ಪ್ರಧಾನ ಮಂತ್ರಿಯವರ ಕಛೇರಿ
ಗೌರವ, ವಿಶ್ವಾಸ ಮತ್ತು ಪರಿಣಾಮಕಾರಿ ನಾಯಕತ್ವಕ್ಕೆ ಸದ್ಗುಣವೇ ಅಡಿಪಾಯ ಎಂದು ಸಾರುವ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
27 JUL 2026 7:43AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸ್ಕೃತ ಸುಭಾಷಿತವೊಂದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಉತ್ತಮ ಗುಣ-ನಡತೆ ಹೊಂದಿರುವ ವ್ಯಕ್ತಿಯು ಸಮಾಜದಲ್ಲಿ ಗೌರವ ಗಳಿಸುವುದಲ್ಲದೆ, ಪ್ರತಿಯೊಂದು ಜವಾಬ್ದಾರಿಗೂ ಅರ್ಹನೆಂದು ಪರಿಗಣಿಸಲ್ಪಡುತ್ತಾನೆ ಎಂಬ ಸಂದೇಶವನ್ನು ಸಾರಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ;
"शीलवान् पूजितो लोके शीलवान् साधुसम्मतः।
शीलवान् सर्वकर्मार्हः शीलवान् प्रियदर्शनः॥"
ಉತ್ತಮ ಗುಣ-ನಡತೆ ಹೊಂದಿರುವ ವ್ಯಕ್ತಿಯು ಸಮಾಜದಲ್ಲಿ ಗೌರವಕ್ಕೆ ಪಾತ್ರನಾಗುತ್ತಾನೆ ಹಾಗೂ ಸಜ್ಜನರಿಂದಲೂ ಮೆಚ್ಚುಗೆ ಪಡೆಯುತ್ತಾನೆ. ಪ್ರಾಮಾಣಿಕತೆ, ವಿನಯ ಮತ್ತು ಶಿಸ್ತಿನ ನಡವಳಿಕೆಯಿಂದ ಕೂಡಿದ ಇಂತಹ ವ್ಯಕ್ತಿಯನ್ನು ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಯೋಗ್ಯನೆಂದು ಪರಿಗಣಿಸಲಾಗುತ್ತದೆ. ಅವರ ವ್ಯಕ್ತಿತ್ವವು ಆದರ್ಶಪ್ರಾಯವಾಗಿದ್ದು, ಪ್ರೇರಣಾದಾಯಕವಾಗಿರುತ್ತದೆ ಹಾಗೂ ಅನುಕರಣೀಯವಾಗಿರುತ್ತದೆ. ನಿಜವಾದ ಅರ್ಥದಲ್ಲಿ, ಸದ್ಗುಣಯುತ ವ್ಯಕ್ತಿತ್ವವೇ ಶಾಶ್ವತ ಯಶಸ್ಸು, ಪರಿಣಾಮಕಾರಿ ನಾಯಕತ್ವ ಮತ್ತು ಅಚಲ ವಿಶ್ವಾಸದ ನಿಜವಾದ ಅಡಿಪಾಯವಾಗಿದೆ.
*****
(ಪ್ರಕಟಣೆ ಐ.ಡಿ.: 2289835)
ವಿಸಿಟರ್ ಕೌಂಟರ್ : 34
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Bengali-TR
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam