ಪ್ರಧಾನ ಮಂತ್ರಿಯವರ ಕಛೇರಿ
ಕಲಿಯುವವರನ್ನು ಮಾಹಿತಿಯಿಂದ ಜ್ಞಾನದೆಡೆಗೆ ಮುನ್ನಡೆಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರವನ್ನು ಎತ್ತಿಹಿಡಿಯುವ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
05 SEP 2026 3:28PM by PIB Bengaluru
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.
ಶಿಕ್ಷಕರನ್ನು ಗೌರವಿಸುವ ಭಾರತದ ನಿರಂತರ ಪರಂಪರೆಯು ಜ್ಞಾನವನ್ನು ಧಾರೆ ಎರೆಯುವವರಿಗೆ ನೀಡುವ ಆಳವಾದ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವರು ಬರೆದಿರುವುದಾಗಿ ಪ್ರಧಾನಮಂತ್ರಿಯವರು ಉಲ್ಲೇಖಿಸಿದ್ದಾರೆ. ಕಲಿಯುವವರನ್ನು ಮಾಹಿತಿಯಿಂದ ತಿಳುವಳಿಕೆಯತ್ತ ಮತ್ತು ತಿಳುವಳಿಕೆಯಿಂದ ಜ್ಞಾನದತ್ತ ಮುನ್ನಡೆಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರವನ್ನು ಈ ಲೇಖನವು ಎತ್ತಿಹಿಡಿಯುತ್ತದೆ ಎಂದು ಹೇಳಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ 2020 ವಿದ್ಯಾರ್ಥಿಯನ್ನು ಶಿಕ್ಷಣದ ಕೇಂದ್ರಬಿಂದುವನ್ನಾಗಿ ಮಾಡುವ ಮೂಲಕ ಈ ದಿಸೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಮುಖ್ಯವಾಗಿ ಹೇಳಿದ್ದಾರೆ.
ಪ್ರಧಾನಮಂತ್ರಿಯವರ ಕಚೇರಿಯು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
"ಶಿಕ್ಷಕರನ್ನು ಗೌರವಿಸುವ ಭಾರತದ ನಿರಂತರ ಪರಂಪರೆಯು ಜ್ಞಾನವನ್ನು ಧಾರೆ ಎರೆಯುವವರಿಗೆ ನೀಡುವ ಆಳವಾದ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ @JoshiPralhad ಅವರು ಬರೆದಿದ್ದಾರೆ.
ಕಲಿಯುವವರನ್ನು ಮಾಹಿತಿಯಿಂದ ತಿಳುವಳಿಕೆಯತ್ತ ಮತ್ತು ತಿಳುವಳಿಕೆಯಿಂದ ಜ್ಞಾನದತ್ತ ಮುನ್ನಡೆಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರವನ್ನು ಅವರು ಎತ್ತಿಹಿಡಿದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ವಿದಾರ್ಥಿಯನ್ನು ಶಿಕ್ಷಣದ ಕೇಂದ್ರಬಿಂದುವನ್ನಾಗಿ ಮಾಡುವ ಮೂಲಕ ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ."
*****
(ಪ್ರಕಟಣೆ ಐ.ಡಿ.: 2306962)
ವಿಸಿಟರ್ ಕೌಂಟರ್ : 8