ಸಂವಹನ ಸಚಿವಾಲಯ
ದೂರಸಂಪರ್ಕ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಭಾರತ ಮತ್ತು ಬ್ರೆಜಿಲ್ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ
ಪುಣೆಯಲ್ಲಿ ನಡೆದ ಬ್ರಿಕ್ಸ್ ಐಸಿಟಿ ಟ್ರ್ಯಾಕ್ ಸಭೆಯ ಅಂಗವಾಗಿ ಕೇಂದ್ರ ಸಂಪರ್ಕ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅವರ ಬ್ರೆಜಿಲ್ ಸಹವರ್ತಿ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ
प्रविष्टि तिथि:
21 AUG 2026 5:15PM by PIB Bengaluru
ಪುಣೆಯಲ್ಲಿ ನಡೆದ ಬ್ರಿಕ್ಸ್ ಐಸಿಟಿ ಟ್ರ್ಯಾಕ್ ಸಭೆಯ ಅಂಗವಾಗಿ ತಿಳುವಳಿಕಾ ಒಪ್ಪಂದಕ್ಕೆ (ಎಂಒಯು) ಸಹಿ ಹಾಕುವ ಮೂಲಕ, ದೂರಸಂಪರ್ಕ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕ್ಷೇತ್ರದಲ್ಲಿ ತಮ್ಮ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಆಳವಾಗಿಸುವ ಬದ್ಧತೆಯನ್ನು ಭಾರತ ಮತ್ತು ಬ್ರೆಜಿಲ್ ಪುನರುಚ್ಚರಿಸಿವೆ.
ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಮತ್ತು ಫೆಡರೇಟಿವ್ ರಿಪಬ್ಲಿಕ್ ಆಫ್ ಬ್ರೆಜಿಲ್ ನ ಸಂಪರ್ಕ ಸಚಿವರಾದ ಗೌರವಾನ್ವಿತ ಶ್ರೀ ಫ್ರೆಡರಿಕೊ ಡಿ ಸಿಕ್ವೇರಾ ಫಿಲ್ಹೋ ಅವರು ಈ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದರು.


ಈ ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯು ಡಿಜಿಟಲ್ ನಾವೀನ್ಯತೆಯನ್ನು ಮುನ್ನಡೆಸುವಲ್ಲಿ, ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಮತ್ತು ದೂರಸಂಪರ್ಕ ಹಾಗೂ ಐಸಿಟಿಗಳ ಕಾರ್ಯತಂತ್ರದ ಮತ್ತು ಉದಯೋನ್ಮುಖ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರವನ್ನು ಉತ್ತೇಜಿಸುವಲ್ಲಿ ಭಾರತ ಮತ್ತು ಬ್ರೆಜಿಲ್ ನ ಅನ್ಯೋನ್ಯವಾದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ.


ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ, “ಈ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿರುವುದು ಭಾರತ-ಬ್ರೆಜಿಲ್ ಸಹಕಾರವನ್ನು ಮತ್ತಷ್ಟು ಆಳವಾಗಿಸುತ್ತದೆ ಮತ್ತು ಸಾರ್ವತ್ರಿಕ ಸಂಪರ್ಕ, ಸೈಬರ್ ಭದ್ರತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಉದಯೋನ್ಮುಖ ತಂತ್ರಜ್ಞಾನಗಳು, ಸಾಮರ್ಥ್ಯ ವೃದ್ಧಿ ಮತ್ತು ಅತ್ಯುತ್ತಮ ಉಪಕ್ರಮಗಳ ವಿನಿಮಯದಲ್ಲಿ ಹೆಚ್ಚಿನ ಸಹಯೋಗಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಖಚಿತ ವ್ಯಕ್ತಪಡಿಸುತ್ತೇನೆ” ಎಂದು ಹೇಳಿದರು.
ಸಮಗ್ರ ಐಸಿಟಿ ಸಹಕಾರಕ್ಕಾಗಿ ಚೌಕಟ್ಟು
ಈ ತಿಳುವಳಿಕಾ ಒಪ್ಪಂದವು ದೂರಸಂಪರ್ಕ ಮತ್ತು ಐಸಿಟಿಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಒಂದು ಚೌಕಟ್ಟನ್ನು ಸ್ಥಾಪಿಸುತ್ತದೆ. ಜೊತೆಗೆ ಸಮಾನತೆ, ಪರಸ್ಪರ ಲಾಭ ಮತ್ತು ಪರಸ್ಪರ ಗೌರವದ ತತ್ವಗಳ ಆಧಾರದ ಮೇಲೆ ಪರಸ್ಪರ ಪ್ರಯೋಜನಕಾರಿ ಅವಕಾಶಗಳನ್ನು ಹುಡುಕಾಡುವಾಗ ಮಾಹಿತಿ, ಅನುಭವಗಳು ಮತ್ತು ಅತ್ಯುತ್ತಮ ಉಪಕ್ರಮಗಳ ನಿಯಮಿತ ವಿನಿಮಯವನ್ನು ಉತ್ತೇಜಿಸಲು ಶ್ರಮಿಸುತ್ತದೆ.
