ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ವಾಭಿಮಾನ, ಧೈರ್ಯ ಮತ್ತು ಘನತೆಯ ಮಹತ್ವವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 18 AUG 2026 9:11AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಭಿಮಾನ, ಧೈರ್ಯ ಮತ್ತು ಘನತೆಯಯಿಂದ ಬದುಕುವ ಮಹತ್ವವನ್ನು ಉಲ್ಲೇಖಿಸುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ. “ನಿಜವಾದ ಶೌರ್ಯ ಮತ್ತು ಶಕ್ತಿಯು, ಯಾವುದೇ ಸಂದರ್ಭದಲ್ಲೂ ರಾಜಿ ಮಾಡಿಕೊಳ್ಳದೆ ಒಬ್ಬರ ತತ್ವಗಳು ಮತ್ತು ಮೌಲ್ಯಗಳಲ್ಲಿ ದೃಢವಾಗಿ ಉಳಿಯುವುದರಲ್ಲಿದೆ” ಎಂದು ಹೇಳಿದರು.

ಪ್ರಧಾನಮಂತ್ರಿಯವರು ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ-

“उद्यच्छेदेव न नमेदुद्यमो ह्येव पौरुषम्।

अप्यपर्वणि भज्येत न नमत्वेव कस्यचित्॥”
 
ವ್ಯಕ್ತಿಯು ಯಾವಾಗಲೂ ಸ್ವಾಭಿಮಾನ, ಧೈರ್ಯ ಮತ್ತು ಘನತೆಯಿಂದ ಬದುಕಬೇಕು ಎಂದು ಈ ಸುಭಾಷಿತವು ತಿಳಿಸುತ್ತದೆ. ನಿಜವಾದ ಶೌರ್ಯ ಮತ್ತು ಶಕ್ತಿಯು, ಯಾವುದೇ ಸಂದರ್ಭಗಳಲ್ಲಿ ಒಬ್ಬರ ತತ್ವಗಳು ಮತ್ತು ಮೌಲ್ಯಗಳನ್ನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ, ಬದಲಾಗಿ, ಒಬ್ಬರ ಆದರ್ಶಗಳಲ್ಲಿ ಸತ್ಯ, ತಾಳ್ಮೆ ಮತ್ತು ಸ್ವಾಭಿಮಾನದೊಂದಿಗೆ ದೃಢವಾಗಿ ಉಳಿಯುತ್ತದೆ.

ಎಕ್ಸ್ ತಾಣದಲ್ಲಿ ಪ್ರಧಾನಮಂತ್ರಿಯವರು ಹೀಗೆ ಬರೆದಿದ್ದಾರೆ;

“उद्यच्छेदेव न नमेदुद्यमो ह्येव पौरुषम्।

अप्यपर्वणि भज्येत न नमत्वेव कस्यचित्॥”

 

 

*****


(ಪ್ರಕಟಣೆ ಐ.ಡಿ.: 2301479) ವಿಸಿಟರ್ ಕೌಂಟರ್ : 44