ರೈಲ್ವೇ ಸಚಿವಾಲಯ
azadi ka amrit mahotsav

ಹೊಸ ಐ.ಆರ್.ಸಿ.ಟಿ.ಸಿ. ವೆಬ್‌ಸೈಟ್ ನ ಬೀಟಾ ಆವೃತ್ತಿಯ ನೇರ ಪ್ರಸಾರ ಇಂದು ರಾತ್ರಿ 2100 ಗಂಟೆಗೆ ಸಕ್ರಿಯವಾಗಲಿದೆ

प्रविष्टि तिथि: 15 JUL 2026 7:34PM by PIB Bengaluru

ಹೊಸ ಐ.ಆರ್.ಸಿ.ಟಿ.ಸಿ. ವೆಬ್‌ಸೈಟ್ ನ ಬೀಟಾ ಆವೃತ್ತಿಯನ್ನು ಇಂದು ರಾತ್ರಿ 2100 ಗಂಟೆಗೆ ಚಾಲನೆ ಗೊಳಿಸಲಾಗುತ್ತಿದೆ. ಇದರಿಂದಾಗಿ ಬಳಕೆದಾರರು ವೆಬ್‌ಸೈಟ್ ನ ಹೊಸ ನೋಟ ಮತ್ತು ಅನುಭವವನ್ನು ಅನುಭವಿಸಲು ಮತ್ತು ಅದರ ವೈಶಿಷ್ಟ್ಯಗಳ ಪ್ರಯೋಜನ ಪಡೆಯಲು ಹಾಗೂ  ಪ್ರತಿಕ್ರಿಯೆಯನ್ನು ಒದಗಿಸಲು ಸಾಧ್ಯವಾಗುತ್ತದೆ. ಇದನ್ನು https://www.irctc.co.in/eticket/ ಈ ಕೊಂಡಿ ಮೂಲಕ ಪ್ರವೇಶಿಸಬಹುದು ಬೀಟಾ ಆವೃತ್ತಿಯ ಕೊಂಡಿಯನ್ನು ಅನ್ನು ಮುಖಪುಟದಲ್ಲಿರುವ ಅಸ್ತಿತ್ವದಲ್ಲಿರುವ ವೆಬ್ಸೈಟ್ ನಲ್ಲಿಯೂ ಒದಗಿಸಲಾಗಿದೆ.

ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರೊಂದಿಗಿನ ಮಾಳವಿಯಾ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎಂ.ಎನ್.ಐ.ಟಿ.) ವಿದ್ಯಾರ್ಥಿಗಳ ಸಂವಾದದ ಸಂದರ್ಭದಲ್ಲಿ ಈ ಸುಧಾರಣೆಗಳನ್ನು ಸೂಚಿಸಲಾಗಿದೆ.

ಐ.ಆರ್.ಸಿ.ಟಿ.ಸಿ. ವೆಬ್‌ಸೈಟ್ ಅನ್ನು ಮೊದಲು 2002 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಪ್ರಸ್ತುತ ದಿನಕ್ಕೆ ಸರಾಸರಿ 14.5 ಲಕ್ಷ ಟಿಕೆಟ್ ಗಳನ್ನು ನಿರ್ವಹಿಸುತ್ತದೆ. ಹೊಸ ವೆಬ್‌ಸೈಟ್ ಸ್ವಚ್ಛ ಬಳಕೆದಾರ ಸುಗಮ ಇಂಟರ್ಫೇಸ್ ಮತ್ತು ಸರಳೀಕೃತ ಬಳಕೆದಾರ ಅನುಭವವನ್ನು ಹೊಂದಿದೆ. 

ಐ.ಆರ್.ಸಿ.ಟಿ.ಸಿ. ಬೀಟಾ ಆವೃತ್ತಿಯಲ್ಲಿ ನಾಲ್ಕು ಪ್ರಮುಖ ಸುಧಾರಣೆಗಳನ್ನು ಮಾಡಲಾಗಿದೆ:

1.⁠ ⁠ಕ್ಯಾಪ್ಚಾ: ಅನಗತ್ಯ ಕ್ಯಾಪ್ಚಾಗಳಿಲ್ಲ. ಅನಗತ್ಯ ಪಾಪ್-ಅಪ್ ಗಳಿಲ್ಲ. ಮಿನುಗುವ ಗ್ರಾಫಿಕ್ಸ್ ಇಲ್ಲ. ಗಮನ ಬೇರೆಡೆ ಸೆಳೆಯುವ ಅಂಶಗಳಿಲ್ಲ.

2.⁠ ⁠ಆಸನ ಲಭ್ಯತೆ: ಎಲ್ಲಾ ತರಗತಿಗಳಲ್ಲಿ ಗೋಚರಿಸುತ್ತದೆ.

3.⁠ ⁠ವೇಗದ ಚೆಕ್ ಔಟ್: ಬುಕಿಂಗ್ ಗೆ ಅಗತ್ಯವಿರುವ ಹಂತಗಳ ಸಂಖ್ಯೆಯಲ್ಲಿ ಕಡಿತ.

