ಹಣಕಾಸು ಸಚಿವಾಲಯ
ಜೂನ್ 2026 (FY 2026-27) ವರೆಗಿನ ಭಾರತ ಸರ್ಕಾರದ ಖಾತೆಗಳ ಮಾಸಿಕ ವಿಮರ್ಶೆ
प्रविष्टि तिथि:
05 AUG 2026 4:34PM by PIB Bengaluru
ಜೂನ್, 2026 ರವರೆಗಿನ ಭಾರತ ಸರ್ಕಾರದ ಮಾಸಿಕ ಖಾತೆಗಳನ್ನು ಕ್ರೋಢೀಕರಿಸಿ ವರದಿಗಳನ್ನು ಪ್ರಕಟಿಸಲಾಗಿದೆ. ಮುಖ್ಯಾಂಶಗಳನ್ನು ಕೆಳಗೆ ನೀಡಲಾಗಿದೆ:-
ಜೂನ್, 2026 ರವರೆಗೆ ಭಾರತ ಸರ್ಕಾರವು ₹10,49,243 ಕೋಟಿ (ಒಟ್ಟು ರಶೀದಿಗಳ ಅನುಗುಣವಾದ BE 2026-27 ರ 28.7%) ಸ್ವೀಕರಿಸಿದೆ, ಇದರಲ್ಲಿ ₹6,36,576 ಕೋಟಿ ತೆರಿಗೆ ಆದಾಯ, (ಕೇಂದ್ರಕ್ಕೆ ನಿವ್ವಳ), ₹3,77,664 ಕೋಟಿ ತೆರಿಗೆಯೇತರ ಆದಾಯ ಮತ್ತು ₹35,003 ಕೋಟಿ ಸಾಲದೇತರ ಬಂಡವಾಳ ರಶೀದಿಗಳು ಸೇರಿವೆ. ಈ ಅವಧಿಯಲ್ಲಿ ಭಾರತ ಸರ್ಕಾರವು ₹2,63,336 ಕೋಟಿಯನ್ನು ರಾಜ್ಯ ಸರ್ಕಾರಗಳಿಗೆ ತೆರಿಗೆಗಳ ಪಾಲನ್ನು ಹಂಚಿಕೆಯಾಗಿ ವರ್ಗಾಯಿಸಿದೆ, ಇದು ಹಿಂದಿನ ವರ್ಷಕ್ಕಿಂತ ₹63,605 ಕೋಟಿ ಕಡಿಮೆಯಾಗಿದೆ.

ಭಾರತ ಸರ್ಕಾರವು ಮಾಡಿದ ಒಟ್ಟು ವೆಚ್ಚ ₹13,57,076 ಕೋಟಿ (2026-27ರ ಬಜೆಟ್ ಅಂದಾಜು ಮೊತ್ತದ 25.4%), ಇದರಲ್ಲಿ ₹10,16,818 ಕೋಟಿ ಕಂದಾಯ ಖಾತೆಯಲ್ಲಿ ಮತ್ತು ₹3,40,258 ಕೋಟಿ ಬಂಡವಾಳ ಖಾತೆಯಲ್ಲಿದೆ. ಒಟ್ಟು ಕಂದಾಯ ವೆಚ್ಚದಲ್ಲಿ ₹3,46,414 ಕೋಟಿ ಬಡ್ಡಿ ಪಾವತಿಗಳಿಗೆ ಮತ್ತು ₹1,14,812 ಕೋಟಿ ಪ್ರಮುಖ ಸಬ್ಸಿಡಿಗಳು ಸೇರಿದೆ.
*****
(रिलीज़ आईडी: 2294939)
आगंतुक पटल : 14