ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಒಂದು ದಶಕದಲ್ಲಿ 25 ಕೋಟಿಯಿಂದ 100 ಕೋಟಿಗೆ: ಭಾರತದ ದಾಖಲೆಯ ಸಾಮಾಜಿಕ ಭದ್ರತಾ ವಿಸ್ತರಣೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಲ್ಲೇಖಿಸಿದ್ದಾರೆ
ಕಳೆದ ಒಂದು ದಶಕದಲ್ಲಿ ಯುವಕರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಯ ಹೊಸ ಮಾರ್ಗಗಳು ಲಭ್ಯವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು
प्रविष्टि तिथि:
15 AUG 2026 5:53PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೆಂಪು ಕೋಟೆಯ ಪ್ರಾಕಾರದಿಂದ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಭಾರತದ ಸಾಮಾಜಿಕ ಭದ್ರತಾ ವ್ಯಾಪ್ತಿಯಲ್ಲಿನ ಅಭೂತಪೂರ್ವ ವಿಸ್ತರಣೆಯನ್ನು ಉಲ್ಲೇಖಿಸಿದರು, 2014 ಕ್ಕಿಂತ ಮೊದಲು ಸಾಮಾಜಿಕ ಭದ್ರತಾ ವ್ಯಾಪ್ತಿಯಲ್ಲಿದ್ದ 25 ಕೋಟಿ ಇದ್ ಜನರ ಸಂಖ್ಯೆಯು ಒಂದು ದಶಕದೊಳಗೆ 100 ಕೋಟಿಗೆ ಏರಿದೆ ಎಂದು ತಿಳಿಸಿದರು .
ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವು ಕೊನೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಉದ್ದೇಶ ಈಡೇರುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಸಾಮಾಜಿಕ ಭದ್ರತಾ ವ್ಯಾಪ್ತಿಯ ವಿಸ್ತರಣೆಯನ್ನು ಒತ್ತಿ ಹೇಳಿದ ಅವರು, “2014 ಕ್ಕಿಂತ ಮೊದಲು, ಕೇವಲ 25 ಕೋಟಿ ಜನರು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಹೊಂದಿದ್ದರು. ಅಂದರೆ, ಕಳೆದ 5-7 ದಶಕಗಳಲ್ಲಿ ದೇಶದಾದ್ಯಂತ ಸಾಮಾಜಿಕ ಭದ್ರತಾ ವ್ಯಾಪ್ತಿಯ ಜನರು ಸಂಖ್ಯೆ ಕೇವಲ 25 ಕೋಟಿ ಮಾತ್ರ ಇತ್ತು; ನಾವು ಒಂದು ದಶಕದೊಳಗೆ 100 ಕೋಟಿ ದೇಶವಾಸಿಗಳಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಒದಗಿಸಿದ್ದೇವೆ.” ಎಂದು ಹೇಳಿದರು
ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕ್ರಮಗಳ ಮೂಲಕ ಕುಟುಂಬಗಳಿಗೆ ತಲುಪುವ ಪ್ರಯೋಜನಗಳ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಆಯುಷ್ಮಾನ್ ಭಾರತ್ ಯೋಜನೆಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು, ಇದರ ಅಡಿಯಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ₹5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು
ಕಳೆದ ದಶಕದಲ್ಲಿ ಯುವಕರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಯ ಹೊಸ ಮಾರ್ಗಗಳನ್ನು ಸೃಷ್ಟಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರಧಾನಮಂತ್ರಿ ವಿವರಿಸಿದರು. ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮವು 2.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳ ಬೆಳವಣಿಗೆಗೆ ಅನುವು ಮಾಡಿಕೊಟ್ಟಿದೆ, ಯುವ ಉದ್ಯಮಿಗಳು ತಮಗಾಗಿ ಅವಕಾಶಗಳನ್ನು ಸೃಷ್ಟಿಸುವುದಲ್ಲದೆ ಇತರರಿಗೂ ಉದ್ಯೋಗವನ್ನು ಸೃಷ್ಟಿಸುತ್ತಿದ್ದಾರೆ ಎಂದು ಅವರು ಗಮನಿಸಿದರು. ₹1 ಲಕ್ಷ ಕೋಟಿ ನಾವೀನ್ಯತೆ ನಿಧಿ, ಕೌಶಲ್ಯ ಭಾರತ, ಡಿಜಿಟಲ್ ಇಂಡಿಯಾ, ಬಾಹ್ಯಾಕಾಶ ಮತ್ತು ವಾಯುಯಾನ ಕ್ಷೇತ್ರಗಳ ತೆರೆಯುವಿಕೆ ಮತ್ತು ರಾಷ್ಟ್ರೀಯ ಡ್ರೋನ್ ನೀತಿಯು ಉದ್ಯೋಗ, ಕೌಶಲ್ಯ ಮತ್ತು ಉದ್ಯಮಶೀಲತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವಲ್ಲಿ ಪಾತ್ರವನ್ನು ಅವರು ಮತ್ತಷ್ಟು ಒತ್ತಿ ಹೇಳಿದರು. ವಿಮಾನ ನಿಲ್ದಾಣಗಳ ವಿಸ್ತರಣೆ, ಹೊಸ ವಾಯು ಮಾರ್ಗಗಳು, ವಿಮಾನ ತಯಾರಿಕೆ, ನಿರ್ವಹಣೆ ಮತ್ತು ಕೂಲಂಕಷ ಪರೀಕ್ಷೆಯು ಕೌಶಲ್ಯಪೂರ್ಣ ಕೆಲಸಗಾರರಿಗೆ ಉದ್ಯೋಗವನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಅಭಿವೃದ್ಧಿಯ ಪ್ರಯೋಜನಗಳು ಕೊನೆಯ ವ್ಯಕ್ತಿಗೆ ತಲುಪುವಂತೆ ನೋಡಿಕೊಳ್ಳುವುದು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಪೂರಕವಾಗಿದೆ ಹಾಗೂ ಕೇಂದ್ರವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದರು.
*****
(रिलीज़ आईडी: 2300225)
आगंतुक पटल : 9