ರೈಲ್ವೇ ಸಚಿವಾಲಯ
azadi ka amrit mahotsav

ಸರಕು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸಲು ಅದ್ರಾ ಮತ್ತು ಜಾಯ್‌ಚಂಡಿಪಹಾರ್ ನಡುವೆ ₹272 ಕೋಟಿ ವೆಚ್ಚದ ಬೈಪಾಸ್ ಮಾರ್ಗಕ್ಕೆ ಭಾರತೀಯ ರೈಲ್ವೆ ಅನುಮೋದನೆ


ಸರಕು ಸಾಗಣೆಯನ್ನು ಬಲಪಡಿಸಲು ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು 11 ಕಿ.ಮೀ ಬೈಪಾಸ್ ಮಾರ್ಗ

ಪ್ರಕಟಣಾ ದಿನಾಂಕ: 01 SEP 2026 11:24AM by PIB Bengaluru

ಆಗ್ನೇಯ ರೈಲ್ವೆಯ ಅದ್ರಾ ಮತ್ತು ಜಾಯ್‌ಚಂಡಿಪಹಾರ್ ನಡುವೆ ಒಟ್ಟು 272 ಕೋಟಿ ರೂ. ವೆಚ್ಚದಲ್ಲಿ 11 ಕಿ.ಮೀ ಬೈಪಾಸ್ ಮಾರ್ಗ ನಿರ್ಮಾಣಕ್ಕೆ ಭಾರತೀಯ ರೈಲ್ವೆಯು ಅನುಮೋದನೆ ನೀಡಿದೆ.

ಈ ಯೋಜನೆಯು ಮುಂಬರುವ ಮೂರನೇ ಮಾರ್ಗಕ್ಕೆ ಮೀಸಲಾದ ಮಾರ್ಗ ವಿಂಗಡಣೆ ಮತ್ತು ದ್ವಿಮುಖ ಸಂಪರ್ಕವನ್ನು ಒದಗಿಸುತ್ತದೆ. ಇದು ದಿನಕ್ಕೆ 6.065 ಸರಕು ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ ಮತ್ತು ನಿರೀಕ್ಷಿತ ಕೈಗಾರಿಕಾ ಟ್ರಾಫಿಕ್ ಹೆಚ್ಚಳವನ್ನು ಬೆಂಬಲಿಸುತ್ತದೆ. ಈ ಬೈಪಾಸ್ ವಿಶೇಷವಾಗಿ ಭಾರತೀಯ ಉಕ್ಕು ಪ್ರಾಧಿಕಾರದ (ಸೈಲ್‌)  ವಾರ್ಷಿಕ 23.40 ದಶಲಕ್ಷ ಮೆಟ್ರಿಕ್‌ ಟನ್‌ (ಎಂಟಿಪಿಎ) ಕಬ್ಬಿಣದ ಅದಿರಿನ ಬೇಡಿಕೆ ಮತ್ತು ‘ಬಿಸಿಸಿಎಲ್‌’ನ ದೈನಂದಿನ 45 ರೇಕ್‌ಗಳ ಅಂದಾಜು ಚಲನೆ ಸೆರಿದಂತೆ ಸಂಯೋಜಿತವಾಗಿರುವ ಸರಕು ಸಾಗಣೆಗೆ ಬೆಂಬಲ ನೀಡಲಿದೆ.

