ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

27 ರಾಜ್ಯಗಳ ಜೀವವೈವಿಧ್ಯ ಮಂಡಳಿಗಳು, 3 ಕೇಂದ್ರಾಡಳಿತ ಪ್ರದೇಶಗಳ ಜೀವವೈವಿಧ್ಯ ಪರಿಷತ್‌ ಗಳು ಮತ್ತು ಕರ್ನಾಟಕದ ಐಸಿಎಆರ್-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ ಒಟ್ಟಾರೆ ₹2.82 ಕೋಟಿ ಪ್ರವೇಶ ಮತ್ತು ಪ್ರಯೋಜನ ಹಂಚಿಕೆ(ಎ.ಬಿ.ಎಸ್.) ನಿಧಿಯನ್ನು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವು (ಎನ್‌.ಬಿ.ಎ) ಬಿಡುಗಡೆ ಮಾಡಿದೆ

प्रविष्टि तिथि: 22 AUG 2026 12:49PM by PIB Bengaluru

ಭಾರತದ ಜೈವಿಕ ಸಂಪನ್ಮೂಲಗಳ ಬಳಕೆಯಿಂದ ಉಂಟಾಗುವ ಪ್ರವೇಶ ಮತ್ತು ಪ್ರಯೋಜನ ಹಂಚಿಕೆ (ಎ.ಬಿ.ಎಸ್.) ಕಾರ್ಯವಿಧಾನದ ಅಡಿಯಲ್ಲಿ ₹2.82 ಕೋಟಿಗಳನ್ನು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವು (ಎನ್‌.ಬಿ.ಎ) ವಿತರಿಸಿದೆ. ಇದರಲ್ಲಿ ₹2.80 ಕೋಟಿಗಳನ್ನು 27 ರಾಜ್ಯಗಳ ಜೀವವೈವಿಧ್ಯ ಮಂಡಳಿಗಳು (ಎಸ್‌.ಬಿ.ಬಿ.ಗಳು) ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಜೀವವೈವಿಧ್ಯ ಪರಿಷತ್‌ ಗಳಿಗೆ (ಯು.ಟಿ.ಬಿ.ಸಿ.ಗಳು) ಬಿಡುಗಡೆ ಮಾಡಲಾಗಿದೆ, ಹಾಗೂ ಇದರ ಜೊತೆಗೆ ₹2.01 ಲಕ್ಷವನ್ನು ಕರ್ನಾಟಕದ ಐಸಿಎಆರ್-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಸಿಎಆರ್-ಐಐಎಚ್‌ಆರ್) ಗೆ ಬಿಡುಗಡೆ ಮಾಡಲಾಗಿದೆ.

ಎಂಟು ಮಿಶ್ರತಳಿ ಹೂಕೋಸು (ಬ್ರಾಸಿಕಾ ಒಲೆರೇಸಿಯಾ ವರ್. ಬೊಟ್ರಿಟಿಸ್), ಐದು ಮಿಶ್ರತಳಿ ಹಾಟ್ ಪೆಪ್ಪರ್ (ಕ್ಯಾಪ್ಸಿಕಮ್ ಆನ್ಯುಮ್), ಐದು ಮಿಶ್ರತಳಿ ಓಕ್ರಾ (ಅಬೆಲ್‌ಮೋಸ್ಕಸ್ ಎಸ್ಕುಲೆಂಟಸ್) ಮತ್ತು ಆರು ಮಿಶ್ರತಳಿ ಟೊಮೆಟೊ (ಸೋಲನಮ್ ಲೈಕೋಪರ್ಸಿಕಮ್) Cಸಂಬಂಧಿಸಿದ ಆನುವಂಶಿಕ ಸಂಪನ್ಮೂಲಗಳ ಬಳಕೆಗಾಗಿ ಜೈವಿಕ ಸಂಪನ್ಮೂಲಗಳ ಬಳಕೆಯಿಂದ ಉಂಟಾಗುವ ಪ್ರವೇಶ ಮತ್ತು ಪ್ರಯೋಜನ ಹಂಚಿಕೆ (ಎ.ಬಿ.ಎಸ್.) ಕಾರ್ಯವಿಧಾನಗಳಗಾಗಿ ಅಡ್ವಾಂಟಾ ಎಂಟರ್‌ಪ್ರೈಸಸ್ ಲಿಮಿಟೆಡ್ ಸಂಸ್ಥೆಯಿಂದ ( ಈ ಹಿಂದೆ ಯುಪಿಎಲ್ ಲಿಮಿಟೆಡ್ ಹೆಸರಿನ ಸಂಸ್ಥೆಯಾಗಿತ್ತು) ₹2.94 ಕೋಟಿಗಳನ್ನು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವು (ಎನ್‌.ಬಿ.ಎ)  ಪಡೆದಿದೆ.

