ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ನಾವು ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ನಲ್ಲಿ ವಿಶ್ವಾಸಾರ್ಹ ಜಾಗತಿಕ ತಾಣವಾಗಿ ಹೊರಹೊಮ್ಮುತ್ತಿರುವುದರಿಂದ ಸುರಕ್ಷಿತ ಕೆಲಸದ ಸ್ಥಳ ಮತ್ತು ಹೆಚ್ಚಿನ ಮೌಲ್ಯದ ಉದ್ಯೋಗಗಳು ಭಾರತದ ಚಿಪ್ ಪರಿಸರ ವ್ಯವಸ್ಥೆಯ ಗುಣಲಕ್ಷಣಗಳನ್ನು ನಿರೂಪಿಸುತ್ತವೆ
ತಾಂತ್ರಿಕ ಸ್ವಾವಲಂಬನೆಯನ್ನು ಬಲಪಡಿಸುವ ಭಾರತದ ಸೆಮಿಕಂಡಕ್ಟರ್ ಮಿಷನ್ ಚಿಪ್ ವಿನ್ಯಾಸದಿಂದ ಹಿಡಿದು ಸಂಪೂರ್ಣ ಉತ್ಪಾದನೆಯವರೆಗೆ ವಿಸ್ತರಿಸುತ್ತದೆ
ಪ್ರಗತಿಪರ ರಾಜ್ಯಗಳು ಹಾದಿಯನ್ನು ರೂಪಿಸುತ್ತಿವೆ, ಆರು ರಾಜ್ಯಗಳಲ್ಲಿ 12 ಸೆಮಿಕಂಡಕ್ಟರ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 3 ಯೋಜನೆಗಳು ಈಗಾಗಲೇ ಚಿಪ್ ಗಳನ್ನು ಹೊರತಂದಿವೆ
ಸೆಮಿಕಾನ್ ಇಂಡಿಯಾ ಕಾರ್ಯಕ್ರಮ 2.0 ಮೂಲಕ ಭಾರತವು 2035 ರ ವೇಳೆಗೆ 200 ಬಿಲಿಯನ್ ಡಾಲರ್ ಮೌಲ್ಯದ ದೇಶೀಯ ಸೆಮಿಕಂಡಕ್ಟರ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದೆ. ಇದು ಭಾರತದಲ್ಲಿ ಹೆಚ್ಚು ಸುಧಾರಿತ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ದಾರಿ ಮಾಡಿಕೊಡುತ್ತದೆ
प्रविष्टि तिथि:
15 JUL 2026 3:39PM by PIB Bengaluru
ಅರೆವಾಹಕಗಳು (ಸೆಮಿಕಂಡಕ್ಟರ್ ಗಳು) ಬಹಳ ವಿರಳವಾಗಿ ಗಮನವನ್ನು ಸೆಳೆಯುತ್ತವೆ, ಆದರೂ ಅವು ಆಧುನಿಕ ಜೀವನದ ಪ್ರತಿಯೊಂದು ಅಂಶವನ್ನು ಸದ್ದಿಲ್ಲದೆ ಶಕ್ತಿಯುತಗೊಳಿಸುತ್ತವೆ. ಯುಪಿಐ ಪಾವತಿ ಮಾಡಲು ಬಳಸುವ ಸ್ಮಾರ್ಟ್ಫೋನ್ ಮತ್ತು ನಗರದ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಂದ ಹಿಡಿದು ಆಸ್ಪತ್ರೆಗಳಲ್ಲಿನ ವೈದ್ಯಕೀಯ ಉಪಕರಣಗಳು, ಬಾಹ್ಯಾಕಾಶದಲ್ಲಿನ ಉಪಗ್ರಹಗಳು ಮತ್ತು ಆಡಳಿತವನ್ನು ಬೆಂಬಲಿಸುವ ಡಿಜಿಟಲ್ ಮೂಲಸೌಕರ್ಯದವರೆಗೆ, ಸಣ್ಣ ಸೆಮಿಕಂಡಕ್ಟರ್ ಚಿಪ್ ಗಳು ಇಂದಿನ ಪರಸ್ಪರ ಸಂಪರ್ಕಿತ ಪ್ರಪಂಚದ ಅಡಿಪಾಯವಾಗಿವೆ. ಕೃತಕ ಬುದ್ಧಿಮತ್ತೆ, 5ಜಿ, ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ನಂತಹ ತಂತ್ರಜ್ಞಾನಗಳು ದೈನಂದಿನ ಜೀವನದಲ್ಲಿ ಹೆಚ್ಚು ಅವಿಭಾಜ್ಯ ಅಂಗವಾಗುತ್ತಿದ್ದಂತೆ, ಸೆಮಿಕಂಡಕ್ಟರ್ ಗಳ ಬೇಡಿಕೆಯು ಪ್ರಪಂಚದಾದ್ಯಂತ ಅಭೂತಪೂರ್ವ ವೇಗದಲ್ಲಿ ಬೆಳೆಯುತ್ತಿದೆ.
ಭಾರತಕ್ಕೆ ಇದು ಅವಕಾಶ ಮತ್ತು ವ್ಯೂಹಾತ್ಮಕ ಅನಿವಾರ್ಯತೆ ಎರಡನ್ನೂ ಒದಗಿಸುತ್ತದೆ. ಕಳೆದ ದಶಕದಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಗಳಲ್ಲಿ ಒಂದನ್ನು ನಿರ್ಮಿಸಿದ ದೇಶವು ಈಗ ಸಮಗ್ರ ಅರೆವಾಹಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ ತನ್ನ ತಾಂತ್ರಿಕ ಪ್ರಯಾಣದ ಮುಂದಿನ ಹಂತವನ್ನು ಪ್ರವೇಶಿಸುತ್ತಿದೆ. ಸೆಮಿಕಾನ್ ಇಂಡಿಯಾ ಕಾರ್ಯಕ್ರಮ 2.0 ಮೂಲಕ, ವಿನ್ಯಾಸ ಮತ್ತು ಫ್ಯಾಬ್ರಿಕೇಶನ್ ನಿಂದ ಹಿಡಿದು ಸುಧಾರಿತ ಪ್ಯಾಕೇಜಿಂಗ್, ವಸ್ತುಗಳು, ಉಪಕರಣಗಳು, ಸಂಶೋಧನೆ ಮತ್ತು ನುರಿತ ಪ್ರತಿಭೆಗಳವರೆಗೆ ಸಂಪೂರ್ಣ ಮೌಲ್ಯ ಸರಪಳಿಯನ್ನು ಬಲಪಡಿಸಲು ಸರ್ಕಾರವು ಚಿಪ್ ತಯಾರಿಕೆಯಿಂದಾಚೆಗೂ ತನ್ನ ಗಮನವನ್ನು ವಿಸ್ತರಿಸುತ್ತಿದೆ.
ಒಂದು ದಶಕದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಬೆಳವಣಿಗೆಯನ್ನು ಅನುಸರಿಸಿ ಮುನ್ನಡೆ
ಸೆಮಿಕಂಡಕ್ಟರ್ ತಾಣವಾಗಿ ಭಾರತದ ಹೊರಹೊಮ್ಮುವಿಕೆಯು ಎಲೆಕ್ಟ್ರಾನಿಕ್ಸ್ ವಲಯದಾದ್ಯಂತ ನಿರಂತರ ಸುಧಾರಣೆಗಳ ಮೇಲೆ ಅವಲಂಬಿತವಾಗಿದೆ. ಎಲೆಕ್ಟ್ರಾನಿಕ್ಸ್ ಕುರಿತ ರಾಷ್ಟ್ರೀಯ ನೀತಿ, ಸ್ಪೆಕ್ಸ್, ಇಎಂಸಿ 2.0, ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಉತ್ಪಾದನೆ ಆಧರಿತ ಪ್ರೋತ್ಸಾಹಕ (ಪಿಎಲ್ಐ) ಯೋಜನೆ ಮತ್ತು ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಉತ್ಪಾದನಾ ಯೋಜನೆ (ಇಸಿಎಂಎಸ್) ಸೇರಿದಂತೆ ಸತತ ಪೂರಕ ನೀತಿ ಉಪಕ್ರಮಗಳು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ (ಇಎಸ್‌ಡಿಎಂ) ಪರಿಸರ ವ್ಯವಸ್ಥೆಯನ್ನು ಪರಿವರ್ತಿಸಿವೆ.
