ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಹಿರಿಯ ನಾಗರಿಕರಿಗಾಗಿ ರಾಷ್ಟ್ರೀಯ ಸಹಾಯವಾಣಿ 14567
5.36 ಲಕ್ಷಕ್ಕೂ ಹೆಚ್ಚು ನಾಗರಿಕರು ತೆಗೆದುಕೊಂಡ ರಾಷ್ಟ್ರೀಯ ಪ್ರತಿಜ್ಞೆ, ಹಿರಿಯ ನಾಗರಿಕರ ಘನತೆ, ಕಾಳಜಿ ಮತ್ತು ಗೌರವಕ್ಕೆ ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ
प्रविष्टि तिथि:
15 JUL 2026 6:07PM by PIB Bengaluru
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹಿರಿಯ ನಾಗರಿಕರಿಗೆ ಘನತೆ, ಭದ್ರತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಜೀವನವನ್ನು ಖಚಿತಪಡಿಸಿಕೊಳ್ಳಲು ತನ್ನ ಜವಾಬ್ದಾರಿಯನ್ನು ನಿರಂತರವಾಗಿ ಅನುಸರಿಸುತ್ತಿದೆ. ಹಿರಿಯ ನಾಗರಿಕರಿಗಾಗಿ ರಾಷ್ಟ್ರೀಯ ಸಹಾಯವಾಣಿ 'ಎಲ್ಡರ್‌ಲೈನ್ 14567' ಮೂಲಕ ಮತ್ತು 'ಏಜಿಂಗ್ ವಿತ್ ಡಿಗ್ನಿಟಿ' ಅಭಿಯಾನದ ಅಡಿಯಲ್ಲಿ ರಾಷ್ಟ್ರವ್ಯಾಪಿ 'ಟೇಕ್ ಎ ಪ್ಲೆಡ್ಜ್' ಉಪಕ್ರಮದ ಮೂಲಕವೂ ಇದನ್ನು ಬಲಪಡಿಸುತ್ತಿದೆ. ಈ ಉಪಕ್ರಮಗಳು ಪ್ರತಿಯೊಬ್ಬ ಹಿರಿಯ ನಾಗರಿಕರನ್ನು ಗೌರವಿಸುವ, ರಕ್ಷಿಸುವ ಮತ್ತು ಸಬಲೀಕರಣಗೊಳಿಸುವ ಸಹಾನುಭೂತಿಯ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸುತ್ತವೆ.
ಹಿರಿಯ ನಾಗರಿಕರಿಗೆ ಗೌರವವು ಕೇವಲ ಸಾಮಾಜಿಕ ಜವಾಬ್ದಾರಿಯಲ್ಲ, ಬದಲು ಸಮಗ್ರ ಮತ್ತು ಸಹಾನುಭೂತಿಯ ಭಾರತವನ್ನು ನಿರ್ಮಿಸುವ ಕಡೆಗೆ ಸಾಮೂಹಿಕ ರಾಷ್ಟ್ರೀಯ ಬದ್ಧತೆಯಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಹೇಳಿದರು. ಈ ಬಗ್ಗೆ ಪ್ರತಿಜ್ಞೆ ತೆಗೆದುಕೊಳ್ಳಲು ಮತ್ತು ಪ್ರತಿಯೊಬ್ಬ ಹಿರಿಯ ವ್ಯಕ್ತಿಯು ಸುರಕ್ಷತೆ, ಘನತೆ ಮತ್ತು ಗೌರವದಿಂದ ಬದುಕುವ ಸಮಾಜಕ್ಕೆ ಕೊಡುಗೆ ನೀಡಲು ನಾಗರಿಕರು ಸಚಿವಾಲಯದ ಏಜಿಂಗ್ ವಿದ್ ಡಿಗ್ನಿಟಿ ಪೋರ್ಟಲ್ (ಜಾಲತಾಣಕ್ಕೆ) ಭೇಟಿ ನೀಡುವಂತೆ ಅವರು ಆಗ್ರಹಿಸಿದರು.
