ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ 2025ಕ್ಕೆ ಆನ್ ಲೈನ್ ನಾಮನಿರ್ದೇಶನಗಳಿಗೆ ಕರೆ


ಭೂಮಿ, ನೀರು, ಆಕಾಶ ಸಾಹಸ ಮತ್ತು ಜೀವಮಾನ ಸಾಧನೆಯಲ್ಲಿ ಶ್ರೇಷ್ಠತೆಯನ್ನು ಗೌರವಿಸುವ ಪ್ರಶಸ್ತಿ

प्रविष्टि तिथि: 21 JUL 2026 4:10PM by PIB Bengaluru

ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಸಾಹಸ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಗಳಿಗಾಗಿ ನೀಡಲಾಗುವ ಭಾರತದ ಅತ್ಯುನ್ನತ ರಾಷ್ಟ್ರೀಯ ಗೌರವವಾದ 'ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ (ಟಿಎನ್ ಎನ್ ಎ ಎ) 2025' ಗಾಗಿ ಆನ್ ಲೈನ್ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ. ಗೃಹ ಸಚಿವಾಲಯದ ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್ (National Awards Portal) ಮೂಲಕ ಜುಲೈ 21 ರಿಂದ ಆಗಸ್ಟ್ 20, 2026 ರವರೆಗೆ ನಾಮನಿರ್ದೇಶನಗಳನ್ನು ಸಲ್ಲಿಸಬಹುದಾಗಿದೆ.

ಸಾಹಸ ಕ್ಷೇತ್ರದಲ್ಲಿನ ಅಸಾಧಾರಣ ಸಾಧನೆಗಳನ್ನು ಗುರುತಿಸಲು ಹಾಗೂ ಯುವಕರಲ್ಲಿ ಸಹನಶೀಲತೆ, ಧೈರ್ಯ, ತಂಡದ ಕೆಲಸ ಮತ್ತು ನಾಯಕತ್ವದ ಗುಣಗಳನ್ನು ಪ್ರೇರೇಪಿಸಲು ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಇದನ್ನು ನಾಲ್ಕು ವಿಭಾಗಗಳಲ್ಲಿ ನೀಡಲಾಗುತ್ತದೆ—ಭೂ ಸಾಹಸ,  ಜಲ/ಸಮುದ್ರ ಸಾಹಸ, ಆಕಾಶದಲ್ಲಿ ಸಾಹಸ  ಮತ್ತು ಜೀವಮಾನದ ಸಾಧನೆ. ಭಾರತೀಯ ಯುವಕರಲ್ಲಿ ಸಾಹಸ ಚಟುವಟಿಕೆಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಸಹ ಈ ಪ್ರಶಸ್ತಿಯ ಉದ್ದೇಶವಾಗಿದೆ.

ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯು ಕಂಚಿನ ಪ್ರತಿಮೆ, ಪ್ರಮಾಣಪತ್ರ, ರೇಷ್ಮೆ ಟೈ ಹೊಂದಿರುವ ಬ್ಲೇಜರ್ (ಅಥವಾ ಸೀರೆ) ಮತ್ತು ₹15 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ. ಈ ಪ್ರಶಸ್ತಿಯು ಅರ್ಜುನ ಪ್ರಶಸ್ತಿಗೆ ಸಮಾನವಾದ ಸ್ಥಾನಮಾನವನ್ನು ಹೊಂದಿದ್ದು, ಭಾರತ ಸರ್ಕಾರವು ಇದನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳೊಂದಿಗೆ ಪ್ರಧಾನ ಮಾಡುತ್ತದೆ.

ಪ್ರಮುಖ ವಿವರಗಳು

ಪ್ರಶಸ್ತಿ

ತೇನ್ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ

ವಿಭಾಗಗಳು

ಭೂಮಿ, ಜಲ (ಸಮುದ್ರ), ಆಕಾಶ ಮತ್ತು ಜೀವಮಾನದ ಸಾಧನೆ

ಬಹುಮಾನ

ಕಂಚಿನ ಪ್ರತಿಮೆ, ಪ್ರಮಾಣಪತ್ರ, ಬ್ಲೇಜರ್/ಸೀರೆ ಮತ್ತು ₹15 ಲಕ್ಷ ನಗದು

ಸ್ಥಾನಮಾನ

ಅರ್ಜುನ ಪ್ರಶಸ್ತಿಗೆ ಸಮಾನ

ನಾಮನಿರ್ದೇಶನದ ಅವಧಿ

21 ಜುಲೈ – 20 ಆಗಸ್ಟ್ 2026

ಅರ್ಜಿ ಸಲ್ಲಿಸುವ ವಿಧಾನ

ಗೃಹ ಸಚಿವಾಲಯದ ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್ ಮೂಲಕ ಆನ್‌ಲೈನ್ (https://awards.gov.in)

ಸಾಹಸ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿಗಳನ್ನು ಗೃಹ ಸಚಿವಾಲಯದ ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಸಲ್ಲಿಸಬೇಕು. ಅರ್ಜಿದಾರರು ಸಂಬಂಧಪಟ್ಟ ರಾಜ್ಯ ಸರ್ಕಾರದ ಯುವ/ಕ್ರೀಡಾ ಇಲಾಖೆ ಅಥವಾ ಮಾನ್ಯತೆ ಪಡೆದ ಸಾಹಸ ಸಂಸ್ಥೆಗಳಿಂದ ಶಿಫಾರಸುಗಳನ್ನು ಪಡೆಯಬಹುದು. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಶಿಫಾರಸುಗಳು ಕಡ್ಡಾಯವಾಗಿವೆ. ಸಚಿವಾಲಯವು ವಿವಿಧ ಸಂಸ್ಥೆಗಳಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಬಹುದು ಅಥವಾ ಅರ್ಹ ವ್ಯಕ್ತಿಗಳನ್ನು ಸ್ವತಃ ನಾಮನಿರ್ದೇಶನ ಮಾಡಬಹುದು.

ಅರ್ಜಿದಾರರು ಅಗತ್ಯವಿರುವಲ್ಲಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಕಾಲಾನುಕ್ರಮದಲ್ಲಿ ವರ್ಷವಾರು ಸಾಧನೆಗಳನ್ನು ಒಳಗೊಂಡಿರುವ ಒಂದೇ  ಸೂಚ್ಯಂಕಿತ (Indexed) ಪಿಡಿಎಫ್ ಅನ್ನು ಅಪ್ ಲೋಡ್ ಮಾಡಬೇಕಾಗುತ್ತದೆ. ಭೂ, ಜಲ ಮತ್ತು ಆಕಾಶ ಸಾಹಸ ವಿಭಾಗಗಳಿಗೆ, ಆಯ್ಕೆ ಪ್ರಕ್ರಿಯೆಯಲ್ಲಿ ಕಳೆದ ಮೂರು   ಕ್ಯಾಲೆಂಡರ್ ವರ್ಷಗಳ ಸಾಧನೆಗಳನ್ನು ಪರಿಗಣಿಸಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ನಾಮನಿರ್ದೇಶನಗಳನ್ನು ಸಲ್ಲಿಸಬಹುದು ಮತ್ತು ವಿವರವಾದ ಮಾರ್ಗದರ್ಶಿ ಸೂತ್ರಗಳು, ಅರ್ಹತಾ ಮಾನದಂಡಗಳು, ಪದೆ ಪದೆ ಕೇಳಲಾಗುವ ಪ್ರಶ್ನೆಗಳು (FAQ) ಮತ್ತು ಅರ್ಜಿ ನಮೂನೆಯನ್ನು ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್ (https://awards.gov.in) ಅಥವಾ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಜಾಲತಾಣದ 'Latest News' ವಿಭಾಗದ ಮೂಲಕ ಪಡೆಯಬಹುದು.

 

*****


(रिलीज़ आईडी: 2287152) आगंतुक पटल : 19
इस विज्ञप्ति को इन भाषाओं में पढ़ें: English , Urdu , हिन्दी , Gujarati , Telugu , Malayalam