ಕಳೆದ ಹನ್ನೊಂದು ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಏಳು ಪಟ್ಟು, ಎಲೆಕ್ಟ್ರಾನಿಕ್ಸ್ ರಫ್ತು ಹನ್ನೊಂದು ಪಟ್ಟು, ಮೊಬೈಲ್ ಫೋನ್ ಉತ್ಪಾದನೆ 32 ಪಟ್ಟು ಮತ್ತು ಮೊಬೈಲ್ ಫೋನ್ ರಫ್ತು 165 ಪಟ್ಟು ಹೆಚ್ಚಾಗಿದೆ. ಇಂದು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿದ್ದು, ಸೆಮಿಕಂಡಕ್ಟರ್ ಉತ್ಪಾದನೆಗೆ ಸಂಬಂಧಿಸಿ ದೇಶದ ಪರಿವರ್ತನೆಗೆ ಬಲವಾದ ಉತ್ಪಾದನಾ ನೆಲೆಯನ್ನು ಒದಗಿಸುತ್ತದೆ.
ಪ್ರಗತಿಪರ ರಾಜ್ಯಗಳು ಭಾರತದ ಸೆಮಿಕಂಡಕ್ಟರ್ ಬೆಳವಣಿಗೆಯನ್ನು ಮುನ್ನಡೆಸುತ್ತಿವೆ
ಪ್ರಗತಿಪರ ರಾಜ್ಯಗಳು ಭಾರತದ ಸೆಮಿಕಂಡಕ್ಟರ್ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿವೆ, ಆರು ರಾಜ್ಯಗಳಲ್ಲಿ 12 ಸೆಮಿಕಂಡಕ್ಟರ್ ಯೋಜನೆಗಳನ್ನು ಅನುಮೋದಿಸಲಾಗಿದೆ. ಮೂರು ಘಟಕಗಳು ಈಗಾಗಲೇ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿವೆ, ಇತರ ಎರಡು ವರ್ಷದ ಅಂತ್ಯದ ವೇಳೆಗೆ ಉತ್ಪಾದನೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ, ಇದು ದೇಶದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸುತ್ತದೆ. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ಭಾರತವು ವಿಶ್ವಾಸಾರ್ಹ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಸ್ಥಿರವಾಗಿ ನಿರ್ಮಿಸುತ್ತಿದೆ, ಅಲ್ಲಿ ದೇಶದಲ್ಲಿ ವಿನ್ಯಾಸಗೊಳಿಸಲಾದ ಮತ್ತು ತಯಾರಿಸಿದ ಚಿಪ್ ಗಳು ಅವುಗಳ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ, ಪಾರದರ್ಶಕ ನೀತಿಗಳು, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸ್ಥಿರ ವ್ಯಾಪಾರ ವಾತಾವರಣದಿಂದ ಬೆಂಬಲಿತವಾಗಿವೆ. ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯ ತ್ವರಿತ ವಿಸ್ತರಣೆಯು ಕಳೆದ ದಶಕದಲ್ಲಿ ಸುಮಾರು 25 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ.ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಾರ್ಯಪಡೆಯಲ್ಲಿ ಮಹಿಳೆಯರು ಸುಮಾರು ಶೇ.30 ರಷ್ಟಿದ್ದರೆ, ಮೊಬೈಲ್ ಉತ್ಪಾದನಾ ಪರಿಸರ ವ್ಯವಸ್ಥೆಯು ಮೌಲ್ಯ ಸರಪಳಿಯಲ್ಲಿ ಸುಮಾರು 12 ಲಕ್ಷ ಜನರನ್ನು ನೇಮಿಸಿಕೊಂಡಿದೆ, ಮೊಬೈಲ್ ಉತ್ಪಾದನೆಯಲ್ಲಿ ನೇರ ಉದ್ಯೋಗಿಗಳಲ್ಲಿ ಮಹಿಳೆಯರು ಸುಮಾರು ಶೇ.70 ರಷ್ಟಿದ್ದಾರೆ, ಇದು ಅಂತರ್ಗತ ಕೈಗಾರಿಕಾ ಬೆಳವಣಿಗೆಗೆ ಈ ವಲಯದ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ.
