ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ತಮಿಳುನಾಡಿನಲ್ಲಿ ಪ.ಜಾ, ಒಬಿಸಿ, ಹಿರಿಯ ನಾಗರಿಕರು ಮತ್ತು ವಿಶೇಷಚೇತನ ವ್ಯಕ್ತಿಗಳಿಗೆ ಕಲ್ಯಾಣ ಮತ್ತು ಸಬಲೀಕರಣ ಉಪಕ್ರಮಗಳನ್ನು ವಿಸ್ತರಿಸಿದ ಕೇಂದ್ರ ಸರ್ಕಾರ


2025-26ರಲ್ಲಿ ಸುಮಾರು 9.67 ಲಕ್ಷ ಎಸ್‌ಸಿ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಪಡೆದಿದ್ದಾರೆ; 2024-25ರಲ್ಲಿ 8.75 ಲಕ್ಷಕ್ಕೂ ಅಧಿಕ ಒಬಿಸಿ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನದ ವ್ಯಾಪ್ತಿಗೆ ಸೇರ್ಪಡೆ

प्रविष्टि तिथि: 29 JUL 2026 6:34PM by PIB Bengaluru

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಜಾರಿಗೆ ತಂದಿರುವ ವ್ಯಾಪಕ ಶ್ರೇಣಿಯ ಪ್ರಮುಖ ಯೋಜನೆಗಳ ಮೂಲಕ ತಮಿಳುನಾಡಿನಲ್ಲಿ ಪರಿಶಿಷ್ಟ ಜಾತಿಗಳು (ಎಸ್‌ಸಿ), ಇತರ ಹಿಂದುಳಿದ ವರ್ಗಗಳು (ಒಬಿಸಿ), ಹಿರಿಯ ನಾಗರಿಕರು ಮತ್ತು ವಿಶೇಷಚೇತನ ವ್ಯಕ್ತಿಗಳ (ಪಿಡಬ್ಲ್ಯೂಡಿ) ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವನ್ನು ಬಲಪಡಿಸುವುದನ್ನು ಮುಂದುವರೆಸಿದೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಶ್ರೀ ರಾಮದಾಸ್ ಅಠಾವಳೆ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ಪರಿಶಿಷ್ಟ ಜಾತಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನದಡಿಯಲ್ಲಿ, ಫಲಾನುಭವಿಗಳ ಸಂಖ್ಯೆ 2023-24 ರಲ್ಲಿ 6,43,761 ರಿಂದ 2024-25 ರಲ್ಲಿ 9,34,793 ಕ್ಕೆ ಮತ್ತು 2025-26 ರಲ್ಲಿ 9,66,840 ಕ್ಕೆ ಏರಿದೆ ಎಂದು ಸಚಿವರು ಮಾಹಿತಿ ನೀಡಿದರು. ಅದೇ ರೀತಿ, ಎಸ್‌ಸಿ ಮತ್ತು ಇತರರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವು 2023-24 ರಲ್ಲಿ 3,35,642 ವಿದ್ಯಾರ್ಥಿಗಳು, 2024-25 ರಲ್ಲಿ 5,21,124 ವಿದ್ಯಾರ್ಥಿಗಳು ಮತ್ತು 2025-26 ರಲ್ಲಿ 5,82,684 ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡಿದೆ ಎಂದರು.

ಪ್ರಧಾನ ಮಂತ್ರಿ ಅನುಸೂಚಿತ ಜಾತಿ ಅಭ್ಯುದಯ ಯೋಜನೆ (PM-AJAY) ಅಡಿಯಲ್ಲಿ, ಫಲಾನುಭವಿಗಳ ಸಂಖ್ಯೆ 2023-24 ರಲ್ಲಿ 507 ರಿಂದ 2024-25 ರಲ್ಲಿ 894 ಕ್ಕೆ ಏರಿತು, ಆದರೆ 2025-26 ರಲ್ಲಿ 666 ಫಲಾನುಭವಿಗಳ ಸೇರ್ಪಡೆಯಾಗಿದೆ.

ವಸತಿ ಶಿಕ್ಷಣಕ್ಕಾಗಿ ಶ್ರೀಷ್ಟಾ ಯೋಜನೆಯು 2023-24ರಲ್ಲಿ 238 ವಿದ್ಯಾರ್ಥಿಗಳಿಗೆ, 2024-25ರಲ್ಲಿ 312 ವಿದ್ಯಾರ್ಥಿಗಳಿಗೆ ಮತ್ತು 2025-26ರಲ್ಲಿ 267 ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ಒದಗಿಸಿದೆ.

ಓಬಿಸಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳು (ಇಬಿಸಿಗಳು) ಮತ್ತು ಅಧಿಸೂಚಿತ, ಅಲೆಮಾರಿ ಮತ್ತು ಅರೆ-ಅಲೆಮಾರಿ ಬುಡಕಟ್ಟು ಜನಾಂಗದ (ಡಿಎನ್‌ಟಿಗಳು) ವಿದ್ಯಾರ್ಥಿಗಳಿಗೆ ಸಚಿವಾಲಯವು ಬೆಂಬಲ ನೀಡುವುದನ್ನು ಮುಂದುವರೆಸಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ, 2023-24ರಲ್ಲಿ 2.94 ಲಕ್ಷ ವಿದ್ಯಾರ್ಥಿಗಳು, 2024-25ರಲ್ಲಿ 8.75 ಲಕ್ಷ ವಿದ್ಯಾರ್ಥಿಗಳು ಮತ್ತು 2025-26ರಲ್ಲಿ 2.76 ಲಕ್ಷ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯು ಕ್ರಮವಾಗಿ 4.76 ಲಕ್ಷ, 4.59 ಲಕ್ಷ ಮತ್ತು 3.67 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡಿದೆ.

ಶಾಲೆಗಳಲ್ಲಿ ಉನ್ನತ ದರ್ಜೆಯ ಶಿಕ್ಷಣ ಯೋಜನೆಯಡಿಯಲ್ಲಿ ಫಲಾನುಭವಿಗಳ ಸಂಖ್ಯೆ 2023-24 ರಲ್ಲಿ 725 ರಿಂದ 2025-26 ರಲ್ಲಿ 10,735 ಕ್ಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಆದರೆ ಒಬಿಸಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫೆಲೋಶಿಪ್ 2023-24 ರಲ್ಲಿ 78, 2024-25 ರಲ್ಲಿ 92 ಮತ್ತು 2025-26 ರಲ್ಲಿ 116 ಮಂದಿಗೆ ಫೆಲೋಶಿಪ್ ಬೆಂಬಲ ನೀಡಿದೆ

ಕಲ್ಯಾಣ ಉಪಕ್ರಮಗಳು ಹಿರಿಯ ನಾಗರಿಕರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ರಾಜ್ಯದಲ್ಲಿ ಸಾವಿರಾರು ಜನರಿಗೆ ಪ್ರಯೋಜನವನ್ನು ನೀಡುತ್ತಿವೆ ಎಂದು ಸಚಿವರು ಮಾಹಿತಿ ನೀಡಿದರು. ಅಟಲ್ ವಯೋ ಅಭ್ಯುದಯ ಯೋಜನೆ (AVYAY) ಹಿರಿಯ ನಾಗರಿಕರಿಗಾಗಿ ಸಮಗ್ರ ಕಾರ್ಯಕ್ರಮ (IPSrC) ಘಟಕದ ಅಡಿಯಲ್ಲಿ, 2023-24ರಲ್ಲಿ 32,940 ಹಿರಿಯ ನಾಗರಿಕರು, 2024-25ರಲ್ಲಿ 33,715 ಮತ್ತು 2025-26ರಲ್ಲಿ 24,390 ಹಿರಿಯ ನಾಗರಿಕರು ಒಳಪಟ್ಟಿದ್ದಾರೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ (NBCFDC) ಸಾಲ ಯೋಜನೆಗಳು 2023-24ರಲ್ಲಿ 20,618 ವ್ಯಕ್ತಿಗಳು, 2024-25ರಲ್ಲಿ 18,377 ವ್ಯಕ್ತಿಗಳು ಮತ್ತು 2025-26ರಲ್ಲಿ 21,437 ವ್ಯಕ್ತಿಗಳು ಪ್ರಯೋಜನ ಪಡೆದಿದ್ದಾರೆ. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NSFDC) ಅಡಿಯಲ್ಲಿ, ಆದಾಯ ಉತ್ಪಾದಕ ಯೋಜನೆಗಳು 2023-24ರಲ್ಲಿ 14,548 ಫಲಾನುಭವಿಗಳಿಗೆ, 2024-25ರಲ್ಲಿ 5,314 ಫಲಾನುಭವಿಗಳಿಗೆ ಮತ್ತು 2025-26ರಲ್ಲಿ 8,085 ಫಲಾನುಭವಿಗಳಿಗೆ ಬೆಂಬಲ ನೀಡಿವೆ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಫೆಲೋಶಿಪ್ ಕ್ರಮವಾಗಿ 107 ಸ್ಕಾಲರ್‌ ಗಳು, 102 ಸ್ಕಾಲರ್‌ ಗಳು ಮತ್ತು 112 ಸ್ಕಾಲರ್‌ ಗಳಿಗೆ ಪ್ರಯೋಜನವನ್ನು ನೀಡಿದ್ದರೆ, VISVAS ಯೋಜನೆಯು 2024-25ರಲ್ಲಿ 5,092 ಫಲಾನುಭವಿಗಳನ್ನು ಮತ್ತು 2025-26ರಲ್ಲಿ 7,475 ಫಲಾನುಭವಿಗಳನ್ನು ಒಳಗೊಂಡಿದೆ.

