ಪ್ರಧಾನ ಮಂತ್ರಿಯವರ ಕಛೇರಿ
ಆಷಾಢ ಏಕಾದಶಿ ಅಂಗವಾಗಿ ಸರ್ವರಿಗೂ ಪ್ರಧಾನಮಂತ್ರಿ ಶುಭಾಶಯ
प्रविष्टि तिथि:
25 JUL 2026 11:35AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪವಿತ್ರ ಆಷಾಢ ಏಕಾದಶಿಯ ಅಂಗವಾಗಿ ಶುಭಾಶಯ ಕೋರಿದ್ದಾರೆ. ಇದು ಭಕ್ತಿ ಮತ್ತು ಸಹಾನುಭೂತಿಯ ಅಮರ ಸಂದೇಶದ ಶುಭ ದಿನ ಎಂದು ಅವರು ಹೇಳಿದ್ದಾರೆ.
ವಿಠ್ಠಲ ಭಗವಾನರ ಆಶೀರ್ವಾದವು ಹರ್ಷ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ ಹಾಗೂ ಎಲ್ಲರಿಗೂ ಉತ್ತಮ ಸಮಾಜದತ್ತ ಮಾರ್ಗದರ್ಶನ ನೀಡಲಿ ಎಂದು ಶ್ರೀ ಮೋದಿ ಅವರು ಪ್ರಾರ್ಥಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಕಲ್ಯಾಣ ಮತ್ತು ಘನತೆಗಾಗಿ ಅವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಾ ಕಾರ್ಯನಿರ್ವಹಿಸುವ ನಮ್ಮ ಸಂಕಲ್ಪಕ್ಕೆ ಭಗವಂತ ಬಲ ತುಂಬಲಿ ಎಂದು ಪ್ರಧಾನಮಂತ್ರಿ ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳು ಸರಣಿ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಹಂಚಿಕೊಂಡಿದ್ದಾರೆ:
"ಪವಿತ್ರ ಆಷಾಢ ಏಕಾದಶಿಯ ಶುಭಾಶಯಗಳು. ಭಕ್ತಿ ಮತ್ತು ಸಹಾನುಭೂತಿಯ ಶಾಶ್ವತ ಸಂದೇಶದ ಬಗೆಗಿನ ಶುಭ ದಿನವಿದು. ಭಗವಾನ್ ವಿಠ್ಠಲರ ಆಶೀರ್ವಾದವು ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿ ತರಲಿ ಹಾಗೂ ಉತ್ತಮ ಸಮಾಜದೆಡೆಗೆ ನಮಗೆ ಮಾರ್ಗದರ್ಶನ ನೀಡಲಿ. ಪ್ರತಿಯೊಬ್ಬ ವ್ಯಕ್ತಿಯ ಕಲ್ಯಾಣ ಮತ್ತು ಘನತೆಗಾಗಿ ಸೇವೆ ಸಲ್ಲಿಸುವ ಮತ್ತು ಅವಿಶ್ರಾಂತವಾಗಿ ಕಾರ್ಯನಿರ್ವಹಿಸುವ ನಮ್ಮ ಸಂಕಲ್ಪವನ್ನು ದೇವರು ಬಲಪಡಿಸಲಿ."
"आषाढी एकादशीच्या पवित्र पर्वानिमित्त हार्दिक शुभेच्छा. हा मंगलमय दिवस भक्ती, करुणा आणि सामाजिक सलोख्याचा चिरंतन संदेश देणारा आहे. भगवान विठ्ठलाचे आशीर्वाद आपल्या सर्वांच्या आयुष्यात आनंद, सलोखा आणि समृद्धी घेऊन येवो, हीच कामना. समाजातील प्रत्येक व्यक्तीच्या कल्याणासाठी आणि सन्मानासाठी अविरत कार्य करण्याचा आपला संकल्प अधिक दृढ होवो, हीच विठ्ठल चरणी प्रार्थना."
*****
(रिलीज़ आईडी: 2289654)
आगंतुक पटल : 6
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Gujarati
,
Odia
,
Tamil
,
Telugu
,
Malayalam