ಪ್ರಧಾನ ಮಂತ್ರಿಯವರ ಕಛೇರಿ
ಸೆಪ್ಟೆಂಬರ್ 2 ರಂದು ನಡೆಯಲಿರುವ ಜಲ ಸುರಕ್ಷತೆ ಕುರಿತ ಇಲಾಖಾ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಪ್ರಧಾನಮಂತ್ರಿ
ಟೀಮ್ ಇಂಡಿಯಾದ ಸ್ಪೂರ್ತಿಯ ಮನೋಭಾವವನ್ನು ಬಲಪಡಿಸಲು ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು ಪ್ರಧಾನಮಂತ್ರಿಯವರು ರೂಪಿಸಿರುವ ಸರಣಿ ಶೃಂಗಸಭೆಗಳಲ್ಲಿ ಇದು ಮೊದಲನೆಯದು
ಆದ್ಯತೆಗಳ ಕುರಿತು ಚರ್ಚಿಸಲು ಮತ್ತು ಸಮಯಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆಗಳನ್ನು ರೂಪಿಸಲು ಶೃಂಗಸಭೆಯು ಕೇಂದ್ರ ಮತ್ತು ರಾಜ್ಯಗಳನ್ನು ಒಟ್ಟುಗೂಡಿಸುತ್ತದೆ
ಜಲ ಸಂಚಯ್, ಜನ್ ಭಾಗೀದಾರಿ, ಕುಡಿಯುವ ಜಲ ಮೂಲ ಸುಸ್ಥಿರತೆ ಮತ್ತು ಜಲಜೀವನ್ ಮಿಷನ್ 2.0 ಸಹಿತ ಜಲ ಮೂಲಸೌಕರ್ಯ ಯೋಜನೆಗಳ ಸಕಾಲಿಕ ಅನುಷ್ಠಾನವನ್ನು ಒಳಗೊಂಡ ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ ಶೃಂಗಸಭೆ
ಪ್ರಕಟಣಾ ದಿನಾಂಕ:
01 SEP 2026 5:08PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2, 2026 ರಂದು ಸಂಜೆ 4:30 ರ ಸುಮಾರಿಗೆ ಹೊಸದಿಲ್ಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ನಡೆಯುವ ಜಲಶಕ್ತಿ ಸಚಿವಾಲಯದ ಇಲಾಖಾ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಸೆಪ್ಟೆಂಬರ್ 1-2, 2026 ರಂದು ನಡೆಯುವ ಎರಡು ದಿನಗಳ ಇಲಾಖಾ ಶೃಂಗಸಭೆಯು, ಟೀಮ್ ಇಂಡಿಯಾದ ಮನೋಭಾವವನ್ನು ಬಲಪಡಿಸಲು, ಸಹಕಾರಿ ಒಕ್ಕೂಟವನ್ನು ಗಾಢವಾಗಿಸಲು ಮತ್ತು ಕೇಂದ್ರ ಹಾಗು ರಾಜ್ಯಗಳ ನಡುವಿನ ನಿಕಟ ಸಹಯೋಗದ ಮೂಲಕ ರಾಷ್ಟ್ರೀಯ ಆದ್ಯತೆಗಳ ಸಾಮೂಹಿಕ ಮಾಲೀಕತ್ವವನ್ನು ಬೆಳೆಸಲು ಪ್ರಧಾನ ಮಂತ್ರಿಗಳು ಕಲ್ಪಿಸಿಕೊಂಡಿರುವ ಇಲಾಖಾ ಶೃಂಗಸಭೆಗಳ ಸರಣಿಯಲ್ಲಿ ಮೊದಲನೆಯದು. ಈ ಉಪಕ್ರಮವು ನಿರ್ಣಾಯಕ ವಲಯ ಆದ್ಯತೆಗಳ ಕುರಿತು ಜಂಟಿಯಾಗಿ ಚರ್ಚಿಸಲು ಮತ್ತು ಅನುಷ್ಠಾನ ಹಾಗು ಫಲಿತಾಂಶಗಳನ್ನು ವೇಗಗೊಳಿಸಲು ರಚನಾತ್ಮಕ ವೇದಿಕೆಯನ್ನು ಒದಗಿಸುತ್ತದೆ
ಪ್ರಮುಖ ಆದ್ಯತೆಗಳ ಕುರಿತು ಚರ್ಚಿಸಲು, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು, ಅನುಷ್ಠಾನ ಸವಾಲುಗಳನ್ನು ಪರಿಹರಿಸಲು ಮತ್ತು ಸಮಯಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆಗಳನ್ನು ರೂಪಿಸಲು ಶೃಂಗಸಭೆಯು ರಾಜಕೀಯ ನಾಯಕತ್ವ ಮತ್ತು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳನ್ನು ಒಟ್ಟುಗೂಡಿಸುತ್ತದೆ. ಈ ಉಪಕ್ರಮವು ರಾಷ್ಟ್ರೀಯ ಗುರಿಗಳಿಗೆ ಹಂಚಿಕೆಯ ಜವಾಬ್ದಾರಿಯನ್ನು ಉತ್ತೇಜಿಸಲು ಮತ್ತು ಚರ್ಚೆಗಳು ಆಡಳಿತ ಮತ್ತು ಸೇವಾ ವಿತರಣೆಯಲ್ಲಿ ಅಳೆಯಬಹುದಾದ ಸುಧಾರಣೆಗಳಾಗಿ ರೂಪಾಂತರಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ.
ಶೃಂಗಸಭೆಯು ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ:
1. ನೀರಿನ ಮೂಲಸೌಕರ್ಯ ಯೋಜನೆಗಳ ಸಕಾಲಿಕ ಅನುಷ್ಠಾನ
2. ಜಲ ಸಂಚಯ್ ಜನ್ ಭಾಗೀದಾರಿ – ಮಳೆ ನೀರು ಹಿಡಿಯಿರಿ
3. ಕುಡಿಯುವ ನೀರಿನ ವ್ಯವಸ್ಥೆಗಳ ಮೂಲಗಳ ಸುಸ್ಥಿರತೆ
4. ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ.
ನೀರಿನ ಮೂಲಸೌಕರ್ಯ ಯೋಜನೆಗಳನ್ನು ವೇಗಗೊಳಿಸಲು, ನೀರಿನ ಸಂರಕ್ಷಣೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಹೆಚ್ಚಿಸಲು, ಸುಸ್ಥಿರ ಕುಡಿಯುವ ನೀರಿನ ಮೂಲಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಗ್ರಾಮೀಣ ಕುಡಿಯುವ ನೀರಿನ ಸೇವೆಗಳ ವಿಶ್ವಾಸಾರ್ಹತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸಲು ಬಲವಾದ ಮತ್ತು ಸಮಯ-ಬದ್ಧ ಕ್ರಮಗಳಿಗೆ ಸಮಾಲೋಚನೆಗಳು ಕಾರಣವಾಗುವ ನಿರೀಕ್ಷೆಯಿದೆ.
*****
(ಪ್ರಕಟಣೆ ಐ.ಡಿ.: 2305778)
ವಿಸಿಟರ್ ಕೌಂಟರ್ : 32
ಪ್ರಕಟಣೆಯನ್ನು ಇದರಲ್ಲಿ ಓದಿ:
Odia
,
Telugu
,
Assamese
,
Bengali
,
English
,
Urdu
,
Marathi
,
हिन्दी
,
Manipuri
,
Punjabi
,
Gujarati
,
Tamil
,
Malayalam