ಪ್ರಧಾನ ಮಂತ್ರಿಯವರ ಕಛೇರಿ
ಪುರುಷರ ಶಾಟ್ ಪುಟ್ ಎಫ್ 57 ನಲ್ಲಿ ಬೆಳ್ಳಿ ಪದಕ ಗೆದ್ದ ಶುಭಂ ಜುಯಾಲ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
02 AUG 2026 12:50AM by PIB Bengaluru
ಗ್ಲಾಸ್ಗೊ ಕಾಮನ್ ವೆಲ್ತ್ ಕ್ರೀಡಾಕೂಟ 2026 ರ ಪುರುಷರ ಶಾಟ್ ಪುಟ್ ಎಫ್ 57 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಶುಭಂ ಜುಯಾಲ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಶುಭಂ ಜುಯಾಲ್ ಅವರ ಶಕ್ತಿಯುತ ತಂತ್ರ ಮತ್ತು ಕ್ರೀಡೆಗೆ ಬದ್ಧತೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.
ಈ ಸಾಧನೆಯು ತಮ್ಮನ್ನು ಇನ್ನೂ ಹೆಚ್ಚಿನ ಸಾಧನೆಗಳತ್ತ ಮುನ್ನಡೆಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಶ್ರೀ ನರೇಂದ್ರ ಮೋದಿ ಅವರು, ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಸಿದರು.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;
"ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಶಾಟ್ ಪುಟ್ ಎಫ್ 57 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಶುಭಂ ಜುಯಾಲ್ ಅವರ ಬಗ್ಗೆ ಅಪಾರ ಹೆಮ್ಮೆಪಡುತ್ತೇನೆ. ಅವರ ಪ್ರಬಲ ತಂತ್ರ ಮತ್ತು ಕ್ರೀಡೆಯ ಬಗೆಗಿನ ಬದ್ಧತೆ ಶ್ಲಾಘನೀಯ. ಈ ಸಾಧನೆಯು ಅವರ ನಂತರದ ಪ್ರಯತ್ನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳತ್ತ ಅವರನ್ನು ಮುನ್ನಡೆಸಲಿ.
#CWG2026"
*****
(ಪ್ರಕಟಣೆ ಐ.ಡಿ.: 2293346)
ವಿಸಿಟರ್ ಕೌಂಟರ್ : 45
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam