ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಾಗತಿಕ ಹುಲಿ ದಿನದಂದು ಶುಭಾಶಯ ಕೋರಿದ್ದು, ಹುಲಿ ಸಂರಕ್ಷಣೆಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ

प्रविष्टि तिथि: 29 JUL 2026 9:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲಾ ವನ್ಯಜೀವಿ ಪ್ರಿಯರಿಗೆ ಜಾಗತಿಕ ಹುಲಿ ದಿನದ ಶುಭಾಶಯ ಕೋರಿದ್ದಾರೆ.

ಜಗತ್ತಿನ ಹುಲಿ ಸಂಖ್ಯೆಯ ಸುಮಾರು 70 ಪ್ರತಿಶತದಷ್ಟು ವ್ಯಾಘ್ರಗಳಿಗೆ ಭಾರತವು ನೆಲೆವೀಡಾಗಿದೆ ಎಂಬುದು ದೇಶದ ಜನರಿಗೆ ಹೆಮ್ಮೆಯ ಸಂಗತಿ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಭಾರತದ ಹುಲಿ ಸಂರಕ್ಷಣಾ ಪ್ರಯತ್ನಗಳು ದೇಶದ ಶತಮಾನಗಳಷ್ಟು ಹಳೆಯದಾದ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಸಂಸ್ಕೃತಿಯಿಂದ ಪ್ರೇರಣೆ ಪಡೆದಿವೆ ಮತ್ತು ಅದಕ್ಕೆ ಜನರ ಸಾಮೂಹಿಕ ಇಚ್ಛೆಯು ಶಕ್ತಿ ತುಂಬಿದೆ ಎಂದು ಅವರು ವಿವರಿಸಿದ್ದಾರೆ.

ಹುಲಿ ಸಂರಕ್ಷಣೆಯನ್ನು ಬಲಪಡಿಸುವ ವಿಜ್ಞಾನ ಆಧಾರಿತ ಸಂರಕ್ಷಣೆ, ಸಮುದಾಯ ಪಾಲ್ಗೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಯನ್ನು ಶ್ರೀ ಮೋದಿ ಅವರು ಪುನರುಚ್ಚರಿಸಿದ್ದಾರೆ.

ಹುಲಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅರಣ್ಯ ಸಿಬ್ಬಂದಿ, ವಿಜ್ಞಾನಿಗಳು ಮತ್ತು ಸಂರಕ್ಷಣಾ ತಜ್ಞರ ಪ್ರಯತ್ನಗಳು ಮತ್ತು ಸಮರ್ಪಣೆಯನ್ನು ಶ್ರೀ ಮೋದಿ ಅವರು ಶ್ಲಾಘಿಸಿದ್ದಾರೆ. ಸ್ಥಳೀಯ ಸಮುದಾಯಗಳನ್ನು ಸಬಲಗೊಳಿಸಲು ಮತ್ತು ಮಾನವ-ವನ್ಯಜೀವಿ ಸಂಘರ್ಷವನ್ನು ತಗ್ಗಿಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಶ್ರೀ ಮೋದಿ  ಅವರು ಎಕ್ಸ್ ನ ಥ್ರೆಡ್ ಪೋಸ್ಟ್‌ ಗಳಲ್ಲಿ ಹೀಗೆ ಹೇಳಿದ್ದಾರೆ:

"ಜಾಗತಿಕ ಹುಲಿ ದಿನದಂದು ಎಲ್ಲಾ ವನ್ಯಜೀವಿ ಪ್ರಿಯರಿಗೆ ಶುಭಾಶಯಗಳು. ವಿಶ್ವದ ಹುಲಿ ಸಂಖ್ಯೆಯ ಸುಮಾರು ಶೇ.70 ರಷ್ಟು ವ್ಯಾಘ್ರಗಳು ಭಾರತದಲ್ಲಿವೆ ಎಂಬ ಅಂಶದ ಬಗ್ಗೆ ಭಾರತದ ಜನರು ಹೆಮ್ಮೆಪಡುತ್ತಾರೆ. ಭಾರತದ ಹುಲಿ ಸಂರಕ್ಷಣಾ ಪ್ರಯತ್ನಗಳು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ನಮ್ಮ ಶತಮಾನಗಳಷ್ಟು ಹಳೆಯ ಸಂಸ್ಕೃತಿಯಿಂದ ಸ್ಫೂರ್ತಿ ಪಡೆದಿವೆ ಮತ್ತು ನಮ್ಮ ಜನರ ಸಾಮೂಹಿಕ ಇಚ್ಛಾಶಕ್ತಿಯ ಬಲ ಪಡೆದಿದೆ. ಹುಲಿ ಸಂರಕ್ಷಣೆಯನ್ನು ಬಲಪಡಿಸುವ ವಿಜ್ಞಾನ ಆಧಾರಿತ ಸಂರಕ್ಷಣೆ, ಸಮುದಾಯ ಪಾಲ್ಗೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ."

"ಹುಲಿ ಸಂರಕ್ಷಣೆಯಲ್ಲಿ ನಮ್ಮ ಅರಣ್ಯ ಸಿಬ್ಬಂದಿ, ವಿಜ್ಞಾನಿಗಳು ಮತ್ತು ಸಂರಕ್ಷಣಾಕಾರರ ಪ್ರಯತ್ನಗಳು ಹಾಗೂ ಸಮರ್ಪಣೆಯು ಪ್ರಮುಖ ಪಾತ್ರ ವಹಿಸಿದೆ. ಆ ಉತ್ಸಾಹದೊಂದಿಗೆ, ಸ್ಥಳೀಯ ಸಮುದಾಯಗಳ ಸಬಲೀಕರಣಕ್ಕೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಭಾರತವು ಬದ್ಧವಾಗಿದೆ."

 

*****


(रिलीज़ आईडी: 2290939) आगंतुक पटल : 10
इस विज्ञप्ति को इन भाषाओं में पढ़ें: English , Urdu , हिन्दी , Assamese , Bengali , Gujarati , Telugu , Malayalam