ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

2026-27ರ ಮೊದಲ ತ್ರೈಮಾಸಿಕದ (ಏಪ್ರಿಲ್-ಜೂನ್) ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ತ್ರೈಮಾಸಿಕ ಅಂದಾಜುಗಳು


2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನೈಜ ಜಿಡಿಪಿ ಶೇಕಡಾ 7.8 ರಷ್ಟು ಬೆಳವಣಿಗೆಯ ದರವನ್ನು ದಾಖಲಿಸಿದೆ

2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಸ್ತುತ ಬೆಲೆಗಳ (ನಾಮಮಾತ್ರ) ಜಿಡಿಪಿ ಶೇಕಡಾ 10.3 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ

ಜಾಗತಿಕ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಭಾರತೀಯ ಅರ್ಥವ್ಯವಸ್ಥೆಯು ತನ್ನ ಬೆಳವಣಿಗೆಯ ವೇಗವನ್ನು ಕಾಯ್ದುಕೊಂಡಿದೆ

ಪ್ರಕಟಣಾ ದಿನಾಂಕ: 31 AUG 2026 4:00PM by PIB Bengaluru

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಈ ಪತ್ರಿಕಾ ಪ್ರಕಟಣೆಯಲ್ಲಿ 2026-27 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ (ಏಪ್ರಿಲ್-ಜೂನ್) ಜಿಡಿಪಿಯ ತ್ರೈಮಾಸಿಕ ಅಂದಾಜುಗಳನ್ನು, ಅವುಗಳ ವೆಚ್ಚದ ಘಟಕಗಳೊಂದಿಗೆ ಸ್ಥಿರ (2022-23) ಮತ್ತು ಪ್ರಸ್ತುತ ಬೆಲೆಗಳಲ್ಲಿ ಬಿಡುಗಡೆ ಮಾಡುತ್ತಿದೆ. ಈ ಪತ್ರಿಕಾ ಪ್ರಕಟಣೆಯನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:

I.

ತ್ರೈಮಾಸಿಕ ಜಿಡಿಪಿ ಅಂದಾಜುಗಳು ಮತ್ತು ಬೆಳವಣಿಗೆಯ ದರಗಳು

II.

ಕಾರ್ಯವಿಧಾನ ಮತ್ತು ಪ್ರಮುಖ ದತ್ತಾಂಶ ಮೂಲಗಳು

III.

ವಿವರಣೆಗಳು:

  • ಸ್ಥಿರ ಬೆಲೆಗಳಲ್ಲಿ ಜಿಡಿಪಿ ಮತ್ತು ವೆಚ್ಚದ ಘಟಕಗಳ ತ್ರೈಮಾಸಿಕ ಅಂದಾಜುಗಳು (ಕೋಷ್ಟಕ 1 ಮತ್ತು 2)
  • ಪ್ರಸ್ತುತ ಬೆಲೆಗಳಲ್ಲಿ ಜಿಡಿಪಿ ಮತ್ತು ವೆಚ್ಚದ ಘಟಕಗಳ ತ್ರೈಮಾಸಿಕ ಅಂದಾಜುಗಳು (ಕೋಷ್ಟಕ 3 ಮತ್ತು 4)

ಅನುಬಂಧ:

  • ಸೂಚಕಗಳಲ್ಲಿ ವರ್ಷದಿಂದ ವರ್ಷಕ್ಕೆ (Y-o-Y) ಬೆಳವಣಿಗೆಯ ದರಗಳು

ಸಚಿವಾಲಯವು 27 ಫೆಬ್ರವರಿ 2026 ರಂದು 2022-23 ಅನ್ನು ಮೂಲವರ್ಷವಾಗಿ ಹೊಂದಿರುವ ವಾರ್ಷಿಕ ಮತ್ತು ತ್ರೈಮಾಸಿಕ ಜಿಡಿಪಿ ಅಂದಾಜುಗಳ ಹೊಸ ಸರಣಿಯನ್ನು ಬಿಡುಗಡೆ ಮಾಡಿತ್ತು ಮತ್ತು ತರುವಾಯ 2025-26 ರ ಜಿಡಿಪಿಯ ತಾತ್ಕಾಲಿಕ ಅಂದಾಜುಗಳನ್ನು 5 ಜೂನ್ 2026 ರಂದು ಬಿಡುಗಡೆ ಮಾಡಿತು. ಇಂದು ಬಿಡುಗಡೆಯಾದ ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳು (ಎನ್‌ ಎ ಎಸ್) ಪ್ರಕಟಣೆಯನ್ನು (https://mospi.gov.in/publications-reports/innerpage/2861), 2022-23, 2023-24 ಮತ್ತು 2024-25ನೇ ಹಣಕಾಸು ವರ್ಷಗಳ ಪರಿಷ್ಕೃತ ವಾರ್ಷಿಕ ಅಂದಾಜುಗಳನ್ನು, 2022-23 ಮೂಲ ವರ್ಷವನ್ನು ಆಧರಿಸಿದ ಉತ್ಪಾದಕರ ಬೆಲೆ ಸೂಚ್ಯಂಕ (ಪಿಪಿಐ); ಬ್ಯಾಂಕಿಂಗ್ ಸೇವೆಗಳ ಬೆಲೆ ಸೂಚ್ಯಂಕ (ಬಿ ಕೆ ಎಸ್ಪಿ ) ಮತ್ತು ವಿವಿಧ ಆಡಳಿತಾತ್ಮಕ ಮೂಲಗಳಿಂದ ಪಡೆದ ನವೀಕರಿಸಿದ ದತ್ತಾಂಶವನ್ನು ಬಳಸಿಕೊಂಡು ಪ್ರಕಟಿಸಲಾಗಿದೆ.

ಅದೇ ರೀತಿ, 2022-23ರ ಮೊದಲ ತ್ರೈಮಾಸಿಕದಿಂದ 2025-26 ನಾಲ್ಕನೇ ತ್ರೈಮಾಸಿಕದವರೆಗಿನ ಜಿಡಿಪಿಯ ತ್ರೈಮಾಸಿಕ ಅಂದಾಜುಗಳು ಹಾಗೂ 2025-26ನೇ ಹಣಕಾಸು ವರ್ಷದ ಜಿಡಿಪಿಯ ತಾತ್ಕಾಲಿಕ ಅಂದಾಜುಗಳನ್ನು ಎನ್‌ ಎ ಎಸ್ ಪ್ರಕಟಣೆಯಲ್ಲಿ ನವೀಕರಿಸಿ ಬಿಡುಗಡೆ ಮಾಡಲಾಗಿದೆ. ಈ ತ್ರೈಮಾಸಿಕ ಮತ್ತು ತಾತ್ಕಾಲಿಕ GDP ಅಂದಾಜುಗಳು ಹಾಗೂ ಇತರ ಒಟ್ಟಾರೆ ಅಂಕಿಅಂಶಗಳಲ್ಲಿ ಇದೀಗ 2022-23 ಮೂಲ ವರ್ಷವನ್ನು ಹೊಂದಿರುವ ಉತ್ಪಾದಕರ ಬೆಲೆ ಸೂಚ್ಯಂಕದ (ಪಿಪಿಐ) ಹೊಸ ಸರಣಿ, ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಹಾಗೂ ವಿವಿಧ ಮೂಲಗಳಿಂದ ಪಡೆದ ನವೀಕರಿಸಿದ ಆಡಳಿತಾತ್ಮಕ ದತ್ತಾಂಶವನ್ನು ಅಳವಡಿಸಲಾಗಿದೆ.

ಟಿಪ್ಪಣಿ:

ಈ ಪತ್ರಿಕಾ ಪ್ರಕಟಣೆಯು ಸಚಿವಾಲಯದ ವೆಬ್‌ಸೈಟ್‌ ನಲ್ಲೂ ಲಭ್ಯವಿದೆ - http://www.mospi.gov.in.

ಜಿಡಿಪಿಗೆ ಸಂಬಂಧಿಸಿದ ವಿವರವಾದ ದತ್ತಾಂಶವು https://esankhyiki.mospi.gov.in/macroindicators?product=nas ನಲ್ಲಿ ಲಭ್ಯವಿದೆ.

ಮುಖ್ಯಾಂಶಗಳು

I. ತ್ರೈಮಾಸಿಕ ಅಂದಾಜುಗಳು ಮತ್ತು ಬೆಳವಣಿಗೆಯ ದರಗಳು

2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸ್ಥಿರ ಬೆಲೆಗಳಲ್ಲಿನ ನೈಜ ಜಿಡಿಪಿಯನ್ನು ₹81.36 ಲಕ್ಷ ಕೋಟಿಗಳೆಂದು ಅಂದಾಜಿಸಲಾಗಿದೆ. 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದು ₹75.46 ಲಕ್ಷ ಕೋಟಿಗಳಾಗಿತ್ತು. ಇದು ಶೇ.7.8 ಬೆಳವಣಿಗೆ ದರವನ್ನು ತೋರಿಸುತ್ತದೆ. 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಸ್ತುತ ಬೆಲೆಗಳಲ್ಲಿನ ನಾಮಮಾತ್ರ ಜಿಡಿಪಿಯನ್ನು ₹88.27 ಲಕ್ಷ ಕೋಟಿಗಳೆಂದು ಅಂದಾಜಿಸಲಾಗಿದೆ. 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದು ₹80.00 ಲಕ್ಷ ಕೋಟಿಗಳಾಗಿತ್ತು. ಇದು ಶೇ.10.3 ಬೆಳವಣಿಗೆ ದರವನ್ನು ತೋರಿಸುತ್ತದೆ.

