ಹಣಕಾಸು ಸಚಿವಾಲಯ
azadi ka amrit mahotsav

1.55 ಲಕ್ಷ ಕೋಟಿಗೂ ಅಧಿಕ  ಮೊತ್ತವನ್ನು ತಲುಪುವ ಮೂಲಕ 4.11 ಲಕ್ಷ ಖಾತ್ರಿಗಳನ್ನು ದಾಟಿದ ಇ ಸಿ ಎಲ್ ಜಿ ಎಸ್ 5.0 (ECLGS 5.0)


ನೀಡಲಾದ ಖಾತ್ರಿಗಳಲ್ಲಿ (ಸಂಖ್ಯೆಯಲ್ಲಿ) ಶೇ.98 ರಷ್ಟು ಎಂ ಎಸ್ ಎಂ ಇ ಗಳಿಗೆ ಪ್ರಯೋಜನ, ವ್ಯವಹಾರಗಳಿಗೆ ಸಕ್ರಿಯ  ಲಿಕ್ವಿಡಿಟಿ ಲಭ್ಯತೆ

प्रविष्टि तिथि: 07 JUL 2026 1:44PM by PIB Bengaluru

2026ರ ಮೇ 5 ರಂದು ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆ (ಇ ಸಿ ಎಲ್ ಜಿ ಎಸ್) 5.0 ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಪರಿಸ್ಥಿತಿಯಿಂದ ಪರಿಣಾಮವಾಗಿ ವ್ಯವಹಾರಗಳಿಗೆ ವೇಗವಾಗಿ ದೊಡ್ಡ ಪ್ರಮಾಣದ ಲಿಕ್ವಡಿಟಿ ನೆರವನ್ನು ನೀಡುತ್ತಿದೆ. ಸಾಲಗಾರರಿಗೆ ಹೆಚ್ಚುವರಿ ಸಾಲವನ್ನು ಒದಗಿಸಲು ಮತ್ತು ಸಾಲ ನೀಡುವ ಸಂಸ್ಥೆಗಳಿಗೆ ಅಪಾಯ ತಗ್ಗಿಸಲು ಒದಗಿಸಲು ಈ ಯೋಜನೆಯನ್ನು ರೂಪಿಸಲಾಗಿದೆ, ಇದರಿಂದಾಗಿ ವ್ಯವಹಾರಗಳು ನಗದು ಹರಿವಿನ ಅಡಚಣೆಗಳನ್ನು ನಿವಾರಿಸಲು ಮತ್ತು ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಎಂ ಎಸ್ ಎಂ ಇ ಗಳ ಹೆಚ್ಚುವರಿ ಸಾಲಗಳಿಗೆ ಶೇ.100ರಷ್ಟು ಖಾತ್ರಿ ವ್ಯಾಪ್ತಿಯನ್ನು ಮತ್ತು ಇತರ ವ್ಯಾಪಾರ ವಿಭಾಗಗಳಿಗೆ ಶೇ. 90ರಷ್ಟು ಖಾತ್ರಿ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಈ ಯೋಜನೆಯು ಹಣಕಾಸು ಸಂಸ್ಥೆಗಳು ಹೆಚ್ಚು ವಿಶ್ವಾಸದಿಂದ ಸಾಲ ನೀಡಲು ಅವಕಾಶ ಮಾಡಿಕೊಟ್ಟಿದೆ, ಲಿಕ್ವಿಡಿಟಿ (ನಗದು) ಅಗತ್ಯವಿರುವ ವಲಯಗಳನ್ನು ತಲುಪುತ್ತದೆ ಎಂಬುದನ್ನು ಖಾತ್ರಿಪಡಿಸುತ್ತದೆ.

ಸದೃಢವಾದ ಆರಂಭಿಕ ಆವೇಗ

ಇ ಸಿ ಎಲ್ ಜಿ ಎಸ್ 5.0 ಅಡಿಯಲ್ಲಿ ಯೋಜನೆ ಆರಂಭವಾದಾಗಿನಿಂದ 4,11,497 ಖಾತ್ರಿಗಳನ್ನು ನೀಡಲಾಗಿದೆ, ಖಾತರಿಪಡಿಸಿದ ಮೊತ್ತವು ₹1,55,229 ಕೋಟಿಗಳನ್ನು ತಲುಪಿದೆ - ಇದು ಸಾಲ ನೀಡುವ ಪೂರಕ ವ್ಯವಸ್ಥೆಯಾದ್ಯಂತ ಯೋಜನೆಯ ತ್ವರಿತ ವಿಸ್ತರಣೆಯ ಸಂಕೇತವಾಗಿದೆ.

