್ತಿವೆ ಎಂದು ಲೇಖನ ತಿಳಿಸಿದೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
“मातृ वंदना योजना के 10 वर्ष और पोषण माह पर, केंद्रीय मंत्री श्रीमती @Annapurna4BJP जी का यह आलेख आंगनवाड़ी व्यवस्था को जन-आंदोलन बनाने का संदेश देता है। वे रेखांकित करती हैं कि कैसे डीबीटी, सोशल ऑडिट और पौष्टिक आहार से बच्चों, महिलाओं और किशोरियों को संबल मिल रहा है। यह प्रयास ‘हमारी आंगनवाड़ी, हमारी जिम्मेदारी’ के विजन से कुपोषण-मुक्त और विकसित भारत के निर्माण की राह प्रशस्त कर रहा है।”
*****
(ಪ್ರಕಟಣೆ ಐ.ಡಿ.: 2307786)
ವಿಸಿಟರ್ ಕೌಂಟರ್ : 15