2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನೈಜ ಜಿವಿಎಯನ್ನು ₹73.82 ಲಕ್ಷ ಕೋಟಿಗಳೆಂದು ಅಂದಾಜಿಸಲಾಗಿದೆ. 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದು ₹68.21 ಲಕ್ಷ ಕೋಟಿಗಳಾಗಿತ್ತು. ಇದು ಶೇ.8.2 ಬೆಳವಣಿಗೆ ದರವನ್ನು ತೋರಿಸುತ್ತದೆ. 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನಾಮಮಾತ್ರ ಜಿವಿಎಯನ್ನು ₹80.53 ಲಕ್ಷ ಕೋಟಿಗಳೆಂದು ಅಂದಾಜಿಸಲಾಗಿದೆ. 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದು ₹72.24 ಲಕ್ಷ ಕೋಟಿಗಳಾಗಿತ್ತು. ಇದು ಶೇ.11.5 ಬೆಳವಣಿಗೆ ದರವನ್ನು ತೋರಿಸುತ್ತದೆ.

ಸ್ಥಿರ ಬೆಲೆಗಳಲ್ಲಿ ವರ್ಷದಿಂದ ವರ್ಷಕ್ಕೆ (Y-o-Y) ಬೆಳವಣಿಗೆಯ ದರಗಳೊಂದಿಗೆ ತ್ರೈಮಾಸಿಕ ಜಿಡಿಪಿ ಮತ್ತು ಜಿವಿಎ ಅಂದಾಜುಗಳು

ತ್ರೈಮಾಸಿಕ ಜಿವಿಎಯ ವಲಯವಾರು ಸಂಯೋಜನೆ ಮತ್ತು ಬೆಳವಣಿಗೆಯ ದರಗಳು

2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿನ ನಾಮಮಾತ್ರ GVA ವಲಯವಾರು ಸಂಯೋಜನೆ

ಸಾರ್ವಜನಿಕ ಆಡಳಿತ, ರಕ್ಷಣಾ ಮತ್ತು ಇತರ ಸೇವೆಗಳ ವರ್ಗವು ಶಿಕ್ಷಣ, ಆರೋಗ್ಯ, ಮನರಂಜನೆ ಹಾಗೂ ಇತರ ವೈಯಕ್ತಿಕ ಸೇವೆಗಳನ್ನೊಳಗೊಂಡ ಇತರ ಸೇವೆಗಳ ವಲಯವನ್ನು ಒಳಗೊಂಡಿದೆ.

ವಿಶಾಲ ವಲಯಗಳಲ್ಲಿ ತ್ರೈಮಾಸಿಕ ಜಿವಿಎ ಯ ಸಂಯೋಜನೆ ಮತ್ತು ಬೆಳವಣಿಗೆಯ ದರಗಳು

[ಪ್ರಾಥಮಿಕ ವಲಯ: ಕೃಷಿ, ಜಾನುವಾರು ಸಾಕಣೆ, ಅರಣ್ಯ ಮತ್ತು ಮೀನುಗಾರಿಕೆ ಹಾಗೂ ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ

ದ್ವಿತೀಯ ವಲಯ: ಉತ್ಪಾದನೆ; ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರ ಉಪಯುಕ್ತ ಸೇವೆಗಳು ಹಾಗೂ ನಿರ್ಮಾಣ

ತೃತೀಯ ವಲಯ: ವ್ಯಾಪಾರ, ಹೋಟೆಲ್‌, ಸಾರಿಗೆ, ಸಂಪರ್ಕ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಸೇವೆಗಳು, ಸಂಗ್ರಹಣೆ; ಹಣಕಾಸು, ರಿಯಲ್ ಎಸ್ಟೇಟ್, ಐಟಿ, ಮತ್ತು ವೃತ್ತಿಪರ ಸೇವೆಗಳು, ವಸತಿ ಮಾಲೀಕತ್ವ ಮತ್ತು ಸಾರ್ವಜನಿಕ ಆಡಳಿತ, ರಕ್ಷಣೆ ಮತ್ತು ಇತರ ಸೇವೆಗಳು]

