ಪ್ರಧಾನ ಮಂತ್ರಿಯವರ ಕಛೇರಿ
ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದ ರಾಷ್ಟ್ರಪತಿಯವರ ಭಾಷಣವು ರಾಷ್ಟ್ರದ ಶಕ್ತಿಯ ಪ್ರತಿಬಿಂಬವಾಗಿದೆ ಮತ್ತು ವಿಕಸಿತ ಭಾರತಕ್ಕಾಗಿ ನವೀನ ದೃಢಸಂಕಲ್ಪವನ್ನು ಪ್ರೇರೇಪಿಸಿದೆ: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
14 AUG 2026 8:44PM by PIB Bengaluru
ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣವು ಪ್ರೇರಣಾದಾಯಕ ಮತ್ತು ಚಿಂತನಶೀಲ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ರಾಷ್ಟ್ರಪತಿಯವರ ಆಲೋಚನೆಗಳು ನಮ್ಮ ರಾಷ್ಟ್ರದ ಶಕ್ತಿ ಮತ್ತು ಪ್ರತಿಯೊಬ್ಬ ಭಾರತೀಯನ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ವಿಕಸಿತ ಭಾರತಕ್ಕಾಗಿ ನವೀನ ದೃಢಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಲು ಅವರ ಸಂದೇಶ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
"ಸ್ವಾತಂತ್ರ್ಯೋತ್ಸವದ ಮುನ್ನಾದಿನದಂದು ರಾಷ್ಟ್ರಪತಿಯವರ ಪ್ರೇರಣಾದಾಯಕ ಮತ್ತು ಚಿಂತನಶೀಲ ಭಾಷಣ.
ಅವರ ಆಲೋಚನೆಗಳು ನಮ್ಮ ರಾಷ್ಟ್ರದ ಶಕ್ತಿ ಮತ್ತು ಪ್ರತಿಯೊಬ್ಬ ಭಾರತೀಯರ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ.
ವಿಕಸಿತ ಭಾರತಕ್ಕಾಗಿ ನವೀನ ದೃಢಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಲು ಅವರ ಸಂದೇಶ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ.
@rashtrapatibhvn"
*****
(ಪ್ರಕಟಣೆ ಐ.ಡಿ.: 2300375)
ವಿಸಿಟರ್ ಕೌಂಟರ್ : 66
ಪ್ರಕಟಣೆಯನ್ನು ಇದರಲ್ಲಿ ಓದಿ:
Punjabi
,
Gujarati
,
Tamil
,
Malayalam
,
Bengali
,
Manipuri
,
Assamese
,
Odia
,
English
,
Urdu
,
हिन्दी
,
Telugu