ರೈಲ್ವೇ ಸಚಿವಾಲಯ
ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಬಲಪಡಿಸಲು 3,215 ರೈಲ್ವೆ ನಿಲ್ದಾಣಗಳು ಮತ್ತು 13,409 ಪ್ರಯಾಣಿಕ ಕೋಚ್‌ಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಅಳವಡಿಕೆ
425 ನಿಲ್ದಾಣಗಳಲ್ಲಿ ಸಿಸಿಟಿವಿ ಕವರೇಜ್ ಹೊಂದುವ ಮೂಲಕ ಉತ್ತರ ರೈಲ್ವೆ ಮುಂಚೂಣಿಯಲ್ಲಿದೆ, ನಂತರದ ಸ್ಥಾನಗಳಲ್ಲಿ ಪಶ್ಚಿಮ ರೈಲ್ವೆ (391) ಮತ್ತು ಪೂರ್ವ ರೈಲ್ವೆ (271) ಇವೆ
ಸಿಸಿಟಿವಿ ಅಳವಡಿಸಲಾದ ಪ್ರಯಾಣಿಕ ಕೋಚ್‌ಗಳಲ್ಲಿ 1,735 ಕೋಚ್‌ಗಳೊಂದಿಗೆ ಪಶ್ಚಿಮ ರೈಲ್ವೆ ಪ್ರಥಮ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಉತ್ತರ ರೈಲ್ವೆ (1,483) ಮತ್ತು ದಕ್ಷಿಣ ರೈಲ್ವೆ (1,481) ಇವೆ
ಸೇವೆಯಲ್ಲಿರುವ ಎಲ್ಲಾ ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲು ರೇಕ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ
प्रविष्टि तिथि:
24 JUL 2026 4:17PM by PIB Bengaluru
ಪ್ರಯಾಣಿಕರ ಸುರಕ್ಷತೆಯನ್ನು ಬಲಪಡಿಸುವ ಮತ್ತು ಭದ್ರತಾ ಕಣ್ಗಾವಲನ್ನು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಜಾಲದಾದ್ಯಂತ ರೈಲ್ವೆ ನಿಲ್ದಾಣಗಳು, ಪ್ರಯಾಣಿಕರ ಕೋಚ್‌ಗಳು ಮತ್ತು ಇತರ ರೈಲ್ವೆಗೆ ಸಂಬಂಧಪಟ್ಟ ಆವರಣಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಅಳವಡಿಸಲು ಯೋಜಿಸಲಾಗಿದೆ. ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯ ಅಳವಡಿಕೆಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ಸೇವೆಯಲ್ಲಿರುವ ಎಲ್ಲಾ ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲು ರೇಕ್‌ಗಳಲ್ಲಿ ಈಗಾಗಲೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಇದುವರೆಗೆ 3,215 ರೈಲ್ವೆ ನಿಲ್ದಾಣಗಳು ಮತ್ತು 13,409 ಪ್ರಯಾಣಿಕ ಬೋಗಿಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಗಳನ್ನು ಒದಗಿಸಲಾಗಿದೆ. ವಲಯವಾರು ವಿವರಗಳು ಈ ಕೆಳಗಿನಂತಿವೆ:
|
ಕ್ರ.ಸಂ
|
ರೈಲ್ವೆ ವಲಯ
|
ಸಿಸಿಟಿವಿ ವ್ಯವಸ್ಥೆ ಹೊಂದಿರುವ ನಿಲ್ದಾಣಗಳ ಸಂಖ್ಯೆ
|
ಕ್ಯಾಮೆರಾ ಅಳವಡಿಸಲಾದ ಬೋಗಿಗಳ ಸಂಖ್ಯೆ
|
|
1.
|
ಮಧ್ಯ ರೈಲ್ವೆ
|
240
|
1384
|
|
2.
|
ಪೂರ್ವ ರೈಲ್ವೆ
|
271
|
1288
|
|
3.