II. ಕಾರ್ಯವಿಧಾನ ಮತ್ತು ಪ್ರಮುಖ ದತ್ತಾಂಶ ಮೂಲಗಳು:

ಜಿಡಿಪಿಯ ತ್ರೈಮಾಸಿಕ ಅಂದಾಜುಗಳ ಸಂಕಲನವು 'ಬೆಂಚ್‌ಮಾರ್ಕ್-ಇಂಡಿಕೇಟರ್' ಕಾರ್ಯವಿಧಾನವನ್ನು ಆಧರಿಸಿದೆ, ಇದರಲ್ಲಿ ಹಿಂದಿನ ಹಣಕಾಸು ವರ್ಷದಲ್ಲಿ ಲೆಕ್ಕಹಾಕಲಾದ ಅಂದಾಜುಗಳನ್ನು ವಿವಿಧ ಆರ್ಥಿಕ ಮತ್ತು ಸಾಂಸ್ಥಿಕ ವಲಯಗಳ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುವ ಸಂಬಂಧಿತ ಸೂಚಕಗಳನ್ನು ಬಳಸಿ ವಿಸ್ತರಿಸಲಾಗುತ್ತದೆ. ಮೂಲ ವರ್ಷ 2022-23 ರ ಪ್ರಕಾರ ತ್ರೈಮಾಸಿಕ ಜಿಡಿಪಿ ಅಂದಾಜುಗಳು ಮುಖ್ಯವಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್), 2017 ರ ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರ ಕೈಪಿಡಿಯಲ್ಲಿ ಉಲ್ಲೇಖಿಸಲಾದ ಮಾರ್ಗದರ್ಶಿ ಸೂತ್ರಗಳು ಮತ್ತು ಮಾನದಂಡಗಳನ್ನು ಅನುಸರಿಸುತ್ತವೆ. 2022-23 ರ ಮೂಲ ವರ್ಷದೊಂದಿಗೆ ತ್ರೈಮಾಸಿಕ ಜಿಡಿಪಿ ಅಂದಾಜುಗಳ ಹೊಸ ಸರಣಿಯಲ್ಲಿನ ಪರಿಷ್ಕೃತ ಕಾರ್ಯವಿಧಾನ, ದತ್ತಾಂಶ ಮೂಲಗಳು ಮತ್ತು ಡಿಫ್ಲೇಷನ್‌ ತಂತ್ರದ ಸಂಕ್ಷಿಪ್ತ ವಿವರಣೆಯನ್ನು ಫೆಬ್ರವರಿ 2026 ರಲ್ಲಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ನೀಡಲಾಗಿದೆ.

ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳ ಹೊಸ ಸರಣಿಯು ಉತ್ಪಾದನಾ ವಲಯದ  ಜಿವಿಎ ಯನ್ನು ಅಂದಾಜು ಮಾಡಲು ಡಬಲ್ ಡಿಫ್ಲೇಶನ್ ವಿಧಾನವನ್ನು ಅಳವಡಿಸಿಕೊಂಡಿದೆ. ಈ ವಿಧಾನದ ಅಡಿಯಲ್ಲಿ, ಉತ್ಪಾದನೆ ಮತ್ತು ಮಧ್ಯಂತರ ಬಳಕೆಯನ್ನು ಸಂಬಂಧಿತ ಉತ್ಪಾದಕ ಬೆಲೆ ಸೂಚ್ಯಂಕಗಳನ್ನು (ಪಿಪಿಐ) ಬಳಸಿ ಪ್ರತ್ಯೇಕವಾಗಿ ಡಿಫ್ಲೇಟ್ ಮಾಡಲಾಗುತ್ತದೆ ಮತ್ತು ನೈಜ ಉತ್ಪಾದನೆ ಹಾಗೂ ನೈಜ ಮಧ್ಯಂತರ ಬಳಕೆಯ ನಡುವಿನ ವ್ಯತ್ಯಾಸವಾಗಿ ನೈಜ ಜಿವಿಎ ಯನ್ನು ಪಡೆಯಲಾಗುತ್ತದೆ. ಹಿಂದಿನ ಸರಣಿಯಲ್ಲಿ ಉತ್ಪಾದನೆ ಮತ್ತು ಮಧ್ಯಂತರ ಬಳಕೆ ಎರಡಕ್ಕೂ ಒಂದೇ ಡಿಫ್ಲೇಟರ್ ಬಳಸಲಾಗುತ್ತಿದ್ದ ಏಕ ಡಿಫ್ಲೇಟರ್ ವಿಧಾನದ ಹೋಲಿಕೆಯಲ್ಲಿ, ಉತ್ಪಾದನೆ ಮತ್ತು ಇನ್ಪುಟ್ ಬೆಲೆಗಳಲ್ಲಿನ ಬದಲಾವಣೆಗಳನ್ನು ಸೂಕ್ತವಾಗಿ ಪ್ರತಿಬಿಂಬಿಸುವ ಮೂಲಕ ಉತ್ಪಾದನಾ ವಲಯದಿಂದ ಉಂಟಾಗುವ ವಾಸ್ತವ ಮೌಲ್ಯವರ್ಧನೆಯ ಹೆಚ್ಚು ದೃಢವಾದ ಅಳತೆಯನ್ನು ಇದು ಒದಗಿಸುತ್ತದೆ. ಉತ್ಪಾದಕ ಬೆಲೆ ಸೂಚ್ಯಂಕದ (ಪಿಪಿಐ) ಹೊಸ ಸರಣಿ ಸೇರಿದಂತೆ ಸುಧಾರಿತ ಬೆಲೆ ದತ್ತಾಂಶದ ಲಭ್ಯತೆಯು ಉತ್ಪಾದನಾ ವಲಯದಲ್ಲಿ ಡಬಲ್ ಡಿಫ್ಲೇಷನ್ ಅನುಷ್ಠಾನವನ್ನು ಮತ್ತಷ್ಟು ಬಲಪಡಿಸಿದೆ.

