ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0ರ ಅಡಿಯಲ್ಲಿ, ದೇಶಾದ್ಯಂತ ಅಂಗನವಾಡಿ ಕೇಂದ್ರಗಳ ಮೂಲಕ ಅರ್ಹ ಫಲಾನುಭವಿಗಳಿಗೆ ಆರು ಸೇವೆಗಳ ಪ್ಯಾಕೇಜ್ ಅನ್ನು ಒದಗಿಸಲಾಗಿದೆ


ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0, ಮಿಷನ್ ಶಕ್ತಿ ಮತ್ತು ಮಿಷನ್ ವಾತ್ಸಲ್ಯದ ಅಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಸಂಸ್ಥೆಗಳು, ವ್ಯಕ್ತಿಗಳು, ಕಾರ್ಪೊರೇಟ್‌ಗಳೊಂದಿಗೆ ಸುಲಭ ಸಹಯೋಗವನ್ನು ಸಾಧಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪಂಖುಡಿ ಪೋರ್ಟಲ್ ಅನ್ನು ಪ್ರಾರಂಭಿಸಿದೆ

प्रविष्टि तिथि: 24 JUL 2026 2:02PM by PIB Bengaluru

15ನೇ ಹಣಕಾಸು ಆಯೋಗದಲ್ಲಿ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, ಹದಿಹರೆಯದ ಹುಡುಗಿಯರು (14 - 18 ವರ್ಷಗಳು); ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ [3-6 ವರ್ಷಗಳು]; ಆಧುನಿಕ, ನವೀಕರಿಸಿದ ಸಕ್ಷಮ್ ಅಂಗನವಾಡಿ, ಪೋಶನ್ ಅಭಿಯಾನ ಮತ್ತು ಹದಿಹರೆಯದ ಬಾಲಕಿಯರ ಯೋಜನೆ ಸೇರಿದಂತೆ ಅಂಗನವಾಡಿ ಮೂಲಸೌಕರ್ಯಗಳನ್ನು ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0ರ ಅಡಿಯಲ್ಲಿ ಮರುಸಂಘಟಿಸಲಾಗಿದೆ.

ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0ರ ಅಡಿಯಲ್ಲಿ, ಉತ್ತರ ಪ್ರದೇಶ ರಾಜ್ಯ ಸೇರಿದಂತೆ ದೇಶಾದ್ಯಂತ ಅಂಗನವಾಡಿ ಕೇಂದ್ರಗಳ ಮೂಲಕ ಅರ್ಹ ಫಲಾನುಭವಿಗಳಿಗೆ ಪೂರಕ ಪೌಷ್ಟಿಕಾಂಶ (SNP), ಪ್ರಿ-ಸ್ಕೂಲ್ ಅನೌಪಚಾರಿಕ ಶಿಕ್ಷಣ, ಪೌಷ್ಟಿಕಾಂಶ ಮತ್ತು ಆರೋಗ್ಯ ಶಿಕ್ಷಣ, ರೋಗನಿರೋಧಕ ಶಕ್ತಿ, ಆರೋಗ್ಯ ತಪಾಸಣೆ ಮತ್ತು ಉಲ್ಲೇಖ ಸೇವೆಗಳಂತಹ ಆರು ಸೇವೆಗಳ ಪ್ಯಾಕೇಜ್ ಅನ್ನು ಒದಗಿಸಲಾಗುತ್ತದೆ. ಆರು ಸೇವೆಗಳಲ್ಲಿ ಮೂರು ಸೇವೆಗಳು, ಅಂದರೆ, ರೋಗನಿರೋಧಕ ಶಕ್ತಿ, ಆರೋಗ್ಯ ತಪಾಸಣೆ ಮತ್ತು ಉಲ್ಲೇಖ ಸೇವೆಗಳು ಆರೋಗ್ಯಕ್ಕೆ ಸಂಬಂಧಿಸಿವೆ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯದ ಮೂಲಕಈ ಸೇವೆಗಳನ್ನು ಒದಗಿಸಲಾಗುತ್ತದೆ. ಈ ಸೇವೆಗಳನ್ನು ಅರ್ಹ ನೋಂದಾಯಿತ ಫಲಾನುಭವಿಗಳಿಗೆ ಅಂದರೆ 6 ವರ್ಷ ವಯಸ್ಸಿನ ಮಕ್ಕಳು, ದೇಶಾದ್ಯಂತದ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಮತ್ತು ರಾಜ್ಯಗಳ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಈಶಾನ್ಯ ಭಾರತದ ಎಲ್ಲಾ ಜಿಲ್ಲೆಗಳಲ್ಲಿ 14 ರಿಂದ 18 ವರ್ಷ ವಯಸ್ಸಿನ ಹದಿಹರೆಯದ ಬಾಲಕಿಯರಿಗೆ ಅಂಗನವಾಡಿ ಕೇಂದ್ರದ ವೇದಿಕೆಯ ಮೂಲಕ ಒದಗಿಸಲಾಗುತ್ತದೆ.

ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತದ ಫಲಾನುಭವಿಗಳು, ಮೂಲಸೌಕರ್ಯ ಸೌಲಭ್ಯಗಳು, ಅಂಗನವಾಡಿ ಕೇಂದ್ರಗಳಲ್ಲಿನ ಸೇವಾ ವಿತರಣೆ ಇತ್ಯಾದಿಗಳ ಜಿಲ್ಲಾವಾರು ವಿವರಗಳನ್ನು ಪೋಶನ್ ಟ್ರ್ಯಾಕರ್‌ನಿಂದ https://www.poshantracker.in/statistics ನಲ್ಲಿ ಪಡೆಯಬಹುದಾಗಿದೆ.

ಅಂಗನವಾಡಿ ಕಾರ್ಯಕರ್ತೆಯರು (AWWs) ಮತ್ತು ಅಂಗನವಾಡಿ ಸಹಾಯಕಿಯರು (AWHs) ಸ್ಥಳೀಯ ಸಮುದಾಯದಿಂದ ಆಯ್ಕೆ ಮಾಡಲಾದ ಗೌರವ ಕಾರ್ಯಕರ್ತೆಯರಾಗಿದ್ದು, ಅವರು ಮಕ್ಕಳ ಆರೈಕೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತಮ್ಮ ಸೇವೆಗಳನ್ನು ನೀಡಲು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಸ್ಥಳೀಯ ಸಮುದಾಯಕ್ಕೆ ಸಹಾಯ ಮಾಡುತ್ತಾರೆ. ಅವರ ಈ ಸೇವೆಗೆ ಗೌರವ ಧನವನ್ನು ಕಾಲಕಾಲಕ್ಕೆ ಹೆಚ್ಚಿಸಲಾಗುತ್ತದೆ. ಅಕ್ಟೋಬರ್ 1, 2018 ರಿಂದ, ಭಾರತ ಸರ್ಕಾರವು ಅಂಗನವಾಡಿ ಕೇಂದ್ರಗಳಲ್ಲಿ (AWCs) ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ತಿಂಗಳಿಗೆ ರೂ.3,000/- ದಿಂದ ರೂ.4,500/- ಕ್ಕೆ ಮತ್ತು ಅಂಗನವಾಡಿ ಸಹಾಯಕಿಯರ ಗೌರವ ಧನವನ್ನು ತಿಂಗಳಿಗೆ ರೂ.1,500/- ರಿಂದ ರೂ.2,250/- ಕ್ಕೆ ಹೆಚ್ಚಿಸಿದೆ, ಇದು ಕೇಂದ್ರ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವಿನ ವ್ಯಾಖ್ಯಾನಿತ ವೆಚ್ಚ ಹಂಚಿಕೆ ಅನುಪಾತದ ಪ್ರಕಾರವಾಗಿದೆ. ಇದರ ಜೊತೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಕಾರ್ಯಕಾರಿಣಿಗಳಿಗೆ ನೀಡುವ ಹೆಚ್ಚುವರಿ ಹಣಕಾಸಿನ ಪ್ರೋತ್ಸಾಹ ಮತ್ತು ಮರುಪೂರವು ತಮ್ಮ ಸ್ವಂತ ಸಂಪನ್ಮೂಲಗಳಿಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಇದಲ್ಲದೆ, ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ರೂ.500/- ಮತ್ತು ಅಂಗನವಾಡಿ ಸಹಾಯಕಿಯರಿಗೆ ರೂ.250/- ರಂತೆ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನವನ್ನು ಕೂಡಾ ನೀಡಲಾಗುತ್ತದೆ.

ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಸೂಚಕಗಳ ಮೇಲೆ ಎಲ್ಲಾ ಅಂಗನವಾಡಿ ಕೇಂದ್ರಗಳು (AWCs), ಅಂಗನವಾಡಿ ಕಾರ್ಯಕರ್ತೆಯರು (AWWs) ಮತ್ತು ಫಲಾನುಭವಿಗಳ ನೈಜ-ಸಮಯದ ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್‌ಗಾಗಿ ಸಚಿವಾಲಯವು 'ಪೋಶನ್ ಟ್ರ್ಯಾಕರ್' ಡಿಜಿಟಲ್ ಅಪ್ಲಿಕೇಶನ್ ಅನ್ನು ಪ್ರಮುಖ ಆಡಳಿತ ಸಾಧನವಾಗಿ ಪರಿಚಯಿಸಿದೆ. ಪೋಶನ್ ಟ್ರ್ಯಾಕರ್ ಅಪ್ಲಿಕೇಶನ್ ನಲ್ಲಿ ಸಚಿವಾಲಯಕ್ಕೆ ವಿವಿಧ ನಿಯತಾಂಕಗಳಲ್ಲಿ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಲು ಮತ್ತು ಕೋರ್ಸ್ ತಿದ್ದುಪಡಿ ಮಾಡಲು ಅನುವು ಮಾಡಿಕೊಡಲಾಗಿದೆ. ಅಂಗನವಾಡಿ ಸೇವೆಗಳಾದ ಅಂಗನವಾಡಿ ಕೇಂದ್ರಗಳನ್ನು ತೆರೆಯುವುದು, ಮಕ್ಕಳ ದೈನಂದಿನ ಹಾಜರಾತಿ, ECCE ಚಟುವಟಿಕೆಗಳು, ಮಕ್ಕಳ ಬೆಳವಣಿಗೆಯ ಮೇಲ್ವಿಚಾರಣೆ, ಬೇಯಿಸಿದ ಬಿಸಿಯೂಟ (HCM) ಮತ್ತು ಟೇಕ್-ಹೋಮ್ ಪಡಿತರ (THR), ಬೆಳವಣಿಗೆಯ ಮಾಪನ ಇತ್ಯಾದಿಗಳನ್ನು ಪರಿಶೀಲಿಸುವ ನೈಜ-ಸಮಯದ ಡೇಟಾ ಸಂಗ್ರಹಣೆಯನ್ನು ಇದು ಸುಗಮಗೊಳಿಸಿದೆ.

ಈ ಮಿಷನ್ ಸಾರ್ವತ್ರಿಕ ಯೋಜನೆಯಾಗಿದ್ದು, ಯಾವುದೇ ಫಲಾನುಭವಿಗಳು ಈ ಸೇವೆಗಳಲ್ಲಿ ನೋಂದಾಯಿಸಿಕೊಳ್ಳ ಮತ್ತು  ಈ ಸೇವೆಗಳನ್ನು ಸ್ವೀಕರಿಸಲು ಯಾವುದೇ ಅಡೆತಡೆಗಳಿಲ್ಲ. ಮುಖ ಗುರುತಿಸುವಿಕೆ ವ್ಯವಸ್ಥೆಗಾಗಿ (FRS) eKYC ಕಾರ್ಯವಿಧಾನಕ್ಕೆ ಒಳಗಾಗಲು ಸಿದ್ಧರಿರುವ ಪ್ರತಿಯೊಬ್ಬ ಫಲಾನುಭವಿಯು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಂಪೂರ್ಣವಾಗಿ ಅರ್ಹರಾಗಿರುತ್ತಾರೆ. ಇದರ ಆಧಾರ್ ಆಧಾರಿತ ಟ್ರ್ಯಾಕಿಂಗ್ ಫಲಾನುಭವಿಗಳ ಸರಿಯಾದ ಗುರುತಿಸುವಿಕೆ, ಸೋರಿಕೆಗಳನ್ನು ತಡೆಗಟ್ಟುವಿಕೆ ಮತ್ತು ನಕಲಿ ನಮೂದುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪೋಶನ್ ಟ್ರ್ಯಾಕರ್ ಡ್ಯಾಶ್‌ಬೋರ್ಡ್‌ನಲ್ಲಿ ಲಭ್ಯವಿರುವ ಡೇಟಾದ ಪ್ರಕಾರ, 99.88% ನೋಂದಾಯಿತ ಫಲಾನುಭವಿಗಳ ಆಧಾರ್ ಅನ್ನು ಪರಿಶೀಲಿಸಲಾಗಿದೆ. ಸೇವಾ ವಿತರಣೆಯ ಕೊನೆಯ ಮೈಲಿ ಟ್ರ್ಯಾಕಿಂಗ್‌ಗಾಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು (MWCD) ಪೋಶನ್ ಟ್ರ್ಯಾಕರ್‌ನಲ್ಲಿ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು (FRS) ಅಭಿವೃದ್ಧಿಪಡಿಸಿದ್ದು, ಟೇಕ್-ಹೋಮ್ ಪಡಿತರ (THR) ವಿತರಣೆಗಾಗಿ ಅರ್ಜಿಯನ್ನು ಪೋಶನ್ ಟ್ರ್ಯಾಕರ್‌ನಲ್ಲಿ ನೋಂದಾಯಿಸಲಾದ ಉದ್ದೇಶಿತ ಫಲಾನುಭವಿಗಳಿಗೆ ಮಾತ್ರ ಇದರ ಪ್ರಯೋಜನವನ್ನು ನೀಡಲಾಗುವುದು ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ.