ಎಲ್ಡರ್‌ಲೈನ್ (14567) ದೇಶಾದ್ಯಂತ ಹಿರಿಯ ನಾಗರಿಕರ ಕಳವಳ ಮತ್ತು ಕುಂದುಕೊರತೆಗಳನ್ನು ಪರಿಹರಿಸಲು ಮೀಸಲಾಗಿರುವ ಟೋಲ್-ಫ್ರೀ, ಪ್ಯಾನ್-ಇಂಡಿಯಾ (ಉಚಿತ ದೇಶವ್ಯಾಪೀ) ಸಹಾಯವಾಣಿಯಾಗಿದೆ.
ಅಕ್ಟೋಬರ್ 1, 2021 ರಂದು ರಾಷ್ಟ್ರಕ್ಕೆ ಸಮರ್ಪಿತವಾದ ಈ ಸಹಾಯವಾಣಿಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರದ ಏಳು ದಿನಗಳು ಬೆಳಿಗ್ಗೆ 8:00 ರಿಂದ ರಾತ್ರಿ 8:00 ರವರೆಗೆ ಕಾರ್ಯನಿರ್ವಹಿಸುತ್ತದೆ. ಅಗತ್ಯವಿರುವ ಹಿರಿಯ ನಾಗರಿಕರಿಗೆ ಮಾಹಿತಿ, ಮಾರ್ಗದರ್ಶನ, ಭಾವನಾತ್ಮಕ ಬೆಂಬಲ ಮತ್ತು ಕ್ಷೇತ್ರ ಮಧ್ಯಸ್ಥಿಕೆಗಳನ್ನು ಒದಗಿಸಲು ಇದು ಏಕ-ಗವಾಕ್ಷ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಎಲ್ಡರ್‌ಲೈನ್ ಮೂಲಕ ನೀಡಲಾಗುವ ಸೇವೆಗಳಲ್ಲಿ ಆರೋಗ್ಯ ಸೌಲಭ್ಯಗಳು, ವೃದ್ಧಾಶ್ರಮಗಳು, ಡೇ-ಕೇರ್ ಕೇಂದ್ರಗಳು, ಆರೈಕೆದಾರರು ಮತ್ತು ಹಿರಿಯ-ಸ್ನೇಹಿ ಉತ್ಪನ್ನಗಳ ಬಗ್ಗೆ ಮಾಹಿತಿ; ಕಾನೂನು ಸಮಸ್ಯೆಗಳ ಕುರಿತು ಮಾರ್ಗದರ್ಶನ, ಪಿಂಚಣಿ ಸಂಬಂಧಿತ ವಿಷಯಗಳು, ಸರ್ಕಾರಿ ಯೋಜನೆಗಳು, ನಿರ್ವಹಣಾ ಸಮಸ್ಯೆಗಳು ಮತ್ತು ವಿವಾದ ಪರಿಹಾರ ಸೇರಿವೆ. ಇದರ ಜೊತೆಗೆ, ಎಲ್ಡರ್‌ಲೈನ್ ನಿಂದನೆ, ನಿರ್ಲಕ್ಷ್ಯ, ರಕ್ಷಣೆ, ನಿರಾಶ್ರಿತ ಹಿರಿಯ ನಾಗರಿಕರ ಪುನರ್ಮಿಲನ ಮತ್ತು ಒಂಟಿತನ, ಆತಂಕ, ಕೌಟುಂಬಿಕ ವಿವಾದಗಳು ಹಾಗು ಇತರ ಮಾನಸಿಕ ಸಾಮಾಜಿಕ ಕಾಳಜಿಗಳನ್ನು ಪರಿಹರಿಸಲು ಭಾವನಾತ್ಮಕ ಬೆಂಬಲವನ್ನು ಒಳಗೊಂಡ ಪ್ರಕರಣಗಳಿಗೆ ಕ್ಷೇತ್ರ ಮಧ್ಯಪ್ರವೇಶವನ್ನು ಒಳಗೊಂಡಿದೆ.

ಸಹಾಯವಾಣಿಗೆ ಪೂರಕವಾಗಿ ಸಚಿವಾಲಯದ "ಟೇಕ್ ಎ ಪ್ಲೆಡ್ಜ್" ಅಭಿಯಾನವು ದೇಶಾದ್ಯಂತದ ನಾಗರಿಕರು ಹಿರಿಯ ನಾಗರಿಕರ ಕಲ್ಯಾಣಕ್ಕೆ ತಮ್ಮ ಬದ್ಧತೆಯನ್ನು ಪ್ರತಿಜ್ಞೆ ಮಾಡುವ ಮೂಲಕ ವಯೋಸಹಜ ಸಮಾಜವನ್ನು ರಚಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ.
