ಸಂವಹನ ಸಚಿವಾಲಯ
azadi ka amrit mahotsav

ಭಾರತೀಯ ಅಂಚೆ ಇಲಾಖೆ ಮೊದಲ ತ್ರೈಮಾಸಿಕದಲ್ಲಿ ಇದುವರೆಗಿನ ಅತಿ ಹೆಚ್ಚು ₹4,000 ಕೋಟಿಗೂ ಹೆಚ್ಚಿನ ಆದಾಯ ಗಳಿಸಿ, ವರ್ಷದಿಂದ ವರ್ಷಕ್ಕೆ ಶೇ. 22 ರಷ್ಟು ಬೆಳವಣಿಗೆ ದಾಖಲಿಸಿದೆ: ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯಡಿಯಲ್ಲಿ ಭಾರತೀಯ ಅಂಚೆ ಇಲಾಖೆಯ ಭವಿಷ್ಯಕ್ಕೆ ಸಿದ್ಧವಾಗಿರುವ ರೂಪಾಂತರವನ್ನು ಐತಿಹಾಸಿಕ ಬೆಳವಣಿಗೆಯು ಒತ್ತಿಹೇಳುತ್ತದೆ

प्रविष्टि तिथि: 14 JUL 2026 6:19PM by PIB Bengaluru

ಅಂಚೆ ಇಲಾಖೆಯು 2026-27ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ತನ್ನ ತ್ರೈಮಾಸಿಕ ವ್ಯವಹಾರ ಪರಿಶೀಲನಾ ಸಭೆಯನ್ನು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿತ್ತು. ಕೇಂದ್ರ ಸಂವಹನ ಮತ್ತು ಈಶಾನ್ಯ ವಲಯ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂವಹನ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ಉಪಸ್ಥಿತರಿದ್ದರು. ಈ ಕಾರ್ಯತಂತ್ರದ ಸಭೆಯು ಮೊದಲ ತ್ರೈಮಾಸಿಕದಲ್ಲಿ ಇಲಾಖೆಯ ವ್ಯವಹಾರದ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಮತ್ತು ಇಂಡಿಯಾ ಪೋಸ್ಟ್‌ ನ ಉದ್ಯಮ ರೂಪಾಂತರದ ವಿಕಸನಗೊಳ್ಳುತ್ತಿರುವ ಮಾರ್ಗಸೂಚಿಯ ಬಗ್ಗೆ ಚರ್ಚಿಸಲು ದೇಶಾದ್ಯಂತದ ಅಂಚೆ ವಲಯಗಳ ಮುಖ್ಯಸ್ಥರನ್ನು ಒಂದೆಡೆ ಸೇರಿಸಿತು.

ಇಲಾಖೆಯ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ ಕೇಂದ್ರ ಸಚಿವರಾದ ಶ್ರೀ ಸಿಂಧಿಯಾ ಅವರು, ಇಂಡಿಯಾ ಪೋಸ್ಟ್ 2026-27ರ ಆರ್ಥಿಕ ವರ್ಷವನ್ನು ಸಕಾರಾತ್ಮಕ ಪಥದಲ್ಲಿ ಪ್ರಾರಂಭಿಸಿದೆ ಎಂದು ಗಮನಿಸಿದರು. ₹19,803 ಕೋಟಿಗಳ ಮಹತ್ವಾಕಾಂಕ್ಷೆಯ ವಾರ್ಷಿಕ ಆದಾಯದ ಗುರಿಯಲ್ಲಿ, ಇಲಾಖೆಯು ಮೊದಲ ತ್ರೈಮಾಸಿಕದಲ್ಲಿ ₹4,009 ಕೋಟಿಗಳನ್ನು ಗಳಿಸಿದೆ. ಇದು ಹಿಂದಿನ 2025-26ರ ಆರ್ಥಿಕ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 22 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ಮೊದಲ ತ್ರೈಮಾಸಿಕದ ಗುರಿಯ ಶೇಕಡಾ 81 ರಷ್ಟನ್ನು ಸಾಧಿಸಿದೆ.