ಆದಾಗ್ಯೂ, ಡಬಲ್ ಡಿಫ್ಲೇಷನ್ ವಿಧಾನದ ಅಡಿಯಲ್ಲಿ, ಉತ್ಪಾದನೆ ಮತ್ತು ಇನ್‌ಪುಟ್ ಬೆಲೆಗಳೆರಡರಲ್ಲೂ ಹೆಚ್ಚಳವಾಗಿದ್ದರೂ ಸಹ, ಉತ್ಪಾದನಾ ಜಿವಿಎ ಯ ಸೂಚಿತ ಬೆಲೆ ಡಿಫ್ಲೇಟರ್ ಕುಸಿಯಬಹುದು ಅಥವಾ ಋಣಾತ್ಮಕ ಬೆಳವಣಿಗೆಯ ದರವನ್ನು ತೋರಿಸಬಹುದು ಎಂಬುದನ್ನು ಗಮನಿಸಬಹುದು. ಇನ್‌ಪುಟ್ ಬೆಲೆಗಳು (ಕಚ್ಚಾ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಕಚ್ಚಾ ವಸ್ತುಗಳು ಇತ್ಯಾದಿ ಪ್ರಮುಖ ಇನ್‌ಪುಟ್ ವಸ್ತುಗಳ ಬೆಲೆಗಳು) ಉತ್ಪಾದನಾ ಬೆಲೆಗಳಿಗಿಂತ ವೇಗವಾಗಿ ಹೆಚ್ಚಾದಾಗ, ನೈಜ-ಪ್ರಪಂಚದ ಪೂರೈಕೆ ಸರಪಳಿ ಆಘಾತಗಳು ಮತ್ತು ಆರ್ಥಿಕ ವಲಯಗಳಲ್ಲಿನ ಮಾರ್ಜಿನ್ ಒತ್ತಡಗಳ ಬದಲಾವಣೆಯಿಂದಾಗಿ ಮೌಲ್ಯವರ್ಧಿತ ಬೆಲೆಯ ಘಟಕವು ಕುಸಿಯಬಹುದು, ಇದು ಸೂಚಿತ ಜಿವಿಎ ಡಿಫ್ಲೇಟರ್‌ ನಲ್ಲಿ ಋಣಾತ್ಮಕ ಬೆಳವಣಿಗೆಗೆ ಕಾರಣವಾಗುತ್ತದೆ. ಅಂತರರಾಷ್ಟ್ರೀಯ ಪೂರೈಕೆ ಸರಪಳಿಗಳು ಏರಿಳಿತಗೊಂಡಾಗ ವಿವಿಧ ದೇಶಗಳಲ್ಲಿ ಇಂತಹ ನಿದರ್ಶನಗಳು ಕಂಡುಬಂದಿವೆ.

ಸಂಕಲನದಲ್ಲಿ ಬಳಸಲಾದ ಕಾರ್ಯವಿಧಾನ ಮತ್ತು ದತ್ತಾಂಶ ಮೂಲಗಳನ್ನು ಸೆಪ್ಟೆಂಬರ್ 2026 ರ ವೇಳೆಗೆ ಬಿಡುಗಡೆಯಾಗಲಿರುವ 'ಸೋರ್ಸಸ್ ಅಂಡ್ ಮೆಥಡ್ಸ್' ಪ್ರಕಟಣೆಯಲ್ಲಿ ಸಮಗ್ರವಾಗಿ ಪ್ರಸ್ತುತಪಡಿಸಲಾಗುತ್ತದೆ.