ಈ ಪ್ರತಿಜ್ಞೆಯ ಮೂಲಕ, ನಾಗರಿಕರು ತಮ್ಮ ಕುಟುಂಬ ಮತ್ತು ಸಮುದಾಯದಲ್ಲಿನ ಹಿರಿಯ ನಾಗರಿಕರನ್ನು ತಮ್ಮ ಜೀವನದುದ್ದಕ್ಕೂ ಗೌರವಿಸಲು, ಪ್ರೀತಿಸಲು, ಕಾಳಜಿ ವಹಿಸಲು ಮತ್ತು ಹಿರಿಯ ನಾಗರಿಕರನ್ನು ದಯೆ, ಸಹಾನುಭೂತಿ ಮತ್ತು ಅನುಭೂತಿಯಿಂದ ನಡೆಸಿಕೊಳ್ಳಲು ಸಂಕಲ್ಪ ಮಾಡುತ್ತಾರೆ. ಈ ಪ್ರತಿಜ್ಞೆಯು ಅವರ ಜ್ಞಾನವನ್ನು, ಅನುಭವವನ್ನು ಗೌರವಿಸಲು ಮತ್ತು ಅವರ ಧ್ವನಿಯಾಗಲು ಹಾಗು ಹಿರಿಯ ನಾಗರಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳ ಬಗ್ಗೆ ಜಾಗೃತಿ ಮೂಡಿಸಲು ಗಮನಹರಿಸುತ್ತದೆ, ಇದು ಹಿರಿಯ ನಾಗರಿಕರ ಮೇಲಿನ ದೌರ್ಜನ್ಯದ ವಿರುದ್ಧ ನಿಲ್ಲುವಂತೆ ಮಾಡುತ್ತದೆ ಮತ್ತು ಹಿರಿಯ ನಾಗರಿಕರು ಗೌರವ, ಪ್ರೀತಿ ಹಾಗು ಘನತೆಯಿಂದ ಬದುಕುವ ಬೆಂಬಲ ಮತ್ತು ಅಂತರ್ಗತ ಸಮಾಜವನ್ನು ನಿರ್ಮಿಸುವತ್ತ ಸಾಮೂಹಿಕವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
ಈ ಅಭಿಯಾನದಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮೂಲಕ ಸಚಿವಾಲಯವು 5.36 ಲಕ್ಷಕ್ಕೂ ಹೆಚ್ಚು ನಾಗರಿಕರು ಈಗಾಗಲೇ ಹಿರಿಯರ ಆರೈಕೆ ಮತ್ತು ಸಾಮಾಜಿಕ ಜವಾಬ್ದಾರಿಯ ಬಗ್ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿರುವುದಕ್ಕೆ ಸಾಕ್ಷಿಯಾಗಿದೆ..
ಈ ಪ್ರತಿಜ್ಞೆ ಸ್ವೀಕೃತಿಯ ಭಾಗವಾಗಿ, ಭಾಗವಹಿಸುವವರು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ತಮ್ಮ ಸಮರ್ಪಣೆಯ ಸಂಕೇತವಾಗಿ ಬದ್ಧತೆಗೆ ಸಂಬಂಧಿಸಿ ಡಿಜಿಟಲ್ ಪ್ರಮಾಣಪತ್ರವನ್ನು ಪಡೆಯುತ್ತಾರೆ.
"ಗೌರವದಿಂದ ವಯಸ್ಸಾಗುವಿಕೆ" ಎಂಬ ದೃಷ್ಟಿಕೋನವನ್ನು ಬೆಂಬಲಿಸುವ ಮತ್ತು ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮೂಲಕ ಈ ರಾಷ್ಟ್ರವ್ಯಾಪಿ ಆಂದೋಲನದ ಭಾಗವಾಗಲು ಸಚಿವಾಲಯವು ಪ್ರತಿಯೊಬ್ಬ ನಾಗರಿಕರನ್ನು ಆಗ್ರಹಿಸುತ್ತದೆ.
*****
(रिलीज़ आईडी: 2285260)
आगंतुक पटल : 6