ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಹಾತ್ಮ ಗಾಂಧಿ ಅವರಿಗೆ ರಾಜ್‌ ಘಾಟ್‌ ನಲ್ಲಿ ಪ್ರಧಾನಮಂತ್ರಿ ಗೌರವ ನಮನ

प्रविष्टि तिथि: 15 AUG 2026 10:12AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್‌ ಘಾಟ್‌ ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು ಮತ್ತು ರಾಷ್ಟ್ರವು ಅವರ ಮುನ್ನೋಟ ಮತ್ತು ಕಾರ್ಯಗಳಿಂದ ಸದಾ ಪ್ರೇರಣೆ ಪಡೆಯುತ್ತಲೇ ಇರಲಿದೆ ಎಂದು ಒತ್ತಿ ಹೇಳಿದರು. 

ಪ್ರತಿಯೊಬ್ಬ ಭಾರತೀಯನ ಪ್ರಗತಿಗಾಗಿ ಹಾಗೂ ರಾಷ್ಟ್ರವನ್ನು ಪ್ರಗತಿಪರ ಮತ್ತು ಸಮೃದ್ಧವಾಗಿಸಲು ಶ್ರಮಿಸುವ ಬದ್ಧತೆಯನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದ್ದಾರೆ.

ಪ್ರಧಾನಮಂತ್ರಿಯವರು ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

"ಮಹಾತ್ಮ ಗಾಂಧಿಯವರಿಗೆ ಇಂದು ಬೆಳಗ್ಗೆ ರಾಜ್‌ ಘಾಟ್‌ ನಲ್ಲಿ ಗೌರವ ನಮನ ಸಲ್ಲಿಸಿದೆ. ನಾವು ಅವರ ದೃಷ್ಟಿಕೋನ ಮತ್ತು ಕಾರ್ಯದಿಂದ ಸ್ಫೂರ್ತಿ ಪಡೆಯುತ್ತಲೇ ಇರುತ್ತೇವೆ. ಪ್ರತಿಯೊಬ್ಬ ಭಾರತೀಯನ ಪ್ರಗತಿಗಾಗಿ ಹಾಗೂ ನಮ್ಮ ರಾಷ್ಟ್ರವನ್ನು ಪ್ರಗತಿಪರ ಮತ್ತು ಸಮೃದ್ಧವಾಗಿಸಲು ನಾವು ಶ್ರಮಿಸುತ್ತಲೇ ಇರುತ್ತೇವೆ.”

 

*****


(रिलीज़ आईडी: 2299811) आगंतुक पटल : 12
इस विज्ञप्ति को इन भाषाओं में पढ़ें: Urdu , English , Marathi , हिन्दी , Manipuri , Bengali , Assamese , Gujarati , Odia , Tamil , Telugu , Malayalam