ಸೆಮಿಕಾನ್ ಇಂಡಿಯಾ ಕಾರ್ಯಕ್ರಮ: ಅಡಿಪಾಯ ಹಾಕುವ ಕಾರ್ಯಕ್ರಮ
76,000 ಕೋಟಿ ರೂ.ಗಳ ವೆಚ್ಚದೊಂದಿಗೆ 2021ರ ಡಿಸೆಂಬರ್ ನಲ್ಲಿ ಅನುಮೋದಿಸಲಾದ ಸೆಮಿಕಾನ್ ಇಂಡಿಯಾ ಕಾರ್ಯಕ್ರಮವನ್ನು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಪೂರೈಕೆ ಸರಪಳಿ ಅಡೆತಡೆಗಳಿಗೆ ಪ್ರತಿಕ್ರಿಯೆಯಾಗಿ ಜಾಗತಿಕವಾಗಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಪ್ರಾರಂಭಿಸಲಾಯಿತು. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್ಎಂ) ಮೂಲಕ ಜಾರಿಗೆ ತರಲಾದ ಈ ಕಾರ್ಯಕ್ರಮವು ಜಾಗತಿಕವಾಗಿ ಸ್ಪರ್ಧಾತ್ಮಕ ಪ್ರೋತ್ಸಾಹಕಗಳು, ಪಾರಿ-ಪಾಸು ಧನಸಹಾಯ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯನ್ನು ಬೆಂಬಲಿಸಲು ನಿಧಿಗಳ ಹೊಂದಾಣಿಕೆಯ ಬಳಕೆಯೊಂದಿಗೆ ಮಿಷನ್-ಮೋಡ್ ವಿಧಾನವನ್ನು ಅಳವಡಿಸಿಕೊಂಡಿದೆ
ಪ್ರಾಥಮಿಕವಾಗಿ ಫ್ಯಾಬ್ರಿಕೇಶನ್ ಮೇಲೆ ಕೇಂದ್ರೀಕರಿಸಿದ ಹಿಂದಿನ ಪ್ರಯತ್ನಗಳಿಗಿಂತ ಭಿನ್ನವಾಗಿ, ಜಾಗತಿಕವಾಗಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್ ಉದ್ಯಮಕ್ಕೆ ವಿನ್ಯಾಸ, ಫ್ಯಾಬ್ರಿಕೇಷನ್, ಪ್ಯಾಕೇಜಿಂಗ್, ಪರೀಕ್ಷೆ, ಉಪಕರಣಗಳು, ವಿಶೇಷ ರಾಸಾಯನಿಕಗಳು, ಕೈಗಾರಿಕಾ ಅನಿಲಗಳು, ಲಾಜಿಸ್ಟಿಕ್ಸ್ ಮತ್ತು ನುರಿತ ಮಾನವಶಕ್ತಿಯನ್ನು ಒಳಗೊಂಡ ಸಮಗ್ರ ಪರಿಸರ ವ್ಯವಸ್ಥೆಯ ಅಗತ್ಯವಿದೆ ಎಂಬುದನ್ನು ಕಾರ್ಯಕ್ರಮವು ಗುರುತಿಸಿದೆ.
