ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾಮನ್‌ ವೆಲ್ತ್ ಕ್ರೀಡಾಕೂಟ 2026ರ ಪದಕ ವಿಜೇತರಿಗೆ ಪ್ರಧಾನಮಂತ್ರಿ ಅವರಿಂದ ಆತಿಥ್ಯ

ಪ್ರಕಟಣಾ ದಿನಾಂಕ: 09 AUG 2026 10:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲೋಕ ಕಲ್ಯಾಣ ಮಾರ್ಗದ 7ರ ತಮ್ಮ ಅಧಿಕೃತ ನಿವಾಸದಲ್ಲಿ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಪದಕ ವಿಜೇತರಿಗೆ ಆತಿಥ್ಯ ನೀಡಿದರು. ಶ್ರೀ ಮೋದಿ ಅವರು ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು ಮತ್ತು ಕ್ರೀಡಾಕೂಟದ ಅನುಭವಗಳನ್ನು ಆಲಿಸಿದರು.

ಕ್ರೀಡಾಪಟುಗಳ ಸಾಧನೆಯು ಇಡೀ ದೇಶಕ್ಕೆ ಅಪಾರ ಹೆಮ್ಮೆಯ ಸೆಲೆಯಾಗಿದ್ದು, ಅನೇಕ ಯುವಜನರು ಕ್ರೀಡೆಯಲ್ಲಿ ತೊಡಗಲು ಸ್ಫೂರ್ತಿ ನೀಡಲಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.‌

ಶ್ರೀ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: 

ಕಾಮನ್‌ ವೆಲ್ತ್ ಕ್ರೀಡಾಕೂಟ 2026ರ ನಮ್ಮ ಅತ್ಯುತ್ತಮ ಪದಕ ವಿಜೇತರಿಗೆ 7, ಲೋಕ ಕಲ್ಯಾಣ್ ಮಾರ್ಗದಲ್ಲಿ ಆತಿಥ್ಯ ನೀಡಲು ಹರ್ಷವಾಯಿತು. ಕ್ರೀಡಾಕೂಟದಲ್ಲಿನ ಅವರ ಅನುಭವಗಳ ಬಗ್ಗೆ ಆಲಿಸಿದೆ.

ಪ್ರತಿಯೊಬ್ಬರೂ ತಮ್ಮ ಅಸಾಧಾರಣ ಪ್ರದರ್ಶನದ ಮೂಲಕ ನಮ್ಮ ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರ ಯಶಸ್ಸು ಅನೇಕ ಯುವಜನರಿಗೆ ಪ್ರೇರಣೆಯಾಗಲಿದೆ.

 

*****


(ಪ್ರಕಟಣೆ ಐ.ಡಿ.: 2297045) ವಿಸಿಟರ್ ಕೌಂಟರ್ : 89
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , Malayalam , Bengali , Odia , English , Urdu , हिन्दी , Marathi , Assamese , Manipuri , Punjabi , Gujarati