ಕಾರಿಡಾರ್ ಸಾಮರ್ಥ್ಯ ಹೆಚ್ಚಳ ಮತ್ತು ದಟ್ಟಣೆ ಕಡಿತ

ಅದ್ರಾ-ಜಾಯ್‌ಚಂಡಿಪಹಾರ್-ಸಂಕಾ ಬೈಪಾಸ್, ಅದ್ರಾ-ಜಾಯ್‌ಚಂಡಿಪಹಾರ್ ವಿಭಾಗದಲ್ಲಿ ಅಸ್ತಿತ್ವದಲ್ಲಿರುವ ಕಾರ್ಯಾಚರಣೆಯ ಅಡಚಣೆಗಳನ್ನು ಮತ್ತು ಮೇಲ್ಮೈ-ಕ್ರಾಸಿಂಗ್ ವಿಳಂಬಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಜಾಲವು 71% ಬಳಕೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಮೇಲ್ಮೈ-ಕ್ರಾಸಿಂಗ್ ಘರ್ಷಣೆಯಿಂದ ಸರಕು ಸಾಗಣೆಯ ವೇಗವು ಬಾಧಿತವಾಗಿದೆ. ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಹೆಚ್ಚಿನ ದಟ್ಟಣೆಯನ್ನು ತಡೆಯಲು ಈ ಬೈಪಾಸ್ ಸಹಾಯ ಮಾಡುತ್ತದೆ.

ಈ ಯೋಜನೆಯು ಪೂರ್ಣಗೊಂಡ ನಂತರ 8.88 ‘ಎಂಟಿಪಿಎ’ ಹೆಚ್ಚುವರಿ ಸಂಚಾರವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ. ಜೋಯ್ ಚಂಡಿಪಹಾರ್-ಆದ್ರಾ ವಿಭಾಗದ ಪ್ರಸ್ತುತ ಮಾರ್ಗದ ಸಾಮರ್ಥ್ಯವು ಶೇ.47.50 ಆಗಿದ್ದು, ಇದು 2028-29ರ ವೇಳೆಗೆ ಶೇ.56.45 ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ.

ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್‌ಗೆ ಬೆಂಬಲ

ಈ ಬೈಪಾಸ್ ಭಾರತೀಯ ರೈಲ್ವೆಗಾಗಿ ಗುರುತಿಸಲಾದ ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್‌ನ ಒಂದು ಭಾಗವಾಗಿದೆ. ಹೆಚ್ಚುವರಿ ಸಾಮರ್ಥ್ಯ ಮತ್ತು ಸುಗಮ ಸರಕು ಸಾಗಣೆಯನ್ನು ಒದಗಿಸುವ ಮೂಲಕ, ಈ ಯೋಜನೆಯು ಕೈಗಾರಿಕಾ ಸರಕುಗಳ ಸಾಗಣೆಯನ್ನು ಬಲಪಡಿಸುತ್ತದೆ ಮತ್ತು ಭವಿಷ್ಯದ ಟ್ರಾಫಿಕ್ ಬೆಳವಣಿಗೆಯನ್ನು ಹೆಚ್ಚಿನ ಕಾರ್ಯಕ್ಷಮತೆಯಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.

ಈ ಯೋಜನೆಯು ಹೆಚ್ಚುವರಿ ಸಾಮರ್ಥ್ಯವನ್ನು ಸೃಷ್ಟಿಸುವ ಮೂಲಕ, ಮೇಲ್ಮೈ-ಕ್ರಾಸಿಂಗ್ ಘರ್ಷಣೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಸರಕು ಕಾರ್ಯಾಚರಣೆಗಳ ದಕ್ಷತೆಯನ್ನು ಸುಧಾರಿಸುವ ಮೂಲಕ ಅದ್ರಾ-ಜಾಯ್‌ಚಂಡಿಪಹಾರ್ ಕಾರಿಡಾರ್‌ನಲ್ಲಿ ಸರಕು ಸಾಗಣೆ ಮೂಲಸೌಕರ್ಯವನ್ನು ಬಲಪಡಿಸುತ್ತದೆ. ಇದು ಈ ಆಯಕಟ್ಟಿನ ಪ್ರಮುಖ ಕಾರಿಡಾರ್‌ನಲ್ಲಿ ಹೆಚ್ಚು ವಿಶ್ವಾಸಾರ್ಹ ಮತ್ತು ದಟ್ಟಣೆ-ಮುಕ್ತ ಸರಕು ಸಾಗಣೆಯನ್ನು ಸಕ್ರಿಯಗೊಳಿಸುವ ಜೊತೆಗೆ ಬೆಳೆಯುತ್ತಿರುವ ಕೈಗಾರಿಕಾ ಸಂಚಾರವನ್ನು ಬೆಂಬಲಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2305372) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , हिन्दी , Bengali , Gujarati