ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಶ್ರೀ ನಾರಾಯಣ ಗುರು ಜಿ ಅವರ ಜಯಂತಿಯ ಅಂಗವಾಗಿ ಅವರಿಗೆ ಗೌರವ ನಮನ ಸಲ್ಲಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಮಹಾತ್ಮ ಅಯ್ಯಂಕಳಿ ಜಿ ಅವರ ಜಯಂತಿಯಂದು ಅವರಿಗೂ ಸಹ ಗೌರವ ನಮನ ಸಲ್ಲಿಸಿದ ಶ್ರೀ ಅಮಿತ್ ಶಾ  

ಆಧ್ಯಾತ್ಮಿಕತೆಯ ಮೂಲಕ ಹೆಚ್ಚು ಸಾಮರಸ್ಯ, ನ್ಯಾಯಯುತ ಮತ್ತು ಪರೋಪಕಾರಿ ಸಮಾಜ ನಿರ್ಮಿಸುವ ಮಾರ್ಗ ತೋರಿದರು ಶ್ರೀ ನಾರಾಯಣ ಗುರು ಜಿ

ಅವರ ಜ್ಞಾನ, ಕರುಣೆ, ಸಮಾನತೆ ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯದ ತತ್ವಗಳು ಭಾರತದ ಶ್ರೇಷ್ಠತೆಯ ಹಾದಿಯಲ್ಲಿ ನಮಗೆ ಸ್ಫೂರ್ತಿ

ಅಯ್ಯಂಕಳಿ ಜಿ ಅವರು ಕೇರಳದಲ್ಲಿ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಗೆ ದಾರಿ ಮಾಡಿಕೊಟ್ಟ ಪ್ರವರ್ತಕ ಸಾಮಾಜಿಕ ಸುಧಾರಕರು

ಪ್ರಕಟಣಾ ದಿನಾಂಕ: 28 AUG 2026 12:05PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಶ್ರೀ ನಾರಾಯಣ ಗುರು ಜಿ ಅವರ ಜಯಂತಿಯ ದಿನವಾದ ಇಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಶ್ರೀ ಅಮಿತ್ ಶಾ ಅವರು ಮಹಾತ್ಮ ಅಯ್ಯಂಕಳಿ ಜಿ ಅವರ ಜಯಂತಿಯ ಅಂಗವಾಗಿ ಇಂದು ಅವರಿಗೂ ಗೌರವ ಸಲ್ಲಿಸಿದ್ದಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಎಕ್ಸ್ ವೇದಿಕೆಯ ಪೋಸ್ಟ್‌ನಲ್ಲಿ, “ಶ್ರೀ ನಾರಾಯಣ ಗುರು ಜಿ ಅವರು ಆಧ್ಯಾತ್ಮಿಕತೆಯ ಮೂಲಕ ಹೆಚ್ಚು ಸಾಮರಸ್ಯ, ನ್ಯಾಯಯುತ ಮತ್ತು ಪರೋಪಕಾರಿ ಸಮಾಜವನ್ನು ನಿರ್ಮಿಸುವ ಮಾರ್ಗವನ್ನು ತೋರಿಸಿದರು. ಅವರ ಜ್ಞಾನ, ಕರುಣೆ, ಸಮಾನತೆ ಮತ್ತು ಆಧ್ಯಾತ್ಮಿಕ ಸ್ವಾತಂತ್ರ್ಯದ ತತ್ವಗಳು ಭಾರತದ ಶ್ರೇಷ್ಠತೆಯ ಹಾದಿಯಲ್ಲಿ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ. ಮಹಾನ್ ಋಷಿಗಳಿಗೆ ಅವರ ಜಯಂತಿಯಂದು ನನ್ನ ಗೌರವ ನಮನಗಳು”ಎಂದು ಹೇಳಿದರು.

ಮತ್ತೊಂದು ಪೋಸ್ಟ್‌ನಲ್ಲಿ ಶ್ರೀ ಅಮಿತ್ ಶಾ ಅವರು “ಮಹಾನ್ ಋಷಿ ಮಹಾತ್ಮ ಅಯ್ಯಂಕಳಿ ಜಿ ಅವರಿಗೆ ಅವರ ಜಯಂತಿಯಾದ ಇಂದು ಅವರಿಗೆ ನಾನು ನಮಿಸುತ್ತೇನೆ. ಅಯ್ಯಂಕಳಿ ಜಿ ಅವರು ಕೇರಳದಲ್ಲಿ ಶಿಕ್ಷಣದ ಮೂಲಕ ಸಾಮಾಜಿಕ ಪರಿವರ್ತನೆಗೆ ದಾರಿ ಮಾಡಿಕೊಟ್ಟ ಮುಂಚೂಣಿ ಸಮಾಜ ಸುಧಾರಕರಾಗಿದ್ದರು. ಅವರು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಏಕೀಕೃತ ಮತ್ತು ಬಲಿಷ್ಠ ಸಮಾಜದ ಅಡಿಪಾಯವನ್ನು ಹಾಕಿದರು. ಅವರ ಮೌಲ್ಯಗಳು ಪ್ರಗತಿಯ ಶಿಖರದತ್ತ ನಮ್ಮ ಹಾದಿಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ.’’

 

*****


(ಪ್ರಕಟಣೆ ಐ.ಡಿ.: 2304105) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Gujarati , Malayalam