ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

"ಭಾರತ-ನ್ಯೂಜಿಲೆಂಡ್: ಒಂದು ಯಶಸ್ವಿ ಪಾಲುದಾರಿಕೆ" ಎಂಬ ವಿಷಯದ ಮೇಲೆ ನ್ಯೂಜಿಲೆಂಡ್ ಪ್ರಧಾನಮಂತ್ರಿ ಅವರು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

प्रविष्टि तिथि: 11 JUL 2026 12:30PM by PIB Bengaluru

ನ್ಯೂಜಿಲೆಂಡ್ ಪ್ರಧಾನಮಂತ್ರಿ ಅವರಾದ ಮಾನ್ಯ ಕ್ರಿಸ್ಟೋಫರ್ ಅವರು ಆಯೋಜಿಸಿದ್ದ "ಭಾರತ-ನ್ಯೂಜಿಲೆಂಡ್: ಒಂದು ಯಶಸ್ವಿ ಪಾಲುದಾರಿಕೆ" ಎಂಬ ವಿಷಯಾಧಾರಿತ ವಿಶೇಷ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಅವರಾದ ಶ್ರೀ ನರೇಂದ್ರ ಮೋದಿಯವರು ಭಾಗವಹಿಸಿದ್ದರು. ರಾಜಕೀಯ, ವ್ಯಾಪಾರ, ಕೈಗಾರಿಕೆ, ಶಿಕ್ಷಣ, ತಂತ್ರಜ್ಞಾನ, ಕ್ರೀಡೆ ಮತ್ತು ಕಲೆ ಮುಂತಾದ ಕ್ಷೇತ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ಲುಕ್ಸನ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಆಳವಾದ ಮತ್ತು ಶಾಶ್ವತವಾದ ಬಾಂಧವ್ಯವನ್ನು ದೃಢೀಕರಿಸಿ, ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಿ, ಪರಸ್ಪರ ಸಮೃದ್ಧಿ ಪಡೆಯಲು ಹಂಚಿಕೆಯ ದೃಷ್ಟಿಕೋನವನ್ನು ವಿವರಿಸಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಉಭಯ ದೇಶಗಳ ನಡುವಿನ ಪೂರಕತೆ ಮತ್ತು ಜನರೊಂದಿಗಿನ ಬಾಂಧವ್ಯದ ಬಗ್ಗೆ ಪ್ರಸ್ತಾಪಿಸಿದರು. ದ್ವಿಪಕ್ಷೀಯ ಬಾಂಧವ್ಯವನ್ನು ವ್ಯೂಹಾತ್ಮಕ ಪಾಲುದಾರಿಕೆಯ ಮಟ್ಟಕ್ಕೆ ಏರಿಸಿರುವುದನ್ನು ಅವರು ಸ್ವಾಗತಿಸಿದರು. ಇದು ನಡೆಯುತ್ತಿರುವ ಸಹಯೋಗವನ್ನು ಮತ್ತಷ್ಟು ಗಾಢವಾಗಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ದಾಖಲೆಯ ಅವಧಿಯಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಂಕಿತ ಹಾಕಲಾಗಿದ್ದು, ಇದು ಎರಡೂ ದೇಶಗಳ ವ್ಯಾಪಾರ, ಯುವಕರು ಮತ್ತು ರೈತರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಮತ್ತು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಧಾನಮಂತ್ರಿ ಶ್ರೀ ಲುಕ್ಸನ್ ಅವರು ಭೋಜನ ಸಮಾರಂಭದ ನಂತರ ಕ್ರೀಡಾಂಗಣದಲ್ಲಿ ಪ್ರದರ್ಶಿಸಲಾದ ನವೀನ ಕ್ರೀಡಾ ಸಲಕರಣೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಅವರು ನ್ಯೂಜಿಲೆಂಡ್ ನ ಪದಕ ವಿಜೇತ ಕ್ರೀಡಾಪಟುಗಳು ಮತ್ತು ಉನ್ನತ ಸಾಧನೆಯ ಕ್ರೀಡೆಗಳಿಗೆ ಸಂಬಂಧಿಸಿದ ಇತರರೊಡನೆ ಸಂವಾದ ನಡೆಸಿದರು. ಉಭಯ ದೇಶಗಳ ನಡುವಿನ ಕ್ರೀಡಾ ಬಾಂಧವ್ಯದ 100 ವರ್ಷಗಳನ್ನು ಸ್ಮರಿಸಿದ ಪ್ರಧಾನಮಂತ್ರಿ ಶ್ರೀ ಮೋದಿಯವರು, ಈ ಭೇಟಿಯ ವೇಳೆ ತೀರ್ಮಾನಿಸಲಾದ ಕ್ರೀಡಾ ಜಂಟಿ ಕ್ರಿಯಾ ಯೋಜನೆಯು ಕ್ರಿಕೆಟ್ ಅನ್ನು ಮೀರಿ ಎರಡೂ ದೇಶಗಳ ಬಾಂಧವ್ಯವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಭಾರತವು 2030ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಲು ಸಜ್ಜಾಗುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾ ಸಹಕಾರವನ್ನು ವಿಸ್ತರಿಸುವ ಎರಡೂ ದೇಶಗಳ ಆಶಯಕ್ಕೆ ಅನುಗುಣವಾಗಿ ಈ ಭೇಟಿಯು ನಡೆಯಿತು.

 

*****


(रिलीज़ आईडी: 2283739) आगंतुक पटल : 8
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Gujarati , Odia , Tamil , Telugu , Malayalam