ಇಂಡಿಯಾ ಪೋಸ್ಟ್ ಕುಟುಂಬದ ಎಲ್ಲಾ ಸದಸ್ಯರ ಸಮರ್ಪಣೆ ಮತ್ತು ಅಚಲ ಬದ್ಧತೆಯನ್ನು ಶ್ಲಾಘಿಸಿದ ಕೇಂದ್ರ ಸಚಿವರು, ಇಲಾಖೆಯ ಸೇವಾ ವಿತರಣೆಯನ್ನು ಬಲಪಡಿಸುವಲ್ಲಿ ಮತ್ತು ಅದರ ನಿರಂತರ ಬೆಳವಣಿಗೆಗೆ ಕೊಡುಗೆ ನೀಡುವಲ್ಲಿ ದೇಶಾದ್ಯಂತದ ನೌಕರರ ದಣಿವರಿಯದ ಪ್ರಯತ್ನಗಳನ್ನು ಶ್ಲಾಘಿಸಿದರು. ಈ ಮೈಲಿಗಲ್ಲು ಡಿಜಿಟಲ್ ಸಶಕ್ತ ಮತ್ತು ಭವಿಷ್ಯದ ಅಗತ್ಯಗಳಿಗೆ ಸಜ್ಜಾದ ಅಂಚೆ ಜಾಲಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನದಡಿಯಲ್ಲಿ ಆಧುನೀಕರಣ, ವ್ಯವಹಾರ ರೂಪಾಂತರ ಮತ್ತು ಗ್ರಾಹಕ ಕೇಂದ್ರಿತ ಸೇವಾ ವಿತರಣೆಯತ್ತ ಇಲಾಖೆಯು ನಡೆಸುತ್ತಿರುವ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಸಚಿವರು ಇಲಾಖೆಯ ಎಲ್ಲಾ 6 ವ್ಯವಹಾರ ವಿಭಾಗಗಳಾದ—ಅಂಚೆ, ಪಾರ್ಸೆಲ್, ಅಂಚೆ ಜೀವ ವಿಮೆ/ಗ್ರಾಮೀಣ ಅಂಚೆ ಜೀವ ವಿಮೆ, ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (ಪಿ ಎಸ್‌ ಬಿ), ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಜಾಗತಿಕ ವ್ಯವಹಾರ (ಐಆರ್&ಜಿಬಿ), ಹಾಗೂ ನಾಗರಿಕ ಕೇಂದ್ರಿತ ಸೇವೆಗಳ (ಸಿಸಿಎಸ್) ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು. ಉತ್ತೇಜನಕಾರಿಯಾದ ಒಟ್ಟಾರೆ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಅವರು, ಈ ಕೆಳಗಿನ ಪ್ರಮುಖ ಸಾಧನೆಗಳನ್ನು ಉಲ್ಲೇಖಿಸಿದರು ಮತ್ತು ಉತ್ತಮ ಪ್ರದರ್ಶನ ನೀಡಿದ ವಲಯಗಳು ಪ್ರದರ್ಶಿಸಿದ ಅತ್ಯುತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಇಲಾಖೆಗೆ ನಿರ್ದೇಶನ ನೀಡಿದರು:

ವ್ಯವಹಾರ ವಿಭಾಗಗಳ ಪೈಕಿ, ನಾಗರಿಕ ಕೇಂದ್ರಿತ ಸೇವೆಗಳು (ಸಿಸಿಎಸ್) ಶೇಕಡಾ 86 ರಷ್ಟು ಅತ್ಯಧಿಕ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದ್ದು, ನಂತರದ ಸ್ಥಾನಗಳಲ್ಲಿ ಪಾರ್ಸೆಲ್ (50%), ಅಂಚೆ (42%), ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಜಾಗತಿಕ ವ್ಯವಹಾರ (ಐಆರ್&ಜಿಬಿ), (34%), ಅಂಚೆ ಜೀವ ವಿಮೆ/ಗ್ರಾಮೀಣ ಅಂಚೆ ಜೀವ ವಿಮೆ (20%), ಮತ್ತು ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (ಪಿ ಎಸ್‌ ಬಿ) (10%) ಇವೆ. ಇದು ಇಲಾಖೆಯ ವ್ಯವಹಾರದ ಎಲ್ಲಾ ವಲಯಗಳಾದ್ಯಂತ ವ್ಯಾಪಕವಾದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.

