ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ನಶ ಮುಕ್ತ ಭಾರತ ಅಭಿಯಾನದಡಿ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ತಳಮಟ್ಟದಲ್ಲಿ ಮಾದಕ ದ್ರವ್ಯ ನಿಗ್ರಹ ಬಲವರ್ಧನೆಗೊಳಿಸಿದ ಕೇಂದ್ರ ಸರ್ಕಾರ


ಪಂಚಾಯತ್ ಸಂಪನ್ಮೂಲ ವ್ಯಕ್ತಿಗಳನ್ನು ನಶ ಮುಕ್ತ ಮಿತ್ರರನ್ನಾಗಿ ತೊಡಗಿಸಿಕೊಳ್ಳುವ ಮೂಲಕ ಮಾದಕ ದ್ರವ್ಯ ಮುಕ್ತ ಗ್ರಾಮಗಳಿಗೆ ಉತ್ತೇಜನ

प्रविष्टि तिथि: 29 JUL 2026 6:38PM by PIB Bengaluru

ಜಾಗೃತಿ ಮೂಡಿಸುವುದು ಮತ್ತು ಸಮುದಾಯ ಕ್ರೂಡೀಕರಣದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಮೂಲಕ ಭಾರತ ಸರ್ಕಾರವು ನಶ ಮುಕ್ತ ಭಾರತ ಅಭಿಯಾನ (ಎನ್ ಎಂ ಬಿ ಎ) ಅಡಿಯಲ್ಲಿ ಮಾದಕ ದ್ರವ್ಯ ದುರುಪಯೋಗವನ್ನು ಎದುರಿಸಲು ತಳಮಟ್ಟದ ಪ್ರಯತ್ನಗಳನ್ನು ಬಲಪಡಿಸುತ್ತಿದೆ. ಗ್ರಾಮ ಮಟ್ಟದಲ್ಲಿ ಸ್ಥಳೀಯ ಸಮುದಾಯಗಳು ಮತ್ತು ಸ್ವಯಂಸೇವಕರನ್ನು ತೊಡಗಿಸಿಕೊಳ್ಳುವ ಮೂಲಕ ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಜನ-ನೇತೃತ್ವದ ಆಂದೋಲನವನ್ನು ನಿರ್ಮಿಸುವ ಗುರಿಯನ್ನು ಈ ಉಪಕ್ರಮ ಹೊಂದಿದೆ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವರಾದ ಶ್ರೀ ಬಿ.ಎಲ್. ವರ್ಮಾ ಅವರು ರಾಜ್ಯಸಭೆಯಲ್ಲಿಂದು ಶ್ರೀ ಹರ್ಷ ಮಹಾಜನ್ ಅವರ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ಗ್ರಾಮ ಮಟ್ಟದಲ್ಲಿ ಮಾದಕ ವಸ್ತುಗಳ ಜಾಗೃತಿಗಾಗಿ, ಪಂಚಾಯತ್ ರಾಜ್ ಸಂಸ್ಥೆಗಳನ್ನು ರಾಷ್ಟ್ರೀಯ ಮಾದಕ ವಸ್ತುಗಳ ಬೇಡಿಕೆ ಕಡಿತ ಕ್ರಿಯಾ ಯೋಜನೆ (NAPDDR) ದೊಂದಿಗೆ ಸಂಯೋಜಿಸಲು ಯಾವುದೇ ಪ್ರತ್ಯೇಕ ಯೋಜನೆಯನ್ನು ರೂಪಿಸಿಲ್ಲವಾದರೂ ಹಿಮಾಚಲ ಪ್ರದೇಶ ಸೇರಿ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಪಂಚಾಯತ್ ರಾಜ್ ಇಲಾಖೆಗಳನ್ನು ನಶ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ, ಪಂಚಾಯತ್ ಸಂಪನ್ಮೂಲ ವ್ಯಕ್ತಿಗಳನ್ನು ನಶ ಮುಕ್ತಿ ಮಿತ್ರರು (ಎನ್ ಎಂಎಂಎಸ್) ಎಂದು ಗುರುತಿಸಲು ಮತ್ತು ಅವರನ್ನು ತೊಡಗಿಸಿಕೊಳ್ಳಲು ಮನವಿ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಈ ನಶ ಮುಕ್ತಿ ಮಿತ್ರರಿಗೆ ಆನ್‌ಲೈನ್ ಮತ್ತು ಆಫ್‌ಲೈನ್ ಅಭಿಯಾನಗಳ ಮೂಲಕ ಮಾದಕ ವಸ್ತುಗಳ ದುರುಪಯೋಗದ ವಿರುದ್ಧ ಎನ್ ಎಂಬಿಎ ಸಾಮೂಹಿಕ ಪ್ರತಿಜ್ಞೆಯನ್ನು ಪ್ರಚಾರ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದೆ. ಅವುಗಳನ್ನು ಅಸ್ತಿತ್ವದಲ್ಲಿರುವ ಜಾಗೃತಿ ಅಭಿಯಾನಗಳಲ್ಲಿ ಸಂಯೋಜಿಸಲಾಗುತ್ತಿದೆ ಮತ್ತು ತಳಮಟ್ಟದಲ್ಲಿ ಸಂಪರ್ಕವನ್ನು ಬಲಪಡಿಸಲು ಎನ್ ಎಂ ಬಿ ಎ ಲಾಂಛನ, ಮ್ಯಾಸ್ಕಾಟ್ ಮತ್ತು ರಾಷ್ಟ್ರೀಯ ವ್ಯಸನ ನಿವಾರಣೆ ಸಹಾಯವಾಣಿ 14446 ಬಳಕೆಯನ್ನು ಉತ್ತೇಜಿಸಲಾಗುತ್ತಿದೆ.

