ಪ್ರಧಾನ ಮಂತ್ರಿಯವರ ಕಛೇರಿ
ಮಹಿಳೆಯರ 51 ಕೆಜಿ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಸಾಕ್ಷಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
प्रविष्टि तिथि:
02 AUG 2026 12:54AM by PIB Bengaluru
ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 51 ಕೆ.ಜಿ. ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ಸಾಕ್ಷಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಸಾಕ್ಷಿ ತೋರಿದ ಪ್ರಭಾವಶಾಲಿ ಪ್ರದರ್ಶನ ಹಾಗೂ ನಿರ್ಣಾಯಕ ಗೆಲುವನ್ನು ಶ್ಲಾಘಿಸಿದ ಪ್ರಧಾನಮಂತ್ರಿ.
ಮುಂದಿನ ದಿನಗಳಲ್ಲಿಯೂ ಅವರು ಇದೇ ರೀತಿಯ ಯಶಸ್ಸು ಸಾಧಿಸಿ ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡಲಿ ಎಂದು ಪ್ರಧಾನಮಂತ್ರಿ ಹಾರೈಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಶ್ರೀ ಮೋದಿ ಹೀಗೆ ಬರೆದಿದ್ದಾರೆ:
ಮಹಿಳೆಯರ 51 ಕೆ.ಜಿ. ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸಾಕ್ಷಿಯಿಂದ ಪ್ರತಿಷ್ಠಿತ ಚಿನ್ನದ ಪದಕ! ಅದ್ಭುತ ಪ್ರದರ್ಶನ ಮತ್ತು ನಿರ್ಣಾಯಕ ಗೆಲುವು ಸಾಧಿಸಿದ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರು ಮುಂದೆಯೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುತ್ತಿರಲಿ!
#CWG2026”
*****
(रिलीज़ आईडी: 2293367)
आगंतुक पटल : 4