ಪ್ರಧಾನ ಮಂತ್ರಿಯವರ ಕಛೇರಿ
ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 125ನೇ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
प्रविष्टि तिथि:
06 JUL 2026 12:21PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 125ನೇ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಭಾರತದ ಏಕತೆ, ಘನತೆ ಮತ್ತು ಪ್ರಗತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಗೌರವಾನ್ವಿತ ರಾಷ್ಟ್ರ ನಿರ್ಮಾತೃ, ಖ್ಯಾತ ಶಿಕ್ಷಣ ತಜ್ಞ ಮತ್ತು ದೂರದೃಷ್ಟಿಯ ನಾಯಕ ಎಂದು ಸ್ಮರಿಸಿದರು.
ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭಾವೈಕ್ಯತೆಗೆ ಡಾ. ಮುಖರ್ಜಿ ಅವರ ನಿರಂತರ ಕೊಡುಗೆಗಳು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಾ ಬಂದಿವೆ ಎಂದು ಪ್ರಧಾನಿ ಹೇಳಿದರು. "ಭಾರತವು ʻವಿಕಸಿತ ಭಾರತʼದ ಗುರಿಯತ್ತ ಮುನ್ನಡೆಯುತ್ತಿರುವಾಗ, ಡಾ. ಮುಖರ್ಜಿ ಅವರ ದೂರದೃಷ್ಟಿ ಮತ್ತು ಆದರ್ಶಗಳು ರಾಷ್ಟ್ರಕ್ಕೆ ಮಾರ್ಗದರ್ಶಕ ಶಕ್ತಿಯಾಗಿ ಉಳಿದಿವೆ," ಎಂದು ಶ್ರೀ ಮೋದಿ ಹೇಳಿದರು.
ಪ್ರಧಾನಮಂತ್ರಿಯವರು ಈ ಬಗ್ಗೆ ʻಎಕ್ಸ್ʼ ವೇದಿಕೆಯ ಪೋಸ್ಟ್‌ನಲ್ಲಿ ಹೀಗೆ ಹೇಳಿದ್ದಾರೆ:
ಇಂದು, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜಯಂತಿಯಂದು, ಭಾರತದ ಅತ್ಯಂತ ಗಮನಾರ್ಹ ರಾಷ್ಟ್ರ ನಿರ್ಮಾಪಕರಲ್ಲಿ ಒಬ್ಬರಾದ ಅವರಿಗೆ ನಾನು ನಮಿಸುತ್ತೇನೆ. ಅವರ ಜೀವನವು ಪಾಂಡಿತ್ಯ, ಧೈರ್ಯ ಮತ್ತು ರಾಷ್ಟ್ರೀಯ ಸೇವೆಗೆ ಅಚಲವಾದ ಬದ್ಧತೆಯಿಂದ ವ್ಯಾಖ್ಯಾನಿಸಲ್ಪಟ್ಟಿದೆ. ಅವರು ಭಾರತದ ಏಕತೆ, ಘನತೆ ಮತ್ತು ಪ್ರಗತಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರು.
ಡಾ. ಮುಖರ್ಜಿ ಅವರ ಕೊಡುಗೆಗಳು ವೈವಿಧ್ಯಮಯ ಕ್ಷೇತ್ರಗಳನ್ನು ವ್ಯಾಪಿಸಿವೆ. ಅವರು ಅತ್ಯುತ್ತಮ ಚಿಂತಕ ಮತ್ತು ಶಿಕ್ಷಣ ತಜ್ಞರಾಗಿದ್ದರು, ಅವರು ನಾವೀನ್ಯತೆ ಮತ್ತು ಭವಿಷ್ಯ ಸನ್ನದ್ಧ ಕಲಿಕೆಯನ್ನು ಬೆಂಬಲಿಸಿದರು. ಕೈಗಾರಿಕಾ ಸಚಿವರಾಗಿ, ಅವರು ಕೈಗಾರಿಕಾ ಸ್ವಾವಲಂಬನೆಗೆ ಅಡಿಪಾಯ ಹಾಕಿದರು ಮತ್ತು ಸಾಂಪ್ರದಾಯಿಕ ಕ್ಷೇತ್ರಗಳು ಮತ್ತು ಜೀವನೋಪಾಯಗಳು ಪ್ರವರ್ಧಮಾನಕ್ಕೆ ಬರುವುದನ್ನು ಖಚಿತಪಡಿಸಿದರು. ಬಂಗಾಳದ ಕ್ಷಾಮದ ಸಮಯದಲ್ಲಿ ಅವರ ಮಾನವೀಯ ಪ್ರಯತ್ನಗಳು ಸಂಕಷ್ಟದಲ್ಲಿರುವವರ ಬಗ್ಗೆ ಅವರ ಆಳವಾದ ಸಹಾನುಭೂತಿಯನ್ನು ಪ್ರತಿಬಿಂಬಿಸುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತದ ಏಕತೆ ಮತ್ತು ಸಮಗ್ರತೆಗೆ ಅವರ ದೃಢವಾದ ಬದ್ಧತೆಯು ನಿರಂತರ ಸ್ಫೂರ್ತಿಯ ಮೂಲವಾಗಿ ಉಳಿದಿದೆ.
ವಿಕಸಿತ ಭಾರತದತ್ತ ನಾವು ನಮ್ಮ ಪ್ರಯಾಣ ಮುಂದುವರಿಯುತ್ತಿರುವ ಸಮಯದಲ್ಲಿ ಅವರ ದೂರದೃಷ್ಟಿಯು ನಮ್ಮ ಮಾರ್ಗವನ್ನು ಬೆಳಗಿಸುತ್ತಲೇ ಇರುತ್ತದೆ.
*****
(रिलीज़ आईडी: 2281588)
आगंतुक पटल : 4
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Gujarati
,
Odia
,
Tamil
,
Telugu
,
Malayalam