ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಸಾರ್ವಜನಿಕ ಪರೀಕ್ಷೆಗಳ ಸುಧಾರಣೆಗಳ ಕುರಿತು ಸಲಹೆಗಳನ್ನು ಆಹ್ವಾನಿಸಿದ ಉನ್ನತಾಧಿಕಾರ ಪಡೆ
ಪ್ರಕಟಣಾ ದಿನಾಂಕ:
28 AUG 2026 4:03PM by PIB Bengaluru
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುವ ಪರೀಕ್ಷೆಗಳು ಸೇರಿದಂತೆ ಸಾರ್ವಜನಿಕ ಪರೀಕ್ಷೆಗಳ ನಡೆವಳಿಕೆ, ಭದ್ರತೆ, ವಿನ್ಯಾಸ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಸಮಗ್ರ ಸುಧಾರಣೆಗಳನ್ನು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಭಾರತ ಸರ್ಕಾರವು ಶ್ರೀ ನಂದನ್ ನಿಲೇಕಣಿ ಅವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಪಡೆಯನ್ನು (HPTF) ರಚಿಸಿದೆ.
ಸಂಸ್ಥಾಗತ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಬಲಪಡಿಸುವುದು, ಪರೀಕ್ಷೆಯ ಸಮಗ್ರತೆ ಮತ್ತು ಭದ್ರತೆಯನ್ನು ಖಚಿತಪಡಿಸುವುದು, ಸೂಕ್ತ ತಂತ್ರಜ್ಞಾನಗಳನ್ನು ನಿಯೋಜಿಸುವುದು, ಪರೀಕ್ಷಾ ಮೂಲಸೌಕರ್ಯವನ್ನು ಹೆಚ್ಚಿಸುವುದು, ಸುಲಭ ತಲುಪುವಿಕೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಯನ್ನು ರಕ್ಷಿಸುವ ಕ್ರಮಗಳನ್ನು ಈ ಉನ್ನತಾಧಿಕಾರ ಪಡೆಯು ಪರಿಶೀಲಿಸುತ್ತಿದೆ. ಪ್ರಬಲ, ಸುರಕ್ಷಿತ, ಪಾರದರ್ಶಕ, ನ್ಯಾಯಸಮ್ಮತ ಮತ್ತು ಭವಿಷ್ಯಕ್ಕೆ ಸಜ್ಜಾದ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ.
ಈ ಪ್ರಕ್ರಿಯೆಯ ಭಾಗವಾಗಿ, ಎಲ್ಲಾ ಪಾಲುದಾರರ ಅನುಭವ, ಜ್ಞಾನ ಮತ್ತು ದೃಷ್ಟಿಕೋನಗಳಿಂದ ಪ್ರಯೋಜನ ಪಡೆಯುವುದು ಅತ್ಯಂತ ಉಪಯುಕ್ತ ಎಂದು ಹೆಚ್‌ಪಿಟಿಎಫ್ (HPTF) ಪರಿಗಣಿಸುತ್ತದೆ. ಆದ್ದರಿಂದ ಈ ಕೆಳಗಿನವರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ:
• ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳು;
• ಪೋಷಕರು;
• ಶಿಕ್ಷಕರು ಮತ್ತು ಶೈಕ್ಷಣಿಕ ಸಂಸ್ಥೆಗಳು;
• ಪರೀಕ್ಷೆ ನಡೆಸುವ ಮತ್ತು ಪರೀಕ್ಷಾ ಅಗತ್ಯವಿರುವ ಸಂಸ್ಥೆಗಳು;
• ವಿಷಯ ತಜ್ಞರು ಮತ್ತು ತಂತ್ರಜ್ಞಾನ ವೃತ್ತಿಪರರು;
• ಉದ್ಯಮ ಸಂಸ್ಥೆಗಳು;
• ನಾಗರಿಕ ಸಮಾಜ ಸಂಸ್ಥೆಗಳು; ಮತ್ತು
• ಇತರ ಆಸಕ್ತ ಪಾಲುದಾರರು.