4.⁠ ⁠ಸುಲಭ ಪುನರಾವರ್ತಿತ ಬುಕಿಂಗ್: ಉಳಿಸಬಹುದಾದ ಪ್ರಯಾಣಿಕರ ಮಾಹಿತಿ ವಿವರಗಳು.

ವಿದ್ಯಾರ್ಥಿಗಳನ್ನು ವಿನ್ಯಾಸ ಪ್ರಕ್ರಿಯೆಯ ಭಾಗವಾಗಿಸಲಾಯಿತು, ಇದರಲ್ಲಿ ಅವರು ವೆಬ್‌ಸೈಟ್ ನ ನೋಟ ಮತ್ತು ಭಾವನೆಯನ್ನು ಸುಧಾರಿಸುವ ಕುರಿತು ಸಲಹೆಗಳನ್ನು ನೀಡಿದರು. ಸ್ವೀಕರಿಸಿದ ಪ್ರತಿಕ್ರಿಯೆಯ ಆಧಾರದ ಮೇಲೆ, ಹೊಸ ವೆಬ್‌ಸೈಟ್ ಪ್ರಾಯೋಗಿಕವಾಗಿ ಸಿದ್ಧವಾಗಿದೆ.

ಬೀಟಾ ಆವೃತ್ತಿಯು ಮತ್ತಷ್ಟು ಸುಧಾರಣೆಗಳ ಕುರಿತು ಬಳಕೆದಾರರ ಅಗತ್ಯಗಳನ್ನು ಸುಗಮಗೊಳಿಸುತ್ತದೆ, ಇದನ್ನು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸಲು ಭವಿಷ್ಯದ ಬಿಡುಗಡೆಗಳಲ್ಲಿ ಸೇರಿಸಲಾಗುತ್ತದೆ. ಶೀಘ್ರದಲ್ಲೇ, ಐ.ಆರ್.ಸಿ.ಟಿ.ಸಿ. ವೆಬ್‌ಸೈಟ್ ಅನ್ನು ಮುಂಬರುವ ಹೊಸ ಪ್ಯಾಸೆಂಜರ್ ರಿಸರ್ವೇಶನ್ ಎಂಜಿನ್ ನೊಂದಿಗೆ ಸಂಯೋಜಿಸಲಾಗುವುದು. ಪ್ಯಾಸೆಂಜರ್ ರಿಸರ್ವೇಶನ್ ಎಂಜಿನ್ ಅನ್ನು ಸಹ ಸಮಾನಾಂತರವಾಗಿ ಪರಿಷ್ಕರಿಸಲಾಗುತ್ತಿರುವುದರಿಂದ, ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಹೊಸ ಐ.ಆರ್.ಸಿ.ಟಿ.ಸಿ. ಪೋರ್ಟಲ್ ಕೆಲವು ವಾರಗಳಲ್ಲಿ ಲಭ್ಯವಿರುತ್ತದೆ.

ಸಮಾನಾಂತರವಾಗಿ, ಐ.ಆರ್.ಸಿ.ಟಿ.ಸಿ. ವಿವಿಧ ರೈಲು ಬುಕಿಂಗ್ ಅಪ್ಲಿಕೇಶನ್ ಗಳಿಗೆ ಶಕ್ತಿ ನೀಡುವ ದಶಕಗಳಷ್ಟು ಹಳೆಯದಾದ ಪ್ಯಾಸೆಂಜರ್ ರಿಸರ್ವೇಶನ್ ಎಂಜಿನ್ ಅನ್ನು ಪರಿಷ್ಕರಿಸುತ್ತಿದೆ. ನವೀಕರಣ ಪ್ರಕ್ರಿಯೆಯ ಉದ್ದಕ್ಕೂ ವ್ಯವಸ್ಥೆಯು ಕಾರ್ಯನಿರ್ವಹಿಸಬೇಕಾಗಿರುವುದರಿಂದ ಇದಕ್ಕೆ ವ್ಯಾಪಕವಾದ ಕೆಲಸ ಬೇಕಾಯಿತು. ಹೊಸ ಪ್ಯಾಸೆಂಜರ್ ರಿಸರ್ವೇಶನ್ ಎಂಜಿನ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.

ಐ.ಆರ್.ಸಿ.ಟಿ.ಸಿ. ವೆಬ್‌ಸೈಟ್ ಅನ್ನು ಇನ್ನಷ್ಟು ಸುಧಾರಿಸಲು ನಮಗೆ ಸಹಾಯ ಮಾಡುವ ಹೊಸ ವಿನ್ಯಾಸದ ಕುರಿತು ನಮ್ಮ ಬಳಕೆದಾರರು ಅಮೂಲ್ಯವಾದ ಸಲಹೆಗಳು ಮತ್ತು ಪ್ರತಿಕ್ರಿಯೆಯನ್ನು ಒದಗಿಸುವಂತೆ ನಾವು ವಿನಂತಿಸುತ್ತೇವೆ.

 

*****


(रिलीज़ आईडी: 2285154) आगंतुक पटल : 18
इस विज्ञप्ति को इन भाषाओं में पढ़ें: English , Urdu , हिन्दी , Gujarati , Malayalam