ಸೆಮಿಕಾನ್ ಇಂಡಿಯಾ ಕಾರ್ಯಕ್ರಮ 1.0 ಅಡಿಯಲ್ಲಿಬಲಿಷ್ಟ ಪ್ರಗತಿ:
ಒಂದು ಸಿಲಿಕಾನ್ ಫ್ಯಾಬ್, ಪ್ಯಾಕೇಜಿಂಗ್ ನೊಂದಿಗೆ ಒಂದು ಕಾಂಪೌಂಡ್ ಸೆಮಿಕಂಡಕ್ಟರ್ ಫ್ಯಾಬ್, ಪ್ಯಾಕೇಜಿಂಗ್ ನೊಂದಿಗೆ ಒಂದು ಮೈಕ್ರೋ ಎಲ್ಇಡಿ ಡಿಸ್ಪ್ಲೇ ಜಿಎಎನ್ ಫ್ಯಾಬ್ ಮತ್ತು ಗುಜರಾತ್, ಉತ್ತರ ಪ್ರದೇಶ, ಪಂಜಾಬ್, ಅಸ್ಸಾಂ, ಒಡಿಶಾ ಹಾಗು ಆಂಧ್ರಪ್ರದೇಶದಾದ್ಯಂತ ಒಂಬತ್ತು ಎಟಿಎಂಪಿ/ಒಎಸ್ಎಟಿ ಸೌಲಭ್ಯಗಳನ್ನು ಒಳಗೊಂಡಿರುವ ಮೌಲ್ಯ ಸರಪಳಿಯ ಅನೇಕ ವಿಭಾಗಗಳನ್ನು ವ್ಯಾಪಿಸಿರುವ 12 ಸೆಮಿಕಂಡಕ್ಟರ್ ಉತ್ಪಾದನಾ ಯೋಜನೆಗಳಿಗೆ ಭಾರತ ಈಗಾಗಲೇ ಅನುಮೋದನೆ ನೀಡಿದೆ.
ಮೈಕ್ರಾನ್ ಎಟಿಎಂಪಿ, ಕೇನ್ಸ್ ಸೆಮಿಕಾನ್ ಮತ್ತು ಸಿಜಿ ಪವರ್ ಒಎಸ್ಎಟಿ ಎಂಬ ಮೂರು ಸೆಮಿಕಂಡಕ್ಟರ್ ಸೌಲಭ್ಯಗಳಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸುವುದರೊಂದಿಗೆ ಒಂದು ಪ್ರಮುಖ ಮೈಲಿಗಲ್ಲನ್ನು ಸಾಧಿಸಲಾಗಿದೆ, ಇದು ನೀತಿ ಉದ್ದೇಶದಿಂದ ಸೆಮಿಕಂಡಕ್ಟರ್ ಉತ್ಪಾದನೆಯತ್ತ ಭಾರತದ ಪರಿವರ್ತನೆಯನ್ನು ಗುರುತಿಸುತ್ತದೆ ಮತ್ತು ಸ್ಥಿತಿಸ್ಥಾಪಕತ್ವದ ದೇಶೀಯ ಅರೆವಾಹಕ ಪರಿಸರ ವ್ಯವಸ್ಥೆಗೆ ಅಡಿಪಾಯ ಹಾಕುತ್ತದೆ.
ಬಲವಾದ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಪ್ರತಿಭಾ ನೆಲೆಯನ್ನು ನಿರ್ಮಿಸುವುದು
ಉತ್ಪಾದನೆಯ ಜೊತೆಗೆ, ಭಾರತವು ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ತನ್ನ ನಾಯಕತ್ವವನ್ನು ಬಲಪಡಿಸುತ್ತಲೇ ಇದೆ, ವಿಶ್ವದ ಸುಮಾರು ಶೇಕಡಾ 20 ರಷ್ಟು ಸೆಮಿಕಂಡಕ್ಟರ್ ವಿನ್ಯಾಸ ಪ್ರತಿಭೆಗಳನ್ನು ಅದು ಹೊಂದಿದೆ. ಡಿಸೈನ್ ಲಿಂಕ್ಡ್ ಇನ್ಸೆಂಟಿವ್ (ಡಿಎಲ್ಐ) ಯೋಜನೆಯಡಿಯಲ್ಲಿ, ಎಲೆಕ್ಟ್ರಾನಿಕ್ ಡಿಸೈನ್ ಆಟೋಮೇಷನ್ (ಇಡಿಎ) ಪರಿಕರಗಳಿಗಾಗಿ 103 ಅರ್ಜಿಗಳು ಮತ್ತು 24 ಚಿಪ್ ವಿನ್ಯಾಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, 15 ಕಂಪನಿಗಳು ವೆಂಚರ್ ಕ್ಯಾಪಿಟಲ್ ಬೆಂಬಲವನ್ನು ಪಡೆದಿವೆ. ಆಟೋಮೋಟಿವ್ ಮತ್ತು ಹೆಲ್ತ್ಕೇರ್ನಿಂದ ಹಿಡಿದು ದೂರಸಂಪರ್ಕ, ಕೃತಕ ಬುದ್ಧಿಮತ್ತೆ ಮತ್ತು ಉಪಗ್ರಹ ಸಂವಹನದವರೆಗಿನ ಅಪ್ಲಿಕೇಶನ್ಗಳಿಗಾಗಿ ವಿದ್ಯಾರ್ಥಿಗಳು 175 ಸೆಮಿಕಂಡಕ್ಟರ್ ಚಿಪ್ಗಳನ್ನು ವಿನ್ಯಾಸಗೊಳಿಸಿದ್ದಾರೆ ಮತ್ತು ತಯಾರಿಸಿದ್ದಾರೆ.
ಭವಿಷ್ಯದ ಕಾರ್ಯಪಡೆಯ ಅವಶ್ಯಕತೆಗಳನ್ನು ಪೂರೈಸಲು, ಸರ್ಕಾರವು ಚಿಪ್ಸ್ ಟು ಸ್ಟಾರ್ಟ್ಅಪ್ (ಸಿ2ಎಸ್) ನಂತಹ ಉಪಕ್ರಮಗಳ ಮೂಲಕ ಅರೆವಾಹಕ ಕೌಶಲ್ಯಕ್ಕೆ ಆದ್ಯತೆ ನೀಡಿದೆ, ಇದರ ಅಡಿಯಲ್ಲಿ 320 ಶೈಕ್ಷಣಿಕ ಸಂಸ್ಥೆಗಳಲ್ಲಿ ಇಡಿಎ ಪರಿಕರಗಳನ್ನು ನಿಯೋಜಿಸಲಾಗಿದೆ ಮತ್ತು 68,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. 500+ ಎಂಜಿನಿಯರಿಂಗ್ ಕಾಲೇಜುಗಳು ಹೊಸ ಸೆಮಿಕಂಡಕ್ಟರ್ ಪಠ್ಯಕ್ರಮವನ್ನು ಸಹ ಅಳವಡಿಸಿಕೊಂಡಿವೆ, ಇದು ಉದ್ಯಮ-ಸಿದ್ಧ ಪ್ರತಿಭೆಗಳ ಬಲವಾದ ಗುಂಪನ್ನುಸೃಷ್ಟಿಸಿದೆ.