ಫಲಾನುಭವಿಗಳಿಗೆ ಟೇಕ್-ಹೋಮ್ ಪಡಿತರವನ್ನು (THR) ಅಡೆತಡೆಯಿಲ್ಲದೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಪೋಶನ್ ಟ್ರ್ಯಾಕರ್‌ನಲ್ಲಿ ನಾಮಿನಿ ಮಾಡ್ಯೂಲ್ ಅನ್ನು ಸಹ ಪರಿಚಯಿಸಲಾಗಿದೆ. ಯಾವುದೇ ಕಾರಣಗಳಿಂದಾಗಿ, ನೋಂದಾಯಿತ ಫಲಾನುಭವಿಯು ಮುಖ ಗುರುತಿಸುವಿಕೆ ವ್ಯವಸ್ಥೆಯ ಮೂಲಕ ತಮ್ಮ ಟೇಕ್-ಹೋಮ್ ಪಡಿತರವನ್ನು ಪಡೆಯಲು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ಅವರು ತಮ್ಮ ಟೇಕ್-ಹೋಮ್ ಪಡಿತರವನ್ನು ಪಡೆಯಲು ತಮ್ಮ ಪರವಾಗಿ ನಾಮಿನಿಯನ್ನು ಆಯ್ಕೆ ಮಾಡಬಹುದು. ನಾಮಿನಿಯು ಒಮ್ಮೆ ಮಾತ್ರ ಇ-ಕೆವೈಸಿಗೆ ಒಳಗಾಗಬೇಕಾಗುತ್ತದೆ, ಆದರೆ ಫಲಾನುಭವಿಯ ಪರವಾಗಿ ಟೇಕ್-ಹೋಮ್ ಪಡಿತರವನ್ನು ಸ್ವೀಕರಿಸಲು ಪ್ರತಿ ಬಾರಿಯೂ ಮುಖ ಹೊಂದಾಣಿಕೆ ಮಾಡಲಾಗುತ್ತದೆ. ನಾಮಿನಿಯನ್ನು ಸೇರಿಸಿದ ನಂತರವೂ, ಫಲಾನುಭವಿಯು ಬಯಸಿದರೆ, ಅವರು ಇನ್ನೂ ಟೇಕ್-ಹೋಮ್ ಪಡಿತರವನ್ನು ಪಡೆಯುವುದನ್ನು ಮುಂದುವರಿಸಬಹುದು. ಈ ವ್ಯವಸ್ಥೆಯು ಫಲಾನುಭವಿಗಳ ಜೀವನ ಸುಲಭತೆಯನ್ನು ಸುಧಾರಿಸಿದೆ.

ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0, ಮಿಷನ್ ಶಕ್ತಿ ಮತ್ತು ಮಿಷನ್ ವಾತ್ಸಲ್ಯ ಎಂಬ ಮೂರು ಮಿಷನ್‌ಗಳ ಅಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಸಂಸ್ಥೆಗಳು, ವ್ಯಕ್ತಿಗಳು, ಕಾರ್ಪೊರೇಟ್‌ಗಳೊಂದಿಗೆ ಸಹಯೋಗವನ್ನು ಸುಲಭಗೊಳಿಸಲು ಸಚಿವಾಲಯವು ಪಂಖುಡಿ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು https://pankhudi.wcd.gov.in/web/home ಲಿಂಕ್‌ನಿಂದ ಪಡೆಯಬಹುದಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಖಾತೆ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ಮಾಹಿತಿಯನ್ನು ನೀಡಿದ್ದಾರೆ.

 

*****


(रिलीज़ आईडी: 2288869) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी , Tamil