ಇಂಡಿಯಾ ಪೋಸ್ಟ್ 2026-27ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ₹₹4,951 ಕೋಟಿಗಳ ತ್ರೈಮಾಸಿಕ ಗುರಿಯಲ್ಲಿ ₹₹4,009 ಕೋಟಿ ಆದಾಯವನ್ನು ಗಳಿಸಿದೆ, ಇದು ಶೇಕಡಾ 81 ರಷ್ಟು ಸಾಧನೆ ಮತ್ತು 2025-26ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 22 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟಾರೆಯಾಗಿ ಆಂಧ್ರಪ್ರದೇಶ, ಛತ್ತೀಸಗಢ ಮತ್ತು ಪಶ್ಚಿಮ ಬಂಗಾಳ ಅತ್ಯುತ್ತಮ ಪ್ರದರ್ಶನ ನೀಡಿದ ಮೊದಲ ಮೂರು ಅಂಚೆ ವಲಯಗಳಾಗಿ ಹೊರಹೊಮ್ಮಿವೆ.

ವಿವಿಧ ವ್ಯವಹಾರ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಲಯಗಳು ಮತ್ತು ಗುರಿಗಳಲ್ಲಿ ಅವುಗಳ ಶೇಕಡಾವಾರು ಸಾಧನೆಗಳು ಹೀಗಿವೆ:

  • ನಾಗರಿಕ ಕೇಂದ್ರಿತ ಸೇವೆಗಳು: ಪಶ್ಚಿಮ ಬಂಗಾಳ (107%), ಉತ್ತರ ಪ್ರದೇಶ (106%).
  • ಪಾರ್ಸೆಲ್: ಬಿಹಾರ (121%), ತಮಿಳುನಾಡು (115%).
  • ಅಂಚೆ: ಆಂಧ್ರಪ್ರದೇಶ (106%).
  • ಪಿ ಎಲ್/ಆರ್ಪಿ ಎಲ್: ಪಶ್ಚಿಮ ಬಂಗಾಳ (97%), ಜಮ್ಮು ಮತ್ತು ಕಾಶ್ಮೀರ (96%).
  • ಪಿ ಎಸ್ಬಿ: ಛತ್ತೀಸಗಢ (124%), ಆಂಧ್ರಪ್ರದೇಶ (110%) ಮತ್ತು ಜಾರ್ಖಂಡ್ (107%).
  • ಐಆರ್&ಜಿಬಿ: ಕೇರಳ (83%), ರಾಜಸ್ಥಾನ (81%).