NAPDDR ಯೋಜನೆಯ ರಾಜ್ಯ ಕ್ರಿಯಾ ಯೋಜನೆ (ಎಸ್ ಎ ಪಿ) ಘಟಕದ ಅಡಿಯಲ್ಲಿ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಮುನ್ನೆಚ್ಚರಿಕೆ ಶಿಕ್ಷಣ, ಜಾಗೃತಿ ಮೂಡಿಸುವುದು, ಸಾಮರ್ಥ್ಯ ವೃದ್ಧಿ ಮತ್ತು ಮಾದಕ ದ್ರವ್ಯ ಬೇಡಿಕೆ ಕಡಿತ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. ಕಳೆದ ಎರಡು ಹಣಕಾಸು ವರ್ಷಗಳಲ್ಲಿ, 2023–24 ಮತ್ತು 2024–25ರಲ್ಲಿ ಹಿಮಾಚಲ ಪ್ರದೇಶಕ್ಕೆ ಯಾವುದೇ ಹಣವನ್ನು ಬಿಡುಗಡೆ ಮಾಡಲಾಗಿಲ್ಲ. ಆದರೂ ರಾಜ್ಯ ಕ್ರಿಯಾ ಯೋಜನೆಯಡಿ ಚಟುವಟಿಕೆಗಳನ್ನು ಬೆಂಬಲಿಸಲು 2025–26ರಲ್ಲಿ ರಾಜ್ಯಕ್ಕೆ 1.34 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.

ಮಾದಕ ದ್ರವ್ಯ ದುರುಪಯೋಗದ ವಿರುದ್ಧ ನಿರಂತರ ಜಾಗೃತಿ ಮೂಡಿಸಲು ಮತ್ತು ನಶ ಮುಕ್ತ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸಲು ಪಂಚಾಯತ್ ರಾಜ್ ಸಂಸ್ಥೆಗಳು, ಸಮುದಾಯ ಸ್ವಯಂಸೇವಕರು, ಶಿಕ್ಷಣ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಸರ್ಕಾರ ನಶ ಮುಕ್ತ ಭಾರತ ಅಭಿಯಾನವನ್ನು ಬಲಪಡಿಸುವುದನ್ನು ಮುಂದುವರೆಸಿದೆ.

 

*****


(रिलीज़ आईडी: 2291592) आगंतुक पटल : 7
इस विज्ञप्ति को इन भाषाओं में पढ़ें: English , Urdu , हिन्दी , Gujarati