|
ಪೂರ್ವ ಮಧ್ಯ ರೈಲ್ವೆ
|
237
|
617
|
|
4.
|
ಪೂರ್ವ ಕರಾವಳಿ ರೈಲ್ವೆ
|
80
|
601
|
|
5.
|
ಉತ್ತರ ರೈಲ್ವೆ
|
425
|
1483
|
|
6.
|
ಉತ್ತರ ಮಧ್ಯ ರೈಲ್ವೆ
|
141
|
339
|
|
7.
|
ಈಶಾನ್ಯ ರೈಲ್ವೆ
|
93
|
758
|
|
8.
|
ಈಶಾನ್ಯ ಗಡಿ ರೈಲ್ವೆ
|
94
|
410
|
|
9.
|
ವಾಯುವ್ಯ ರೈಲ್ವೆ
|
35
|
261
|
|
10.
|
ದಕ್ಷಿಣ ರೈಲ್ವೆ
|
140
|
1481
|
|
11.
|
ದಕ್ಷಿಣ ಮಧ್ಯ ರೈಲ್ವೆ
|
30
|
947
|
|
12.
|
ದಕ್ಷಿಣ ಕರಾವಳಿ ರೈಲ್ವೆ
|
202
|
415
|
|
13.
|
ಆಗ್ನೇಯ ರೈಲ್ವೆ
|
197
|
665
|
|
14.
|
ಆಗ್ನೇಯ ಮಧ್ಯ ರೈಲ್ವೆ
|
145
|
303
|
|
15.
|
ನೈರುತ್ಯ ರೈಲ್ವೆ
|
195
|
452
|
|
16.
|
ಪಶ್ಚಿಮ ರೈಲ್ವೆ
|
391
|
1735
|
|
17.
|
ಪಶ್ಚಿಮ ಮಧ್ಯ ರೈಲ್ವೆ
|
170
|
270
|
|
18.
|
ಮೆಟ್ರೋ ರೈಲ್ವೆ, ಕೋಲ್ಕತ್ತಾ
|
57
|
---
|
|
19.
|
ಕೊಂಕಣ್ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್
|
72
|
---
|
|
|
ಒಟ್ಟು |
3215
|
13409
|
ಸಿಸಿಟಿವಿ ಕಣ್ಗಾವಲು ವ್ಯವಸ್ಥೆಗಳ ಅಳವಡಿಕೆಯು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ನಿಲ್ದಾಣಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಅಕ್ರಮ ಪ್ರವೇಶ ಪತ್ತೆ, ಅನಗತ್ಯವಾಗಿ ಅಡ್ಡಾಡುವುದನ್ನು ಪತ್ತೆಹಚ್ಚುವುದು ಮತ್ತು ಬಿದ್ದಿರುವ ವ್ಯಕ್ತಿಗಳನ್ನು ಪತ್ತೆಹಚ್ಚುವಂತಹ ಎಐ ಆಧಾರಿತ ವೀಡಿಯೊ ವಿಶ್ಲೇಷಣಾ ವೈಶಿಷ್ಟ್ಯಗಳನ್ನು ಹೊಂದಿವೆ. ಕಳೆದ ಮೂರು ವರ್ಷಗಳಲ್ಲಿ ಅಂದರೆ 2023 ರಿಂದ 2025 ರವರೆಗೆ ಮತ್ತು ಜೂನ್, 2026 ರವರೆಗೆ 9,840 ಭದ್ರತೆಗೆ ಸಂಬಂಧಿಸಿದ ಘಟನೆಗಳನ್ನು ಪತ್ತೆಹಚ್ಚಲಾಗಿದೆ.
ರಾಜ್ಯಸಭೆಯಲ್ಲಿ ಇಂದು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಮಾಹಿತಿಯನ್ನು ಒದಗಿಸಿದರು.
*****
(रिलीज़ आईडी: 2288915)
आगंतुक पटल : 19