ನಿರ್ದಿಷ್ಟ ವೈಯಕ್ತಿಕ ರೈತರು, ಸಮುದಾಯಗಳು ಅಥವಾ ಒಂದೇ ಗುರುತಿಸಬಹುದಾದ ಭೌಗೋಳಿಕ ಮೂಲದಂತಹ ಪ್ರಯೋಜನಕಾರಿ ಹಕ್ಕುದಾರರಿಗೆ ಅವುಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಹಾಗಾಗಿ , ಈ ಸಂದರ್ಭದಲ್ಲಿ, ಜೈವಿಕ ಸಂಪನ್ಮೂಲಗಳನ್ನು ಪತ್ತೆಹಚ್ಚಲು ಮತ್ತೊಂದು ಕಂಪನಿಯ ಮೂಲಕ ಯೋಜನೆ ಅನುಷ್ಠಾನ ಮಾಡಲಾಯಿತು

ಹಿಂದೆ, ಅಂತಹ ಸಂದರ್ಭಗಳಲ್ಲಿ ಪ್ರಯೋಜನ ಹಂಚಿಕೆ ಘಟಕವನ್ನು ಹಂಚಿಕೊಳ್ಳಲು / ಬಳಸಲು ಸೂಕ್ತವಾದ ವಿಧಾನವನ್ನು ಶಿಫಾರಸು ಮಾಡಲು ಎನ್‌.ಬಿ.ಎ  ತಜ್ಞರ ಸಮಿತಿಯನ್ನು (ಇಸಿ) ರಚಿಸಿತು ಮತ್ತು ನಂತರ ಇಸಿಯ ಶಿಫಾರಸನ್ನು ಪ್ರಾಧಿಕಾರವು ಅನುಮೋದಿಸಿತು. ಅನುಮೋದಿತ ವಿಧಾನಕ್ಕೆ ಅನುಗುಣವಾಗಿ, ಎನ್‌.ಬಿ.ಎ  ₹2.80 ಕೋಟಿಗಳನ್ನು ವಿತರಿಸಿತು. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಬಂಧಪಟ್ಟ ತೋಟಗಾರಿಕಾ ಬೆಳೆಗಳ ಕೃಷಿಯನ್ನು ಗಣನೆಗೆ ತೆಗೆದುಕೊಂಡು ನಿಧಿ ಹಂಚಿಕೆಯನ್ನು ಮಾಡಲಾಗಿದೆ. ಗುಜರಾತ್, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ಪ್ರಮುಖ ಸ್ವೀಕರಿಸುವ ರಾಜ್ಯಗಳಲ್ಲಿ ಸೇರಿವೆ, ಅತಿದೊಡ್ಡ ಪಾಲುಗಳನ್ನು ಪಡೆದ ಹತ್ತು ರಾಜ್ಯಗಳು ಕೆಳಗಿನಂತಿವೆ:

ಕ್ರ.ಸಂ.

ರಾಜ್ಯ

ಬಿಡುಗಡೆ ಮಾಡಿದ ಮೊತ್ತ

(₹ ಲಕ್ಷಗಳಲ್ಲಿ)

1

ಗುಜರಾತ್

44.59

2

ಪಶ್ಚಿಮ ಬಂಗಾಳ

41.24

3

ಮಧ್ಯಪ್ರದೇಶ

32.73

4

ಒಡಿಶಾ

32.57

5

ಬಿಹಾರ

30.86

6

ಛತ್ತೀಸ್‌ ಗಢ

16.54

7

ಉತ್ತರ ಪ್ರದೇಶ

12.66

8

ಆಂಧ್ರಪ್ರದೇಶ

10.51

9

ತಮಿಳುನಾಡು

10.49

10

ಮಹಾರಾಷ್ಟ್ರ

07.07

11

ಇತರೆ (20 ಎಸ್‌.ಬಿ.ಬಿ.ಗಳು/ಯು.ಟಿ.ಬಿ.ಸಿ.ಗಳು)