1955ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಮತ್ತು 1989 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಜಾರಿಗಾಗಿ ಕೇಂದ್ರ ಪ್ರಾಯೋಜಿತ ಯೋಜನೆಯಡಿಯಲ್ಲಿ, 2023-24 ಮತ್ತು 2024-25 ರಲ್ಲಿ 5,586 ದೌರ್ಜನ್ಯ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ, ಆದರೆ 2025-26 ರಲ್ಲಿ 6,042 ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. 2023-24 ರಲ್ಲಿ 2,392 ಅಂತರ್ಜಾತಿ ವಿವಾಹಿತ ದಂಪತಿಗಳಿಗೆ, 2024-25 ರಲ್ಲಿ 2,476 ದಂಪತಿಗಳಿಗೆ ಮತ್ತು 2025-26 ರಲ್ಲಿ 2,202 ದಂಪತಿಗಳಿಗೆ ಆರ್ಥಿಕ ನೆರವು ವಿಸ್ತರಿಸಲಾಗಿದೆ.

ದೀನದಯಾಳ್ ದಿವ್ಯಾಂಗಜನ ಪುನರ್ವಸತಿ ಯೋಜನೆ (DDRS) 2023-24ರಲ್ಲಿ ಕ್ರಮವಾಗಿ 1,052 ಜನರಿಗೆ, 2024-25ರಲ್ಲಿ 1,036 ಜನರಿಗೆ ಮತ್ತು 2025-26ರಲ್ಲಿ 878 ಜನರಿಗೆ ಪ್ರಯೋಜನವನ್ನು ನೀಡಿತು, ಆದರೆ ಅಂಗವಿಕಲ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಯೋಜನೆಯು 2023-24ರಲ್ಲಿ 4,046 ವಿದ್ಯಾರ್ಥಿಗಳಿಗೆ, 2024-25ರಲ್ಲಿ 3,851 ವಿದ್ಯಾರ್ಥಿಗಳಿಗೆ ಮತ್ತು 2025-26ರಲ್ಲಿ 4,043 ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ.

ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಕ್ರಿಯಾ ಯೋಜನೆ (ಡಿ ಎ ಪಿ ಎಸ್ ಸಿ) ಅಡಿಯಲ್ಲಿ 38 ಸಚಿವಾಲಯಗಳ ಮೂಲಕ ಪರಿಶಿಷ್ಟ ಜಾತಿಗಳ ಕಲ್ಯಾಣವನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ನೀತಿ ಆಯೋಗದ ಅಭಿವೃದ್ಧಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಚೇರಿ (ಡಿಎಂಇಒ) ನಡೆಸಿದ ಮೌಲ್ಯಮಾಪನವು ಸಚಿವಾಲಯದ ಉದ್ದೇಶಿತ ಮಧ್ಯಸ್ಥಿಕೆಗಳು ಸಮಾಜದ ದುರ್ಬಲ ಸಮುದಾಯಗಳಿಗೆ ಶಿಕ್ಷಣದ ಲಭ್ಯತೆಯಲ್ಲಿ ಗಮನಾರ್ಹ ಸುಧಾರಣೆಗಳಿಗೆ ಕಾರಣವಾಗಿವೆ ಎಂದು ಗಮನಿಸಿದೆ. ಸಮಾಜದ ಎಲ್ಲಾ ದುರ್ಬಲ ವರ್ಗಗಳಿಗೆ ಶೈಕ್ಷಣಿಕ ಅವಕಾಶಗಳು, ಜೀವನೋಪಾಯ ಬೆಂಬಲ, ಆರ್ಥಿಕ ಸೇರ್ಪಡೆ ಮತ್ತು ಸಾಮಾಜಿಕ ರಕ್ಷಣೆ ಬಲಪಡಿಸುವ ಮೂಲಕ ಸಮಗ್ರ ಮತ್ತು ಸಮಾನ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ.

 

*****


(रिलीज़ आईडी: 2291694) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी , Tamil