ತಿಳುವಳಿಕಾ ಒಪ್ಪಂದದ ಅಡಿಯಲ್ಲಿ ಉದ್ದೇಶಿಸಲಾದ ಸಹಕಾರವು ದೂರಸಂಪರ್ಕ ನೀತಿಗಳು ಮತ್ತು ನಿಯಮಗಳು, ಕೃತಕ ಬುದ್ಧಿಮತ್ತೆ, 5ಜಿ ಮತ್ತು 6ಜಿ, ಓಪನ್ ರಾನ್ , ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಡೈರೆಕ್ಟ್-ಟು-ಡಿವೈಸ್ (ಡಿ2ಡಿ) ಕನೆಕ್ಟಿವಿಟಿ, ಲೋ ಅರ್ಥ್ ಆರ್ಬಿಟ್ (ಎಲ್ ಇ ಒ) ಉಪಗ್ರಹಗಳು ಮತ್ತು ನಾನ್-ಟೆರೆಸ್ಟ್ರಿಯಲ್ ನೆಟ್ ವರ್ಕ್ ಗಳು (ಎನ್ ಟಿ ಎನ್ ), ಸ್ಪೆಕ್ಟ್ರಮ್ ಮತ್ತು ಉಪಗ್ರಹ/ಕಕ್ಷೆ ನಿರ್ವಹಣೆ, ಡಿಜಿಟಲ್ ಮೂಲಸೌಕರ್ಯ, ಆಪ್ಟಿಕಲ್ ಫೈಬರ್ ಮತ್ತು ಜಲಾಂತರ್ಗಾಮಿ ಕೇಬಲ್ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಆಯಕಟ್ಟಿನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಒಳಗೊಂಡಿದೆ.
ಸೈಬರ್ ಭದ್ರತೆ, ಸಾರ್ವತ್ರಿಕ ಮತ್ತು ಅರ್ಥಪೂರ್ಣ ಸಂಪರ್ಕ, ಡಿಜಿಟಲ್ ಸೇರ್ಪಡೆ, ಗ್ರಾಹಕ ರಕ್ಷಣೆ, ಖಾಸಗಿ ನೆಟ್ವರ್ಕ್ಗಳು, ಡಿಜಿಟಲ್ ರೂಪಾಂತರ ಮತ್ತು ಐಸಿಟಿಗಳ ಪರಿಸರ ಪ್ರಭಾವವನ್ನು ಕಡಿಮೆ ಮಾಡುವಂತಹ ಪ್ರಮುಖ ಕ್ಷೇತ್ರಗಳನ್ನು ಸಹ ಈ ಚೌಕಟ್ಟು ಒಳಗೊಂಡಿದೆ.
ಈ ಸಹಿಯು ದೂರಸಂಪರ್ಕ ಮತ್ತು ಐಸಿಟಿಗಳಲ್ಲಿ ಭಾರತ-ಬ್ರೆಜಿಲ್ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ಉದಯೋನ್ಮುಖ ತಂತ್ರಜ್ಞಾನಗಳು, ಡಿಜಿಟಲ್ ಮೂಲಸೌಕರ್ಯ, ಸೈಬರ್ ಭದ್ರತೆ, ಸಂಪರ್ಕ, ಸಾಮರ್ಥ್ಯ ವೃದ್ಧಿ ಮತ್ತು ಅಂತರರಾಷ್ಟ್ರೀಯ ಸಹಕಾರದಲ್ಲಿ ಪಾಲುದಾರಿಕೆಗಾಗಿ ಸಮಗ್ರ ಮತ್ತು ಭವಿಷ್ಯದ ದೃಷ್ಟಿಕೋನದ ಚೌಕಟ್ಟನ್ನು ಒದಗಿಸುತ್ತದೆ.
Follow DoT Handles for more: -
X - https://x.com/DoT_India
Insta- https://www.instagram.com/department_of_telecom?igsh=MXUxbHFjd3llZTU0YQ==
Fb - https://www.facebook.com/DoTIndia
Youtube: https://youtube.com/@departmentoftelecom?si=DALnhYkt89U5jAaa
*****
(रिलीज़ आईडी: 2302078)
आगंतुक पटल : 21