ಕೇಂದ್ರ ಸಚಿವರು ಅಂಚೆ ಜಾಲದಾದ್ಯಂತ ಕಾರ್ಯಾಚರಣೆಯ ದಕ್ಷತೆಯನ್ನು ಪರಿಶೀಲಿಸಿದರು ಮತ್ತು ಶಾಖಾ ಅಂಚೆ ಕಚೇರಿಗಳ (ಬಿಒ) ಸಕ್ರಿಯಗೊಳಿಸುವಿಕೆಯಲ್ಲಿ ಗಮನಾರ್ಹ ವಾರ್ಷಿಕ ಸುಧಾರಣೆಯನ್ನು ಗುರುತಿಸಿದರು. 2026-27ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ, ಶೂನ್ಯ ವ್ಯವಹಾರ ವಹಿವಾಟುಗಳನ್ನು ವರದಿ ಮಾಡುವ ಶಾಖಾ ಅಂಚೆ ಕಚೇರಿಗಳ ಸಂಖ್ಯೆಯು ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಪಿ ಎಸ್‌ ಬಿ ಯಲ್ಲಿ ಶೇಕಡಾ 92 ಕ್ಕಿಂತ ಹೆಚ್ಚು, ಪಿ ಎಲ್‌ ಐ/ಆರ್‌ ಪಿ ಎಲ್‌ ಐ ನಲ್ಲಿ ಶೇಕಡಾ 97 ಮತ್ತು ಸ್ಪೀಡ್ ಪೋಸ್ಟ್ ಹಾಗೂ ಪಾರ್ಸೆಲ್‌ ನಲ್ಲಿ ಶೇಕಡಾ 99 ಕ್ಕಿಂತ ಹೆಚ್ಚು ಕುಸಿದಿದೆ. ತಳಮಟ್ಟದಲ್ಲಿ ವ್ಯವಹಾರ ಸಜ್ಜುಗೊಳಿಸುವಿಕೆಯಲ್ಲಿನ ಗಮನಾರ್ಹ ಸುಧಾರಣೆಯನ್ನು ಶ್ಲಾಘಿಸಿದ ಶ್ರೀ ಸಿಂಧಿಯಾ ಅವರು, ಪ್ರತಿ ಶಾಖಾ ಅಂಚೆ ಕಚೇರಿಯಲ್ಲಿ ಕೇಂದ್ರೀಕೃತ ಮೇಲ್ವಿಚಾರಣೆ, ಗ್ರಾಹಕ ಸಂಪರ್ಕ ಮತ್ತು ವರ್ಧಿತ ವ್ಯವಹಾರ ಸೃಷ್ಟಿಯ ಮೂಲಕ ಇದೇ ವೇಗವನ್ನು ಕಾಯ್ದುಕೊಳ್ಳಲು ಎಲ್ಲಾ ಅಂಚೆ ವಲಯಗಳಿಗೆ ನಿರ್ದೇಶನ ನೀಡಿದರು.

ಇಲಾಖೆಯ ಹಣಕಾಸಿನ ಸುಸ್ಥಿರತೆಯನ್ನು ಪರಿಶೀಲಿಸಿದ ಕೇಂದ್ರ ಸಚಿವರು, ವೆಚ್ಚದ ವ್ಯಾಪ್ತಿ ಅನುಪಾತವು (ಇಸಿಆರ್) 2025-26ರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 28 ರಿಂದ 32 ಕ್ಕೆ (ಪಿಂಚಣಿ ಸೇರಿದಂತೆ) ಮತ್ತು ಶೇಕಡಾ 41 ರಿಂದ 47 ಕ್ಕೆ (ಪಿಂಚಣಿ ಹೊರತುಪಡಿಸಿ) ಸುಧಾರಿಸಿದೆ ಎಂದು ಗಮನಿಸಿದರು. ಇದು ಕಾರ್ಯಾಚರಣೆಯ ದಕ್ಷತೆ ಮತ್ತು ಹಣಕಾಸಿನ ಕಾರ್ಯಕ್ಷಮತೆಯಲ್ಲಿನ ನಿರಂತರ ಸುಧಾರಣೆಯನ್ನು ಪ್ರದರ್ಶಿಸುತ್ತದೆ. ಇಸಿಆರ್ ಅನ್ನು ಸುಧಾರಿಸುವಲ್ಲಿ ದೆಹಲಿ, ತೆಲಂಗಾಣ ಮತ್ತು ಛತ್ತೀಸಗಢದ ಬಲವಾದ ಪ್ರದರ್ಶನವನ್ನು ಅವರು ಶ್ಲಾಘಿಸಿದರು ಮತ್ತು ವೆಚ್ಚದ ಶಿಸ್ತನ್ನು ಕಾಪಾಡಿಕೊಳ್ಳುವ ಜೊತೆಗೆ ಆದಾಯ ಗಳಿಕೆಯನ್ನು ಮತ್ತಷ್ಟು ಬಲಪಡಿಸಲು ಎಲ್ಲಾ ವಲಯಗಳಿಗೆ ನಿರ್ದೇಶನ ನೀಡಿದರು.

ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ವಿವಿಧ ವ್ಯವಹಾರ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಂಚೆ ವಲಯಗಳನ್ನು ಅಭಿನಂದಿಸಿದರು ಮತ್ತು ಸಹವರ್ತಿ ಕಲಿಕಾ ಉಪಕ್ರಮಗಳ ಮೂಲಕ ಯಶಸ್ವಿ ವ್ಯವಹಾರ ಮಾದರಿಗಳನ್ನು ಅಳವಡಿಸಿಕೊಳ್ಳಲು ಎಲ್ಲಾ ವಲಯಗಳಿಗೆ ಕರೆ ನೀಡಿದರು. ರಾಜ್ಯಗಳನ್ನು ಮೂರು ಕ್ಲಸ್ಟರ್‌ ಗಳಾಗಿ ವರ್ಗೀಕರಿಸುವ ಮೂಲಕ ಕ್ಲಸ್ಟರ್ ಆಧಾರಿತ ವಿಧಾನಕ್ಕೆ ಅವರು ಸಲಹೆ ಮಾಡಿದರು, ಪ್ರತಿ ಕ್ಲಸ್ಟರ್ ಆದ್ಯತೆಯ ಕ್ಷೇತ್ರಗಳ ನಿರ್ದಿಷ್ಟ ವರ್ಗದ ಮೇಲೆ ಗಮನ ಕೇಂದ್ರೀಕರಿಸುತ್ತದೆ, ಇದು ಉದ್ದೇಶಿತ ಮಧ್ಯಸ್ಥಿಕೆಗಳು, ಜ್ಞಾನ ಹಂಚಿಕೆ ಮತ್ತು ಸುಧಾರಿತ ಫಲಿತಾಂಶಗಳನ್ನು ಸಕ್ರಿಯಗೊಳಿಸುತ್ತದೆ. ಮೊದಲ ತ್ರೈಮಾಸಿಕದಲ್ಲಿ ಸಾಧಿಸಿದ ಪ್ರಗತಿಯನ್ನು ಶ್ಲಾಘಿಸಿದ ಕೇಂದ್ರ ಸಚಿವರು ಪಾರ್ಸೆಲ್, ಅಂಚೆ ಮತ್ತು ಐಆರ್&ಜಿಬಿ ವ್ಯವಹಾರ ವಿಭಾಗಗಳಿಗೆ ಉಳಿದ ತ್ರೈಮಾಸಿಕಗಳಲ್ಲಿ ಕೇಂದ್ರೀಕೃತ ಮಧ್ಯಸ್ಥಿಕೆಗಳ ಅಗತ್ಯವಿದೆ ಎಂದು ತಿಳಿಸಿದರು. ಗ್ರಾಹಕರ ಸ್ವಾಧೀನವನ್ನು ತೀವ್ರಗೊಳಿಸಲು, ಕಾರ್ಪೊರೇಟ್ ಮತ್ತು ಸಾಂಸ್ಥಿಕ ಗ್ರಾಹಕರೊಂದಿಗೆ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು, ಕಾರ್ಯತಂತ್ರದ ಪಾಲುದಾರಿಕೆಗಳನ್ನು ವಿಸ್ತರಿಸಲು ಮತ್ತು ನಿಯಮಿತ ಮೇಲ್ವಿಚಾರಣೆ ಹಾಗೂ ಸಮಯೋಚಿತ ಸರಿಪಡಿಸುವ ಕ್ರಮಗಳ ಮೂಲಕ ಅನುಷ್ಠಾನವನ್ನು ಸುಧಾರಿಸಲು ಅವರು ಸಂಬಂಧಪಟ್ಟ ವಲಯಗಳಿಗೆ ನಿರ್ದೇಶನ ನೀಡಿದರು. 2026-27ರ ಆರ್ಥಿಕ ವರ್ಷದ ಇಲಾಖೆಯ ಮಹತ್ವಾಕಾಂಕ್ಷೆಯ ವ್ಯವಹಾರ ಗುರಿಗಳನ್ನು ಸಾಧಿಸಲು ಮಾಸಿಕ ಕಾರ್ಯಕ್ಷಮತೆಯ ಪರಿಶೀಲನೆಗಳು, ಡೇಟಾ ಆಧಾರಿತ ನಿರ್ಧಾರ ಕೈಗೊಳ್ಳುವಿಕೆ, ಹೆಚ್ಚಿನ ಹೊಣೆಗಾರಿಕೆ ಮತ್ತು ಬಲವಾದ ತಳಮಟ್ಟದ ಅನುಷ್ಠಾನವು ನಿರ್ಣಾಯಕವಾಗಿದೆ ಎಂದು ಅವರು ಒತ್ತಿಹೇಳಿದರು.