ಯೋಜನೆಯ ಕೇಂದ್ರಬಿಂದುವಾಗಿರುವ ಎಂಎಸ್ ಎಂಇಗಳು

ಅದರ ವಿನ್ಯಾಸ ಉದ್ದೇಶಕ್ಕೆ ಅನುಗುಣವಾಗಿ ಈ ಯೋಜನೆಯು ಭಾರತದ ಸಣ್ಣ ವ್ಯಾಪಾರ ವಲಯಕ್ಕೆ ಅಗಾಧವಾಗಿ ಪ್ರಯೋಜನವನ್ನು ನೀಡಿದೆ:

• ನೀಡಲಾದ ಎಲ್ಲಾ ಖಾತರಿಗಳಲ್ಲಿ (ಸಂಖ್ಯೆಯ ಪ್ರಕಾರ) ಶೇ.98 ರಷ್ಟು ಎಂಎಸ್ ಎಂಇಗಳಿಗೆ ಪ್ರಯೋಜನವನ್ನು ನೀಡುತ್ತಿದೆ.

• ಒಟ್ಟು ಖಾತರಿ ಮೊತ್ತದ ಶೇ. 82ಕ್ಕೂ ಅಧಿಕ ಎಂಎಸ್ ಎಂಇಗಳಿವೆ ಸೇರಿದೆ

ರಾಷ್ಟ್ರವ್ಯಾಪಿ ಸಂಪರ್ಕ ಪ್ರಗತಿಯಲ್ಲಿ

ಜಾಗೃತಿ ಮತ್ತು ಅಳವಡಿಕೆಯನ್ನು ಗರಿಷ್ಠಗೊಳಿಸಲು, ಹಣಕಾಸು ಸೇವೆಗಳ ಇಲಾಖೆ (ಡಿ ಎಫ್ ಎಸ್) ದೇಶಾದ್ಯಂತ ವ್ಯವಸ್ಥಿತ ಸಂಪರ್ಕ ಅಭಿಯಾನವನ್ನು ನಡೆಸಿದೆ:

ಹಂತ 1: 20.05.2026 ರಿಂದ 06.06.2026 ರ ಅವಧಿಯಲ್ಲಿ ಒಂಬತ್ತು ಸ್ಥಳಗಳಲ್ಲಿ ಪೂರ್ಣಗೊಂಡಿದೆ, ಇದನ್ನು ರಾಷ್ಟ್ರೀಯ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ (ಎನ್ ಸಿ ಜಿ ಟಿ ಸಿ), ಪಿ ಎಸ್ ಬಿ ಅಲೈಯನ್ಸ್, ಬ್ಯಾಂಕುಗಳು, ಉದ್ಯಮ ಸಂಘಗಳು ಮತ್ತು ಉದ್ಯಮಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಗಳ (ಎಲ್ ಎಲ್ ಬಿ ಸಿ ಗಳ) ಮೂಲಕ ನಡೆಸಲಾಯಿತು.

ಹಂತ 2: ಪ್ರಸ್ತುತ 10 ಸ್ಥಳಗಳಲ್ಲಿ ನಡೆಯುತ್ತಿದೆ, ಅವುಗಳಲ್ಲಿ 4 ಪೂರ್ಣಗೊಂಡಿವೆ

ಈ ಸಂಪರ್ಕ ಕಾರ್ಯಕ್ರಮಗಳು ಅರ್ಹ ಸಾಲಗಾರರು ಯೋಜನೆಯ ಬಗ್ಗೆ ತಿಳಿದಿರುವುದನ್ನು ಮತ್ತು ಅದರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿವೆ, ಆದರೆ ಸದಸ್ಯ ಸಾಲ ನೀಡುವ ಸಂಸ್ಥೆಗಳು (ಎಂ ಎಲ್ ಐ ಗಳು) ಅದರ ಪರಿಣಾಮಕಾರಿ ಅನುಷ್ಠಾನವನ್ನು ಸುಗಮಗೊಳಿಸಲು ಸಜ್ಜಾಗಿವೆ.

ಇ ಸಿ ಎಲ್ ಜಿ ಎಸ್ 5.0 ರ ಫಲಿತಾಂಶಗಳು ಸ್ಥಿತಿಸ್ಥಾಪಕ, ಸಾಲದ ಅಗತ್ಯತೆಗಳಿಗೆ ಸ್ಪಂದಿಸುವ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಸರ್ಕಾರದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಯೋಜನೆಯು ವಿಕಸನಗೊಳ್ಳುತ್ತಿದ್ದಂತೆ ಮತ್ತು ಸಂಪರ್ಕ ವಿಸ್ತರಿಸುತ್ತಿದ್ದಂತೆ, ಇದು ಎಂ ಎಸ್ ಎಂ ಇ ಗಳು ಸೇರಿ ವ್ಯವಹಾರಗಳಿಗೆ ಲಿಕ್ವಿಡಿಟಿ (ನಗದು) ಬೆಂಬಲವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಬಾಹ್ಯ ಸವಾಲುಗಳ ಸಮಯದಲ್ಲಿ ಉದ್ಯಮಿಗಳು ತಮ್ಮ ನಗದು ಅಗತ್ಯಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ ಎಂದು ನಿರೀಕ್ಷಿಸಲಾಗಿದೆ.

 

*****


(रिलीज़ आईडी: 2281983) आगंतुक पटल : 18
इस विज्ञप्ति को इन भाषाओं में पढ़ें: English , Punjabi , Gujarati , Urdu , हिन्दी , Tamil