ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

‘ವಿಶ್ವ ಸಂಸ್ಕೃತ ದಿನ’ ದಂದು ಎಲ್ಲರಿಗೂ ಹೃತ್ಪೂರ್ವಕ ಶುಭಾಶಯ ಕೋರಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಸಂಸ್ಕೃತ ಭಾಷೆ ಭಾರತದ ಜ್ಞಾನ ಸಂಪ್ರದಾಯ, ಸಂಸ್ಕೃತಿ ಮತ್ತು ಪ್ರಜ್ಞೆಯ ಭದ್ರ ಬುನಾದಿ: ಅದು ಎಷ್ಟು ಪ್ರಾಚೀನವೋ ಅಷ್ಟೇ ವೈಜ್ಞಾನಿಕವೂ ಹೌದು

ಸಂಸ್ಕೃತದಲ್ಲಿ ಬರೆದಿರುವ ವೇದಗಳು, ಉಪನಿಷತ್ತುಗಳು ಮತ್ತು ಶಾಸ್ತ್ರಗಳು ಶತಮಾನಗಳಿಂದ ಮಾನವಕುಲ ಜ್ಞಾನದ ಹಾದಿಯಲ್ಲಿ ಮುನ್ನಡೆಯಲು ಮಾರ್ಗದರ್ಶನ

ಸಂಸ್ಕೃತ ಭಾಷೆಯನ್ನು ಸಂರಕ್ಷಿಸಲು ಮತ್ತು ಅದನ್ನು ಹೊಸ ಪೀಳಿಗೆಗೆ ತಲುಪಿಸಲು ಮರೆಯಲಾಗದ ಕೊಡುಗೆಗಳನ್ನು ನೀಡಿದ ಎಲ್ಲಾ ವಿದ್ವಾಂಸರು ಮತ್ತು ಶಿಕ್ಷಕರಿಗೆ ನನ್ನ ಗೌರವ ನಮನಗಳು

ಶ್ರಾವಣ ಪೂರ್ಣಿಮೆಯ ಸಂದರ್ಭದಲ್ಲಿ ದೇಶದ ಜನರಿಗೆ ರಕ್ಷಾ ಬಂಧನ ಶುಭಾಶಯ ಕೋರಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ

ಪ್ರಕಟಣಾ ದಿನಾಂಕ: 28 AUG 2026 12:09PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ‘ವಿಶ್ವ ಸಂಸ್ಕೃತ ದಿನ’ದಂದು ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, “ ಸಂಸ್ಕೃತ ಭಾಷೆ ಭಾರತದ ಜ್ಞಾನ ಸಂಪ್ರದಾಯ, ಸಂಸ್ಕೃತಿ ಮತ್ತು ಪ್ರಜ್ಞೆಯ ಭದ್ರ ಬುನಾದಿಯಾಗಿದ್ದು, ಅದು ಎಷ್ಟು ಪ್ರಾಚೀನವೋ ಅಷ್ಟೇ ವೈಜ್ಞಾನಿಕವೂ ಆಗಿದೆ ಎಂದು ಹೇಳಿದರು. ಸಂಸ್ಕೃತದಲ್ಲಿ ರಚಿಸಿದ ವೇದಗಳು, ಉಪನಿಷತ್ತುಗಳು ಮತ್ತು ಶಾಸ್ತ್ರಗಳು ಶತಮಾನಗಳಿಂದ ಮನುಕುಲವನ್ನು ಜ್ಞಾನದ ಹಾದಿಯಲ್ಲಿ ಮುನ್ನಡೆಸುತ್ತಿವೆ ಎಂದು ಅವರು ಹೇಳಿದರು. ಸಂಸ್ಕೃತ ಭಾಷೆಯನ್ನು ಸಂರಕ್ಷಿಸಲು ಮತ್ತು ಹೊಸ ಪೀಳಿಗೆಗೆ ಅದನ್ನು ತಲುಪಿಸಲು ಮರೆಯಲಾಗದ ಕೊಡುಗೆಗಳನ್ನು ನೀಡಿದ ಎಲ್ಲಾ ವಿದ್ವಾಂಸರು ಮತ್ತು ಶಿಕ್ಷಕರಿಗೆ ನಾನು ನನ್ನ ಗೌರವ ನಮನ ಸಲ್ಲಿಸುತ್ತೇನೆ ಎಂದು ಶ್ರೀ ಶಾ ಹೇಳಿದರು.

ಅಲ್ಲದೆ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಶ್ರಾವಣ ಪೂರ್ಣಿಮೆಯ ಸಂದರ್ಭದಲ್ಲಿ ದೇಶದ ಜನರಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ಸಲ್ಲಿಸಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2304156) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Gujarati , Malayalam