ಸಂವಹನ ರಾಜ್ಯ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಅವರು ಇಲಾಖೆಯ ವ್ಯವಹಾರ ಕಾರ್ಯಕ್ಷಮತೆಯಲ್ಲಿನ ಗಮನಾರ್ಹ ಸುಧಾರಣೆಯನ್ನು ಶ್ಲಾಘಿಸಿದರು, ಇದನ್ನು ನಿಯಮಿತ ಪರಿಶೀಲನೆಗಳು, ವ್ಯವಸ್ಥಿತ ಮೇಲ್ವಿಚಾರಣೆ ಮತ್ತು ದೇಶಾದ್ಯಂತದ ಅಂಚೆ ನೌಕರರ ಬದ್ಧತೆ ಇದಕ್ಕೆ ಕಾರಣ ಎಂದರು. ಬಲವಾದ ಬೆಳವಣಿಗೆಯು ಕೇಂದ್ರೀಕೃತ ನಾಯಕತ್ವ, ಹೊಣೆಗಾರಿಕೆ ಮತ್ತು ಸಾಮೂಹಿಕ ಪ್ರಯತ್ನದ ಪರಿವರ್ತಕ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಶಿಸ್ತುಬದ್ಧ ಅನುಷ್ಠಾನ, ತಂಡದ ಕೆಲಸ ಮತ್ತು ನಿರಂತರ ಮೇಲ್ವಿಚಾರಣೆಯ ಮೂಲಕ ವೇಗವನ್ನು ಉಳಿಸಿಕೊಳ್ಳಲು ಎಲ್ಲಾ ಅಂಚೆ ವಲಯಗಳನ್ನು ಒತ್ತಾಯಿಸಿದ ಅವರು, ಇಲಾಖೆಯ ಮಹತ್ವಾಕಾಂಕ್ಷೆಯ ಆದಾಯದ ಗುರಿಗಳನ್ನು ಸಾಧಿಸುವಲ್ಲಿ ಪ್ರತಿಯೊಂದು ವಲಯದ ಸ್ಥಿರವಾದ ಪ್ರದರ್ಶನವು ಪ್ರಮುಖ ಪಾತ್ರ ವಹಿಸುತ್ತದೆ, ಜೊತೆಗೆ ಇಂಡಿಯಾ ಪೋಸ್ಟ್‌ ನ ಸೇವಾ ವಿತರಣೆ, ಸಾರ್ವಜನಿಕ ಸಂಪರ್ಕ ಮತ್ತು ಸಾಂಸ್ಥಿಕ ರೂಪಾಂತರವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಒತ್ತಿಹೇಳಿದರು.

 

*****

 


(रिलीज़ आईडी: 2284683) आगंतुक पटल : 19
इस विज्ञप्ति को इन भाषाओं में पढ़ें: Bengali , English , Urdu , Marathi , हिन्दी , Odia