40.55

ಎಸ್‌.ಬಿ.ಬಿ.ಗಳು ಮತ್ತು ಯು.ಟಿ.ಬಿ.ಸಿ.ಗಳಿಗೆ ಬಿಡುಗಡೆ ಮಾಡಲಾದ ಹಣವನ್ನು ಚಟುವಟಿಕೆಗಳಿಗೆ ಬಳಸಿಕೊಳ್ಳಬೇಕು, ಇದರಲ್ಲಿ ಜನರ ಜೀವವೈವಿಧ್ಯ ನೋಂದಣಿಗಳ ದಾಖಲೀಕರಣ ಮತ್ತು ನವೀಕರಣ, ಸ್ಥಳದಲ್ಲೇ ಮತ್ತು ಇನ್‌-ಸಿಟು ಸಂರಕ್ಷಣೆ ( ನೈಸರ್ಗಿಕ ವಾಸಿಗಳ ಸಂರಕ್ಷಣೆ) ಎಕ್ಸ್-ಸಿಟು ಸಂರಕ್ಷಣೆ ( ವಂಶನಾಶ ಜೀವವೈವಿಧ್ಯಗಳ ಅವುಗಳ ವಾಸದ ಹೊರಗಡೆ ಸಂರಕ್ಷಣೆ), ಕ್ಷೀಣಿಸಿದ ಪರಿಸರ ವ್ಯವಸ್ಥೆಗಳ ಪುನಃಸ್ಥಾಪನೆ, ಜೀವವೈವಿಧ್ಯ ಪರಂಪರೆಯ ತಾಣಗಳ ಬಲವರ್ಧನೆ, ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಸಾಮರ್ಥ್ಯ ವೃದ್ಧಿ ಮತ್ತು ಸಮುದಾಯ ಜೀವನೋಪಾಯ ವರ್ಧನೆ, ಮತ್ತು ಸ್ವೀಕರಿಸಿದ ಒಂದು ವರ್ಷದೊಳಗೆ ಬಳಕೆಯ ಪ್ರಮಾಣಪತ್ರ ಮತ್ತು ವೆಚ್ಚದ ಹೇಳಿಕೆಯ ವರದಿಯನ್ನು ಸಲ್ಲಿಸಬೇಕು.

ಪ್ರತ್ಯೇಕವಾಗಿ, ಎನ್‌.ಬಿ.ಎ. ಎರಡು ಸೂಕ್ಷ್ಮಜೀವಿಯ ತಳಿಗಳಿಗೆ ಪ್ರವೇಶಕ್ಕಾಗಿ ಎಬಿಎಸ್ ಮೊತ್ತವಾಗಿ ಮುಂಬೈನ ಮೆಸ್ಸರ್ಸ್ ಸುಮಿಟೊಮೊ ಕೆಮಿಕಲ್ ಇಂಡಿಯಾ ಲಿಮಿಟೆಡ್ (ಹಿಂದೆ ಮೆಸ್ಸರ್ಸ್ ಎಕ್ಸೆಲ್ ಕ್ರಾಪ್ ಕೇರ್‌ ಹೆಸರಿನ ಸಂಸ್ಥೆ) ನಿಂದ ₹7.15 ಲಕ್ಷವನ್ನು ಪಡೆದುಕೊಂಡಿದೆ, ಈ ಕಾರ್ಯ ಯೋಜನೆಳೆಂದರೆ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ 1% ಡಬ್ಲ್ಯೂಪಿ (ಸ್ಟ್ರೈನ್ ಐಐಹೆಚ್‌ ಆರ್-ಪಿಎಫ್-2) ಮತ್ತು ಟ್ರೈಕೊಡರ್ಮಾ ಹಾರ್ಜಿಯಾನಮ್ 1% ಡಬ್ಲ್ಯೂಪಿ (ಸ್ಟ್ರೈನ್ ಐಐಹೆಚ್‌ ಆರ್-ಟಿಹೆಚ್-2), ಇವುಗಳನ್ನು ಸಂಶೋಧನೆ ಮತ್ತು ವಾಣಿಜ್ಯ ಬಳಕೆಗಾಗಿ ಕರ್ನಾಟಕದ ಐಸಿಎಆರ್-ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರಲ್ ರಿಸರ್ಚ್ (ಐಸಿಎಆರ್- ಐಐಹೆಚ್‌ ಆರ್) ನಿಂದ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಜೈವಿಕ ಸಂಪನ್ಮೂಲಗಳನ್ನು ಸಾರ್ವಜನಿಕ ಸಂಶೋಧನಾ ಸಂಸ್ಥೆಯಿಂದ ಪಡೆಯಲಾಗಿರುವುದರಿಂದ, ಏಬಿಎಸ್ ಮೊತ್ತದ 30% ಅಂದರೆ ₹2.01 ಲಕ್ಷವನ್ನು ಸಂಬಂಧಪಟ್ಟ ಸಂಸ್ಥೆಗೆ ಐಸಿಎಆರ್ - ಐಐಹೆಚ್‌ ಆರ್ ಗೆ ಎನ್‌.ಬಿ.ಎ. ಜೈವಿಕ ವೈವಿಧ್ಯತೆ ಕಾಯ್ದೆಯ ಸೆಕ್ಷನ್ 27 ರ ಪ್ರಕಾರ ಬಳಸಬೇಕಾದ ವಿಧಾನಗಳಿಗೆ ಅನುಗುಣವಾಗಿ ವಿತರಿಸಲಾಗುತ್ತಿದೆ.