ಸಲಹೆಗಳು ಈ ಕೆಳಗಿನ ಸೂಚಿತ ಕ್ಷೇತ್ರಗಳಿಗೆ ಸಂಬಂಧಿಸಿರಬಹುದು:
- ಸಾರ್ವಜನಿಕ ಪರೀಕ್ಷೆಗಳ ನಡೆವಳಿಕೆ ಮತ್ತು ಭದ್ರತೆ;
- ಪರೀಕ್ಷಾ ವಿನ್ಯಾಸ ಮತ್ತು ಮೌಲ್ಯಮಾಪನ ವಿಧಾನ;
- ಆಡಳಿತ, ಹೊಣೆಗಾರಿಕೆ ಮತ್ತು ಸಂಸ್ಥಾಗತ ವ್ಯವಸ್ಥೆಗಳು;
- ಪರೀಕ್ಷಾ ಅಕ್ರಮಗಳ ತಡೆಗಟ್ಟುವಿಕೆ, ಪತ್ತೆ ಮತ್ತು ಪರಿಹಾರ;
- ಸುರಕ್ಷಿತ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಸೇರಿದಂತೆ ತಂತ್ರಜ್ಞಾನದ ಬಳಕೆ;
- ಪರೀಕ್ಷಾ ಮೂಲಸೌಕರ್ಯಗಳ ಸೃಷ್ಟಿ ಮತ್ತು ವರ್ಧನೆ;
- ಸಾಮಾಜಿಕ, ಆರ್ಥಿಕ, ಪ್ರಾದೇಶಿಕ ಮತ್ತು ಭಾಷಿಕ ಗುಂಪುಗಳಾದ್ಯಂತ ಉತ್ತಮ ತಲುಪುವಿಕೆಗಾಗಿ ಅಂತರ್ಗತ ಪರೀಕ್ಷಾ ಚೌಕಟ್ಟು;
- ಪಾರದರ್ಶಕತೆ, ಕುಂದುಕೊರತೆ ಪರಿಹಾರ ಮತ್ತು ಪಾಲುದಾರರ ಸಂವಹನ;
- ಪರೀಕ್ಷಾ ಪ್ರಕ್ರಿಯೆಯುದ್ದಕ್ಕೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿಯನ್ನು ಉತ್ತೇಜಿಸುವ ಕ್ರಮಗಳು; ಮತ್ತು
- ಪರೀಕ್ಷಾ ವ್ಯವಸ್ಥೆಗೆ ಮೌಲ್ಯವನ್ನು ನೀಡಬಹುದಾದ ಯಾವುದೇ ಇತರ ಕ್ರಮಗಳು.
ಪಾಲುದಾರರು ತಮ್ಮ ಸಲಹೆಗಳನ್ನು ಸೆಪ್ಟೆಂಬರ್ 13, 2026 ರೊಳಗೆ ಈ ಕೆಳಗಿನ ಮಾರ್ಗಗಳ ಮೂಲಕ ಸಲ್ಲಿಸಲು ಕೋರಲಾಗಿದೆ:
ವೆಬ್‌ಸೈಟ್: https://examreforms-taskforce.dopt.gov.in
ಫೋನ್: 1800-180-4747
ವಾಟ್ಸಾಪ್: +917827042830 ಗೆ “hptf” ಎಂದು ಕಳುಹಿಸಿ ಅಥವಾ https://wa.me/917827042830?text=hptf ಲಿಂಕ್ ಕ್ಲಿಕ್ ಮಾಡಿ
ಇಮೇಲ್: ExamReformsTaskforce@dopt.gov.in
ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಸಲಹೆಗಳನ್ನು ಸಲ್ಲಿಸಬಹುದು.
ಈ ಸಾರ್ವಜನಿಕ ಸಮಾಲೋಚನೆಯ ಮೂಲಕ ಸ್ವೀಕರಿಸಿದ ಸಲಹೆಗಳು ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ರೂಪಿಸುವಲ್ಲಿ ಉನ್ನತಾಧಿಕಾರ ಪಡೆಗೆ ನೆರವಾಗಲಿವೆ.
ಉನ್ನತಾಧಿಕಾರ ಪಡೆಯು ಎಲ್ಲಾ ಪಾಲುದಾರರಿಂದ ಸಕ್ರಿಯ, ರಚನಾತ್ಮಕ ಮತ್ತು ವ್ಯಾಪಕ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತದೆ.
ಹೆಚ್ಚಿನ ವಿವರಗಳಿಗಾಗಿ ಮತ್ತು ಸಲಹೆಗಳನ್ನು ಸಲ್ಲಿಸಲು, ದಯವಿಟ್ಟು ಭೇಟಿ ನೀಡಿ: https://examreforms-taskforce.dopt.gov.in
ಸಲಹೆ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 13, 2026

*****
(ಪ್ರಕಟಣೆ ಐ.ಡಿ.: 2304316)
ವಿಸಿಟರ್ ಕೌಂಟರ್ : 12