ಸೆಮಿಕಾನ್ ಇಂಡಿಯಾ ಕಾರ್ಯಕ್ರಮ 2.0: ಪರಿಸರ ವ್ಯವಸ್ಥೆಯ ವಿಸ್ತರಣೆ
ಸೆಮಿಕಾನ್ ಇಂಡಿಯಾ ಕಾರ್ಯಕ್ರಮ 1.0 ರ ಅಡಿಯಲ್ಲಿ ಹಾಕಲಾದ ಅಡಿಪಾಯದ ಆಧಾರದ ಮೇಲೆ, ಸೆಮಿಕಾನ್ ಇಂಡಿಯಾ ಕಾರ್ಯಕ್ರಮ 2.0 ಸಂಪೂರ್ಣ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಸ್ಥಿತಿಸ್ಥಾಪಕತ್ವದ ಅರೆವಾಹಕ ಉದ್ಯಮವು ಉಪಕರಣಗಳು, ವಿಶೇಷ ರಾಸಾಯನಿಕಗಳು, ಕೈಗಾರಿಕಾ ಅನಿಲಗಳು, ಸುಧಾರಿತ ಪ್ಯಾಕೇಜಿಂಗ್, ಸಂಶೋಧನೆ ಮತ್ತು ನುರಿತ ಮಾನವಶಕ್ತಿಯ ಮೇಲೆ ಸಮಾನವಾಗಿ ಅವಲಂಬಿತವಾಗಿದೆ ಎಂದು ಗುರುತಿಸಿ, ಇಡೀ ಮೌಲ್ಯ ಸರಪಳಿಯನ್ನು ಬಲಪಡಿಸಲು ಕಾರ್ಯಕ್ರಮವು ಚಿಪ್ ಉತ್ಪಾದನೆಯನ್ನು ಮೀರಿದ ಬೆಂಬಲವನ್ನು ನೀಡುತ್ತದೆ.
ಈ ಕಾರ್ಯಕ್ರಮವು ಆರು ಕಾರ್ಯತಂತ್ರದ ಸ್ತಂಭಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ: ಚಿಪ್ ವಿನ್ಯಾಸ, ಅರೆವಾಹಕ ಉಪಕರಣಗಳು ಮತ್ತು ವಸ್ತುಗಳು, ಫ್ಯಾಬ್ರಿಕೇಶನ್ ಸೌಲಭ್ಯಗಳು, ಸುಧಾರಿತ ಪ್ಯಾಕೇಜಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ ಹಾಗು ಪ್ರತಿಭಾ ಅಭಿವೃದ್ಧಿ. ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನಾ ಯೋಜನೆಗಳು ಸ್ಥಾಪನೆಯಾಗುತ್ತಿದ್ದಂತೆ, ಸೆಮಿಕಂಡಕ್ಟರ್-ದರ್ಜೆಯ ವಸ್ತುಗಳು ಮತ್ತು ಉಪಕರಣಗಳ ದೇಶೀಯ ಬೇಡಿಕೆಯು ಸ್ಥಳೀಕರಣವನ್ನು ವೇಗಗೊಳಿಸುತ್ತದೆ, ಎಂಎಸ್ಎಂಇಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಭಾರತೀಯ ಕಂಪನಿಗಳನ್ನು ಜಾಗತಿಕ ಪೂರೈಕೆ ಸರಪಳಿಗಳಿಗೆ ಸಂಯೋಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮುಂದಿನ ಹಂತದ ಬೆಳವಣಿಗೆಗೆ ಚಾಲನೆ ನೀಡುತ್ತಿರುವ ಪಾಲುದಾರಿಕೆಗಳು
ರಾಜ್ಯಗಳು ಮತ್ತು ಜಾಗತಿಕ ತಂತ್ರಜ್ಞಾನ ಪಾಲುದಾರರೊಂದಿಗೆ ನಿಕಟ ಸಹಯೋಗದ ಮೂಲಕ ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ. ಅನೇಕ ರಾಜ್ಯಗಳು ಹೂಡಿಕೆಗೆ ಹೆಚ್ಚುವರಿ ಪ್ರೋತ್ಸಾಹವನ್ನು ನೀಡುವ ಅದಕ್ಕೆಂದೇ ಮೀಸಲಾದ ಅರೆವಾಹಕ ನೀತಿಗಳನ್ನು ಘೋಷಿಸಿವೆ, ಜೊತೆಗೆ ಯುನೈಟೆಡ್ ಸ್ಟೇಟ್ಸ್, ಜಪಾನ್, ಸಿಂಗಾಪುರ, ನೆದರ್ಲ್ಯಾಂಡ್ಸ್, ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ದೇಶಗಳೊಂದಿಗಿನ ಪಾಲುದಾರಿಕೆಯು ತಂತ್ರಜ್ಞಾನ ಸಹಯೋಗ ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಬೆಂಬಲಿಸುತ್ತಿದೆ. ಜಾಗತಿಕ ಕಂಪನಿಗಳಾದ ಅಪ್ಲೈಡ್ ಮೆಟೀರಿಯಲ್ಸ್, ಎಎಮ್ಡಿ, ಲ್ಯಾಮ್ ರಿಸರ್ಚ್, ಕೆಎಲ್ಎ ಮತ್ತು ಮೈಕ್ರೋಚಿಪ್ ಟೆಕ್ನಾಲಜಿ ಸಹ ಭಾರತದಲ್ಲಿ ಹೂಡಿಕೆ ಮತ್ತು ಸಹಯೋಗವನ್ನು ಘೋಷಿಸಿವೆ.
ಜಾಗತಿಕವಾಗಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್ ತಾಣದತ್ತ ಪಯಣ
ಮುಂಬರುವ ದಶಕದಲ್ಲಿ ಜಾಗತಿಕವಾಗಿ ಸೆಮಿಕಂಡಕ್ಟರ್ ಬೇಡಿಕೆಯು ವೇಗವಾಗಿ ವಿಸ್ತರಿಸುವ ನಿರೀಕ್ಷೆಯೊಂದಿಗೆ, ಭಾರತವು ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ನಾವೀನ್ಯತೆಗೆ ವಿಶ್ವಾಸಾರ್ಹ ತಾಣವಾಗಿ ಹೊರಹೊಮ್ಮಲು ಅನುಕೂಲಕರವಾದ ಉತ್ತಮ ಸ್ಥಾನದಲ್ಲಿದೆ. ಉತ್ಪಾದನೆ, ಸಂಶೋಧನೆ, ವಿನ್ಯಾಸ ಮತ್ತು ಪ್ರತಿಭೆ ಅಭಿವೃದ್ಧಿಯಲ್ಲಿ ನಿರಂತರ ಹೂಡಿಕೆಗಳ ಮೂಲಕ, ಸೆಮಿಕಾನ್ ಇಂಡಿಯಾ ಕಾರ್ಯಕ್ರಮ 2.0 ದೇಶೀಯ ಮೌಲ್ಯವರ್ಧನೆಯನ್ನು ಬಲಪಡಿಸಲು, ಉತ್ತಮ-ಗುಣಮಟ್ಟದ ಉದ್ಯೋಗವನ್ನು ಸೃಷ್ಟಿಸಲು, ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಮತ್ತು ತಾಂತ್ರಿಕ ಸ್ವಾವಲಂಬನೆಯತ್ತ ಭಾರತದ ಪ್ರಯಾಣವನ್ನು ವೇಗಗೊಳಿಸಲು ಪ್ರಯತ್ನಿಸುತ್ತದೆ. ಪೂರ್ಣ ಅರೆವಾಹಕ ಮೌಲ್ಯ ಸರಪಳಿಯಲ್ಲಿ ದೇಶವು ಸಾಮರ್ಥ್ಯಗಳನ್ನು ನಿರ್ಮಿಸುತ್ತಿದ್ದಂತೆ, ಇದು ವಿಕಸಿತ ಭಾರತದ ದೃಷ್ಟಿಕೋನವನ್ನು ಬೆಂಬಲಿಸುವ ಸ್ಥಿತಿಸ್ಥಾಪಕತ್ವದ, ನಾವೀನ್ಯತೆ-ಚಾಲಿತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಅರೆವಾಹಕ ಪರಿಸರ ವ್ಯವಸ್ಥೆಗೆ ಅಡಿಪಾಯ ಹಾಕುತ್ತಿದೆ.
*****
(रिलीज़ आईडी: 2285197)
आगंतुक पटल : 3