ನಿರ್ವಹಣೆ, ಸಂಶೋಧನೆ ಮತ್ತು ಜೀವವೈವಿಧ್ಯ ಸಮೀಕ್ಷೆ ಕಾರ್ಯ, ವರ್ಗೀಕರಣ ಮತ್ತು ಸಂರಕ್ಷಣೆಯಲ್ಲಿ ಸಾಮರ್ಥ್ಯ ವೃದ್ಧಿ, ಮತ್ತು ಜೈವಿಕ ಸಂಪನ್ಮೂಲಗಳು ಮತ್ತು ಅವುಗಳ ವನ್ಯ ಸಂಬಂಧಿಗಳ ಸ್ಥಳದಲ್ಲೇ ಮತ್ತು ಹೊರಗೆ ಸಂರಕ್ಷಣೆ ಸೇರಿದಂತೆ ಚಟುವಟಿಕೆಗಳಿಗೆ ಸಂಸ್ಥೆಯು ಒಂದು ವರ್ಷದೊಳಗೆ ನಿಧಿಗಳ ಹಣವನ್ನು ಬಳಸಿಕೊಳ್ಳಬೇಕಾಗುತ್ತದೆ. ಈ ವಿತರಣೆಯು ಜೈವಿಕ ವೈವಿಧ್ಯತೆ ಕಾಯ್ದೆ, 2002 ಮತ್ತು ಅದರ ಸಂಬಂಧಿತ ನಿಯಂತ್ರಕ ಚೌಕಟ್ಟಿನ ಅನುಷ್ಠಾನವನ್ನು ಬಲಪಡಿಸಲು ಎನ್‌.ಬಿ.ಎ. ನಿರಂತರ ಪ್ರಯತ್ನಗಳ ಭಾಗವಾಗಿದೆ, ಅದೇ ಸಮಯದಲ್ಲಿ ಭಾರತದ ಜೈವಿಕ ಸಂಪನ್ಮೂಲಗಳ ವಾಣಿಜ್ಯ ಬಳಕೆಯಿಂದ ಉಂಟಾಗುವ ಪ್ರಯೋಜನಗಳನ್ನು ಜೀವವೈವಿಧ್ಯ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗೆ ಸಂಬಂಧಿಸಿದ ರೈತರು, ಸ್ಥಳೀಯ ಸಮುದಾಯಗಳು ಮತ್ತು ಇತರರ ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಕಡೆಗೆ ಹರಿಸಲಾಗಿದೆ ಎಂದು ಖಚಿತಪಡಿಸುತ್ತದೆ.

ಎನ್‌.ಬಿ.ಎ. ಇಲ್ಲಿಯವರೆಗೆ ಬಿಡುಗಡೆ ಮಾಡಿರುವ ಒಟ್ಟು ಏಬಿಎಸ್ ಮೊತ್ತ ₹185 ಕೋಟಿಗಳು (19.34 ದಶಲಕ್ಷ ಯು.ಎಸ್‌ ಡಾಲರ್). ಈ ಉಪಕ್ರಮವು ಜೈವಿಕ ವೈವಿಧ್ಯತೆಯ ಸಮಾವೇಶ (ಸಿಬಿಡಿ) ಮತ್ತು ಪ್ರವೇಶ ಮತ್ತು ಪ್ರಯೋಜನ ಹಂಚಿಕೆಯ ಕುರಿತಾದ ನಗೋಯಾ ಪ್ರೋಟೋಕಾಲ್, ಹಾಗೆಯೇ ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೀವವೈವಿಧ್ಯ ಚೌಕಟ್ಟು (ಕೆಎಂಜಿಬಿಎಫ್), ವಿಶೇಷವಾಗಿ ಟಾರ್ಗೆಟ್ 13 ರ ಅಡಿಯಲ್ಲಿ ಭಾರತದ ಬದ್ಧತೆಗಳಿಗೆ ಕೊಡುಗೆ ನೀಡುತ್ತದೆ, ಇದು ಅನುವಂಶಿಕ (ಜೆನೆಟಿಕ್) ಸಂಪನ್ಮೂಲಗಳ ಬಳಕೆ ಮತ್ತು ಜೆನೆಟಿಕ್ ಸಂಪನ್ಮೂಲಗಳ ಡಿಜಿಟಲ್ ಅನುಕ್ರಮ ಮಾಹಿತಿಯಿಂದ ಉಂಟಾಗುವ ಪ್ರಯೋಜನಗಳ ನ್ಯಾಯಯುತ ಮತ್ತು ಸಮಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಕ್ರಮಗಳನ್ನು ರೂಪಿಸಲು  ಅನ್ವಯವಾಗುತ್ತದೆ.

 

*****


(रिलीज़ आईडी: 2302299) आगंतुक पटल : 18
इस विज्ञप्ति को इन भाषाओं में पढ़ें: Telugu , English , Gujarati , Urdu , हिन्दी , Tamil