ಜಿಡಿಪಿ ಸಂಕಲನಕ್ಕಾಗಿ ಬಳಸಲಾಗುವ ಪ್ರಮುಖ ಸೂಚಕಗಳು ಮತ್ತು ಬೆಲೆ ಸೂಚ್ಯಂಕಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

ಉತ್ಪಾದನಾ-ಬದಿಯ ಸೂಚಕಗಳು ಮತ್ತು ಬೆಲೆ ಸೂಚ್ಯಂಕಗಳು:

  • ಬೆಳೆ ಉತ್ಪಾದನೆಯ ಮುಂಗಡ ಅಂದಾಜುಗಳು
  • ಒಳನಾಡು ಮತ್ತು ಸಾಗರ ಮೀನುಗಳ ಉತ್ಪಾದನೆ
  • ಪ್ರಮುಖ ಜಾನುವಾರು ಉತ್ಪನ್ನಗಳ ಋತುವಾರು ಉತ್ಪಾದನೆ
  • ಕೈಗಾರಿಕಾ ಉತ್ಪಾದನೆ ಸೂಚ್ಯಂಕದ ಸೂಕ್ಷ್ಮ ಹಂತದ ದತ್ತಾಂಶ
  • ನೈಸರ್ಗಿಕ ಅನಿಲದ ಬಳಕೆ
  • BSE/NSE ಯಲ್ಲಿ ನೋಂದಾಯಿತ ಕಂಪನಿಗಳ ಹಣಕಾಸು ಫಲಿತಾಂಶಗಳು
  • ಜಿ ಎಸ್‌ ಟಿ ದತ್ತಾಂಶ
  • ಉಕ್ಕಿನ ಬಳಕೆ
  • ವಾಣಿಜ್ಯ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ದೇಶೀಯ ಮಾರಾಟ
  • ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಸಂಚಾರದ ಅಂಕಿಅಂಶಗಳು
  • ರೈಲ್ವೆಯ ನಿವ್ವಳ ಟನ್ ಕಿ.ಮೀ, ಪ್ರಯಾಣಿಕ ಕಿ.ಮೀ., ಸರಕು ಮತ್ತು ಪ್ರಯಾಣಿಕರ ಗಳಿಕೆಯ ಮಾಹಿತಿ
  • ಪ್ರಮುಖ ಮತ್ತು ಸಣ್ಣ ಬಂದರುಗಳಲ್ಲಿ ನಿರ್ವಹಿಸಲಾದ ಸರಕು
  • ವೈರ್‌ಲೆಸ್ ಡೇಟಾ ಬಳಕೆ, ಬಳಕೆಯ ನಿಮಿಷಗಳು, ಇಂಟರ್ನೆಟ್ ಟೆಲಿಫೋನಿ, ಟೆಲಿಫೋನ್ ಚಂದಾದಾರರು, ಕರೆಗಳು ಮತ್ತು ಡೇಟಾ ಬಳಕೆಯ ಮಾಹಿತಿಯಿಂದ ಆದಾಯದ ಪಾಲಿಗೆ ಸಂಬಂಧಿಸಿದ ಮಾಹಿತಿ
  • ಬ್ಯಾಂಕ್‌ ವಾರು ಸಾಲ, ಠೇವಣಿ, ಬಡ್ಡಿ ಮಾಹಿತಿ
  • ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಸಾಲ, ಠೇವಣಿ, ಬಡ್ಡಿ ಮಾಹಿತಿ
  • ಜೀವ ವಿಮೆ ಮತ್ತು ಜೀವೇತರ ವಿಮಾ ಕಂಪನಿಗಳ ಆದಾಯ ಖಾತೆ, ಲಾಭ-ನಷ್ಟ ಖಾತೆ, ನಿರ್ವಹಣಾ ವೆಚ್ಚಗಳ ಮಾಹಿತಿ
  • ಕೇಂದ್ರ ಸರ್ಕಾರದ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ (ಪಿ ಎಫ್‌ ಎಂ ಎಸ್) ದತ್ತಾಂಶ
  • ಸಿಎಜಿಯಿಂದ ರಾಜ್ಯ ಸರ್ಕಾರಗಳ ತೆರಿಗೆ, ಸಬ್ಸಿಡಿ ಮಾಹಿತಿ
  • ಸಿಜಿಎಯಿಂದ ಕೇಂದ್ರ ಸರ್ಕಾರದ ತೆರಿಗೆ, ಸಬ್ಸಿಡಿ ಮಾಹಿತಿ
  • ಗ್ರಾನ್ಯುಲರ್ ಹಂತದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮತ್ತು ಸಿಪಿಐ (ಕೈಗಾರಿಕಾ ಕಾರ್ಮಿಕರು)
  • ಗ್ರಾನ್ಯುಲರ್ ಹಂತದ ಉತ್ಪಾದನಾ ಉತಾದಕ ಬೆಲೆ ಸೂಚ್ಯಂಕ (ಪಿಪಿಐ)

ವೆಚ್ಚ-ಬದಿಯ ಸೂಚಕಗಳು ಮತ್ತು ಬೆಲೆ ಸೂಚ್ಯಂಕಗಳು:

