ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
2024ರ ಫೆಬ್ರವರಿಯಿಂದ ಪಿಎಂ ಸೂರ್ಯ ಘರ್: ಮಫ್ತ್ ಬಿಜ್ಲಿ ಯೋಜನೆಯಡಿಯಲ್ಲಿ 48 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಪ್ರಯೋಜನ ಲಭ್ಯ
प्रविष्टि तिथि:
28 JUL 2026 3:39PM by PIB Bengaluru
ಪಿಎಂ ಸೂರ್ಯ ಘರ್: ಮಫ್ತ್ ಬಿಜ್ಲಿ ಯೋಜನೆ (ಪಿಎಂಎಸ್ ಜಿ: ಎಂಬಿವೈ) ಬೇಡಿಕೆ ಆಧಾರಿತ ಯೋಜನೆಯಾಗಿದ್ದು, ಸ್ಥಳೀಯ ವಿದ್ಯುತ್ ಸರಬರಾಜು ಕಂಪನಿ (ಡಿಸ್ಕಾಮ್) ಯೊಂದಿಗೆ ಗ್ರಿಡ್-ಸಂಪರ್ಕಿತ ವಿದ್ಯುತ್ ಸಂಪರ್ಕವನ್ನು ಹೊಂದಿರುವ ಗ್ರಾಮೀಣ ಕುಟುಂಬಗಳು ಸೇರಿದಂತೆ ದೇಶದ ಎಲ್ಲಾ ವಸತಿ ಗ್ರಾಹಕರು ಈ ಯೋಜನೆಯ ರಾಷ್ಟ್ರೀಯ ಪೋರ್ಟಲ್ (www.pmsuryaghar.gov.in) ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಮೇಲ್ಛಾವಣಿ ಸೌರ (ಆರ್ ಟಿಎಸ್) ವ್ಯವಸ್ಥೆಗಳನ್ನು ಸ್ಥಾಪಿಸಲು ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
2025-26ನೇ ವರ್ಷದಲ್ಲಿಒಟ್ಟು 18. 71 ಲಕ್ಷ ಆರ್ ಟಿಎಸ್ ವ್ಯವಸ್ಥೆಗಳನ್ನು 6.7 ಗಿಗಾವ್ಯಾಟ್ ಸ್ಥಾಪಿತ ಸೌರ ಸಾಮರ್ಥ್ಯದೊಂದಿಗೆ ಸ್ಥಾಪಿಸಲಾಗಿದೆ, ಇದು ಪಿಎಂಎಸ್ ಜಿ: ಎಂಬಿವೈ ಅಡಿಯಲ್ಲಿ ಗ್ರಾಮೀಣ ಮನೆಗಳು ಸೇರಿದಂತೆ ದೇಶಾದ್ಯಂತ 22.71 ಲಕ್ಷ ಮನೆಗಳಿಗೆ ಪ್ರಯೋಜನವನ್ನು ಒದಗಿಸುತ್ತದೆ.
ಪಿಎಂಎಸ್ ಜಿ: ಎಂಬಿವೈ ಅಡಿಯಲ್ಲಿ, ಫೆಬ್ರವರಿ 2024ರಲ್ಲಿ ಆರಂಭವಾದಾಗಿನಿಂದ, ಒಟ್ಟು 39,72,447 ಆರ್ ಟಿಎಸ್ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ, 22.07.2026 ರ ವೇಳೆಗೆ ಗ್ರಾಮೀಣ ಪ್ರದೇಶದ ಮನೆಗಳು ಸೇರಿದಂತೆ ದೇಶಾದ್ಯಂತ 48,02,717 ಮನೆಗಳಿಗೆ ಇದು ಪ್ರಯೋಜನ ಒದಗಿಸಿದೆ.
ಈ ಯೋಜನೆಯಡಿಯಲ್ಲಿ ಆರ್‌ಟಿಎಸ್ ಅಳವಡಿಸಿಕೊಂಡ ಗ್ರಾಹಕರ ವಿದ್ಯುತ್ ಬಿಲ್‌ಗಳು ಹೆಚ್ಚಾಗಿ ಕಡಿಮೆಯಾಗಿದ್ದರೂ, ದೇಶಾದ್ಯಂತ 18.93 ಲಕ್ಷಕ್ಕೂ ಅಧಿಕ ಫಲಾನುಭವಿಗಳು, ಗ್ರಾಮೀಣ ಕುಟುಂಬಗಳು ಸೇರಿದಂತೆ, ಈ ಯೋಜನೆಯಡಿಯಲ್ಲಿ ಆರ್‌ಟಿಎಸ್ ವ್ಯವಸ್ಥೆಗಳನ್ನು ಸ್ಥಾಪಿಸಿದ ನಂತರ ಯಾವುದೇ ತಿಂಗಳು/ಬಿಲ್ಲಿಂಗ್ ಅವಧಿಯಲ್ಲಿ, ಅವರ ಸ್ವಯಂ-ಬಳಕೆಯನ್ನು ಅವಲಂಬಿಸಿ, ಶೂನ್ಯ ವಿದ್ಯುತ್ ಬಿಲ್ ಪಡೆದಿದ್ದಾರೆ ಎಂದು ಡಿಸ್ಕಾಮ್‌ಗಳು ವರದಿ ಮಾಡಿವೆ.
ವಸತಿ ವಲಯದಲ್ಲಿ ಮೇಲ್ಛಾವಣಿ ಸೌರ ಸ್ಥಾವರಗಳನ್ನು ಸ್ಥಾಪಿಸುವುದರ ಹೊರತಾಗಿ, ಪಿಎಂಎಸ್‌ಜಿ: ಎಂಬಿವೈ ಸರ್ಕಾರಿ ಮತ್ತು ಶೈಕ್ಷಣಿಕ ಮತ್ತು ಆರೋಗ್ಯ ಸಂಸ್ಥೆಗಳು ಸೇರಿದಂತೆ ವಾಣಿಜ್ಯ ಕಟ್ಟಡಗಳಲ್ಲಿ ಆರ್‌ಟಿಎಸ್ ಸ್ಥಾವರಗಳನ್ನು ಸ್ಥಾಪಿಸಲು ಸಹ ಅವಕಾಶ ನೀಡುತ್ತದೆ. ಅದರೂ ಸಿಎಫ್‌ಎ ಇಲ್ಲದೆಯೂ ಮೇಲ್ಛಾವಣಿ ಸೌರ ಸ್ಥಾವರಗಳನ್ನು ಸ್ಥಾಪಿಸುವುದು ಅವರಿಗೆ ಆರ್ಥಿಕವಾಗಿ ಲಾಭದಾಯಕವಾಗಿರುವುದರಿಂದ ಈ ವರ್ಗದ ಗ್ರಾಹಕರಿಗೆ ಯಾವುದೇ ಕೇಂದ್ರ ಹಣಕಾಸು ನೆರವು (ಸಿಎಫ್‌ಎ) ನೀಡಲಾಗುವುದಿಲ್ಲ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿರುವ ಲಿಖಿತ ಉತ್ತರದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
*****
(रिलीज़ आईडी: 2290521)
आगंतुक पटल : 22