  • ಆರ್‌ ಬಿ ಐ ನ ಪಾವತಿ ಬಾಕಿ ಕೋಷ್ಟಕ
  • ವಾಹನ ವರ್ಗ ಮತ್ತು ಕ್ಲಾಸ್-ವೈಸ್ ನೋಂದಣಿ (e-VAHAN ನಿಂದ) ಮತ್ತು ಮಾರಾಟ ಮಾಹಿತಿ
  • ಗ್ರಾನ್ಯುಲರ್ ಹಂತದ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ)
  • ಕೇಂದ್ರ ಸರ್ಕಾರದ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ (ಪಿ ಎಫ್‌ ಎಂ ಎಸ್) ದತ್ತಾಂಶ
  • ಜಿಎಜಿಯಿಂದ ರಾಜ್ಯ ಸರ್ಕಾರಗಳ ಸಂಬಳದ ಮಾಹಿತಿ
  • ಪ್ರಮುಖ ಸರಕು ಮತ್ತು ಎಚ್‌ ಎಸ್‌ ಎನ್-ವಾರು ಸರಕುಗಳ ಆಮದು ಮತ್ತು ರಫ್ತು
  • ಆಹಾರ ಧಾನ್ಯದ ಆಫ್‌ಟೇಕ್ ಮಾಹಿತಿ
  • ಗ್ರಾನ್ಯುಲರ್ ಹಂತದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮತ್ತು ಸಿಪಿಐ (ಕೈಗಾರಿಕಾ ಕಾರ್ಮಿಕರು)
  • ಗ್ರಾನ್ಯುಲರ್ ಹಂತದ ಉತ್ಪಾದನಾ ಉತ್ಪಾದಕರ ಬೆಲೆ ಸೂಚ್ಯಂಕ (ಪಿಪಿಐ)
  • ಪ್ರಮುಖ ಸರಕುವಾರು ಘಟಕ ಮೌಲ್ಯ ಸೂಚ್ಯಂಕ (ಯುವಿಐ)

ಮೂಲ ಸಂಸ್ಥೆಗಳು ಮಾಡಿರುವ ಸುಧಾರಿತ ದತ್ತಾಂಶ ವ್ಯಾಪ್ತಿ ಮತ್ತು ಒಳಹರಿವಿನ ದತ್ತಾಂಶದಲ್ಲಿನ ಪರಿಷ್ಕರಣೆಯು ಅಂದಾಜುಗಳ ನಂತರದ ಪರಿಷ್ಕರಣೆಗಳ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ, ಮೇಲ್ಕಂಡ ಕಾರಣಗಳಿಂದಾಗಿ ಬಿಡುಗಡೆ ವೇಳಾಪಟ್ಟಿಯ ಅನುಸಾರ ಅಂದಾಜುಗಳನ್ನು ಕಾಲಕ್ರಮೇಣ ಪರಿಷ್ಕರಿಸುವ ಸಾಧ್ಯತೆಯಿದೆ. ಅಂಕಿಅಂಶಗಳನ್ನು ವ್ಯಾಖ್ಯಾನಿಸುವಾಗ ಬಳಕೆದಾರರು ಈ ಅಂಶಗಳನ್ನು ಪರಿಗಣಿಸಬೇಕು. 2026-27ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ (ಜುಲೈ-ಸೆಪ್ಟೆಂಬರ್) ಜಿಡಿಪಿಯ ತ್ರೈಮಾಸಿಕ ಅಂದಾಜುಗಳ (Q2, 2026-27) ಮುಂದಿನ ಬಿಡುಗಡೆ 30 ನವೆಂಬರ್ 2026ರಂದು ನಿಗದಿಯಾಗಿದೆ.

III. ವಿವರಣೆಗಳು

ಅನುಬಂಧ

ಸೂಚಕಗಳಲ್ಲಿ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯ ದರ (%)

ಸೂಚಕಗಳು

2025-26 Q1

2026-27 Q1

ಒಟ್ಟು ಆಹಾರ ಧಾನ್ಯ

5.0

4.8

ಅಕ್ಕಿ

10.6

6.2

ಗೋಧಿ

3.1

0.5

ಸಿಮೆಂಟ್ ಉತ್ಪಾದನಾ ಸೂಚ್ಯಂಕ

7.3

8.9

ಸಿದ್ಧಪಡಿಸಿದ ಉಕ್ಕಿನ ಬಳಕೆ

8.0

8.3

ಐಐಪಿ ಮೂಲಸೌಕರ್ಯ/ ನಿರ್ಮಾಣ ಸರಕುಗಳು

6.1

7.2

ಐಐಪಿ ವಿದ್ಯುತ್

-1.5

9.3

ಐಐಪಿ ಇಂಧನ ಖನಿಜಗಳು

-1.9

-4.5

ಐಐಪಿ ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ

3.5

-1.2

ನೈಸರ್ಗಿಕ ಅನಿಲ ಬಳಕೆ

-8.7

-2.6

ವಾಣಿಜ್ಯ ವಾಹನಗಳ ಮಾರಾಟ

-0.3

18.3

ತ್ರಿಚಕ್ರ ವಾಹನಗಳ ಮಾರಾಟ

0.1

29.7

ಪ್ರಮುಖ ಬಂದರುಗಳಲ್ಲಿ ನಿರ್ವಹಿಸಲಾದ ಸರಕು

5.4

6.2

ಸಣ್ಣ ಬಂದರುಗಳಲ್ಲಿ ನಿರ್ವಹಿಸಲಾದ ಸರಕು

0.3

-0.6

ವಿಮಾನ ಪ್ರಯಾಣಿಕರ ಸಂಚಾರ ಮತ್ತು ನಿರ್ವಹಿಸಿದ ಸರಕು (ಷೆಡ್ಯೂಲ್ಡ್ ದೇಶೀಯ ಸೇವೆ)

6.7

2.9

ವಿಮಾನ ಪ್ರಯಾಣಿಕರ ಸಂಚಾರ ಮತ್ತು ನಿರ್ವಹಿಸಿದ ಸರಕು (ಷೆಡ್ಯೂಲ್ಡ್ ಅಂತರರಾಷ್ಟ್ರೀಯ ಸೇವೆ)

8.4

-19.5

ರೈಲ್ವೇ ನಿವ್ವಳ ಟನ್ ಕಿ.ಮೀ.

0.5

-0.7

ರೈಲ್ವೇ ಪ್ರಯಾಣಿಕ ಕಿ.ಮೀ.

3.0

8.3

ನಿವ್ವಳ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿ ಜಿ ಎಸ್‌ ಟಿ)

7.8

4.8

ಕಸ್ಟಮ್ ಸುಂಕ

-9.9

36.1

ಕೇಂದ್ರ ಅಬಕಾರಿ ಸುಂಕ

8.3

-22.4

ರಸಗೊಬ್ಬರ ಸಬ್ಸಿಡಿ (ಯುರಿಯಾ + ಪೋಷಕಾಂಶ ಆಧಾರಿತ ರಸಗೊಬ್ಬರ)

47.4

57.6

ಗೃಹಬಳಕೆಯ ವಾಹನ ನೋಂದಣಿ

8.7

15.9

ಪ್ರಯಾಣಿಕ ಸಾರಿಗೆ ವಾಹನ ನೋಂದಣಿ

11.2

13.9

ಸರಕು ಸಾರಿಗೆ ವಾಹನಗಳ ನೋಂದಣಿ

6.1

20.1

ಐಐಪಿ ಬಂಡವಾಳ ಸರಕುಗಳು

8.8

15.2

ಐಐಪಿ (ಇತರ ಸಾರಿಗೆ ಉಪಕರಣಗಳ ತಯಾರಿಕೆ)

3.8

19.5

ಐಐಪಿ ಕಂಪ್ಯೂಟರ್, ಎಲೆಕ್ಟ್ರಾನಿಕ್ ಮತ್ತು ಆಪ್ಟಿಕಲ್ ಉತ್ಪನ್ನಗಳ ತಯಾರಿಕೆ

8.8

12.4

ಐಐಪಿ ವಿದ್ಯುತ್ ಉಪಕರಣಗಳ ತಯಾರಿಕೆ

9.7

27.0

ಐಐಪಿ ಯಂತ್ರೋಪಕರಣಗಳು ಮತ್ತು ಉಪಕರಣಗಳ ತಯಾರಿಕೆ

6.6

9.1

ಸರಕು ಮತ್ತು ಸೇವೆಗಳ ರಫ್ತು

5.7

25.8

ಸರಕು ಮತ್ತು ಸೇವೆಗಳ ಆಮದು

5.9

30.5

ಸಾರಿಗೆ ಸರಕುಗಳ ಆಮದು

-22.5

13.5

ಯಂತ್ರೋಪಕರಣಗಳ ಆಮದು

16.5

51.5

ಸಾರಿಗೆ ಸರಕುಗಳ ರಫ್ತು

-7.2

52.2

ಯಂತ್ರೋಪಕರಣಗಳ ರಫ್ತು

37.2

31.9

ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಪಿಪಿಐ

-1.3

4.98

ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ಪಿಪಿಐ

-1.96

19.5

ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಪಿಪಿಐ

-15.9

58.0

ತಯಾರಿಸಿದ ಉತ್ಪನ್ನಗಳ ಪಿಪಿಐ

0.9

10.7

ವಿದ್ಯುತ್‌ ಪಿಪಿಐ

0.6

-1.2

       

*ಐಐಪಿ ಮತ್ತು ಪಿಪಿಐ ಮೂಲ ವರ್ಷ 2022-23 ಆಗಿದೆ.

Click here to see pdf

 

*****


(ಪ್ರಕಟಣೆ ಐ.ಡಿ.: 2305078) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: Tamil , English